Udayavni Special

ಇದ್ದೂ ಇಲ್ಲದಂತಾದ ಗ್ರಂಥಾಲಯ!

5 ವರ್ಷದಿಂದ ನಿರ್ಮಾಣ ಹಂತದಲ್ಲಿರುವ ಜ್ಞಾನದೇಗುಲ ಸೌಲಭ್ಯದ ಕೊರತೆ-ಆವರಣ ಸುತ್ತ ಗಬ್ಬು ವಾಸನೆ

Team Udayavani, Oct 30, 2019, 2:58 PM IST

30-October-13

ಸಂಡೂರು: ಪಟ್ಟಣದಲ್ಲಿ ಗ್ರಂಥಾಲಯ ಇದ್ದು ಇಲ್ಲದಂತಾಗಿದೆ. ಆಧುನೀಕರಣ ಮಾಡಬೇಕು ಎನ್ನುವ ನೆಪದಲ್ಲಿ ಇರುವ ಕಟ್ಟಡವನ್ನು ಕೆಡವಿದ್ದು ಓದುಗರಿಗೆ ನೋವನ್ನು ಉಂಟುಮಾಡಿದೆ.

ಗಾಂಧಿ ಕುಟೀರ ಎಂಬ ಹೆಸರಿನಿಂದ ಸಂಡೂರು ಪಟ್ಟಣದ ಕೇಂದ್ರ ಗ್ರಂಥಾಲಯ ನಡೆಯುತ್ತಿತ್ತು. ಅದರೆ ಅದರ ಸುತ್ತಲೂ ಇದ್ದ ವಿಪರೀತ ಹೊಲಸು ಹಾಗೂ 2ನೇ ವಾರ್ಡನ ಬಹಳಷ್ಟು ಜನರು ಗ್ರಂಥಾಲಯದ ಆವರಣವನ್ನು ಶೌಚಾಲಯವನ್ನಾಗಿ ಮಾಡಿಕೊಂಡ ಪರಿಣಾಮ ಗ್ರಂಥಾಲಯ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿತ್ತು.

ಈ ಕಟ್ಟಡದ ದುಸ್ಥಿತಿ ಕಂಡ ಶಾಸಕರು 2012ರಲ್ಲಿ ನೂತನ ಕಟ್ಟಡ ಕಟ್ಟಲು ತೀರ್ಮಾನಿಸಿ 2013ರಲ್ಲಿ ಇಡೀ ಕಟ್ಟಡವನ್ನು ಕೆಡವಲಾಯಿತು. ಅಂದಿನಿಂದ ಇಂದಿನವರೆಗೂ ನೂತನ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಮಾಡಿದ ನಿರ್ಮಿತಿ ಕೇಂದ್ರದ ಗುತ್ತಿಗೆದಾರರು 2019 ಮುಗಿಯುತ್ತ ಬಂದರೂ ಕೆಲಸ ಪೂರ್ಣ ಮಾಡದೇ ಅದನ್ನು ಗ್ರಂಥಾಲಯ ಇಲಾಖೆಗೆ ಹಸ್ತಾಂತರ ಮಾಡದೇ ಇದ್ದ ಪರಿಣಾಮ ಗ್ರಂಥಾಲಯ ಕಟ್ಟಡ ಪೂರ್ಣಗೊಂಡಿಲ್ಲ.

ಗ್ರಂಥಾಲಯ ನೂತನವಾಗಿ ನಿರ್ಮಾಣವಾಗಿದೆ. ಇನ್ನೂ ಪೂರ್ಣವಾಗಬೇಕು. ಗ್ರಂಥಾಲಯ ಮುಚ್ಚಬಾರದು ಎಂದು 2018ರಲ್ಲಿ ಒಪ್ಪಿಗೆ ಇಲ್ಲದೆ ಪರಿಕರಗಳನ್ನು ಸ್ಥಳಾಂತರ ಮಾಡಿ ದಿನಪತ್ರಿಕೆಗಳನ್ನು ಓದಲು ಅನುವು ಮಾಡಿಕೊಡಲಾಗಿದೆ. ಆದರೆ ಗ್ರಂಥಾಲಯದ ಮುಂಭಾಗ ಹೊಲಸಿನ ಹೊಂಡವಾಗಿದೆ.

ಮತ್ತೂಂದು ಕಡೆ ಗ್ರಂಥಪಾಲಕರಿಗೂ ಕೊಠಡಿ ಕಟ್ಟಲಾಗಿದೆ. ಆದರೆ ಅವರು ವಾಸವಾಗಿಲ್ಲ. ಗ್ರಂಥಾಲಯದಲ್ಲಿ ಇಂದಿನವರೆಗೆ ಒಟ್ಟು 19,618 ಪುಸ್ತಕಗಳು, 897 ಸದಸ್ಯರು (30 ವರ್ಷಗಳಿಂದ)ಇದ್ದಾರೆ. ಅದರಲ್ಲಿ ನಿತ್ಯ ಬಳಕೆ ಮಾಡುವವರು ಬೆರೆಳೆಣಿಕೆಯಷ್ಟು ಮಾತ್ರ. ನಿತ್ಯ ಪತ್ರಿಕೆ ಓದಲು 25-30 ಓದುಗರು ಬರುತ್ತಾರೆ, ಕಾರಣ ಗ್ರಂಥಾಲಯದಲ್ಲಿ ಸೂಕ್ತವಾದ ವ್ಯವಸ್ಥೆ ಇಲ್ಲದೆ ಓದುಗರ ಸಂಖ್ಯೆ ಇಳಿಮುಖವಾಗುತ್ತಿದೆ. ಗ್ರಂಥಾಲಯದ ಸುತ್ತಲಿನ ಗಬ್ಬು ವಾಸನೆಯಲ್ಲಿ ಕುಳಿತುಕೊಳ್ಳಲಾರದಂತ ಸ್ಥಿತಿ ಓದುಗರದು.

ನೂತನ ಕಟ್ಟಡವಾಗಿ ಚೆನ್ನಾಗಿರುತ್ತದೆ. ಹೈಟೆಕ್‌ ಗ್ರಂಥಾಲಯವಾಗುತ್ತದೆ ಎಂದು ಸಂಡೂರಿನ ಓದುಗರು ಭಾವಿಸಿದ್ದರು. ಆದರೆ ಬದಲಾಗಲಿಲ್ಲ, ಕಾರಣ ನಿರ್ಮಾಣ ಮಾಡುವವರು 5 ವರ್ಷಗಳಾದರೂ ಸಹ ಸರಿಯಾದ ವಿದ್ಯುತ್‌, ಬಾಗಿಲು ಇತರ ಕಾರ್ಯಗಳನ್ನು ಮಾಡಿಲ್ಲ.

ಮತ್ತೂಂದು ಕಡೆ ಇಲಾಖೆಯವರು ಅಭಿವೃದ್ಧಿ ಪಡಿಸಬೇಕೆಂದರೂ ಸಹ ಕಟ್ಟಡ ಹಸ್ತಾಂತರವಾಗಿಲ್ಲ. ಆದರೆ ಶಾಸಕರು ಪೂರ್ಣ ಶ್ರಮವಹಿಸಿ ಈ ಗ್ರಂಥಾಲಯಕ್ಕೆ ಬೇಕಾದ 10ಲಕ್ಷಕ್ಕೂ ಹೆಚ್ಚು ಮೊತ್ತದ ಪೀಠೊಪಕರಣಗಳನ್ನು, ರ್ಯಾಕ್‌ಗಳನ್ನು, ಅಧುನಿಕ ಪರಿಕರಗಳನ್ನು ನೀಡಿದ್ದಾರೆ, ಅವೂ ಸಹ ಬಳಕೆ ಮಾಡಲಾಗದೇ ಮೂಲೆಯಲ್ಲಿ ಒಟ್ಟುವಂತಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

 ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರಗೂ ಕೋವಿಡ್-19 ಪಾಸಿಟಿವ್

 ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರಗೂ ಕೋವಿಡ್-19 ಪಾಸಿಟಿವ್

ಸುಶಾಂತ್ ಪ್ರಕರಣದಲ್ಲಿ ಮುಂಬೈ ಪೊಲೀಸರು ರಿಯಾಗೆ ಸಹಾಯ ಮಾಡಿದ್ದಾರೆ; ಬಿಹಾರ ಪೊಲೀಸ್

ಸುಶಾಂತ್ ಪ್ರಕರಣದಲ್ಲಿ ಮುಂಬೈ ಪೊಲೀಸರು ರಿಯಾಗೆ ಸಹಾಯ ಮಾಡಿದ್ದಾರೆ; ಬಿಹಾರ ಪೊಲೀಸ್

ಕಿಚ್ಚನ ಅಭಿಮಾನಿಗಳಿಗೆ ಶುಭ ಶುಕ್ರವಾರ: ಕೋಟಿಗೊಬ್ಬ-3 ಪೋಸ್ಟರ್ ರಿಲೀಸ್

ಕಿಚ್ಚನ ಅಭಿಮಾನಿಗಳಿಗೆ ಶುಭ ಶುಕ್ರವಾರ: ಕೋಟಿಗೊಬ್ಬ-3 ಪೋಸ್ಟರ್ ರಿಲೀಸ್

ಪ್ರವಾಹ ಸಂಕಷ್ಟ: ರಕ್ಷಣೆಗೆ ಅರಳಿ ಮರವೇರಿದ ಹತ್ತಾರು ಹಾವುಗಳು!

