Udayavni Special

ಬೆಳೆ ಖರೀದಿ ಕೇಂದ್ರ ಆರಂಭ ಎಂದು?


Team Udayavani, Nov 10, 2020, 5:58 PM IST

ಬೆಳೆ ಖರೀದಿ ಕೇಂದ್ರ ಆರಂಭ ಎಂದು?

ದೇವದುರ್ಗ: ತಾಲೂಕಿನಲ್ಲಿ ಖರೀದಿ ಕೇಂದ್ರ ಆರಂಭ ಎಂದು ಎಂಬ ಪ್ರಶ್ನೆ ರೈತರಲ್ಲಿ ಶುರುವಾಗಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬಹುತೇಕ ಬೆಳೆಗಳು ಹಾಗೂ ನಾಟಿ ಮಾಡಿದ ಭತ್ತ ರಾಶಿಗೆ ಬಂದಿವೆ. ಬಹುತೇಕ ಗ್ರಾಮಗಳಲ್ಲಿ ಹತ್ತಿ ಬಿಡಿಸಲಾಗುತ್ತಿದೆ. ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ತಾಲೂಕಿನಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವ ಬಲವಾದ ಕೂಗು ರೈತರಿಂದ ಕೇಳಿಬರುತ್ತಿದೆ.

ಹತ್ತಿ, ತೊಗರಿ, ಭತ್ತ ಸೇರಿ ಇತರೆ ಬೆಳೆಗಳು ರಾಶಿ ಹಂತಕ್ಕೆ ಬಂದಿವೆ. ಆರಂಭದಲ್ಲೇ ಖರೀದಿ ಕೇಂದ್ರ ಆರಂಭವಾದಲ್ಲಿ ರೈತರಿಗೆ ಅನುಕೂಲವಾಗಲಿದೆ. ಖರೀದಿ ಕೇಂದ್ರ ಆರಂಭಿಸಿ ಬೆಲೆ ನಿಗದಿಪಡಿಸುವಂತೆ ರೈತರು ಒತ್ತಾಯಿಸಿದರೂಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಯಾವುದೇ ನಿರ್ಧಾರ ಮಾಡುತ್ತಿಲ್ಲ. ವಾರದ ಮುಂಚೆಯೇ ಖರೀದಿ ಕೇಂದ್ರಕ್ಕೆ ರೈತರು ಅಗತ್ಯ ದಾಖಲಾತಿಗಳುನೀಡಲಾಗುತ್ತದೆ. ರಾಜ್ಯ ಸರಕಾರ ಖರೀದಿ ಕೇಂದ್ರಆರಂಭಿಸುವಂತೆ ಸೂಚನೆ ನೀಡದೇ ಹಿನ್ನೆಲೆನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ವಿವಿಧಬೆಳೆಗಳು ಮಾರಾಟದ ಚಿಂತೆ ಶುರುವಾಗಿದೆ. ಕಳೆದ ವರ್ಷ ಎಪಿಎಂಸಿ ಮೂಲಕ ಹಿಂದೂಸ್ತಾನಿ ಜಿನ್ನಿಂಗ್‌ ಫ್ಯಾಕ್ಟರಿಯಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭಿಸಿದರು.

