ಸಂಪೇಕಟ್ಟೆ ಮಾರ್ಗದಲ್ಲೇ ರಾಷ್ಟ್ರೀಯ ಹೆದ್ದಾರಿ ಆಗಲಿ
Team Udayavani, Jul 1, 2022, 4:42 PM IST
ಹೊಸನಗರ: ರಾಣೇಬೆನ್ನೂರು- ಬೈಂದೂರುರಾಷ್ಟ್ರೀಯ ಹೆದ್ದಾರಿ ಸಂಪೇಕಟ್ಟೆ ಮೂಲಕವೇಸಾಗಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ಒತ್ತಾಯಿಸಿದ್ದಾರೆ.ಸಂಪೇಕಟ್ಟೆಯಲ್ಲಿ ಪ್ರಮುಖರ ಸಭೆಯಲ್ಲಿಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇಸಂಪೇಕಟ್ಟೆ ಮಾರ್ಗವಾಗಿ ರಾಜ್ಯ ಹೆದ್ದಾರಿಸಾಗುತ್ತಿದ್ದು ಅದನ್ನೇ ರಾಷ್ಟ್ರೀಯ ಹೆದ್ದಾರಿಯಾಗಿಪರಿವರ್ತಿಸಬೇಕು ಎಂದು ಇಲ್ಲಿಯ ಬಹುತೇಕಗ್ರಾಮಸ್ಥರ ಬೇಡಿಕೆಯಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುವ ಎಲ್ಲಾಅಂಗಡಿ- ಮುಗ್ಗಟ್ಟುಗಳಿಗೆ, ಮನೆಗಳಿಗೆ ಸೂಕ್ತಪರಿಹಾರ ನೀಡಬೇಕು. ಜಾಗದ ಹಕ್ಕುಪತ್ರ,ದಾಖಲೆ ಇಲ್ಲದಿದ್ದರೂ ಸಾಕಷ್ಟು ಸಮಯದಿಂದಬದುಕುತ್ತಿದ್ದಾರೆ. ಇರುವ ಕನಿಷ್ಠ ದಾಖಲೆಯನ್ನೇಪರಿಗಣಿಸಿ ಸೂಕ್ತ ಪರಿಹಾರ ನೀಡುವಂತೆಒತ್ತಾಯಿಸಿದರು.ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ದಿನಕ್ಕೊಂದು ಕಡೆ ಸರ್ವೇ ಮಾಡುತ್ತಾಗೊಂದಲ ಉಂಟು ಮಾಡುತ್ತಿದ್ದಾರೆ ಎಂಬಅಳಲನ್ನು ಗ್ರಾಮಸ್ಥರು ತೋಡಿಕೊಂಡಿದ್ದಾರೆ.ಸಂಪೇಕಟ್ಟೆ ಹೊರತುಪಡಿಸಿ ಬೇರೆ ಮಾರ್ಗದಲ್ಲಿಹೆದ್ದಾರಿ ಹೋದಲ್ಲಿ ಆ ಪ್ರದೇಶದಲ್ಲಿ ಸಾಕಷ್ಟುಜಮೀನು ನಾಶವಾಗಲಿದೆ.
ಅಲ್ಲದೆ ಸೇತುವೆನಿರ್ಮಾಣಗಳ ಹೊರೆ ದುಪ್ಪಟ್ಟಾಗಲಿದೆ. ಈನಿಟ್ಟಿನಲ್ಲಿ ಸಂಪೇಕಟ್ಟೆ ಮೂಲಕವೇ ರಾಷ್ಟ್ರೀಯಹೆದ್ದಾರಿ ಮಾರ್ಗವನ್ನು ಗುರುತು ಮಾಡಬೇಕುಎಂದು ಗ್ರಾಮಸ್ಥರು ಈಗಾಗಲೇ ಮನವಿನೀಡಿದ್ದಾರೆ ಎಂದರು.ಈ ನಿಟ್ಟಿನಲ್ಲಿ ಲೋಕೋಪಯೋಗಿ ಸಚಿವಸಿ.ಸಿ. ಪಾಟೀಲ್, ಗೃಹ ಸಚಿವ ಆರಗ ಜ್ಞಾನೇಂದ್ರಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರಿಗೆನಾನು ಕೂಡ ಮನವಿ ಸಲ್ಲಿಸುತ್ತೇನೆ ಎಂದರು.
ಈ ವೇಳೆ ಹೆದ್ದಾರಿ ನಿರ್ಮಾಣದ ಪ್ರಯೋಜನಮತ್ತು ಸಂಕಷ್ಟದ ಕುರಿತಾಗಿ ಮಾಹಿತಿ ಪತ್ರವನ್ನುಮಾಜಿ ಸಚಿವರಿಗೆ ಸಂಪೇಕಟ್ಟೆಯ ಪ್ರಮುಖರುಸಲ್ಲಿಸಿದರು. ಸಭೆಯಲ್ಲಿ ಸಾಮಾಜಿಕಹೋರಾಟಗಾರ ಕೊಡಸೆ ಚಂದ್ರಪ್ಪ, ನಗರಹೋಬಳಿ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಶೆಟ್ಟಿ,ಪ್ರಮುಖರಾದ ಅಪ್ಪು ಭಟ್, ಲಕ್ಷ್ಮೀನಾರಾಯಣದೊಡ್ಮನೆ, ಗೋಪಾಲ ಕಟ್ಟಿನಹೊಳೆ, ಕಿರುವಾಸೆನಾರಾಯಣ, ಗಣಪತಿ, ರಾಮಚಂದ್ರ,ಅಡಗೋಡಿ ಸ್ವಾಮಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
144 ಸೆಕ್ಷನ್ ಜಾರಿ: ನಾಳೆ ಶಿವಮೊಗ್ಗ,ಭದ್ರಾವತಿ ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ
ತೀರ್ಥಹಳ್ಳಿ: ಗೃಹ ಸಚಿವರ ಬೆಂಗಾವಲು ವಾಹನ – ಕಾರು ಮುಖಾಮುಖಿ ಢಿಕ್ಕಿ
ಆಸ್ಪತ್ರೆಗಳ ಉನ್ನತೀಕರಣಕ್ಕೆ ಗಮನ: ಡಾ. ನಾರಾಯಣ ಗೌಡ ಭರವಸೆ
ಸಾಗರ: ಕಾಯಿಲೆಗೆ ಪರಿಹಾರ ಸಿಕ್ಕಿಲ್ಲ, ಇದು ಸ್ವಾತಂತ್ರ್ಯ ಅಲ್ಲ ಸಂತ್ರಸ್ತನಿಂದ; ಪ್ರತಿಭಟನೆ!
ಶಿವಮೊಗ್ಗ: ಸಾವರ್ಕರ್ – ಟಿಪ್ಪು ಫೋಟೋ ವಿವಾದದ ಬೆನ್ನಲ್ಲೇ ಯುವಕನಿಗೆ ಚೂರಿ ಇರಿತ