ನಿರ್ವಹಣೆ ಕೊರತೆ; ಜಮೀನಿಗೆ ನೀರಿನ ಅಭಾವ

ಕಳೆದ ವರ್ಷ 15 ಲಕ್ಷ ರೂ. ಖಾಸಗಿ ಕಂಪನಿಯೊಂದಕ್ಕೆ ಟೆಂಡರ್‌ ನೀಡಲಾಗಿತ್ತು.

Team Udayavani, Aug 25, 2021, 6:42 PM IST

ನಿರ್ವಹಣೆ ಕೊರತೆ; ಜಮೀನಿಗೆ ನೀರಿನ ಅಭಾವ

ದೇವದುರ್ಗ: ನಿಲವಂಜಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿರುವ ಏತ ನೀರಾವರಿ ಯೋಜನೆ ನಿರ್ವಹಣೆ ಕೊರತೆಯಿಂದ ನೀರಿನ ಅಭಾವ ಉಂಟಾಗಿದೆ. ಪಂಪ್‌ಹೌಸ್‌ ಮೂಲಕ ನೂರಾರು ಎಕರೆ ಪ್ರದೇಶಕ್ಕೆ ನೀರುಣಿಸುವ ಪೈಪ್‌ ಎರಡು ಕಡೆ ಒಡೆದು ವರ್ಷವಾದರೂ ಅ ಧಿಕಾರಿಗಳು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ.

ಲಕ್ಷಾಂತರ ರೂ. ಅನುದಾನ: ನಿಲವಂಜಿ ಗ್ರಾಮದಲ್ಲಿರುವ ಏತ ನೀರಾವರಿ ಯೋಜನೆ ಜಾಕ್‌ವೆಲ್‌, ಪಂಪ್‌ಹೌಸ್‌, ಮೋಟರ್‌, ವಿದ್ಯುತ್‌ ಸೇರಿ ಇತರೆ ನಿರ್ವಹಣೆ ಮಾಡಲು ಪ್ರತಿ ವರ್ಷ ಲಕ್ಷಾಂತರ ರೂ. ಟೆಂಡರ್‌ ಕರೆಯಲಾಗುತ್ತಿದೆ. ಕಳೆದ ವರ್ಷ 15 ಲಕ್ಷ ರೂ. ಖಾಸಗಿ ಕಂಪನಿಯೊಂದಕ್ಕೆ ಟೆಂಡರ್‌ ನೀಡಲಾಗಿತ್ತು. ಅರೆಬರೆ ಕೆಲಸ ಮಾಡಿರುವ ಆರೋಪ ಕೇಳಿ ಬರುತ್ತಿದೆ.

ಅವ್ಯವಸ್ಥೆ ಪಂಪ್‌ಹೌಸ್‌: ಕಳೆದ ಎರಡ್ಮೂರು ವರ್ಷಗಳಿಂದ ಪ್ರವಾಹ ಹಿನ್ನೆಲೆಯಲ್ಲಿ ಜಾಕ್‌ವೆಲ್‌, ಪಂಪ್‌ಹೌಸ್‌ ನೀರಿನಲ್ಲಿ ಮುಳುಗಿದ್ದು, ಪ್ರವಾಹ ತಗ್ಗಿದ ನಂತರ ಸ್ವತ್ಛತೆ ಕೈಗೊಳ್ಳದೇ ಇರುವುದರಿಂದ ಪಂಪ್‌ ಹೌಸ್‌ ಸುತ್ತಲೂ ಜಾಲಿಕಂಟಿಗಳು ಬೆಳೆದು ಅವ್ಯವಸ್ಥೆ ಆಗರವಾಗಿದೆ. ಪಂಪ್‌ಹೌಸ್‌ ಕಬ್ಬಿಣದ ಪೈಪ್‌ಗ್ಳು ತುಕ್ಕು ಹಿಡಿಯುತ್ತಿವೆ. ಒಳಗೂ ಜಾಲಿಗಿಡ ಬೆಳೆದಿವೆ.