ನಮ್ಮನ್ನೂ ಕಾಪಾಡಿ! ಪ್ರವಾಹ ಸಂಕಷ್ಟದಲ್ಲಿ ರಕ್ಷಣೆಗೆ ಅರಳಿ ಮರವೇರಿದ ಹತ್ತಾರು ಹಾವುಗಳು!

whatsapp

ವಾಟ್ಸಾಪ್ ನಲ್ಲಿ ಬರುತ್ತಿವೆ ಹೊಸ ಫೀಚರ್ ಗಳು: ಇವು ನಿಮ್ಮ ಮನಸೆಳೆಯುವುದು ಖಂಡಿತಾ !

ಆಶ್ಲೇಷಾ ಮಳೆ ಅವಾಂತರದ ಫೋಟೋ| – ರಾಜ್ಯದ ಹಲವೆಡೆ ಜನ ಜೀವನ ಕಷ್ಟಕರ

ಆಶ್ಲೇಷಾ ಮಳೆ ಅವಾಂತರದ ಫೋಟೋ| – ರಾಜ್ಯದ ಹಲವೆಡೆ ಜನ ಜೀವನ ಕಷ್ಟಕರ

ಶೇಂದಿ ಅಂಗಡಿ ಬಳಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಶೇಂದಿ ಅಂಗಡಿ ಬಳಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

somes

ಸೋಮೇಶ್ವರ ಕಡಲ್ಕೊರೆತ ಪ್ರದೇಶಕ್ಕೆ ದ.ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಭೇಟಿ

ವಿಮಾನ ನಿಲ್ದಾಣ ಕಾಮಗಾರಿ ತ್ವರಿತವಾಗಲಿ

ವಿಮಾನ ನಿಲ್ದಾಣ ಕಾಮಗಾರಿ ತ್ವರಿತವಾಗಲಿ

55 ಜನರಿಗೆ ಕೋವಿಡ್ ಸೋಂಕು

55 ಜನರಿಗೆ ಕೋವಿಡ್ ಸೋಂಕು

ಶೇ. 25ರಷ್ಟಾದರೂ ಬೆಳೆನಷ್ಟ ಪರಿಹಾರ ನೀಡಿ

ಶೇ. 25ರಷ್ಟಾದರೂ ಬೆಳೆನಷ್ಟ ಪರಿಹಾರ ನೀಡಿ

ಸೌಲಭ್ಯ ಸದುಪಯೋಗವಾಗಲಿ

ಸೌಲಭ್ಯ ಸದುಪಯೋಗವಾಗಲಿ

MUST WATCH

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavaniಹೊಸ ಸೇರ್ಪಡೆ

somes

ಸೋಮೇಶ್ವರ ಕಡಲ್ಕೊರೆತ ಪ್ರದೇಶಕ್ಕೆ ದ.ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಭೇಟಿ

 ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರಗೂ ಕೋವಿಡ್-19 ಪಾಸಿಟಿವ್

 ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರಗೂ ಕೋವಿಡ್-19 ಪಾಸಿಟಿವ್

ವಿಮಾನ ನಿಲ್ದಾಣ ಕಾಮಗಾರಿ ತ್ವರಿತವಾಗಲಿ

ವಿಮಾನ ನಿಲ್ದಾಣ ಕಾಮಗಾರಿ ತ್ವರಿತವಾಗಲಿ

ಪ್ರತೀ ವರ್ಷ ಭೂಕುಸಿತ: ಇದು ಆಡಳಿತ ವರ್ಗದ ವೈಫಲ್ಯವೇ?

ಪ್ರತೀ ವರ್ಷ ಭೂಕುಸಿತ: ಇದು ಆಡಳಿತ ವರ್ಗದ ವೈಫಲ್ಯವೇ?

ಸುಶಾಂತ್ ಪ್ರಕರಣದಲ್ಲಿ ಮುಂಬೈ ಪೊಲೀಸರು ರಿಯಾಗೆ ಸಹಾಯ ಮಾಡಿದ್ದಾರೆ; ಬಿಹಾರ ಪೊಲೀಸ್

ಸುಶಾಂತ್ ಪ್ರಕರಣದಲ್ಲಿ ಮುಂಬೈ ಪೊಲೀಸರು ರಿಯಾಗೆ ಸಹಾಯ ಮಾಡಿದ್ದಾರೆ; ಬಿಹಾರ ಪೊಲೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.