Udayavni Special

ಏ.1ರಿಂದ ಖರೀದಿ ಹಾಲು ಲೀ.29.5 ರೂ.


Team Udayavani, Mar 29, 2021, 12:11 PM IST

ಏ.1ರಿಂದ ಖರೀದಿ ಹಾಲು ಲೀ.29.5 ರೂ.

ಮಾಗಡಿ: ಏಪ್ರಿಲ್‌ 1ರಿಂದಲೇ ರೈತರು ಡೇರಿಗೆಪೂರೈಕೆ ಮಾಡುವ ಹಾಲಿಗೆ 29.5 ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಪಟ್ಟಣದ ಬಮೂಲ್‌ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಲೀಟರ್‌ ಹಾಲಿಗೆ 4.1 ಪ್ಯಾಟ್‌ಗೆ 29.4 ರೂ. ಮತ್ತು ಎಂಪಿಪಿಎಸ್‌ಗೆ1.15 ರೂ. ಹಾಗೂ ಡೇರಿಯಕಾರ್ಯನಿರ್ವಾಹಕರಿಗೆ 40 ಪೈಸೆಯನ್ನು ನೀಡಲಾಗುವುದು ಎಂದು ಹೇಳಿದರು.

ಬಮೂಲ್‌ ರೈತರ ಸಂಸ್ಥೆಯಾಗಿದ್ದು,ಅಧಿಕಾರಿ ವರ್ಗ ಮತ್ತು ಕಾರ್ಯಕಾರಿ ಸಿಬ್ಬಂದಿವರ್ಗದವರು ಬದ್ಧತೆಯಿಂದ ಕೆಲಸಮಾಡುತ್ತಿದ್ದಾರೆ. ಕನಕಪುರದಲ್ಲಿ ನಡೆದಬಮೂಲ್‌ ಸಂಸ್ಥೆಯ 26ನೇ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಚರ್ಚಿಸಿ ರೈತರಿಗೆ ನೀಡುವ ಹಾಲಿನ ದರವನ್ನು ಹೆಚ್ಚಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಂಕಷ್ಟದಲ್ಲೂ ಪ್ರೋತ್ಸಾಹಧನ: ಕೋವಿಡ್ ಬಂದ ಸಂದರ್ಭದಲ್ಲಿಯೂ ರೈತರಿಗೆತೊಂದರೆಯಾಗಬಾರದು ಎಂಬಉದ್ದೇಶದಿಂದ ರೈತರಿಗೆ ನೀಡುವ ಯಾವುದೇಸೌಲಭ್ಯ ಸ್ಥಗಿತಗೊಳಿಸುವ ಕೆಲಸವನ್ನುಬಮೂಲ್‌ ಸಂಸ್ಥೆ ಮಾಡಲಿಲ್ಲ, ಕೊರೊನಾಸಮಯದಲ್ಲೂ ಬಮೂಲ್‌ ಸಂಸ್ಥೆಗೆ 90ಕೋಟಿ ರೂ. ನಷ್ಟವಾಗುತ್ತಿದ್ದಸಂದರ್ಭದಲ್ಲಿಯೂ ರೈತರಿಗೆ 50 ಕೋಟಿ ರೂ. ಪ್ರೋತ್ಸಾಹ ಧನವನ್ನು ನೀಡಲಾಯಿತು ಎಂದು ತಿಳಿಸಿದರು.

ಗುಣಮಟ್ಟದ ಹಾಲು ಪೂರೈಸಿ: ಬಮೂಲ್‌ ಸಂಸ್ಥೆಗೆ ಅವಶ್ಯಕತೆ ಇದ್ದದ್ದು 7 ಲಕ್ಷ ಲೀಟರ್‌ನಷ್ಟು ಹಾಲು ಮಾತ್ರ. ಆದರೆ, ರೈತರಿಗೆ ತೊಂದರೆ ಯಾಗಬಾರದು, ನಷ್ಟವಾಗಬಾರದೆಂದು 19.10 ಲಕ್ಷ ಲೀಟರ್‌ಹಾಲನ್ನು ಖರೀದಿ ಮಾಡಲಾಯಿತು. ರೈತರಿಗೆನೀಡುವ ಹಾಲಿನ ಬೆಲೆಯನ್ನು ಹೆಚ್ಚಿಸಬೇಕು ಎಂದು ಕೆಎಂಎಫ್ ಸಂಸ್ಥೆಗೆ ಮನವಿಮಾಡಲಾಗಿದೆ. ರೈತರು ಸಹ ಗುಣಮಟ್ಟದಹಾಲನ್ನು ಸರಬರಾಜು ಮಾಡಿ ಹೆಚ್ಚಿನ ಹಣವನ್ನು ಪಡೆಯಲು ಮುಂದಾಗಬೇಕುಎಂದು ವಿವರಿಸಿದರು.

ಗೋದಾಮು ಸ್ಥಾಪನೆ: ಹಾಲಿನ ಉತ್ಪನ್ನಗಳನ್ನು ಶೇಖರಣೆ ಮಾಡಲು ಖಾಸಗಿಗೋದಾಮುಗಳಿಗೆ ಹೆಚ್ಚಿನ ಬಾಡಿಗೆ ನೀಡಬೇಕಾದ್ದರಿಂದ ಬಮೂಲ್‌ ಸಂಸ್ಥೆಗೆಹೆಚ್ಚಿನ ಹೊರೆಯಾಗುತ್ತಿತ್ತು. ಆದ್ದರಿಂದ ಕನಕಪುರದಲ್ಲಿ 60 ಲಕ್ಷ ಮೆಟ್ರಿಕ್‌ ಟನ್‌ ಹಾಲಿನ ಪೌಡರ್‌ ಶೇಖರಣೆ ಮಾಡುವಷ್ಟು ಗೋದಾಮು ಜೊತೆಗೆ 4 ಸಾವಿರ ಟನ್‌ ಬೆಣ್ಣೆ ಶೇಖರಣೆಗೆ ಗೋದಾಮುನಿರ್ಮಿಸಲಾಗುವುದು, ದೊಡ್ಡಬಳ್ಳಾಪುರದಲ್ಲಿ2 ಲಕ್ಷ ಟೆಟ್ರಾ ಪ್ಯಾಕ್‌ ಮಾಡುವ ಘಟಕ ಸ್ಥಾಪನೆ ಮತ್ತು ಆನೇಕಲ್‌, ಹೊಸಕೋಟೆಯಲ್ಲಿಗೋದಾಮು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಬಮೂಲ್‌ ಸಂಸ್ಥೆ ಕೈಗೊಳ್ಳುವ ಉತ್ತಮಕೆಲಸ ಕಾರ್ಯಗಳಿಗೆ ಮಾಜಿ ಸಚಿವ ಹಾಗೂಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತುಸಂಸದ ಡಿ.ಕೆ.ಸುರೇಶ್‌ ಇವರು, ಹೆಚ್ಚಿನಸಹಕಾರ ನೀಡುತ್ತಿದ್ದಾರೆ. ಮಾಗಡಿ ಭಾಗದಲ್ಲಿಜಮೀನಿನ ಕೊರತೆ ಇರುವುದರಿಂದಬಮೂಲ್‌ ವತಿಯಿಂದ ಯಾವುದೇ ಘಟಕ ಸ್ಥಾಪನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸೋಲೂರು ಹಾಲು ಶೀತಲಿಕೇಂದ್ರದಡಾ.ಕೆ.ಸಿ.ಶ್ರೀಧರ್‌, ಎಂ.ಎಲ್‌.ನರಸಿಂಹಮೂರ್ತಿ, ಗಣೇಶ್‌, ಮಂಜುಳಾ,ಉಮೇಶ್‌, ಪ್ರಮೋದ್‌, ಮನು, ರವಿ ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

fcdyryr

ವಾಟ್ಸ್‌ಆ್ಯಪ್‌ ಫ್ರೆಂಡ್ಸ್‌ನಿಂದ ವಂಚನೆ: ಇಬ್ಬರ ಬಂಧನ

hfghdrr

ಉದ್ಯೋಗ ಖಾತ್ರಿ ಯೋಜನೆಯಡಿ ಗುದ್ದಲಿ ಹಿಡಿದ ಗ್ರಾಪಂ ಸದಸ್ಯ

ಸೊರಬ:ಕೋವಿಡ್ ನಿಯಮ ಉಲ್ಲಂಘಿಸಿ ದೇವರ ಜಾತ್ರೆ ಆಚರಣೆ 11 ಜನರ ಮೇಲೆ ಪ್ರಕರಣ ದಾಖಲು

ಸೊರಬ:ಕೋವಿಡ್ ನಿಯಮ ಉಲ್ಲಂಘಿಸಿ ದೇವರ ಜಾತ್ರೆ ಆಚರಣೆ 11 ಜನರ ಮೇಲೆ ಪ್ರಕರಣ ದಾಖಲು

fghydtyetyer

ಅಣ್ಣನ ಶವ ತಂಗಿ ಕಾರಿನಲ್ಲಿದ್ದರೂ ಗೊತ್ತಿರಲಿಲ್ಲವಂತೆ!

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕುವಂತಿಲ್ಲ: ಡಿಸಿಎಂ

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕುವಂತಿಲ್ಲ: ಡಿಸಿಎಂ

tutu

ನಾಳೆ ಕರ್ನಾಟಕ ಸೇರಿ 10 ರಾಜ್ಯಗಳ ಸಿಎಂಗಳ ಜೊತೆ ಪಿಎಂ ಸಭೆ

Untitled-2

ಸಿಡಿಲು ಬಡಿದು ಮನೆ ಕುಸಿದು ಒಂದೇ ಕುಟುಂಬ 7 ಮಂದಿ ಗಂಭೀರ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

covid effect

ಕೋವಿಡ್ ನಿಂದ ಬಡವರ ಪರಿಸ್ಥಿತಿ ಹೀನಾಯವಾಗಿದೆ: ವಾಟಾಳ್‌

Vaccine awareness by Tahsildar

ಮನೆ ಮನೆಗೆ ತೆರಳಿ ತಹಶೀಲ್ದಾರ್‌ರಿಂದ ಲಸಿಕೆ ಅರಿವು

huliyaru 12th Ward

ಹುಳಿಯಾರು 12ನೇ ವಾರ್ಡ್‌ ಸದಸ್ಯರೇ ಇತ್ತ ನೋಡಿ!

Join the candidate in the campaign

ಪ್ರಚಾರದಲ್ಲಿ ಅಭ್ಯರ್ಥಿ ಸೇರಿ ಐವರಿಗೆ ಅವಕಾಶ

ಜಿಲ್ಲೆಯಲ್ಲಿ ರೆಮಿಡಿಸಿವರ್‌, ಆಮ್ಲಜನಕ ಕೊರತೆ ಇಲ್ಲ

ಜಿಲ್ಲೆಯಲ್ಲಿ ರೆಮಿಡಿಸಿವರ್‌, ಆಮ್ಲಜನಕ ಕೊರತೆ ಇಲ್ಲ

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

ಕೋವಿಡ್‌ ವರದಿ ತಾಂತ್ರಿಕ ಸಮಸ್ಯೆ  ಮಂಗಳೂರಿನಲ್ಲಿ ದುಬಾೖ ಪ್ರಯಾಣಿಕರ ಪರದಾಟ!

ಕೋವಿಡ್‌ ವರದಿ ತಾಂತ್ರಿಕ ಸಮಸ್ಯೆ ಮಂಗಳೂರಿನಲ್ಲಿ ದುಬಾೖ ಪ್ರಯಾಣಿಕರ ಪರದಾಟ!

ಆರೋಗ್ಯವೇ ಮುಖ್ಯ: ಪೇಜಾವರ ಶ್ರೀ

ಆರೋಗ್ಯವೇ ಮುಖ್ಯ: ಪೇಜಾವರ ಶ್ರೀ

ಪಡಿಕ್ಕಲ್‌ ಸೆಂಚುರಿ: ಆರ್‌ಸಿಬಿ 4ನೇ ಜಯಭೇರಿ

ಪಡಿಕ್ಕಲ್‌ ಸೆಂಚುರಿ: ಆರ್‌ಸಿಬಿ 4ನೇ ಜಯಭೇರಿ

fcdyryr

ವಾಟ್ಸ್‌ಆ್ಯಪ್‌ ಫ್ರೆಂಡ್ಸ್‌ನಿಂದ ವಂಚನೆ: ಇಬ್ಬರ ಬಂಧನ

hfghdrr

ಉದ್ಯೋಗ ಖಾತ್ರಿ ಯೋಜನೆಯಡಿ ಗುದ್ದಲಿ ಹಿಡಿದ ಗ್ರಾಪಂ ಸದಸ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.