- Friday 06 Dec 2019
ಶಿಕ್ಷಣದಿಂದ ಮನಸ್ಸಿನ ಶ್ರೀಮಂತಿಕೆ ಹೆಚ್ಚಳ: ಡಾ| ರುದ್ರವಾರ
ಜಾಕನಪಲ್ಲಿ ರಂಗ ಶಿಕ್ಷಣ ಕಾರ್ಯ ಇನ್ನೂ ಹೆಚ್ಚಲಿ
Team Udayavani, Jul 8, 2019, 3:52 PM IST
ಸೇಡಂ: ಜಾಕನಪಲ್ಲಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಪಾಸಾದ ಮತ್ತು ಮೈಸೂರು ರಂಗಾಯಣಕ್ಕೆ ರಂಗಶಿಕ್ಷಣ ಪಡೆಯಲು ಆಯ್ಕೆಯಾದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಸೇಡಂ: ವಿದ್ಯಾರ್ಥಿಗಳು ಸೋಮಾರಿಯಾಗದೆ ಮನಸ್ಸಿನ ಶ್ರೀಮಂತಿಕೆ ವೃದ್ಧಿಸಿಕೊಳ್ಳಲು ಶಿಕ್ಷಣ ಪಡೆಯಬೇಕು ಎಂದು ಮನಶಾಸ್ತ್ರಜ್ಞ ಡಾ| ವೆಂಕಟರೆಡ್ಡಿ ರುದ್ರವಾರ ಹೇಳಿದರು.
ತಾಲೂಕಿನ ಜಾಕನಪಲ್ಲಿ ಗ್ರಾಮದ ಗ್ರಂಥಾಲಯದಲ್ಲಿ ತಿಂಗಳ ಸಂಜೆ ವೇದಿಕೆ ಮತ್ತು ನಾನು-ನಮ್ಮೂರು ಶಾಲಾ ಮಕ್ಕಳ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಮತ್ತು ಮೊಟ್ಟ ಮೊದಲ ಬಾರಿಗೆ ಜಾಕನಪಲ್ಲಿ ಗ್ರಾಮದಿಂದ ಮೈಸೂರು ರಂಗಾಯಣಕ್ಕೆ ರಂಗಶಿಕ್ಷಣ ಪಡೆಯಲು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಕರು ಹೇಳುವ ಪಾಠವನ್ನು ಮೊದಲೇ ಓದಿಕೊಂಡು ಹೋಗಬೇಕು. ವೇಗವಾಗಿ, ಸರಳವಾಗಿ, ಪೂರ್ಣವಾಗಿ ಓದಬೇಕು. ಹೊಸ ಪದಗಳನ್ನು ತಿಳಿದುಕೊಳ್ಳಬೇಕು. ಚರ್ಚಿಸುವುದು, ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ಹೊದಾಗ ಮಾತ್ರ ಯಶಸ್ವಿ ವಿದ್ಯಾರ್ಥಿಯಾಗಲು ಸಾಧ್ಯ ಎಂದು ಹೇಳಿದರು.
ತಾಲೂಕ ಕ.ರ.ವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಮಾತನಾಡಿ, ಜಾಕನಪಲ್ಲಿಯಲ್ಲಿ ನಡೆಯುವ ರಂಗಶಿಕ್ಷಣದ ಚಟುವಟಿಕೆಗಳು ರಾಜ್ಯದ ತುಂಬೆಲ್ಲ ಸುದ್ದಿಗಳಾಗಿವೆ. ಇದೇ ರೀತಿ ನಿಮ್ಮ ಕೆಲಸಗಳು ನಿರಂತರಾಗಿರಲಿ, ಯಶಸ್ಸು ನಿಮ್ಮದಾಗುತ್ತದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ ರೆಡ್ಡಿ ಆಡಕಿ, ಜಾಕನಪಲ್ಲಿ ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕ ವೆಂಕಟಪ್ಪ ಜೋಗಿ, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟರಾಮರೆಡ್ಡಿ ಚಿಟೇಲಿ, ನಾಟಕ ಶಿಕ್ಷಕ ಅಶೋಕ ತೊಟ್ನಳ್ಳಿ, ತಿಂಗಳ ಸಂಜೆ ವೇದಿಕೆ ಅಧ್ಯಕ್ಷ ಸಿದ್ಧಯ್ಯ ಸ್ವಾಮಿ ಮಠಪತಿ ಇದ್ದರು.
