ನಾಲೆಗಳ ಆಧುನೀಕರಣ ಅಗತ್ಯ

Team Udayavani, Sep 8, 2018, 3:12 PM IST

ಲಿಂಗಸುಗೂರು: ಎನ್‌ಆರ್‌ಬಿಸಿ ಹಾಗೂ ರಾಂಪುರ ನಾಲೆಗಳು ಸಂಪೂರ್ಣ ಹದಗೆಟ್ಟಿದ್ದು, ಆಧುನೀಕರಣಗೊಳಿಸುವುದು ಅಗತ್ಯವಾಗಿದೆ ಎಂದು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು. 

ತಾಲೂಕಿನ ಯರಡೋಣ ಗ್ರಾಮದ ಹತ್ತಿರ ರಾಂಪುರ ಏತ ನೀರಾವರಿ ಕಾಲುವೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ
ಮಾತನಾಡಿದ ಸ್ವಾಮೀಜಿ, ಜಿಲ್ಲೆಯ ಎರಡೂ ಬದಿ ಕೃಷ್ಣೆ ಮತ್ತು ತುಂಗಭದ್ರಾ ನದಿಗಳು ಹರಿಯುತ್ತಿವೆ. ನಾರಾಯಣಪುರ ಬಲದಂಡೆ, ರಾಂಪುರ ಏತ ನೀರಾವರಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿದ್ದರೂ ಸಮಗ್ರ ನೀರಾವರಿಗೆ ಒಳಪಡದಿರುವುದು ನೋವಿನ ಸಂಗತಿ.

ಅವೈಜ್ಞಾನಿಕ ಕಾಲುವೆಗಳ ನಿರ್ಮಾಣದಿಂದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ದೊರೆಯದೆ ವ್ಯರ್ಥ ಪೋಲಾಗುತ್ತಿದೆ. ಕಾಲುವೆ, ಹೊಲಗಾಲುವೆಗಳಲ್ಲಿ ಹೂಳು ತುಂಬಿದ್ದು, ಕಾಲುವೆ ವೀಕ್ಷಣಾ ರಸ್ತೆಗಳು ಹದಗೆಟ್ಟಿವೆ.
ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ಭೂಮಿ ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. 

ಬಲದಂಡೆ ಕಾಲುವೆ 95 ಕಿಮೀದಿಂದ 155 ಕಿಮೀ ವರೆಗೆ ಕಾಲುವೆ ವಿಸ್ತರಣೆ ಮಾಡುವ ಮುನ್ನ 0 ದಿಂದ 95 ಕಿಮೀ ವರೆಗೆ ನಿರ್ಮಾಣಗೊಂಡ ಎಲ್ಲ ಕಾಲುವೆಗಳ ಸಮಗ್ರ ಆಧುನೀಕರಣವಾಗಬೇಕು. ಅಂದಾಗ ಮಾತ್ರ ರೈತರ ಜಮೀನುಗಳಿಗೆ ಸಮರ್ಪಕ ನೀರು ದೊರೆಯಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ರೈತರ ಸಂಕಷ್ಟ ಪರಿಹಾರ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.  ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು, ರೈತ ಸಂಘದ ರಾಜ್ಯ ಮುಖಂಡ ಅಮರಣ್ಣ ಗುಡಿಹಾಳ, ಮಲ್ಲಣ್ಣ ಕೋಳೂರು ಇದ್ದರು. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • „ನಾಗರಾಜ ತೇಲ್ಕರ್‌ ದೇವದುರ್ಗ: ಪಟ್ಟಣದ ಕೋರ್ಟ್‌ ವ್ಯಾಪ್ತಿಯ ಸಾರ್ವಜನಿಕ ಕ್ಲಬ್‌ ಆವರಣ ಹಗಲು ಸಭೆ, ಸಮಾರಂಭಗಳಿಗೆ ವೇದಿಕೆ ಆದರೆ, ರಾತ್ರಿ ಕುಡುಕರ ಅಡ್ಡೆಯಾಗಿ...

  • ರಾಯಚೂರು: ಸಾರ್ವಜನಿಕರಿಂದ ಸಂಗ್ರಹಿಸಿರುವ ತೆರಿಗೆಯಲ್ಲಿ ಶೇ.6ರಷ್ಟನ್ನು ಗ್ರಂಥಾಲಯ ನಿರ್ವಹಣೆಗೆ ನೀಡಬೇಕು ಎಂಬ ನಿಯಮವನ್ನು ಜಿಲ್ಲೆಯ ಸ್ಥಳೀಯ ಸಂಸ್ಥೆಗಳು...

  • ಲಿಂಗಸುಗೂರು: ಚಿನ್ನದ ಉತ್ಪಾದನೆಯಲ್ಲಿ ಏಕಸ್ವಾಮ್ಯತೆ ಸಾಧಿಸಿರುವ ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿ ದಾಖಲೆಯ ಚಿನ್ನ ಉತ್ಪಾದಿಸಿದೆ. 2019-20ನೇ ಸಾಲಿನಲ್ಲಿ...

  • ನಾಗರಾಜ ತೇಲ್ಕರ್‌ ದೇವದುರ್ಗ: ಇತ್ತೀಚೆಗೆ ಸುರಿದ ಉತ್ತಮ ಮಳೆಯಿಂದಾಗಿ ಪಟ್ಟಣ ಸೇರಿ ತಾಲೂಕಿನಾದ್ಯಂತ ಹಿಂಗಾರು ಬಿತ್ತನೆ ಚುರುಕು ಪಡೆದಿದ್ದು, ತಾಲೂಕಿನಲ್ಲಿ...

  • ರಾಯಚೂರು: ತಾಲೂಕಿನ ಚಿಕ್ಕಸೂಗೂರು ರೈಲು ನಿಲ್ದಾಣದಲ್ಲಿ ವೇಗಧೂತ ರೈಲುಗಳ ನಿಲುಗಡೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಈ ಭಾಗದ ಮುಖಂಡರ ನಿಯೋಗವು ದೆಹಲಿಯಲ್ಲಿ...

ಹೊಸ ಸೇರ್ಪಡೆ