ಕೇಂದ್ರ ಸ್ಥಾನದಲ್ಲಿಲ್ಲ ಕಚೇರಿ: ತಾಲೂಕು ಕೇಂದ್ರ ಸ್ಥಾನದಲ್ಲಿ ಸಣ್ಣ ನೀರಾವರಿ ಇಲಾಖೆ ಕಚೇರಿ ಇಲ್ಲವಾಗಿದೆ. ಏನೇ ಕೆಲಸಗಳಿದ್ದರೂ ರಾಯಚೂರಿಗೆ ಹೋಗಬೇಕು. ಇಲಾಖೆ ಯೋಜನೆಗಳಡಿ ಅರ್ಜಿ ಸಲ್ಲಿಸುವುದು ಸೇರಿದಂತೆ ಇತರೆ ಕಾರ್ಯಗಳಿಗೆ ಇಲ್ಲಿ ಕಚೇರಿ ಅವಶ್ಯಕತೆ ಇದೆ.

ರೈತರ ಆಗ್ರಹ: ಕಳೆದ ವರ್ಷಗಳಿಂದ ಒಡೆದ ಪೈಪ್‌ ದುರಸ್ತಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ನೂರಾರು ಎಕರೆ ಪ್ರದೇಶಕ್ಕೆ ಸಮರ್ಪಕವಾಗಿ ನೀರುಣಿಸಲು ಆಗುತ್ತಿಲ್ಲ. ಮಳೆ ನಂಬಿ ಬದುಕಲು ಸಂಕಷ್ಟವಾಗುತ್ತಿದೆ. ಅಧಿಕಾರಿಗಳು ಕೂಡಲೇ ಪೈಪ್‌ ದುರಸ್ತಿ ಮಾಡಿಸುವಂತೆ ರೈತರು ಆಗ್ರಹಿಸಿದ್ದಾರೆ.

ಎರಡು ಕಡೆ ಒಡೆದ ಪೈಪ್‌ ದುರಸ್ತಿ ವಿಳಂಬವಾಗಿದೆ. ಈ ವರ್ಷ ನಿರ್ವಹಣೆ ಮಾಡಲು ಟೆಂಡರ್‌ ಹಂತದಲ್ಲಿದೆ. ಕಳೆದ ವಾರದ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ.
ಚಂದ್ರಶೇಖರ,
ಎಇ, ಸಣ್ಣ ನೀರಾವರಿ ಇಲಾಖೆ

ತಾಲೂಕು ಕೇಂದ್ರದಲ್ಲಿ ಸಣ್ಣ ನೀರಾವರಿ ಇಲಾಖೆ ಇಲ್ಲದ ಕಾರಣ ಕೆರೆಗಳ ಅಭಿವೃದ್ಧಿ ಹಿನ್ನಡೆ ಯಾಗಿವೆ. ಏನೇ ಕೆಲಸ ಬಂದರೂ ರಾಯಚೂರಿಗೆ ಹೋಗಬೇಕಿದೆ.
ನರಸಣ್ಣ ನಾಯಕ,
ತಾಲೂಕು ಅಧ್ಯಕ್ಷ, ಕರ್ನಾಟಕ
ಪ್ರಾಂತ ರೈತ ಸಂಘ

*ನಾಗರಾಜ ತೇಲ್ಕರ್

ಟಾಪ್ ನ್ಯೂಸ್

ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ಮುರ್ಮು

ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

1-asds-dsad

ವಕ್ಫ್ ಬೋರ್ಡ್ ಅಕ್ರಮ: ಎಎಪಿ ಶಾಸಕ ಅಮಾನತುಲ್ಲಾ ಗೆ 14 ದಿನಗಳ ನ್ಯಾಯಾಂಗ ಬಂಧನ

ನಾವು ಮೊದಲೇ ಡೀನ್ ಗೆ ಎಚ್ಚರಿಕೆ ನೀಡಿದ್ದೆವು: ರನೌಟ್ ಬಗ್ಗೆ ದೀಪ್ತಿ ಶರ್ಮಾ ಹೇಳಿಕೆ

ನಾವು ಮೊದಲೇ ಡೀನ್ ಗೆ ಎಚ್ಚರಿಕೆ ನೀಡಿದ್ದೆವು: ರನೌಟ್ ಬಗ್ಗೆ ದೀಪ್ತಿ ಶರ್ಮಾ ಹೇಳಿಕೆ

congress

‘ಕೈ’ ಬಿಕ್ಕಟ್ಟು: ಗೆಹ್ಲೋಟ್- ಪೈಲಟ್ ಬಣಗಳ ನಡುವೆ ಕಮಲ್ ನಾಥ್ ಮಧ್ಯಸ್ಥಿಕೆ

1-sad-adad

ರಷ್ಯಾದ ಶಾಲೆಯಲ್ಲಿ ಭೀಕರ ಗುಂಡಿನ ದಾಳಿ ; ಮಕ್ಕಳು ಸೇರಿ 13 ಬಲಿ

ಕೆಲಸ ಮಾಡದ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ ಎಚ್.ಡಿ.ಕುಮಾರಸ್ವಾಮಿ

