ತುರ್ತು ಅಗತ್ಯ ಸೇವೆಗೆ ಸಿಗಬೇಕಾದ ಅಂಬ್ಯುಲೆನ್ಸ್ ಗೇ ಆರೋಗ್ಯ ಸಮಸ್ಯೆ : 4 ದಿನಗಳಿಂದ ತಟಸ್ಥ!
ಶರಾವತಿ ಹಿನ್ನೀರಿನ ಪ್ರದೇಶವಾದ ತುಮರಿಯಲ್ಲಿರುವ ಅಂಬುಲೆನ್ಸ್
Team Udayavani, Jul 6, 2022, 6:06 PM IST
ಸಾಗರ: ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾದ ತುಮರಿಯ ಜನರಿಗೆ ದಿನದ 24 ಘಂಟೆಯೂ ಆರೋಗ್ಯ ಸೇವೆ ಲಭ್ಯವಾಗಬೇಕು ಎಂಬ ಕಾರಣಕ್ಕೆ ಮಂಜೂರಾದ ವಿಶೇಷ ಅಂಬ್ಯುಲೆನ್ಸ್ ವಾಹನವೇ ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿದೆ. ಕಳೆದ ಮೂರು ದಿನಗಳಿಂದ ತುಮರಿಯ ಆರೋಗ್ಯ ಕೇಂದ್ರದ ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತಿದ್ದು ತುರ್ತು ಅಗತ್ಯಗಳಿಗೆ ಒದಗದ ವಾತಾವರಣ ನಿರ್ಮಾಣವಾಗಿದೆ.
ಮೂರು ದಿನಗಳ ಹಿಂದೆ ಸಾಗರ ನಗರದಿಂದ ಮರಳುವಾಗ ವೆಂಟಿಲೇಟರ್ ವ್ಯವಸ್ಥೆಯೂ ಇರುವ ಅಂಬುಲೆನ್ಸ್ ಲಾಂಚ್‌ನಲ್ಲಿ ಏಕಾಏಕಿ ಹೊಗೆ ಕಾರಿ ನಿಂತಿದೆ. ವಾಹನದ ಸೆನ್ಸಾರ್ ವ್ಯವಸ್ಥೆಯ ದೋಷದ ಕಾರಣ ಈ ಸಮಸ್ಯೆಯಾಗಿದೆ. ನಂತರ ನಡುದಾರಿಯಲ್ಲಿ ಕೈಕೊಟ್ಟ ವಾಹನವನ್ನು ಎಳೆದುಕೊಂಡು ಬಂದು ಆಸ್ಪತ್ರೆಯ ಎದುರು ನಿಲ್ಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ತುಮರಿ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ, ಜನಪರ ಹೋರಾಟ ವೇದಿಕೆಯ ಜಿ.ಟಿ.ಸತ್ಯನಾರಾಯಣ ಕರೂರು, ವೆಂಟಿಲೇಟರ್ ಇರುವ ವಾಹನವನ್ನು ನಿಲ್ಲಿಸಲು ಆಸ್ಪತ್ರೆಯಲ್ಲಿ ಶೆಡ್ ನಿರ್ಮಾಣವಾಗಿಲ್ಲ. ಇದರಿಂದ ರಸ್ತೆ ಪಕ್ಕದಲ್ಲಿ ನಿಲ್ಲಿಸುವುದರಿಂದ ವಾಹನದೊಳಗೆ ನೀರಿನ ಸೋರಿಕೆ, ಆರ್ದತೆ ಹೋಗಿ ಅದರ ಸೆನ್ಸಾರ್ ವ್ಯವಸ್ಥೆ ಹಾಳಾಗುತ್ತಿದೆ ಎಂಬ ಅನುಮಾನಗಳಿವೆ. ನಾಲ್ಕು ದಿನಗಳಿಂದ ಅಂಬುಲೆನ್ಸ್ ಸೇವೆ ವ್ಯತ್ಯಯವಾಗಿದ್ದರೂ ಆರೋಗ್ಯ ಇಲಾಖೆ ಈ ಕುರಿತು ಗಮನ ಹರಿಸದಿರುವುದು ಖಂಡನೀಯ. ಈ ಬಗ್ಗೆ ತುರ್ತು ಪರಿಸ್ಥಿತಿ ನಿರ್ಮಾಣ ಆಗುವ ಮುನ್ನವೇ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಮಂಜೂರು- ಕವಟಗಿಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಾಕು ಹಾಕಿದವರಿಗೆ ಹಾರ ಹಾಕಿ ಸನ್ಮಾನ ಮಾಡಲು ಸಾಧ್ಯವಿಲ್ಲ: ಬಿ ವೈ ವಿಜಯೇಂದ್ರ
ಕಾಂಗ್ರೆಸ್ ನಿಂದ ತಿಂಗಳಿಗೊಂದು ಹೋರಾಟ? ಚುನಾವಣಾ ವಸ್ತುವಿಗೆ ಇನ್ನೂ ಹುಡುಕಾಟ
ಹುಮನಾಬಾದ್: ಇನ್ನೂ ರಾರಾಜಿಸುತ್ತಿವೆ ರಾಷ್ಟ್ರಧ್ವಜ, ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳು ವಿಫಲ
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಸೋಮೇಶ್ವರ ರೆಸಿಡೆನ್ಸಿಯಲ್ ಸ್ಕೂಲ್
ಶಿವಮೊಗ್ಗ ಪ್ರಕರಣದ ತಪ್ಪಿತಸ್ಥರ ವಿರುದ್ಧ ಗೂಂಡಾಕಾಯ್ದೆ, ಆಸ್ತಿ ಮುಟ್ಟುಗೋಲು: ADGPಎಚ್ಚರಿಕೆ