ಶಿವಮೊಗ್ಗ : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಶವ ಪತ್ತೆ

Team Udayavani, Oct 23, 2019, 10:50 AM IST

ಶಿವಮೊಗ್ಗ : ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯೊಬ್ಬನ ಶವ ಬುಧವಾರ ಬೆಳಗ್ಗೆ ಪತ್ತೆಯಾಗಿದೆ.

ಭದ್ರಾವತಿ ತಾಲೂಕು ಎಮ್ಮೆಹಟ್ಟಿ ಗ್ರಾಮದ ರವಿ‌ ನಿನ್ನೆ ರಾತ್ರಿ‌ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ  ಇಂದು ಬೆಳಗ್ಗೆ ಭದ್ರಾ ನದಿ ದಡದಲ್ಲಿದ್ದ ಗಿಡಗಂಟಿಗಳ ನಡುವೆ ಸಿಕ್ಕಿಬಿದ್ದ ಸ್ಥಿತಿಯಲ್ಲಿ‌ ಎಮ್ಮೆಹಟ್ಟಿ ಗ್ರಾಮದ ಬಳಿ ಶವ ಪತ್ತೆಯಾಗಿದೆ.

ಶವವನ್ನು ನದಿಯಿಂದ ಹೊರತೆಗೆದ ಗ್ರಾಮಸ್ಥರು ಮೃತ ದೇಹವನ್ನು ಕುಟುಂಬಸ್ಥರಿಗೆ ರವಾನಿಸಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