ಹಾರುಬೂದಿ ಅವಲಂಬಿತ ಉದ್ಯಮಗಳಿಗೂ ಸಂಕಟ

ಶಾಖೋತ್ಪನ್ನ ಕೇಂದ್ರ ನಿಲುಗಡೆಯಿಂದ ಸಮಸ್ಯೆ | ಸಿಮೆಂಟ್‌-ಬ್ರಿಕ್ಸ್‌ ಕಂಪನಿಗಳಿಗೆ ನಿರ್ವಹಣೆ ಸವಾಲು

Team Udayavani, Aug 29, 2020, 7:27 PM IST

rc-tdy-1

ರಾಯಚೂರು: ವಿದ್ಯುತ್‌ ಬೇಡಿಕೆ ಕುಗ್ಗಿದ್ದರಿಂದ ಶಾಖೋತ್ಪನ್ನ ಕೇಂದ್ರಗಳು ಸ್ಥಗಿತಗೊಂಡಿರುವುದರ ನೇರ ಪರಿಣಾಮ ಹಾರುಬೂದಿ ಅವಲಂಬಿತ ಉದ್ಯಮಗಳ ಮೇಲೆ ಆಗಿದೆ. ಹಾರುಬೂದಿ ನಂಬಿಕೊಂಡಿದ್ದ ಅನೇಕ ಕೈಗಾರಿಕೆ, ಕಾರ್ಖಾನೆಗಳು ಸಂಕಷ್ಟಕ್ಕೆ ಸಿಲುಕಿವೆ.

ಜಿಲ್ಲೆಯ ಪ್ರಮುಖ ಶಾಖೋತ್ಪನ್ನ ಕೇಂದ್ರವಾದ ಆರ್‌ಟಿಪಿಎಸ್‌ ಸ್ಥಗಿತಗೊಂಡು ಮೂರು ತಿಂಗಳು ಸಮೀಪಿಸುತ್ತಿದೆ. ಜು.5ರಿಂದ ಎಲ್ಲ ಘಟಕಗಳು ಕಾರ್ಯ ಸ್ಥಗಿತಗೊಳಿಸಿವೆ. ಈಗ ಅಲ್ಲಿ ಕಲ್ಲಿದ್ದಿಲಿನ ಬಳಕೆಯೇ ಇಲ್ಲದ ಕಾರಣ ಹಾರುಬೂದಿ ಉತ್ಪಾದನೆ ನಿಂತು ಹೋಗಿದೆ. ಆದರೆ, ಇದನ್ನೇ ನೆಚ್ಚಿಕೊಂಡುಕಲಬುರಗಿ ಜಿಲ್ಲೆಯ ಕೆಲ ಸಿಮೆಂಟ್‌ ಕಾರ್ಖಾನೆಗಳು ಹಾಗೂ ವಿವಿಧ ಜಿಲ್ಲೆಗಳ ಬ್ರಿಕ್ಸ್‌ ಸೇರಿದಂತೆ ಅನೇಕ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಈಗ ಆ ಕಂಪನಿಗಳು ಸಂಕಷ್ಟ ಎದುರಿಸುವಂತಾಗಿದೆ. ಅದರಲ್ಲೂ ಸಿಮೆಂಟ್‌ ಕಂಪನಿಗಳು ಹಾರುಬೂದಿ ಮೇಲೆ ಸಾಕಷ್ಟು ಅವಲಂಬಿತಗೊಂಡಿದ್ದು, ನಿತ್ಯ ನೂರಾರು ಟ್ಯಾಂಕರ್‌ಗಳ ಮೂಲಕ ಹಾರುಬೂದಿ ಸಾಗಿಸುತ್ತಿದ್ದವು. ಈಗ ಅವುಗಳಿಗೆ ದೊಡ್ಡ ಮಟ್ಟದ ಸವಾಲು ಎದುರಾಗಿದೆ.