ಕೃಷಿ ಮಾರುಕಟ್ಟೆ ಆವರಣದಲ್ಲಿ ತಾಲೂಕು ವ್ಯವಸಾಯೋತ್ಪನ್ನ ಸಹಾಕರ ಮಾರಾಟಸಂಘದಿಂದ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿತ್ತು. ರೈತರು ರಾಶಿ ಮಾಡಿ ಮಾರಾಟದ ಹೊತ್ತಿಗೆ ಖರೀದಿ ಕೇಂದ್ರ ಆರಂಭಕ್ಕೆ ಚಿಂತನೆ ಮಾಡುವ ಜಿಲ್ಲಾಡಳಿತ ನಡೆ ರೈತ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ. ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯ ಸಾವಿರಾರೂ ಹೆಕ್ಟೇರ್‌ನಲ್ಲಿ ಭತ್ತ ನಾಟಿ ಹಾಗೂ ಹತ್ತಿ ಬಿತ್ತನೆಯಾಗಿದೆ. ದೇವದುರ್ಗ 5097 ಹೆಕ್ಟೇರ್‌, ಗಬ್ಬೂರು 7140, ಜಾಲಹಳ್ಳಿ 9657, ಅರಕೇರಾ 7217, ನಾಲ್ಕು ಹೋಬಳಿ ಸೇರಿ 29,021 ಹೆಕ್ಟೇರ್‌ನಲ್ಲಿ ಭತ್ತ ನಾಟಿಯಾಗಿದೆ. 50,293 ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆಯಾಗಿದೆ. ಸಾವಿರಾರೂ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆಗಳು ರಾಶಿ ಹಂತದಲ್ಲಿವೆ.

ಮಾರುಕಟ್ಟೆ ಸ್ತಬ್ದ: ತಾಲೂಕು ಶೇ.80ರಷ್ಟು ನೀರಾವರಿ ಸೌಲಭ್ಯ ಹೊಂದಿದೆ. ಇಲ್ಲಿ ಬೆಳೆಯುವ ವಿವಿಧ ಬೆಳೆಗಳು ಬೇರೆ ಬೇರೆ ಜಿಲ್ಲೆಯಲ್ಲಿ ಹೆಸರುವಾಸಿ. ಪಟ್ಟಣದಲ್ಲಿ ಕೃಷಿ ಮಾರುಕಟ್ಟೆ ಸೌಲಭ್ಯವಿದೆ. ಆದರೆ ಯಾವುದೇ ಕೃಷಿ ಚಟುವಟಿಕೆ ನಡೆಯದೇ ಇರುವುದರಿಂದ ಸ್ತಬ್ದವಾಗಿದೆ. ಕೋಟ್ಯಂತರ ರೂ. ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ರೈತರಿಗೆ ಅನುಕೂಲವಾಗಬೇಕಾದ ಕೃಷಿ ಮಾರುಕಟ್ಟೆ ಶಾಪಗ್ರಸ್ತವಾಗಿದೆ. ರಾಜಕೀಯತೋಳಾಟಕ್ಕೆ ಪ್ರತಿವರ್ಷ ರಾಯಚೂರು ಕೃಷಿ ಮಾರುಕಟ್ಟೆಗೆ ವಿಲೀನವಾಗುತ್ತಿದೆ. ಬೆಳೆದ ಬೆಳೆಗಳು ಮಾರಾಟಕ್ಕೆ ಇನ್ನೊಂದು ಜಿಲ್ಲೆಗೆ ಹೋಗುವಂತಹ ಸ್ಥಿತಿ ರೈತರಿಗೆ ಬಂದಾಗಿದೆ ಎಂದು ರೈತ ಮುಖಂಡ ಉಮಾಪತಿಗೌಡ ನಗರಗುಂಡ ಆಗ್ರಹಿಸಿದರು.

ಭತ್ತ ಹಾಗೂ ಹತ್ತಿ ಖರೀದಿ ಕೇಂದ್ರ ತೆರೆಯುವ ಬಗ್ಗೆ ಸರಕಾರದಿಂದ ಆದೇಶ ಬಂದಿಲ್ಲ. ಖರೀದಿ ಕೇಂದ್ರ ತೆರೆಯಬೇಕು ಎನ್ನುವ ರೈತರ ಬೇಡಿಕೆಯಿದೆ. ಜಿಲ್ಲಾಡಳಿತದಿಂದ ಸೂಚನೆ ಬಂದ ನಂತರ ಆರಂಭಿಸಲಾಗುತ್ತದೆ. –ಮಧುರಾಜ್‌ ಯಾಳಗಿ, ತಹಶೀಲ್ದಾರ್‌.

