ತಟ್ಟೆ ಲೋಟ ಹಿಡಿದು ಪ್ರತಿಭಟನಾ ಮೆರವಣಿಗೆ
Team Udayavani, Apr 13, 2021, 3:42 PM IST
ಚನ್ನಪಟ್ಟಣ: 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮತ್ತಷ್ಟುತೀವ್ರಗೊಂಡಿದೆ. ಚನ್ನಪಟ್ಟಣ ಉಪವಿಭಾಗದ ನೌಕರರು ಮತ್ತು ಅವರ ಕುಟುಂಬದವರು ಸೋಮವಾರ ತಾಲೂಕು ಕಚೇರಿ ಮುಂಭಾಗ ತಟ್ಟೆ, ಲೋಟ ಬಡಿದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಸಾರಿಗೆ ಸಂಸ್ಥೆ ಘಟಕದಿಂದ ಸಾತನೂರು ರಸ್ತೆ, ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ, ನಂತರ ತಾಲೂಕು ಕಚೇರಿ ಮುಂಭಾಗ ಸಮಾವೇಶ ಗೊಂಡು ಪ್ರತಿಭಟಿಸಿದರು.
ನೈತಿಕ ಬೆಂಬಲ: ಒಂದೆಡೆ ತಮ್ಮ ನ್ಯಾಯಯುತ ಬೇಡಿಕೆಈಡೇರಿಕೆಗಾಗಿ ನೌಕರರು ಶಾಂತಿಯುತವಾಗಿ ಮುಷ್ಕರನಡೆಸುತ್ತಿದ್ದಾರೆ, ನಾವು ಅವರಿಗೆ ನೈತಿಕ ಬೆಂಬಲ ನೀಡಿ,ಮುಷ್ಕರದಲ್ಲಿ ಪಾಲ್ಗೊಂಡಿದ್ದೇವೆ ಎಂದು ಸಾರಿಗೆ ಸಂಸ್ಥೆ ನೌಕರರ ಕುಟುಂಬದವರು ತಿಳಿಸಿದರು.
ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ, ಕೆಎಸ್ಸಾರ್ಟಿಸಿ “ಸಿ’ ವರ್ಗದನೌಕರರ ಮಾರ್ಚ್ ತಿಂಗಳ ವೇತನ ಬಿಡುಗಡೆ ಮಾಡಿ ಸಾರಿಗೆ ನೌಕರರ ಲಕ್ಷಾಂತರ ಕುಟುಂಬ ನೆಮ್ಮದಿ ಯಾಗಿ ಯುಗಾದಿ ಹಬ್ಬ ಆಚರಣೆ ಮಾಡಲು ಅನುವು ಮಾಡಿಕೊಡಬೇಕು. ಅಲ್ಲದೇ, ವರ್ಗಾವಣೆ, ವಜಾ ಆದೇಶ ರದ್ದುಗೊಳಿಸಬೇಕೆಂದು ತಹಶೀಲ್ದಾರ್ ನಾಗೇಶ್ ಅವರಮೂಲಕ ಮನವಿ ಸಲ್ಲಿಸಿದರು. ಚನ್ನಪಟ್ಟಣ ಸಾರಿಗೆ ಸಂಸ್ಥೆ ಘಟಕದ ನೌಕರರ ಸಂಘದ ಮುಖಂಡರು, ಕುಟುಂಬದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಂಗಳೂರು : ಹುಟ್ಟುವಾಗಲೇ ನವಜಾತ ಶಿಶುವಿನಲ್ಲಿ ಹಲ್ಲು! ವೈದ್ಯರು ಹೇಳಿದ್ದೇನು ಗೊತ್ತೆ ?
10 ಲಕ್ಷ ಮಕ್ಕಳಿಗಿಲ್ಲ ಶಿಕ್ಷಣ: ಕೋವಿಡ್ ತಂದಿಟ್ಟ ಆಘಾತ ಸಮೀಕ್ಷೆ ವಿವರ ಹೈಕೋರ್ಟ್ಗೆ
ಅಡುಗೆ ಎಣ್ಣೆ ಬೆಲೆ ಪ್ರತಿ ಲೀಟರ್ಗೆ 10 ರೂ.ಗಳಿಂದ 15 ರೂ. ವರೆಗೆ ಇಳಿಕೆ
ಡಿಕೆಶಿ ಶಕ್ತಿ ಪ್ರದರ್ಶನ? ನಾನು ಹೈಕಮಾಂಡ್ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದ ಡಿಕೆಶಿ
ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಬೋರಿಸ್ ಜಾನ್ಸನ್