29 ಗ್ರಂಥಾಲಯಗಳಿಗೆ ಸ್ವಂತ ಕಟ್ಟಡವಿಲ್ಲ!

ಅಧಿಕೃತ ಗ್ರಂಥಪಾಲಕರಿಲ್ಲಹಂಗಾಮಿ ಗ್ರಂಥಪಾಲಕರಿಂದ ಕಾರ್ಯ ನಿರ್ವಹಣೆ

Team Udayavani, Oct 23, 2019, 10:45 AM IST

ಹೊಸನಗರ: ಪಟ್ಟಣದಲ್ಲಿರುವ ತಾಲೂಕು ಕೇಂದ್ರ ಗ್ರಂಥಾಲಯದ ಕಟ್ಟಡವೂ ಸದೃಢವಾಗಿದೆ. ಓದಲು ಪುಸ್ತಕಗಳ ಕೊರತೆಯೂ ಇಲ್ಲ. ಆದರೆ ಕಳೆದ 14 ತಿಂಗಳಿಂದ ಅ ಧಿಕೃತ ಗ್ರಂಥಫಾಲಕರೇ ಇಲ್ಲ. ಇದು ಹೊಸನಗರದ ಕೇಂದ್ರ ಗ್ರಂಥಾಲಯದ ಸ್ಥಿತಿ. ಗ್ರಂಥಾಲಯದಲ್ಲಿ ಸರಿಸುಮಾರು 40 ಸಾವಿರ ಪುಸ್ತಕಗಳಿವೆ.

ಅಲ್ಲದೆ ಬಹುತೇಕ ಎಲ್ಲಾ ನ್ಯೂಸ್‌ ಪೇಪರ್‌ ಇಲ್ಲಿ ಓದಲು ದೊರೆಯುತ್ತದೆ. ಆದರೆ ಅಧಿಕೃತ ಗ್ರಂಥಪಾಲಕರ ವಿಚಾರದಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಅಶೋಕ ಗುಳೇದ್‌ ನಿವೃತ್ತಿ ಬಳಿಕ ಹರೀಶ್‌ ಎಂಬುವವರಿಗೆ ಇನ್‌ಚಾರ್ಜ್‌ ನೀಡಲಾಗಿದೆ ಎಂಬ ಮಾಹಿತಿ ಇದೆ. ಆದರೆ ಈವರೆಗೆ ಗ್ರಂಥಾಲಯಕ್ಕೆ ಅವರು ಭೇಟಿ ನೀಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಪ್ರಶಂಸೆಗೆ ಪಾತ್ರವಾದ ಅಶೋಕ ಗುಳೇದ್‌ ಕಾಳಜಿ: ಅಶೋಕ ಗುಳೇದ್‌ ಹೊಸನಗರದ ಗ್ರಂಥಪಾಲಕರಾಗಿ ಸಾಕಷ್ಟು ಸಮಯದಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದವರು. 14 ತಿಂಗಳ ಹಿಂದೆ ಅಶೋಕ ಗುಳೇದ್‌ ನಿವೃತ್ತಿ ಹೊಂದಿದ್ದಾರೆ. ಆದರೆ ನೂತನ ಗ್ರಂಥಪಾಲಕರು ನೇಮಕವಾಗದ ಕಾರಣ ಅಶೋಕ ಗುಳೇದ್‌ ಸ್ವಯಂ ಕಾಳಜಿಯಿಂದ ಸಂಬಳ ರಹಿತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

