ಸಿದ್ದರಾಮಯ್ಯ ಕೂಡಲೇ ಜನರ ಕ್ಷಮೆಯಾಚಿಸಬೇಕು: ಶ್ರೀರಾಮುಲು ವಾಗ್ದಾಳಿ
Team Udayavani, Mar 29, 2021, 3:15 PM IST
ರಾಯಚೂರು: ರಾಜ್ಯ ಸಂಸದರು ಗುಲಾಮರು ಎಂದ ಸಿದ್ದರಾಮಯ್ಯಗೆ ಸಚಿವ ಬಿ.ಶ್ರೀರಾಮುಲು ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಸಂಸದರಾಗುವುದು ಬಹಳ ಕಷ್ಟ. ಸಂಸದ ಸ್ಥಾನಕ್ಕೆ ಅದರದ್ದೇ ಆದ ಗೌರವವಿದೆ, ಘನತೆ ಇದೆ. ಸಿದ್ದರಾಮಯ್ಯ ಸೋಲಿನ ಹತಾಶೆಯಿಂದ ಮಾತನಾಡಿದ್ದಾರೆ ಎಂದರು.
ಪ್ರಧಾನಿ ಮೋದಿ ಜನಸೇವಕರು. ಹಾಗೇ ಸಂಸದರು ಆ ಕ್ಷೇತ್ರಕ್ಕೆ ಸೇವಕರು. ಕಾಂಗ್ರೆಸ್ ಪಕ್ಷದಲ್ಲೂ ಸಂಸದರಿದ್ದಾರೆ. ಹಾಗಾದರೆ ಅವರು ಕೂಡ ಗುಲಾಮಾರಾಗುತ್ತಾರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿ: ಮಾಜಿ ಸಚಿವ ಡಾ.ಶರಣಪ್ರಕಾಶ ಆಗ್ರಹ
ಇದು ಜನರಿಗೆ ಮಾಡಿದ ಅಪಮಾನ. ಕೂಡಲೇ ಸಿದ್ದರಾಮಯ್ಯ ಗುಲಾಮರು ಅನ್ನುವ ಮಾತು ವಾಪಸ್ ತಗೆದುಕೊಳ್ಳಬೇಕು. ಸಿದ್ದರಾಮಯ್ಯ ಜನರ ಕ್ಷಮೆಯಾಚಿಸಬೇಕು ಎಂದರು.
ಇಂದು ಪ್ರತಾಪಗೌಡ ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ. ಮಸ್ಕಿ ಜನ ಈಗಾಗಲೇ ಪ್ರತಾಪಗೌಡರನ್ನು ಗೆಲ್ಲಿಸಿದ್ದಾರೆ. ಮೋದಿ, ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಗೆ ಬುದ್ದಿ ಕಲಿಸುವ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮುಳಗುವ ಹಡಗು. ಅದಕ್ಕೆ ಡಿ.ಕೆ. ಶಿವಕುಮಾರ್ ಕ್ಯಾಪ್ಟನ್. ಕಾಂಗ್ರೆಸ್ ಗೆ ಅಭ್ಯರ್ಥಿ ಸಿಗದೆ, ನಮ್ಮ ಪಕ್ಷದವರನ್ನ ಅಭ್ಯರ್ಥಿ ಮಾಡಿದ್ದಾರೆ. ಕಾಂಗ್ರೆಸ್ ಗೆ ನೈತಿಕತೆ ಇಲ್ಲ, ಎಲ್ಲ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತದೆ ಎಂದರು.
ಇದನ್ನೂ ಓದಿ: ಕುಲಪತಿ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚನೆ: ರಾಮಸೇನೆಯ ಪ್ರಸಾದ್ ಅತ್ತಾವರ ಬಂಧನ
ಉಪಚುನಾವಣೆ ಮೇಲೆ ಸಿ.ಡಿ ಪ್ರಕರಣ ಯಾವುದೇ ಪರಿಣಾಮ ಬೀರಲ್ಲ. ತನಿಖೆ ನಡೆಯುತ್ತಿರುವುದರಿಂದ ನಾನು ಮಾತನಾಡುವುದು ಶೋಭೆ ತರುವುದು ಸರಿಯಲ್ಲ. ತನಿಖೆ ಹೊರ ಬಂದ ನಂತರ ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂದರು.