ಶಿರಾ ನಗರಕ್ಕೆ ಕಲ್ಮಶ ನೀರು ಪೂರೈಕೆ

ಅಪಾಯಕಾರಿ ತ್ಯಾಜ್ಯ ಶೇಖರಣೆ • ಶುದ್ಧೀಕರಣಕ್ಕೆ ಅಧಿಕ ರಾಸಾಯನಿಕ ಬಳಕೆ

Team Udayavani, Jul 18, 2019, 3:53 PM IST

ಕುಡಿಯುವ ನೀರು ಶುದ್ಧೀಕರಣ‌ ಘಟಕದ ಬಳಿ ಸಿಎಫ್ಎಲ್‌ ಹಾಗೂ ಟ್ಯೂಬ್‌ಲೈಟ್‌ ಶೇಖರಿಸಿಟ್ಟಿರುವುದು.

ಶಿರಾ: ನಗರಕ್ಕೆ ಸರಬರಾಜಾಗುತ್ತಿರುವ ನೀರು ಕಲ್ಮಶ ದಿಂದ ಕೂಡಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರೂ, ನಗರಸಭೆ ನಿರ್ಲಕ್ಷ್ಯ ವಹಿಸಿದೆ.

ನೀರು ಕಲ್ಮಶವಾಗಿರುವುದಕ್ಕೆ ನಗರದ ಕೋಟೆ ಬಳಿ ಇರುವ ಸಿಟ್ಟುರುವುದು, ನೀರಿನ ಶುದ್ಧೀ ಕರಣಕ್ಕೆ ಅಳತೆ ಮೀರಿ ಆಲಂ ರಾÓಯನಿಕ ಬಳಸುತ್ತಿರುವುದು, ಕಾಲ ಕಾಲಕ್ಕೆ ಫಿಲ್ಟರ್‌ ಬದಲಾಯಿಸದಿರುವುದು ಹಾಗೂ ಪಂಪ್‌ಹೌಸ್‌ ಸುತ್ತಮುತ್ತ ಜಾಲಿ ಮರ ಬೆಳೆದಿರುವುದು ಕಾರಣ ಎಂಬುದು ನಾಗರಿಕರ ಆರೋಪವಾಗಿದೆ. ನೀರಿನ ಶುದ್ಧೀಕರಣಕ್ಕೆ ಆಲಂ ಪೀಸ್‌ ರಾಸಾಯನಿಕ ಸಾಮಾನ್ಯವಾಗಿ 7ರಿಂದ 8 ಬಳಸುತ್ತಿದ್ದಾಗ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ 12 ಬಳಸಲಾಗುತ್ತಿದೆ.

ಆಯುಕ್ತರಲ್ಲಿ ಕೇಳಿ!: ನಗರದಾದ್ಯಂತ ಬೀದಿದೀಪಗಳಲ್ಲಿ ಬಳಸಿ ಹಾಳಾಗಿರುವ ಸಿಎಫ್ಎಲ್ ಹಾಗೂ ಟ್ಯೂಬ್‌ಲೈಟ್‌ಗಳನ್ನು ಕುಡಿಯುವ ನೀರು ಶುದ್ಧೀ ಕರಿಸುವ ಘಟಕದ ಬಳಿ ಶೇಖರಿಸಿಡಲಾಗಿದ್ದು, ಕೆಲವೊಂದು ಒಡೆದು ಅದರೊಳಗಿನ ರಾಸಾಯನಿಕ ನೀರಿಗೆ ಸೇರಿರುವ ಸಂಶಯವಿದೆ. ನಗರಸಭೆ ಪರಿಸರ ಇಂಜಿನಿಯರ್‌ ಪಲ್ಲವಿ ಅವರನ್ನು ಪ್ರಶ್ನಿಸಿದರೆ ‘ಇದು ನನಗೆ ಸಂಬಂಧಪಟ್ಟಿದ್ದಲ್ಲ. ನಗರಸಭೆ ಆಯುಕ್ತರನ್ನು ಕೇಳಿ’ ಎಂಬ ಉತ್ತರ ಬರುತ್ತದೆ.

ಬರಿದಾಗುತ್ತಿದೆ ದೊಡ್ಡಕೆರೆ: ಶಿರಾಕ್ಕೆ ಕುಡಿ ಯುವ ನೀರು ಒದಗಿಸುವ ದೊಡ್ಡಕೆರೆ ಬರಿ ದಾಗುತ್ತಿದೆ. ಇನ್ನು 25 ದಿನ ನೀರು ಸರಬರಾಜು ಮಾಡಿದರೆ ಕೆರೆ ಒಡಲು ಸಂಪೂರ್ಣ ಖಾಲಿ ಯಾಗುತ್ತದೆ. ನಗರದ 65,000 ಜನಸಂಖ್ಯೆಗೆ ಅನುಗುಣವಾಗಿ ಪ್ರತಿನಿತ್ಯ 8 ಎಂ.ಎಲ್. ಡಿ ನೀರು ಬೇಕು. ಮುಂಗಾರು ಮಳೆ ವಿಫ‌ಲವಾದ ಕಾರಣ ಸದ್ಯಕ್ಕೆ ತಿಂಗಳು ಕಳೆದ ನಂತರ ಕೆರೆಗೆ ಹೇಮಾವತಿ ನೀರು ಹರಿಯುತ್ತದೆ ಎಂಬ ನಿರೀಕ್ಷೆಯೂ ನಿಜವಾಗುವ ಲಕ್ಷಣ ಕಾಣುತ್ತಿಲ್ಲ. ಸಾಕಷ್ಟು ಕೊಳವೆ ಬಾವಿಯಲ್ಲಿ ನೀರಿನಮಟ್ಟ ಕುಸಿಯುತ್ತಿದೆ.

ಸರ್ಕಾರದಿಂದ 75 ಲಕ್ಷ ರೂ. ಅನುದಾನ ನಗರಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಬಿಡುಗಡೆ ಮಾಡಲಾಗಿದೆ. ಶಿರಸ್ತೇ ದಾರ್‌ ಕಟ್ಟೆಯ 9 ಬೋರ್‌, ನಗರದಾದ್ಯಂತ 163 ಕೊಳವೆ ಬಾವಿ ಹಾಗೂ ಹೊಸದಾಗಿ ಕೊರೆದಿರುವ ಕೊಳವೆ ಬಾವಿಗಳಿಂದ ಒಟ್ಟು 3 ಎಂ.ಎಲ್.ಡಿ ನೀರು ಶಿರಾಕ್ಕೆ ಸರಬರಾಜು ಮಾಡಬಹುದು. ಸಾರ್ವಜನಿಕರು ಮಿತವಾಗಿ ನೀರು ಬಳಸಬೇಕಾಗುತ್ತದೆ. ನೀರು ಶುದ್ಧೀ ಕರಿಸಲು ಹೆಚ್ಚಿನ ಆಲಂ ರಾಸಾಯನಿಕ ಬಳಸು ತ್ತಿರುವ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದು ಕೊಳ್ಳುತ್ತೇನೆ ಎಂದು ನಗರಸಭೆ ಅಭಿಯಂತರ ಮಂಜುನಾಥ್‌ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