ಖಾತ್ರಿ ಪರಿಣಾಮಕಾರಿ ಜಾರಿಗೆ ಸರ್ಕಾರ ಬದ್ಧ

ನರೇಗಾಕ್ಕೆ 40 ಸಾವಿರ ಕೋಟಿ ಮೀಸಲುಮೂರು ವರ್ಷದಲ್ಲಿ ಅಂತರ್ಜಲ ಹೆಚ್ಚಿಸಲು ನಿರ್ಧಾರ

Team Udayavani, Jun 5, 2020, 4:01 PM IST

5-June-19

ಸಾಂದರ್ಭಿಕ ಚಿತ್ರ

ರಾಯಚೂರು: ಯಾರು ಹಸಿವಿನಿಂದ ಬಳಲಬಾರದು, ಸ್ವಾಭಿಮಾನದಿಂದ ಬದುಕಬೇಕು ಎಂಬ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸುತ್ತಿದ್ದು, ಅದನ್ನು ಮತ್ತಷ್ಟು ಪರಿಣಾಮಕಾರಿ ಜಾರಿಗೆ ಸರ್ಕಾರ ಶ್ರಮಿಸಲಿದೆ ಎಂದು ಡಿಸಿಎಂ, ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾ ಗೃಹದಲ್ಲಿ ಗುರುವಾರ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಆರ್ಟ್‌ ಆಫ್‌ ಲಿವಿಂಗ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರ್ಜಲ ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರ ಹಾಗೂ ದೇಶದ ಪ್ರಗತಿಗೆ ಪಕ್ಷ ಭೇದ ಮರೆತು ಶ್ರಮಿಸಲಾಗುವುದು. ಕೇಂದ್ರ ಸರ್ಕಾರ ಈ ಹಿಂದೆ ನರೇಗಾ ಯೋಜನೆಗಾಗಿ 60 ಸಾವಿರ ಕೋಟಿ ರೂ. ನೀಡಿತ್ತು. ಲಾಕ್‌ಡೌನ್‌ ವೇಳೆ ಪ್ರಧಾನಿ ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ 40 ಸಾವಿರ ಕೋಟಿ ರೂ. ಹಣ ಮೀಸಲಿಡಲಾಗಿದೆ. ನರೇಗಾವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಛತ್ತಿಸಘಡ ಮೊದಲಿದ್ದರೆ, ಕರ್ನಾಟಕ ನಂತರದ ಸ್ಥಾನದಲ್ಲಿದೆ. ಅದರಲ್ಲೂ ರಾಯಚೂರು ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆ ಅಂತರ್ಜಲ ವೃದ್ಧಿಗೆ ಮುಂದೆ ಬಂದಿದೆ. ರಾಜ್ಯದಲ್ಲಿ ಅಂತರ್ಜಲ ಸಂಪೂರ್ಣ ಕುಸಿದಿದೆ. ಮುಂದಿನ ಮೂರು ವರ್ಷದಲ್ಲಿ ಅಂತರ್ಜಲ ಹೆಚ್ಚಿಸುವ ನಿರ್ಧಾರ ಮಾಡಲಾಗಿದೆ. ಮಣ್ಣಿನ ಮೇಲೆ ಆಕ್ರಮಣ ಮಾಡಿದ್ದು, ಒಂದು ಕಾಲಕ್ಕೆ ಶೇ.40ರಷ್ಟು ಇರುತ್ತಿದ್ದ ಅಂತರ್ಜಲ ಈಗ ಕೇವಲ ಶೇ.5ಕ್ಕೆ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶಾಸಕ ವೆಂಕಟರಾವ್‌ ನಾಡಗೌಡ ಮಾತನಾಡಿ, ನರೇಗಾದಡಿ ನೀರಾವರಿ ಪ್ರದೇಶದಲ್ಲಿಯೂ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕು. ಕಾಲುವೆಗಳ ಹೂಳು ತೆಗೆಯುವ ಕೆಲಸ ಮಾಡಬೇಕಿದೆ. ಈಗ ಐದು ವರ್ಷಕ್ಕೊಮ್ಮೆ ಹೂಳು ತೆಗೆಯಲಾಗುತ್ತದೆ. ಕಾಯ್ದೆ ತಿದ್ದುಪಡಿ ಮಾಡಿ ಪ್ರತಿ ವರ್ಷ ಹೂಳು ತೆರವಿಗೆ ಕ್ರಮ ಕೈಗೊಳ್ಳಬೇಕು. ಇನ್ನೂ ನರೇಗಾದಡಿ ಕೇವಲ ಕೂಲಿ ನೀಡುವುದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸುವುದು ಸರಿಯಲ್ಲ. ಅದರ ಬದಲಿಗೆ ಕಟ್ಟಡ, ಶಾಶ್ವತ ಯೋಜನೆಗಳನ್ನು ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಅಂದಾಗಲೇ ಅದಕ್ಕೊಂದು ಅರ್ಥ ಸಿಗಲಿದೆ ಎಂದು ಹೇಳಿದರು.

