ಬಲವಂತವಾಗಿ ಮತಾಂತರ ಮಾಡಲು ಅವಕಾಶವಿಲ್ಲ: ಸಂಸದ ಬಿ.ವೈ.ರಾಘವೇಂದ್ರ
Team Udayavani, Dec 11, 2021, 4:37 PM IST
ಶಿವಮೊಗ್ಗ: ಮತಾಂತರ ನಿಷೇಧ ಕಾಯ್ದೆ ಜಾರಿ ತರುವ ವಿಚಾರವಾಗಿ ಸಿಎಂ ಬೊಮ್ಮಾಯಿ ಅವರು ಈಗಾಗಲೇ ಹೇಳಿದ್ದಾರೆ. ಪದೇ ಪದೇ ಅಲ್ಲೊಂದು, ಇಲ್ಲೊಂದು ಮತಾಂತರ ಪ್ರಕರಣ ಕೇಳಿ ಬರುತ್ತಿದೆ. ಆ ದೃಷ್ಟಿಕೋನ ಇಟ್ಟುಕೊಂಡು ಮತಾಂತರ ಕಾಯ್ಧೆಯಲ್ಲಿ ತಿದ್ದುಪಡಿ ತರಲು ಸರ್ಕಾರ ಯೋಚಿಸುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ಮಹತ್ವದ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಗೃಹಸಚಿವರೂ ಹೇಳಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಆದರೂ ಸ್ವತಂತ್ರವಾಗಿ ಅವರ ಧರ್ಮದಲ್ಲಿ ಬದುಕಲು ಅವಕಾಶವಿದೆ. ಅದರೆ ಬಲತ್ಕಾರವಾಗಿ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಈ ನಿಟ್ಟಿನಲ್ಲಿ ಬಿಗಿಯಾದ ನಿಲುವು ಬರುವುದು ಸರಿ ಇದೆ ಎಂದು ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ನವರಿಗೆ ಬಿಟ್ ಕಾಯಿನ್ ನ ಅರ್ಥವೇ ಗೊತ್ತಿಲ್ಲ: ರೇಣುಕಾಚಾರ್ಯ ವ್ಯಂಗ್ಯ
ಗೋ ಹತ್ಯೆ ನಿಷೇಧ ಕಾಯ್ದೆಗೂ ತಿದ್ದುಪಡಿಯ ಅಗತ್ಯವಿದೆ. ಪ್ರಕರಣ ದಾಖಲಾದರೂ ಕೆಲವೇ ಗಂಟೆಯಲ್ಲಿ ಹೊರಬರುತ್ತಾರೆ. ಹೀಗಾಗಿ ಕಾಯ್ದೆ ಮತ್ತಷ್ಟು ಬಿಗಿಯಾದರೆ, ಕಾನೂನಿಗೂ ಗೌರವ ಬರುತ್ತದೆ ಎಂದು ಸಂಸದ ರಾಘವೇಂದ್ರ ಹೇಳಿದರು.
ಪರಿಷತ್ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಮತದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಮೊದಲ ಪ್ರಾಶಸ್ತ್ಯದಲ್ಲೇ ಶಿವಮೊಗ್ಗದಲ್ಲಿ ಗೆಲ್ಲುತ್ತೇವೆ. ರಾಜ್ಯದಲ್ಲಿ 12- 15 ಸ್ಥಾನ ಗೆಲ್ಲುತ್ತೇವೆ ಎಂದು ಬಿವೈ ರಾಘವೇಂದ್ರ ಹೇಳಿದರು.