Udayavni Special

ಏಷ್ಯಾದ ಮೊದಲ 500 ವಿವಿಗಳ ಪಟ್ಟಿಯಲ್ಲಿ ಕುವೆಂಪು ವಿವಿಗೆ ಸ್ಥಾನ

Team Udayavani, Nov 29, 2019, 12:38 PM IST

29-November-10

ಶಿವಮೊಗ್ಗ: ಪ್ರತಿಷ್ಠಿತ ಕ್ಯೂ.ಎಸ್‌. ಜಾಗತಿಕ ವಿಶ್ವವಿದ್ಯಾಲಯಗಳ ಶ್ರೇಣಿಯ ಏಷ್ಯಾ ವಿಭಾಗದಲ್ಲಿ ಕುವೆಂಪು ವಿವಿಯು ಮೊದಲ ಬಾರಿಗೆ ಸ್ಥಾನ ಪಡೆದಿದ್ದು, ಟಾಪ್‌ 500 ವಿವಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡ ಸಾಧನೆ ಮಾಡಿದೆ. ಸಿಂಗಪುರದಲ್ಲಿ ಬುಧವಾರ ಬಿಡುಗಡೆಗೊಳಿಸಲಾದ ಕ್ಯೂ.ಎಸ್‌.(ಕ್ವಾಕೆರೆಲಿ ಸಿಮಂಡ್ಸ್‌ ಲಿಮಿಟೆಡ್‌) ಜಾಗತಿಕ ಉನ್ನತ ವಿಶ್ವವಿದ್ಯಾಲಯಗಳು-2020 ರ್‍ಯಾಂಕಿಂಗ್‌ ವರದಿಯಲ್ಲಿ ಕುವೆಂಪು ವಿಶ್ವವಿದ್ಯಾಲಯವು ಉತ್ತಮ ಸಾಧನೆ ತೋರಿದೆ. ರ್‍ಯಾಂಕಿಂಗ್‌ ಪಟ್ಟಿಯ ಏಷ್ಯಾ ವಲಯದ ವಿಶ್ವವಿದ್ಯಾಲಯಗಳ ಶ್ರೇಣಿಯಲ್ಲಿ ವಿವಿಗೆ 451-500 ಸಂಸ್ಥೆಗಳ ಸಾಲಿನಲ್ಲಿ ಸ್ಥಾನ ದೊರೆತಿದೆ.

ಸ್ಥಾಪಿತ ವಿವಿಗಳ ಸಾಲಿನಲ್ಲಿ ಅಧ್ಯಯನ ವಿಷಯಗಳ ಸಮಗ್ರತೆ ಹೊಂದಿರುವಿಕೆ ಹಾಗೂ ಉತ್ತಮ ಸಂಶೋಧನಾ ಉತ್ಪಾದಕತೆಯನ್ನು ವಿವಿ ತೋರುತ್ತಿದೆ ಎಂದು ವರದಿ ಉಲ್ಲೇಖೀಸಿದೆ. ಕಳೆದ ಐದು ವರ್ಷಗಳ ಸಂಶೋಧನಾ ಜ್ಞಾನ ಸೃಷ್ಟಿಯನ್ನು ಸ್ಕೊಪಸ್‌ ಸಂಸ್ಥೆಯ ಮಾಹಿತಿ ಆಧಾರವಾಗಿ ಪರಿಗಣಿಸಿ ರ್‍ಯಾಂಕಿಂಗ್‌ ಅನ್ನು ನಿರ್ಧರಿಸಲಾಗಿದ್ದು, ಕುವೆಂಪು ವಿವಿ ಅಧ್ಯಾಪಕರ ಪ್ರತೀ ಸಂಶೋಧನಾ ಲೇಖನವು 133 ಬಾರಿ ಪರಾಮರ್ಶನಗೊಂಡಿವೆ.

ಇದು ಸಂಶೋಧನಾ ಗುಣಮಟ್ಟವನ್ನು ಖಚಿತಪಡಿಸುತ್ತಿದೆ ಎಂದು ವರದಿ ಹೇಳಿದೆ. ಈಗಾಗಲೇ ವಿಶ್ವವಿದ್ಯಾಲಯವು ನ್ಯಾಕ್‌ನಿಂದ “ಎ’ ಶ್ರೇಣಿ, ಎನ್‌.ಐ.ಆರ್‌.ಎಫ್‌.ನಿಂದ 73ನೇ ರ್‍ಯಾಂಕ್‌, ಕೆ.ಎಸ್‌.ಯು.ಆರ್‌.ಎಫ್‌.ನಿಂದ ಮೂರನೇ ರ್‍ಯಾಂಕ್‌ ಹಾಗೂ ಸೈಮ್ಯಾಗೋ ರ್‍ಯಾಂಕಿಂಗ್‌ನಲ್ಲಿ ಭಾರತಕ್ಕೆ 45ನೇ ಸ್ಥಾನ ಪಡೆದಿದ್ದು, ಪ್ರಸ್ತುತ ವಿವಿಯು ಪ್ರತಿಷ್ಠಿತ ಕ್ಯೂ.ಎಸ್‌. ರ್‍ಯಾಂಕಿಂಗ್‌ನಲ್ಲಿ ಸ್ಥಾನ ಪಡೆದಿದ್ದು ಗಮನಾರ್ಹ ಸಾಧನೆಯಾಗಿದೆ.

