ಎರಡು ಜಿಲ್ಲೆಗಳಲ್ಲಿ ಮಳೆಯ ಕೊರತೆ

Team Udayavani, Aug 31, 2020, 7:38 PM IST

ಎರಡು ಜಿಲ್ಲೆಗಳಲ್ಲಿ ಮಳೆಯ ಕೊರತೆ

ಸಾಂದರ್ಭಿಕ ಚಿತ್ರ

ಪುಣೆ, ಆ. 30: ಮಹಾರಾಷ್ಟ್ರದಲ್ಲಿ ಪ್ರಸಕ್ತ ಮಾನ್ಸೂನ್‌ ಋತುವಿನಲ್ಲಿ ಈವರೆಗೆ ಶೇ. 17ರಷ್ಟು ಹೆಚ್ಚಿನ ಮಳೆಯಾಗಿದೆ ಆದರೆ ಬರ ಪೀಡಿತ ವಿದರ್ಭದ ಎರಡು ಜಿಲ್ಲೆಗಳಾದ ಅಕೋಲಾ ಮತ್ತು ಯವತ್ಮಾಳ್‌ ಇನ್ನೂ ಮಳೆ ಕೊರತೆಯನ್ನು ಎದುರಿಸುತ್ತಿವೆ.

ಪ್ರಸಕ್ತ ಋತುವಿನಲ್ಲಿ ಜೂ. 1 ರಿಂದ ಆ. 29ರವರೆಗೆ ಉಭಯ ಜಿಲ್ಲೆಗಳಲ್ಲಿ ಶೇ. 25ರಷ್ಟು ಮಳೆಯ ಕೊರತೆ ದಾಖಲಾಗಿದ್ದರೆ, ಪುಣೆ ಸೇರಿದಂತೆ ಇತರ 14 ಜಿಲ್ಲೆಗಳಲ್ಲಿ ಈವರೆಗೆ ಸರಾಸರಿ ಅಥವಾ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಸೆ. 1ರವರೆಗೆ ವಿದರ್ಭಕ್ಕೆ ಕೇವಲ ಚದುರಿದ ಮಳೆಯ ಮುನ್ಸೂಚನೆ ನೀಡಿದೆ.

ಆ. 28 ರವರೆಗೆ (-) ಶೇ. 20ರಷ್ಟು ಮಳೆ ಕೊರತೆಯನ್ನು ಹೊಂದಿದ್ದ ಅಮರಾವತಿಯಲ್ಲಿ ಆ. 29ರಂದು ಉತ್ತಮ ಮಳೆಯಾಗಿದ್ದು, ಇದು ಜಿಲ್ಲೆಯ ಋತುಮಾನದ ಮಳೆಯು ಸಾಮಾನ್ಯದ ವ್ಯಾಪ್ತಿಯಲ್ಲಿ ಬರಲು ಸಹಾಯ ಮಾಡಿದೆ. ಆದಾಗ್ಯೂ, ಜಿಲ್ಲೆಯು ಪ್ರಸ್ತುತ ಶೇ.19ರಷ್ಟು ಮಳೆ ಕೊರತೆಯನ್ನು ಹೊಂದಿದೆ. ವಿದರ್ಭವು ಮುಂದಿನ ಮೂರು ದಿನಗಳಲ್ಲಿ ಚದುರಿದ ಮಳೆಯನ್ನು ಮಾತ್ರ ದಾಖಲಿಸಬಹುದು, ಆದರೆ ಅದರ ಎರಡೂ ಜಿಲ್ಲೆಗಳ ಶೇ. 25ರಷ್ಟು ಮಳೆಯ ಕೊರತೆ ಸರಿಹೊಂದುವ ಸಾಧ್ಯತೆಯಿದೆ. ಅನಂತರ ಎರಡೂ ಜಿಲ್ಲೆಗಳು ಮತ್ತೆ ಕೊರತೆಯ ವಲಯಕ್ಕೆ ಜಾರಿಬೀಳುವ ಸಾಧ್ಯತೆಗಳಿವೆ ಎಂದು ಐಎಂಡಿಯ ಪುಣೆ ವಿಭಾಗದ ಹವಾಮಾನ ಮುಖ್ಯಸ್ಥ ಅನುಪಮ್‌ ಕಶ್ಯಪಿ ನುಡಿದಿದ್ದಾರೆ. ಮಳೆಗಾಲದ ಆರಂಭದಿಂದಲೂ ಅಕೋಲಾ, ಯವತ್ಮಾಳ್‌ ಮತ್ತು ಅಮರಾವತಿ ಮಳೆ ಕೊರತೆಯಿಂದ ಬಳಲುತ್ತಿದ್ದವು ಎಂದು ಕಶ್ಯಪಿ ಹೇಳಿದ್ದಾರೆ.

ವಿದರ್ಭ ಮತ್ತು ಮರಾಠವಾಡ ಕಡಿಮೆ ಮಳೆಗಾಗಿ ಹೆಸರುವಾಸಿಯಾಗಿವೆ ಆದರೆ ಅಕೋಲಾ, ಯವತ್ಮಾಳ್‌ ಮತ್ತು ಅಮರಾವತಿ ಸೇರಿದಂತೆ ಕೆಲವು ಭಾಗಗಳನ್ನು ಹೊರತುಪಡಿಸಿ ಪ್ರಸಕ್ತ ಮಳೆಗಾಲದಲ್ಲಿ ಎರಡೂ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಬಂಗಾಳಕೊಲ್ಲಿಯ ಹವಾಮಾನ ವ್ಯವಸ್ಥೆಗಳು ವಿದರ್ಭದ ಈಶಾನ್ಯದಲ್ಲಿರುವ ಈ ಜಿಲ್ಲೆಗಳನ್ನು ಬಿಟ್ಟುಬಿಟ್ಟವು. ವ್ಯವಸ್ಥೆಗಳು ತಮ್ಮ ಉತ್ತರ ಅಥವಾ ದಕ್ಷಿಣದಿಂದ ಸ್ಥಳಾಂತರಗೊಂಡವು, ಇದು ಇಲ್ಲಿ ಮಳೆಗೆ ಅಡ್ಡಿಯಾಯಿತು ಎಂದು ಅಧಿಕಾರಿ ನುಡಿದಿದ್ದಾರೆ.

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.