 

-ನಾಗರಾಜ ತೇಲ್ಕರ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಭಾರತದ ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿ ಬೆಂಬಲ! ಆಂತರಿಕ ವಿಚಾರ ನಿಮಗ್ಯಾಕೆ ; ಭಾರತ

ದೇಶದ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ ಕೆನಡಾ ಪ್ರಧಾನಿ ಜಸ್ಟಿನ್ ಗೆ ಭಾರತ ಹೇಳಿದ್ದೇನು?

ಏಡ್ಸ್‌ ರೋಗಿಗಳಿಗೆ ವಾರ್ಷಿಕ ಐದು ಲಕ್ಷ ವೆಚ್ಚದಲ್ಲಿ ಉಚಿತ ಔಷಧಿ: ಡಾ.ಕೆ.ಸುಧಾಕರ್‌

ಏಡ್ಸ್‌ ರೋಗಿಗಳಿಗೆ ವಾರ್ಷಿಕ ಐದು ಲಕ್ಷ ವೆಚ್ಚದಲ್ಲಿ ಉಚಿತ ಔಷಧಿ: ಡಾ.ಕೆ.ಸುಧಾಕರ್‌

ತೆಲಂಗಾಣ ಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿದ್ದು ಹೇಗೆ? ದಿಢೀರ್‌ ಬೆಳವಣಿಗೆಗೆ ಕಾರಣವೇನು

ತೆಲಂಗಾಣ ಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿದ್ದು ಹೇಗೆ? ದಿಢೀರ್‌ ಬೆಳವಣಿಗೆಗೆ ಕಾರಣವೇನು…

ಮಾರುವೇಷದಲ್ಲಿ ಬಂದು ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವೆ: ವಾಟಾಳ್ ನಾಗರಾಜ್

ಮಾರುವೇಷದಲ್ಲಿ ಬಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವೆ: ವಾಟಾಳ್ ನಾಗರಾಜ್ ಆಕ್ರೋಶ

pushpa

ಭಾರತ್ ಮಾತಾಕಿ ಜೈ ಎನ್ನುತ್ತಲೇ ಬಿಜೆಪಿಯವರಿಂದ ಮಹಿಳೆಯರ ಮೇಲೆ ದೌರ್ಜನ್ಯ: ಪುಷ್ಪಾ ಅಮರನಾಥ್

ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆ ಸೇರ್ಪಡೆ

ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆ ಸೇರ್ಪಡೆ

ಬೆಳಗಾವಿಯಲ್ಲಿ 17 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ: ಸಚಿವ ಬೊಮ್ಮಾಯಿ

ಬೆಳಗಾವಿಯಲ್ಲಿ 17 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ: ಸಚಿವ ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಢೇಸುಗೂರಿನ ಪುಷ್ಕರೋತ್ಸವದಲ್ಲಿ ತುಂಗಭದ್ರಾ ಆರತಿ