ಶೇ.80ರಷ್ಟು ಉತ್ಪಾದನೆ: ಶಾಖೋತ್ಪನ್ನ ಕೇಂದ್ರಗಳಲ್ಲಿ ವಿದ್ಯುತ್‌ ಉತ್ಪಾದನೆಗೆ ಬಳಸುವ ಕಲ್ಲಿದ್ದಿಲಿನಲ್ಲಿ ಶೇ.80ರಷ್ಟು ಹಾರುಬೂದಿ ಬಂದರೆ ಶೇ.20ರಷ್ಟು ಹಸಿ ಬೂದಿ ಬರುತ್ತದೆ. ಆರ್‌ಟಿಪಿಎಸ್‌ನಲ್ಲಿ 8 ಘಟಕಗಳಿದ್ದು, ಎಲ್ಲವೂ ಸಕ್ರಿಯವಾಗಿದ್ದರೆ ನಿತ್ಯ 24-25 ಸಾವಿರ ಟನ್‌ ಕಲ್ಲಿದ್ದಿಲು ಉರಿಸಲಾಗುತ್ತಿತ್ತು. 3-4 ಸಾವಿರ ಮೆಟ್ರಿಕ್‌ ಟನ್‌ ಹಾರುಬೂದಿ ಉತ್ಪಾದನೆಯಾಗುತ್ತಿತ್ತು. ಹಸಿಬೂದಿಯನ್ನು ನೇರವಾಗಿ ಹೊಂಡಗಳಿಗೆ ಹರಿಸಿದರೆ, ಹಾರುಬೂದಿ ಮಾತ್ರ ಆ ದಿನವೇ ಸಾಗಣೆ ಮಾಡಿ ಖಾಲಿ ಮಾಡಲಾಗುತ್ತಿತ್ತು. ಕಲಬುರಗಿ ಜಿಲ್ಲೆಯ ಕೆಲ ಸಿಮೆಂಟ್‌ ಕಾರ್ಖಾನೆಗಳು ಸೇರಿದಂತೆ 500ಕ್ಕೂ ಅ ಧಿಕ ಕಂಪನಿಗಳು ನೋಂದಣಿ ಮಾಡಿಕೊಂಡಿದ್ದು, ಹಾರುಬೂದಿ ಪಡೆಯುತ್ತಿದ್ದವು. ಅದರಲ್ಲಿ 200-300 ಸಣ್ಣ ಕಂಪನಿಗಳಿದ್ದರೆ, ಉಳಿದವು ದೊಡ್ಡ ಕಂಪನಿಗಳಾಗಿವೆ. ಈಗ ಆ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ.

ಕ್ಯಾಶುಟೆಕ್‌ ಸಂಸ್ಥೆಗೂ ಬಿಸಿ: ಇನ್ನು ಸರ್ಕಾರಿ ಸಂಸ್ಥೆಗಳ ಕೆಲಸ ಕಾರ್ಯಗಳಿಗೆ ಹಾಗೂ ಸಾರ್ವಜನಿಕರಿಗೆಕಡಿಮೆ ದರದಲ್ಲಿ ಸಾಮಗ್ರಿ ತಯಾರಿಸಿಕೊಡುತ್ತಿದ್ದ  ಕ್ಯಾಶುಟೆಕ್‌ ಸಂಸ್ಥೆಗೂ ಹಾರುಬೂದಿ ಕೊರತೆ ಸಮಸ್ಯೆ ಎದುರಾಗಿದೆ. ಬ್ರಿಕ್ಸ್‌, ಕಾಂಪೌಂಡ್‌ ವಾಲ್‌, ಹೂ ಕುಂಡ, ಫುಟ್‌ಪಾತ್‌ ಪ್ಲೇಟ್‌ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ತಯಾರಿಸುತ್ತಿದ್ದ ಈ ಸಂಸ್ಥೆ ಹಾರುಬೂದಿಯನ್ನೆ ಬಳಸುತ್ತಿತ್ತು. ಹಾರುಬೂದಿ ಉತ್ಪಾದನೆಯೇ ನಿಂತು ಹೋಗಿರುವ ಕಾರಣ ಈಗ ಅಲ್ಲಿ ಕೂಡ ಕೆಲವೊಂದು ಸಾಮಗ್ರಿಗಳ ತಯಾರಿಕೆ ಕೈಬಿಡಲಾಗಿದೆ ಎನ್ನುತ್ತವೆ ಮೂಲಗಳು.

ವೈಟಿಪಿಎಸ್‌ ಆರಂಭ : ಜು.5ರಿಂದ ಆರ್‌ಟಿಪಿಎಸ್‌ನ ಎಂಟೂ ಘಟಕಗಳು ಸಂಪೂರ್ಣ ಸ್ಥಗಿತಗೊಂಡಿವೆ. ಅದಕ್ಕೂ ಮುಂಚೆ ವೈಟಿಪಿಎಸ್‌ನ ಒಂದನೇ ಘಟಕವನ್ನು ಸ್ಥಗಿತ ಮಾಡಲಾಗಿತ್ತು. ಆರ್‌ಟಿಪಿಎಸ್‌ 1720 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ್ದಾದರೆ, ವೈಟಿಪಿಎಸ್‌ನ ಎರಡು ಘಟಕಗಳಿಂದ 1600 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಬಹುದು. ಆದರೆ, ವೈಟಿಪಿಎಸ್‌ ಸೂಪರ್‌ ಕ್ರಿಟಿಕಲ್‌ ತಂತ್ರಜ್ಞಾನ ಹೊಂದಿರುವ ಕಾರಣ ಅಲ್ಲಿ ಹೆಚ್ಚಿನ ಹಾರುಬೂದಿ ಉತ್ಪಾದನೆ ಆಗುವುದಿಲ್ಲ. ಈಗ ವೈಟಿಪಿಎಸ್‌ ಒಂದನೇ ಘಟಕ ಆರಂಭವಾಗಿದ್ದು, 667 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತಿದೆ. ಹೆಚ್ಚಿನ ಪ್ರಮಾಣದ ಹಾರುಬೂದಿ ಲಭ್ಯವಾಗುತ್ತಿಲ್ಲ ಎನ್ನುತ್ತಿವೆ ಮೂಲಗಳು.