ಜಿಪಂ ಸಿಇಒ ಲಕ್ಷ್ಮೀಕಾಂತರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಡಾ| ಶಿವರಾಜ ಪಾಟೀಲ, ಬಸನಗೌಡ ದದ್ದಲ್‌, ಶಿವನಗೌಡ ನಾಯಕ, ರಾಜಾ ವೆಂಕಟಪ್ಪ ನಾಯಕ, ಆರ್ಟ್‌ ಆಫ್‌ ಲಿವಿಂಗ್‌ನ ನಾಗರಾಜ, ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ ಇದ್ದರು.

ಟಾಪ್ ನ್ಯೂಸ್

shivaraj kumar

ಶಕ್ತಿಧಾಮದ ಮಕ್ಕಳೊಂದಿಗೆ ಶಿವಣ್ಣ ಗಣರಾಜ್ಯೋತ್ಸವ ಆಚರಣೆ

ಮೂವರಿಂದ ಪದ್ಮ ಪ್ರಶಸ್ತಿ ತಿರಸ್ಕಾರ; ಗುಲಾಂ ನಬಿ ಆಜಾದ್‌ಗೆ ಪದ್ಮ ಗೌರವ

ಮೂವರಿಂದ ಪದ್ಮ ಪ್ರಶಸ್ತಿ ತಿರಸ್ಕಾರ; ಗುಲಾಂ ನಬಿ ಆಜಾದ್‌ಗೆ ಪದ್ಮ ಗೌರವ

ನನಗೆ ಸಚಿವ ಸ್ಥಾನ ಬೇಕೇ ಬೇಕು: ಪಟ್ಟು ಹಿಡಿದ ಉಪ ಸ್ಪೀಕರ್ ಆನಂದ್ ಮಾಮನಿ

ನನಗೆ ಸಚಿವ ಸ್ಥಾನ ಬೇಕೇ ಬೇಕು: ಪಟ್ಟು ಹಿಡಿದ ಉಪ ಸ್ಪೀಕರ್ ಆನಂದ್ ಮಾಮನಿ

CM @ 2

ನಾಳೆ‌ ಬೊಮ್ಮಾಯಿ ಸರಕಾರಕ್ಕೆ 6 ತಿಂಗಳು : ಮುಂದೆ ಸಾಲು ಸಾಲು ಸವಾಲು

siddaramaiah

ಸಿದ್ದುಗೆ ಹೈಕಮಾಂಡ್ ಟಕ್ಕರ್ : ಮೇಲ್ಮನೆ ವಿಪಕ್ಷ ನಾಯಕತ್ವದ ಹಿಂದೆ ಲೆಕ್ಕಾಚಾರ

Gurgaon man arrested bought 5 Mercedes cars in 3 Years

ಹೀಗೊಂದು ಹಗರಣ: ಮೂರು ವರ್ಷದಲ್ಲಿ ಐದು ಮರ್ಸಿಡಿಸ್ ಕಾರು ಖರೀದಿ ಮಾಡಿದಾತನ ಬಂಧನ!

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,000 ಅಂಕ ಇಳಿಕೆ; ಜ.27ರಂದು ಲಾಭಗಳಿಸಿದ ಷೇರು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,000 ಅಂಕ ಇಳಿಕೆ; ಜ.27ರಂದು ಲಾಭಗಳಿಸಿದ ಷೇರು ಯಾವುದು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8rice

4.92 ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶ

7ambedkar

ಅಂಬೇಡ್ಕರ್‌ ಭಾವಚಿತ್ರ ಹಾಕಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ

5gandhi

ಗಾಂಧೀಜಿ-ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ

4covid

ಸರ್ಕಾರದ ನಿರ್ದೇಶನ ಪಾಲಿಸಿ, ಕೋವಿಡ್‌ ನಿಯಂತ್ರಿಸಿ

26road

ರಸ್ತೆ ಕಾಮಗಾರಿ ಪರಿಶೀಲನೆ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

accident

ಬೀಚ್‌ನಲ್ಲಿ ಸ್ಟ್ರೀಟ್ ಫುಡ್ ಅಂಗಡಿಗೆ ನುಗ್ಗಿದ ಕಾರು: ಮಹಿಳೆ ಸಾವು, ಐವರು ಗಂಭೀರ

10center

ಗ್ರಾಮ ಒನ್‌ ಕೇಂದ್ರದ ಲಾಭ ಪಡೆಯಿರಿ: ಶಾಸಕ ಖಾಶೆಂಪುರ

9muncipal

ಪುರಸಭೆ ಆಡಳಿತ ವಿರುದ್ಧ ಶಾಸಕರ ಅಸಮಾಧಾನ

shivaraj kumar

ಶಕ್ತಿಧಾಮದ ಮಕ್ಕಳೊಂದಿಗೆ ಶಿವಣ್ಣ ಗಣರಾಜ್ಯೋತ್ಸವ ಆಚರಣೆ

cm

ಸಂಪುಟ ಸಭೆಯ ಅಜೆಂಡಾದಲ್ಲಿ ಏನೇನು ಇದೆ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.