ಕೆಲಸ ಮಾಡದ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ ಎಚ್.ಡಿ.ಕುಮಾರಸ್ವಾಮಿ

1-sd-adad

ಗುಜರಾತ್‌ನ ಸ್ವಚ್ಛತಾ ಕಾರ್ಮಿಕನ ಕುಟುಂಬಕ್ಕೆ ಕೇಜ್ರಿವಾಲ್ ನಿವಾಸದಲ್ಲಿ ಆತಿಥ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಯಚೂರು ಆರ್‌ಟಿಪಿಎಸ್‌ 1ನೇ ಘಟಕಕ್ಕೆ ವಯೋನಿವೃತ್ತಿ; ಬಂಕರ್‌ಗಳು ಮುರಿದು ಸ್ಥಗಿತಗೊಂಡ ಘಟಕ

ರಾಯಚೂರು ಆರ್‌ಟಿಪಿಎಸ್‌ 1ನೇ ಘಟಕಕ್ಕೆ ವಯೋನಿವೃತ್ತಿ; ಬಂಕರ್‌ಗಳು ಮುರಿದು ಸ್ಥಗಿತಗೊಂಡ ಘಟಕ

ಪಿಎಫ್‌ಐ, ಎಸ್‌ಡಿಪಿಐ ಜತೆ ಭಜರಂಗದಳ ನಿಷೇಧಿಸಲಿ: ನಲಪಾಡ್‌

ಪಿಎಫ್‌ಐ, ಎಸ್‌ಡಿಪಿಐ ಜತೆ ಭಜರಂಗದಳ ನಿಷೇಧಿಸಲಿ: ನಲಪಾಡ್‌

14-job

ಉದ್ಯೋಗ ಮೇಳ ಪ್ರಚಾರ ಯಶಸ್ವಿಗೊಳಿಸಲು ಮನವಿ

20-road

ರಸ್ತೆ ಸುರಕ್ಷತಾ ಕ್ರಮಗಳ ಜಾಗೃತಿ ಮೂಡಿಸಿ

11-road

ಆಡಳಿತಕ್ಕೆ ಕಾಣದೇ ಹದಗೆಟ್ಟ ರಂಗಮಂದಿರ ರಸ್ತೆ?‌

MUST WATCH

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

ಹೊಸ ಸೇರ್ಪಡೆ

ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ಮುರ್ಮು

ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

1-asds-dsad

ವಕ್ಫ್ ಬೋರ್ಡ್ ಅಕ್ರಮ: ಎಎಪಿ ಶಾಸಕ ಅಮಾನತುಲ್ಲಾ ಗೆ 14 ದಿನಗಳ ನ್ಯಾಯಾಂಗ ಬಂಧನ

tdy-17

ರಾಜಕೀಯ ಚಟುವಟಿಕೆ ಬಿರುಸು: ಪಕ್ಷಾಂತರಕ್ಕೆ ತಯಾರಿ!

ನಾವು ಮೊದಲೇ ಡೀನ್ ಗೆ ಎಚ್ಚರಿಕೆ ನೀಡಿದ್ದೆವು: ರನೌಟ್ ಬಗ್ಗೆ ದೀಪ್ತಿ ಶರ್ಮಾ ಹೇಳಿಕೆ

ನಾವು ಮೊದಲೇ ಡೀನ್ ಗೆ ಎಚ್ಚರಿಕೆ ನೀಡಿದ್ದೆವು: ರನೌಟ್ ಬಗ್ಗೆ ದೀಪ್ತಿ ಶರ್ಮಾ ಹೇಳಿಕೆ

congress

‘ಕೈ’ ಬಿಕ್ಕಟ್ಟು: ಗೆಹ್ಲೋಟ್- ಪೈಲಟ್ ಬಣಗಳ ನಡುವೆ ಕಮಲ್ ನಾಥ್ ಮಧ್ಯಸ್ಥಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.