ಆರ್‌ಟಿಪಿಎಸ್‌ನ ಎಲ್ಲ ಘಟಕಗಳು ಸ್ಥಗಿತಗೊಂಡ ಒಂದೆರಡು ದಿನದಲ್ಲೇ ಹಾರುಬೂದಿ ಸಂಪೂರ್ಣ ಖಾಲಿಯಾಗಿದೆ. ಕಲ್ಲಿದ್ದಿಲಿನ ಬಳಕೆಯೇ ಇಲ್ಲವಾದ ಕಾರಣ ಉತ್ಪಾದನೆ ನಿಂತು ಹೋಗಿದೆ. ಹೊಂಡದಲ್ಲಿನ ಹಸಿಬೂದಿ (ವೆಟ್‌ ಆ್ಯಶ್‌) ಮಾತ್ರ ಸಾಗಣೆ ಮಾಡಲಾಗುತ್ತಿದೆ. ಮಳೆ ಇರುವ ಕಾರಣ ಅದು ಕೂಡ ಸ್ವಲ್ಪ ಕಡಿಮೆಯಾಗಿದೆ.  ಕೆ.ವಿ.ವೆಂಕಟಾಛಲಪತಿ, ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ, ಆರ್‌ಟಿಪಿಎಸ್

 

-ಸಿದ್ಧಯ್ಯಸ್ವಾಮಿ ಕುಕುನೂರು

ಟಾಪ್ ನ್ಯೂಸ್

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯೊಂದಿಗೆ ಮತದಾರರ ಮುಂದೆ ಬರುತ್ತೇನೆ : ಬೊಮ್ಮಾಯಿ

ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯೊಂದಿಗೆ ಮತದಾರರ ಮುಂದೆ ಬರುತ್ತೇನೆ : ಬೊಮ್ಮಾಯಿ

8dharmasthala

ಡಾ. ವೀರೇಂದ್ರ ಹೆಗ್ಗಡೆಯವರ 54ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

narendra-modi

ಕೋವಿಡ್ ಲಸಿಕೆಯ ಯಶಸ್ಸು ಭಾರತದ ಸಾಮರ್ಥ್ಯ ತೋರಿಸಿದೆ : ಪ್ರಧಾನಿ ಮೋದಿ

1221

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಶುಗರ್ ಪೌಡರ್ ಆಗಲಿದೆ !

gdghgfd

ನಾಳೆಯಿಂದ 1-5ನೇ ತರಗತಿ ಶಾಲೆಗಳು ಆರಂಭ : ಸರ್ಕಾರದ ಗೈಡ್ ಲೈನ್ಸ್ ಅನುಸಾರ ತರಗತಿ ಶುರು

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14satyagraha

ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸಹಾಯಕ ಆಯುಕ್ತರ ಭೇಟಿ

13former

ಕೃಷಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

12hindu

ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಆಗ್ರಹ

by-election-24

ದೇಗಲೂರ ಉಪ ಕದನ; ಚವ್ಹಾಣ ಪ್ರಚಾರ

devadasi23

ಬಾಕಿ ಪಿಂಚಣಿ ಬಿಡುಗಡೆಗೆ ದೇವದಾಸಿಯರ ಒತ್ತಾಯ

MUST WATCH

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

ಹೊಸ ಸೇರ್ಪಡೆ

The city police commissioner Kamalpant received the public’s plea

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯೊಂದಿಗೆ ಮತದಾರರ ಮುಂದೆ ಬರುತ್ತೇನೆ : ಬೊಮ್ಮಾಯಿ

ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯೊಂದಿಗೆ ಮತದಾರರ ಮುಂದೆ ಬರುತ್ತೇನೆ : ಬೊಮ್ಮಾಯಿ

8dharmasthala

ಡಾ. ವೀರೇಂದ್ರ ಹೆಗ್ಗಡೆಯವರ 54ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

building

ಮಾಲೀಕರ ಅತಿ ಆಸೆ ಭವಿಷ್ಯದ ಆತಂಕಕೆ ಮೂಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.