ದಢೇಸುಗೂರಿನ ಪುಷ್ಕರೋತ್ಸವದಲ್ಲಿ ತುಂಗಭದ್ರಾ ಆರತಿ

ಜಿಲ್ಲೆಯಲ್ಲಿ ತಗ್ಗಿದ ಎಚ್‌ಐವಿ-ಏಡ್ಸ್‌  ಪ್ರಮಾಣ

ಜಿಲ್ಲೆಯಲ್ಲಿ ತಗ್ಗಿದ ಎಚ್‌ಐವಿ-ಏಡ್ಸ್‌ ಪ್ರಮಾಣ

ನೆಲಕ್ಕುರುಳಿದ ಭತ್ತ; ಮತ್ತೆ  ಸಂಕಷ್ಟದಲ್ಲಿ ರೈತ

ನೆಲಕ್ಕುರುಳಿದ ಭತ್ತ; ಮತ್ತೆ ಸಂಕಷ್ಟದಲ್ಲಿ ರೈತ

ಸಿದ್ದರಾಮಯ್ಯರದ್ದು ಆಧಾರ ರಹಿತ ಆರೋಪ: ಡಿಸಿಎಂ ಲಕ್ಷ್ಮಣ ಸವದಿ

ಸಿದ್ದರಾಮಯ್ಯರದ್ದು ಆಧಾರ ರಹಿತ ಆರೋಪ: ಡಿಸಿಎಂ ಲಕ್ಷ್ಮಣ ಸವದಿ

ನಾನು ಡಿಸಿಎಂ ಆಗಬೇಕೆನ್ನುವುದು ಜನರ ಆಸೆ: ಬಹಿರಂಗವಾಗಿಯೇ ಬೇಡಿಕೆಯಿಟ್ಟ ಶ್ರೀರಾಮುಲು

ನಾನು ಡಿಸಿಎಂ ಆಗಬೇಕೆನ್ನುವುದು ಜನರ ಆಸೆ: ಬಹಿರಂಗವಾಗಿಯೇ ಬೇಡಿಕೆಯಿಟ್ಟ ಶ್ರೀರಾಮುಲು

MUST WATCH

udayavani youtube

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ದೋಣಿ ದುರಂತ – ಇಬ್ಬರ ಮೃತದೇಹ ಪತ್ತೆ

udayavani youtube

ಮಂಗಳೂರು: ಮೀನುಗಾರಿಕೆಗೆ ತೆರಳಿ ವಾಪಾಸಾಗುವ ವೇಳೆ ಮಗುಚಿಬಿದ್ದ ಬೋಟ್: 6 ಮಂದಿ ನಾಪತ್ತೆ

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

ಹೊಸ ಸೇರ್ಪಡೆ

ನಿಗದಿತ ಕಾಲಮಿತಿಯಲ್ಲಿ  ಸೇವೆ ಒದಗಿಸಿ

ನಿಗದಿತ ಕಾಲಮಿತಿಯಲ್ಲಿ ಸೇವೆ ಒದಗಿಸಿ

ಭಾರತದ ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿ ಬೆಂಬಲ! ಆಂತರಿಕ ವಿಚಾರ ನಿಮಗ್ಯಾಕೆ ; ಭಾರತ

ದೇಶದ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ ಕೆನಡಾ ಪ್ರಧಾನಿ ಜಸ್ಟಿನ್ ಗೆ ಭಾರತ ಹೇಳಿದ್ದೇನು?

ಕೂಡ್ಲಿಗಿ: ಪ್ರಗತಿ ಪರಿಶೀಲನಾ ಸಭೆ

ಕೂಡ್ಲಿಗಿ: ಪ್ರಗತಿ ಪರಿಶೀಲನಾ ಸಭೆ

ಏಡ್ಸ್‌ ರೋಗಿಗಳಿಗೆ ವಾರ್ಷಿಕ ಐದು ಲಕ್ಷ ವೆಚ್ಚದಲ್ಲಿ ಉಚಿತ ಔಷಧಿ: ಡಾ.ಕೆ.ಸುಧಾಕರ್‌

ಏಡ್ಸ್‌ ರೋಗಿಗಳಿಗೆ ವಾರ್ಷಿಕ ಐದು ಲಕ್ಷ ವೆಚ್ಚದಲ್ಲಿ ಉಚಿತ ಔಷಧಿ: ಡಾ.ಕೆ.ಸುಧಾಕರ್‌

ದೋಷ ರಹಿತ ಮತದಾರರ ಪಟ್ಟಿ  ತಯಾರಿಸಲು ಸಹಕರಿಸಿ

ದೋಷ ರಹಿತ ಮತದಾರರ ಪಟ್ಟಿ ತಯಾರಿಸಲು ಸಹಕರಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.