APSCOS ಚುನಾವಣೆ; ಮತ್ತೆ ಅಧಿಕಾರಕ್ಕೆ ಬಂದ ಸೂರ್ಯನಾರಾಯಣ್ ತಂಡ

Team Udayavani, Sep 10, 2023, 11:11 PM IST

1-qweqwe

 ಸಾಗರ: ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಅಡಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಯ ಚುನಾವಣೆಯಲ್ಲಿ ವಿಜಯಿಯಾಗುವುದರೊಂದಿಗೆ ಸತತ ಮೂರನೇ ಬಾರಿಗೆ ಸೂರ‍್ಯನಾರಾಯಣ ಖಂಡಿಕಾ ನೇತೃತ್ವದ ತಂಡ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಎಪಿಎಂಸಿ ಪ್ರಾಂಗಣದ ಆಪ್ಸ್‌ಕೋಸ್ ಕೇಂದ್ರ ಕಚೇರಿಯ ಹಿಂಭಾಗದ ಗೋಡೌನ್ ಕಟ್ಟಡಲ್ಲಿ ಭಾನುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 4 ರವರೆಗೆ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೆ.ಎಂ.ಸೂರ‍್ಯನಾರಾಯಣ-ಬಿ.ಎ.ಇಂದೂದರ ಗೌಡ ನೇತೃತ್ವದ ತಂಡದ ಎಲ್ಲ ಸದಸ್ಯರೂ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಹಾಲಿ ಅಧ್ಯಕ್ಷ ಕೆ.ಎಂ. ಸೂರ‍್ಯನಾರಾಯಣ (1373), ಬಿ.ಎ. ಇಂದೂಧರ (1463), ಟಿ.ಆರ್. ಕೃಷ್ಣಮೂರ್ತಿ (1274), ಎ.ಎಸ್. ನಾಗರತ್ನ (1238), ನಂದನ ಕುಮಾರ (1071), ಎಂ.ಡಿ. ಭಾರತಿ (1278), ಕೆ.ಎಸ್. ಭಾಸ್ಕರ ಭಟ್ಟ (1225), ಎಂ.ಬಿ. ರಮೇಶ್ (1240), ಎಚ್.ಕೆ. ರಾಘವೇಂದ್ರ (1297), ವೈ.ಎನ್. ಸುರೇಶ್ (1130), ಕೆ.ಎಸ್. ಸುಬ್ಬರಾವ್ (1125) ಮತ ಪಡೆದು ಅಧಿಕಾರಕ್ಕೇರಿದ್ದಾರೆ.

ವಿರೋಧಿ ಬಣದಿಂದ ಸ್ಪರ್ಧಿಸಿದ್ದ ಪ್ರಮುಖರಲ್ಲಿ ಟಿಎಪಿಎಂಸಿಎಸ್‌ನ ಮಾಜಿ ಅಧ್ಯಕ್ಷ ಕೆ.ಆರ್. ಶ್ರೀಧರ ಭಟ್ (382), ಆಪ್ಸ್‌ಕೋಸ್‌ನ ಮಾಜಿ ಉದ್ಯೋಗಿ ಕೆ.ವಿ. ನರಹರಿ (323), ಬಿ.ಎಸ್. ಕೃಷ್ಣಮೂರ್ತಿ (255), ರತ್ನ ಶ್ರೀಧರಮೂರ್ತಿ ಗಡಿಕಟ್ಟೆ (276), ಕೆ.ಟಿ. ಸತ್ಯನಾರಾಯಣ (337), ಎಂ.ಜಿ. ಸಿದ್ದವೀರಪ್ಪ (346), ನಿಕಟಪೂರ್ವ ನಿರ್ದೇಶಕರಾಗಿದ್ದ ಪಿ.ಎನ್. ಸುಬ್ರಾವ್ (393) ಸೋಲನುಭವಿಸಿದ್ದಾರೆ.

ಹಿಂದಿನ ಉಪಾಧ್ಯಕ್ಷ ಎ.ಒ. ರಾಮಚಂದ್ರ ಅಂಬ್ಲಾಡಿ, ಎಚ್.ಬಿ. ಕಲ್ಯಾಣಪ್ಪಗೌಡ ಹೆಬ್ಬೈಲು, ಎಚ್. ಓಂಕೇಶ್ ಹರತಾಳು ಹೊಸನಗರ ಕ್ಷೇತ್ರದಿಂದ ಹಾಗೂ ಚೌಡಪ್ಪ ಹುಲಿಮನೆ, ಕೆ.ಎಂ. ಸತ್ಯನಾರಾಯಣ ಕೆಳದಿಯವರು ಮೀಸಲು ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯಾಗಿದ್ದರು. ಸ್ಪರ್ಧೆಯಲ್ಲಿ ಒಟ್ಟು ೫೩ ನಾಮಪತ್ರ ಸಲ್ಲಿಕೆಯಾಗಿತ್ತು. ಒಂದು ನಾಮಪತ್ರ ತಿರಸ್ಕೃತವಾಗಿತ್ತು. ಕಣದಲ್ಲಿ 18 ಅಭ್ಯರ್ಥಿಗಳಿದ್ದರು. ನಾಮಪತ್ರ ವಾಪಾಸು ಪಡೆಯುವ ದಿನವಾಗಿದ್ದ ಸೋಮವಾರ 30 ಜನ ಕಣದಿಂದ ಹಿಂದೆ ಸರಿದಿದ್ದರಿಂದ 11 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

ಟಾಪ್ ನ್ಯೂಸ್

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.