ಸುವ್ಯವಸ್ಥಿತ ಕಟ್ಟಡ: 2017ರಲ್ಲಿ ಅಂದಾಜು 35 ಲಕ್ಷ ವೆಚ್ಚದಲ್ಲಿ ಸದೃಢ ಕಟ್ಟಡ ನಿರ್ಮಾಣಗೊಂಡಿದೆ. ಇಲ್ಲು ಕೂಡ ಅಶೋಕ ಗುಳೇದ್‌ ಶ್ರಮ ಕಂಡುಬರುತ್ತದೆ. ನ್ಯೂಸ್‌ ಪೇಪರ್‌, ನಿಯತಕಾಲಿಕೆಗಳು ಮತ್ತು 40 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಇಲ್ಲಿವೆ. ಗ್ರಂಥಾಲಯವನ್ನು ಕೂಡ ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ನ್ಯೂಸ್‌ ಪೇಪರ್‌ ಮತ್ತು ನಿಯತಕಾಲಿಕೆಗಳ ಖರೀದಿಗೆ ಅನುದಾನ ಕೊರತೆಯಾಗಿಲ್ಲ.

29 ಗ್ರಂಥಾಲಯಗಳಿಗೆ ಸ್ವಂತ ಕಟ್ಟಡವಿಲ್ಲ: ತಾಲೂಕಿನಲ್ಲಿ 29 ಕಿರು ಗ್ರಂಥಾಲಯಗಳಿವೆ. ಸುಮಾರು 3 ರಿಂದ 4 ಸಾವಿರದ ತನಕ ಪುಸ್ತಕಗಳ ದಾಸ್ತಾನು ಕೂಡ ಇದೆ. ಆದರೆ ಸ್ವಂತ ಕಟ್ಟಡಗಳು ಮಾತ್ರ ಇಲ್ಲ. 2019, ಅ.1 ರಂದು ತಾಲೂಕಿನ 29 ಗ್ರಂಥಾಲಯಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಹಸ್ತಾಂತರಗೊಂಡಿವೆ. ಬಹುತೇಕ ಗ್ರಂಥಾಲಯಗಳು ಪಂಚಾಯತ್‌ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ ಫೆ.25 ರಂದು ಆರಂಭಗೊಳ್ಳುತ್ತಿದ್ದು ಸಿದ್ಧತೆ ಭರದಿಂದ ಸಾಗಿದೆ ಎಂದು ಎಂದು ಕೋಟೆ ಶ್ರೀ ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷ...

  • ಬೈಲಹೊಂಗಲ: ತಾಲೂಕಿನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಫೆ.28, 29ರಂದು ಬೆಳವಡಿ ಮಲ್ಲಮ್ಮನ ಉತ್ಸವ-2020 ಅದ್ಧೂರಿಯಾಗಿ...

  • ಹೊಸದುರ್ಗ: ಹೊಸದುರ್ಗ ಪಟ್ಟಣಕ್ಕೆ ಹೊಂದಿಕೊಂಡಿರುವ ಶ್ರೀ ಭೈರವೇಶ್ವರ ಬೆಟ್ಟ ಅಲ್ಲಿರುವ ಕೋಟೆ ಚಿತ್ರದುರ್ಗ ಕೋಟೆಗಿಂತ ಮುಂಚಿತವಾಗಿ ಕಟ್ಟಿರುವ ಮೂಲ ಎಂದರೆ...

  • ಮುನವಳ್ಳಿ: ಪಟ್ಟಣದ ಆರಾಧ್ಯ ದೈವ ಶ್ರೀ ಪಂಚಲಿಂಗೇಶ್ವರ ಮಹಾರಥೋತ್ಸವ ರವಿವಾರ ಸಂಜೆ ಸಂಭ್ರಮದಿಂದ ನಡೆಯಿತು.  ಶ್ರೀ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು...

  • ಚಿಕ್ಕಮಗಳೂರು: ಆರೋಗ್ಯ ಸಂಪತ್ತನ್ನು ನಮ್ಮದಾಗಿಸಿಕೊಳ್ಳುವುದಕ್ಕೆ ಪ್ರತಿಯೊಬ್ಬರೂ ಯೋಗದಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪ್ರವಾಸೋದ್ಯಮ,...

ಹೊಸ ಸೇರ್ಪಡೆ