ಹಸಿ ತ್ಯಾಜ್ಯ ಬಳಸಿ ಪೈಪ್‌ ಗೊಬ್ಬರ ತಯಾರಿ

Team Udayavani, Nov 26, 2019, 4:23 PM IST

rn-tdy-2

ರಾಮನಗರ: ಪೈಪ್‌ ಗೊಬ್ಬರ! ಆಶ್ಚರ್ಯ ಬೇಡ. ಹಸಿ ತ್ಯಾಜ್ಯವನ್ನು ಪೈಪ್‌ನಲ್ಲಿ ಹಾಕಿ ಗೊಬ್ಬರ ತಯಾರಿಸುವ ನೂತನ ವಿಧಾನವಿದು. ಮನೆ, ಶಾಲೆ, ಕಚೇರಿ , ಹೋಟೆಲ್‌ ಹೀಗೆ ಎಲ್ಲಿ ಬೇಕಾದರು, ಯಾರು ಬೇಕಾದರು ಈ ವಿಧಾನವನ್ನು ಅನುಸರಿಸಿ ಗೊಬ್ಬರವನ್ನು ತಯಾರಿಸಿ ಮರ, ಗಿಡಗಳಿಗೆ ಬಳಸಿಕೊಳ್ಳಬಹುದು. ಪೈಫ್ ಗೊಬ್ಬರದ ಬಗ್ಗೆ ತಾಪಂ ಆವರಣದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.

ಪೈಪ್‌ ಗೊಬ್ಬರ ವಿಧಾನವೇನು?: ಪೈಪ್‌ ಗೊಬ್ಬರ ತಯಾರಿಸಲು ದೊಡ್ಡ ಸ್ಥಳವೇನು ಅಗತ್ಯವಿಲ್ಲ. ಒಂದುವರೆ ಅಡಿ ಅಗಲ ಉದ್ದದ ಎರಡು ಸ್ಥಳ ಸಾಕು. ಮನೆಯಲ್ಲಿ ದಿನ ನಿತ್ಯ ಒಂದು ಕೆ.ಜಿ. ಹಸಿ ಕಸ ಉತ್ಪತ್ತಿ ಆಗುತ್ತಿದ್ದರೆ 6 ಇಂಚು ಅಗಲ, 6 ಅಡಿ ಉದ್ದದ 2 ಪೈಪು ಬೇಕು. ಒಂದು ಕೆ.ಜಿ.ಗಿಂತ ಅಧಿಕ ಹಸಿ ತ್ಯಾಜ್ಯ ಉತ್ಪತ್ತಿಯಾದರೆ 8 ಇಂಚು ಅಗಲದ ಪೈಪು ಅಗತ್ಯವಿದೆ. ಒಂದೂವರೆ ಅಗಲದ ಎರಡೂ ಕಡೆಯ ಭೂಮಿಯನ್ನು 1 ರಿಂದ 1.5 ಅಡಿ ಆಳ ತೋಡಿಕೊಳ್ಳಿ. ನಂತರ ಎರಡೂ ಪೈಪ್‌ಗ್ಳನ್ನು ಪ್ರತ್ಯೇಕವಾಗಿ ಕಂಬದಂತೆ ನಿಲ್ಲಿಸಿ ಅಲ್ಲಾಡದಂತೆ ಸಿದ್ಧತೆ ಮಾಡಿಕೊಳ್ಳಬೇಕು.

ನಂತರ ಒಂದು ಪೈಪಿನೊಳಗೆ 1ಲೀಟರ್‌ ಸಗಣಿನೀರು ಮತ್ತು 1 ಲೀಟರ್‌ ಬೆಲ್ಲದ ನೀರನ್ನು ಸುರಿಯಬೇಕು. ನಂತರ ದಿನನಿತ್ಯ ಹಸಿ ತ್ಯಾಜ್ಯವನ್ನು ಆ ಪೈಪ್‌ನೊಳಕ್ಕೆ ಹಾಕುತ್ತಿರುವ ಬೇಕು. ಆಗೊಮ್ಮೆ, ಈಗೊಮ್ಮೆ ಒಂದಿಷ್ಟು ಬೆಲ್ಲದ ಚೂರನ್ನು ಹಾಕಿದರೆ ಒಳಿತು. 30 ದಿನಗಳ ನಂತರ ಪೈಪ್‌ಗೆ ಮುಚ್ಚಳ ಬಿಗಿದು, ತಿಂಗಳ ಕಾಲ ತೆರೆಯಬಾರದು. ಹೀಗೆ ಒಂದು ಪೈಪನ್ನು ಮುಚ್ಚಿದ ನಂತರ ಮತ್ತೂಂದು ಪೈಪ್‌ನ ಬಳಕೆಯನ್ನು ಆರಂಭಿಸಬೇಕು. ತಿಂಗಳಲ್ಲಿ ಹಸಿ ತ್ಯಾಜ್ಯ ಗೊಬ್ಬರವಾಗಿರುತ್ತದೆ. ತಿಂಗಳ ನಂತರ ಪೈಪನ್ನು ಭೂಮಿಯಿಂದ ಹೊರತೆಗೆದು ಗೊಬ್ಬರವನ್ನು ಬಳಸಿಕೊಳ್ಳಬಹುದು. ಈ ವಿಧಾನದಲ್ಲಿ ಯಾವುದೇ ವಾಸನೆಗೆ ಅವಕಾಶವಿಲ್ಲ. ಹಸಿ ತ್ಯಾಜ್ಯವನ್ನು ರಸ್ತೆ ಬದಿ ಸುರಿದು ಅದು ಕೊಳೆತು ಸಾಂಕ್ರಮಿಕ ರೋಗಗಳಿಗೆ ಕಾರಣವಾಗುವ ಭಯವಿಲ್ಲ. ಉಳಿದ ಅನ್ನ, ಹೆಚ್ಚಿದ ತರಕಾರಿ, ಹಣ್ಣಿನ ಸಿಪ್ಪೆ ಇತ್ಯಾದಿ ಹಸಿ ತ್ಯಾಜ್ಯವನ್ನು ಬಳಸಿ ಗೊಬ್ಬರ ತಯಾರಿಸಿಕೊಳ್ಳುವ ಸರಳ ಹಾಗೂ ಸುಲಭದ ವಿಧಾನವಿದು.

ಕಸದ ಸಮಸ್ಯೆಗೆ ಪರಿಣಾಮಕಾರಿ ಉತ್ತರ: ಪೈಪ್‌ ಗೊಬ್ಬರದ ವಿಧಾನವನ್ನು ಕಂಡುಕೊಂಡ ಜಸ್ವತ್‌ ಗೌಡ ನಗರದ ತಾಪಂ ಆವರಣದಲ್ಲಿ ಈ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿ ಅಂಗನವಾಡಿ, ಶಾಲಾ – ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ಈ ಸರಳ ವಿಧಾನವನ್ನು ಅನುಸರಿಸಿ ಮಾದರಿಯಾಗಬೇಕು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಸಲಹೆ ನೀಡಿದರು.

ತಾಪಂ ಅಧ್ಯಕ್ಷ ಗಾಣಕಲ್‌ ನಟರಾಜು ಮಾತನಾಡಿ, ಪೈಪ್‌ ಗೊಬ್ಬರ ವಿಧಾನಕ್ಕೆ ಹೆಚ್ಚಿನ ಸ್ಥಳವೇನು ಅಗತ್ಯವಿಲ್ಲ. ಹೆಚ್ಚು ವೆ‌ಚ್ಚವೂ ಆಗುವುದಿಲ್ಲ. ವಾಸನೆ, ಇತ್ಯಾದಿಯ ತೊಂದರೆಯಿಲ್ಲ ಹೀಗಾಗಿ ಈ ಪ್ರಾತ್ಯಕ್ಷಿಕೆಯನ್ನುಪಿಡಿಒಗಳು, ಶಾಲಾ-ಕಾಲೇಜಿನ ಶಿಕ್ಷಕರಿಗೆ ನೀಡಲಾಗಿದೆ ಎಂದರು. ತಾಪಂ ಇಒ ಶಿವಕುಮಾರ್‌ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಸಮಸ್ಯೆಗಳು ಇದ್ದರೆವಾಟ್ಸಪ್‌ ಮಾಡಿ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಚರಂಡಿ ಅವ್ಯವಸ್ಥೆ, ವಿದ್ಯುತ್‌ ಕಂಬ ದುರಸ್ತಿ ಇತ್ಯಾದಿ ಸಮಸ್ಯೆಗಳಿದ್ದರೆ, ಅಂತಹ ಗ್ರಾಮಗಳ ನಿವಾಸಿಗಳು ತಮ್ಮ ವಾಟ್ಸಪ್‌ ಸಂಖ್ಯೆಯ ಮೂಲಕ ಮಾಹಿತಿ ಕೊಡುವಂತೆ ತಾಪಂ ಅಧ್ಯಕ್ಷ ಗಾಣಕಲ್‌ ನಟರಾಜ್‌ ತಿಳಿಸಿದರು. ತಮಗೆ ಮಾಹಿತಿ ಲಭ್ಯವಾದ ಕೂಡಲೆ ಅದನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಿ ಸರಿಪಡಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಮಾಹಿತಿಗೆ ಗಾಣಕಲ್‌ ನಟರಾಜ್‌ ಅವರ ವಾಟ್ಸಪ್‌ ಸಂಖ್ಯೆ: 9845743444.

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.