ಮೈಸೂರು ರಂಗಾಯಣದ ರಂಗಶಿಕ್ಷಣ ತರಬೇತಿಗೆ ಆಯ್ಕೆಯಾದ ಸಿದ್ಧಪ್ಪ ತಳವಾರ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅಶೋಕ ತೊಟ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಪಾಟೀಲ ನಿರೂಪಿಸಿದರು, ಸಿದ್ಧಪ್ಪ ತಳವಾರ ಸ್ವಾಗತಿಸಿದರು, ನವಿರೆಡ್ಡಿ ವಂದಿಸಿದರು.
ಈ ವಿಭಾಗದಿಂದ ಇನ್ನಷ್ಟು
-
ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್ ಗಾಂಧಿ ವಸತಿ ನಿಗಮದ ಬದಲು ಮತ್ತೆ...
-
ಮಂಗಳೂರು: ಲೈಟ್ ಫಿಶಿಂಗ್, ಬುಲ್ಟ್ರಾಲ್ ಸೇರಿದಂತೆ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿರುವ ಬೋಟ್ಗಳ ವಿರುದ್ಧ ಮೀನುಗಾರಿಕೆ ಇಲಾಖೆ ಕಾರ್ಯಾ ಚರಣೆಯನ್ನು...
-
ಮಂಗಳೂರು: ವಿವಿಧ ವಸತಿ ಯೋಜನೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಬಾಕಿಯಿರುವ 13.51 ಕೋ.ರೂ.ಗಳನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ...
-
ರಾಯಚೂರು: ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ಮೂಲಕ ಈರುಳ್ಳಿ ದಾಖಲೆ ನಿರ್ಮಿಸಿದೆ. ಉತ್ಪನ್ನಕ್ಕೆ ವಿಪರೀತ ಬೇಡಿಕೆ ಇದ್ದರೂ ಪೂರೈಸಲು ಈರುಳ್ಳಿಯೇ...
-
ಶಿವಮೊಗ್ಗ: ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ, ಹಂದಿಗೋಡು, ನಿಫಾ...ಹೀಗೆ ಅನೇಕ ಕಾಯಿಲೆಗಳು ಪ್ರತಿ ವರ್ಷ ಕಾಣಿಸಿಕೊಳ್ಳುತ್ತಿವೆ. ನಿಗದಿತ ಔಷಧವಿಲ್ಲದ...
ಹೊಸ ಸೇರ್ಪಡೆ
-
ಹೈದರಾಬಾದ್: ಪಶುವೈದ್ಯೆ ದಿಶಾ ಅತ್ಯಾಚಾರ- ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಇಂದು ಮುಂಜಾನೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಕೃತ್ಯ ನಡೆದು ಹತ್ತು...
-
ಹೈದರಾಬಾದ್: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ದಿಶಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಲ್ಲಾ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ...
-
ಹೈದರಾಬಾದ್: ಇಲ್ಲಿನ 26 ವರ್ಷದ ಪಶುವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್...
-
ಹೈದರಾಬಾದ್ : ದೇಶವನ್ನೆ ತಲ್ಲಣಗೊಳಿಸಿದ್ದ ದಿಶಾ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧಿಸಿದಂತೆ ನಾಲ್ವರು ಅರೋಪಿಗಳನ್ನು ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆಗೈಯಲಾಗಿದೆ. ಆರಂಭಿಕ...
-
ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್ ಗಾಂಧಿ ವಸತಿ ನಿಗಮದ ಬದಲು ಮತ್ತೆ...