ಸಕ್ರೇಬೈಲು ಬಿಡಾರದಲ್ಲಿ ಮದವೇರಿದ ಮಣಿಕಂಠ ಆನೆ: ಎರಡು ಆನೆಗಳ ಮೇಲೆ ದಾಳಿ
Team Udayavani, Jan 4, 2021, 2:25 PM IST
ಶಿವಮೊಗ್ಗ: ಆನೆಯೊಂದು ಮದವೇರಿದ ಕಾರಣ ಆಕ್ರಮಣಕಾರಿಯಾಗಿ ವರ್ತಿಸಿ ಎರಡು ಆನೆಗಳ ಮೇಲೆ ದಾಳಿ ನಡೆಸಿದ ಘಟನೆ ಜಿಲ್ಲೆಯ ಸಕ್ರೇಬೈಲು ಆನೆಬಿಡಾರದಲ್ಲಿ ನಡೆದಿದೆ.
ಶಿವಮೊಗ್ಗ ಗಾಜನೂರು ಸಮೀಪದ ಸಕ್ರೇಬೈಲು ಆನೆಬಿಡಾರದ ಮಣಿಕಂಠ ಎಂಬ ಹೆಸರಿನ ಆನೆಯು ಮದವೇರಿದ ಕಾರಣ ಆಕ್ರಮಣಕಾರಿಯಾಗಿ ವರ್ತನೆ ತೋರಿತ್ತು. ಆನೆಯ ಆರ್ಭಟಕ್ಕೆ ಹೆದರಿ ಕಾವಾಡಿ ಹಾಗೂ ಮಾವುತ ದೂರ ಓಡಬೇಕಾಯಿತು.
ನಂತರ ಬಿಡಾರದ ಆನೆಗಳಾದ ಬಾಲಣ್ಣ ಹಾಗೂ ಇನ್ನೊಂದು ಮರಿಯಾನೆಯ ಮೇಲೆ ಮಣಿಕಂಠ ದಾಳಿ ನಡೆಸಿತ್ತು. ಬಾಲಣ್ಣ ಮತ್ತು ಮರಿಯಾನೆ ನೀರಿಗೆ ಹೋದರೂ ಅಲ್ಲೂ ಬೆನ್ನಟ್ಟಿ ದಂತದಿಂದ ದಾಳಿ ನಡೆಸಿತು. ಆನೆ ದಾಳಿಯಿಂದ ಬಾಲಣ್ಣ ಆನೆಯ ಮಾವುತ ಗೌಸ್ ನೀರಿಗೆ ಹಾರಬೇಕಾಯಿತು.
ಇದನ್ನೂ ಓದಿ:ನೆಲ್ಯಾಡಿ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆ
ಆನೆಯ ವರ್ತನೆ ಕಂಡು ಇತರ ಆನೆಗಳನ್ನು ಕ್ರಾಲ್ ಇರುವ ಸ್ಥಳಕ್ಕೆ ಶಿಫ್ಟ್ ಮಾಡಿದರು. ಕೆಲಕಾಲ ಆನೆಗಳ ವೀಕ್ಷಣೆಗೆ ಕ್ರಾಲ್ ಬಳಿಯೇ ಅವಕಾಶ ನೀಡಲಾಯಿತು.