ಅದರಲ್ಲಿ ಮೊದಲ 500ರ ರ್‍ಯಾಂಕ್‌ ಪಡೆದಿರುವುದು ಶೈಕ್ಷಣಿಕ ಮತ್ತು ಸಂಶೋಧನಾ ಗುಣಮಟ್ಟ ಉತ್ತಮಗೊಳ್ಳುತ್ತಿರುವುದನ್ನು ತೋರ್ಪಡಿಸುತ್ತದೆ ಎಂದು ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ಹರ್ಷ ವ್ಯಕ್ತಪಡಿಸಿದರು.

ಕ್ಯೂ.ಎಸ್‌ ಜಾಗತಿಕ ವಿವಿ ರ್‍ಯಾಂಕಿಂಗ್‌: ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮತ್ತು ಸಂಶೋಧನಾ ಗುಣಮಟ್ಟವನ್ನು ಪರಾಮರ್ಶಿಸಿ ಜಾಗತಿಕ ಮಟ್ಟದಲ್ಲಿ ರ್‍ಯಾಂಕಿಂಗ್‌ ನೀಡುವ ಪ್ರತಿಷ್ಠಿತ ಮೂರು ರ್‍ಯಾಂಕಿಂಗ್‌ಗಳಲ್ಲಿ ಕ್ಯೂ. ಎಸ್‌. (ಕ್ವಾಕೆರೆಲಿ ಸಿಮಂಡ್ಸ್‌ ಲಿಮಿಟೆಡ್‌) ಜಾಗತಿಕ ಉನ್ನತ ವಿಶ್ವವಿದ್ಯಾಲಯಗಳ ರ್‍ಯಾಂಕಿಂಗ್‌ ಕೂಡ ಒಂದು. ಶೈಕ್ಷಣಿಕ ವಾತಾವರಣ ಮತ್ತು ಸಿಬ್ಬಂದಿಗೆ ಇರುವ ಸಾಮಾಜಿಕ ಮನ್ನಣೆ, ವಿದ್ಯಾರ್ಥಿ- ಶಿಕ್ಷಕರ ಅನುಪಾತ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನುರಿತ ಅಧ್ಯಾಪಕ ವರ್ಗ ಮತ್ತು ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ, ವಿದೇಶಿ ವಿನಿಮಯ ಕಾರ್ಯಕ್ರಮಗಳು ಹಾಗೂ ಸಂಶೋಧನಾ ಪ್ರಕಟಣೆಗಳು ಸೇರಿದಂತೆ 11 ಮಾನದಂಡಗಳನ್ನು ಪರಿಗಣಿಸಿ ರ್‍ಯಾಂಕಿಂಗ್‌ ನೀಡಲಾಗುತ್ತದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ: ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಎಚ್ ಡಿಕೆ

ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ: ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಎಚ್ ಡಿಕೆ

ಪಡಿತರ ವಿತರಣೆಯಲ್ಲಿ ಅಕ್ರಮ: 3 ನ್ಯಾಯ ಬೆಲೆ ಅಂಗಡಿ ಪರವಾನಗಿ ರದ್ದು

ಪಡಿತರ ವಿತರಣೆಯಲ್ಲಿ ಅಕ್ರಮ: 3 ನ್ಯಾಯ ಬೆಲೆ ಅಂಗಡಿ ಪರವಾನಗಿ ರದ್ದು

ರಾಜ್ಯದಲ್ಲಿ ಮತ್ತೆ ಆರು ಜನರಿಗೆ ಕೋವಿಡ್-19: 197ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಮತ್ತೆ ಆರು ಜನರಿಗೆ ಕೋವಿಡ್-19: 197ಕ್ಕೇರಿದ ಸೋಂಕಿತರ ಸಂಖ್ಯೆ

ವಿಶ್ವ ಆರೋಗ್ಯ ಸಂಸ್ಥೆಗೆ ಫ‌ಂಡ್‌ ಕೊಡಲ್ಲ: WHO ಚೀನಾ ಓಲೈಕೆ ನೀತಿಗೆ ಟ್ರಂಪ್ ಕಿಡಿ!

ವಿಶ್ವ ಆರೋಗ್ಯ ಸಂಸ್ಥೆಗೆ ಫ‌ಂಡ್‌ ಕೊಡಲ್ಲ: WHO ಚೀನಾ ಓಲೈಕೆ ನೀತಿಗೆ ಟ್ರಂಪ್ ಕಿಡಿ!

10,12 ತರಗತಿ ಪರೀಕ್ಷೆಯ ಬಗ್ಗೆ ನಿರ್ಧಾರವಾಗಿಲ್ಲ, ಸುಳ್ಳು ಸುದ್ದಿ ನಂಬಬೇಡಿ: ಸುರೇಶ್ ಕುಮಾರ್

10,12 ತರಗತಿ ಪರೀಕ್ಷೆಯ ಬಗ್ಗೆ ನಿರ್ಧಾರವಾಗಿಲ್ಲ, ಸುಳ್ಳು ಸುದ್ದಿ ನಂಬಬೇಡಿ: ಸುರೇಶ್ ಕುಮಾರ್

ಇಂದಿನಿಂದ ಇಡೀ ರಾಜ್ಯಕ್ಕೆ ಒಂದೇ ದೂರವಾಣಿ ಸಂಖ್ಯೆಯಿಂದ ಬಿಜೆಪಿ ಸಹಾಯವಾಣಿ: ನಳಿನ್ ಕುಮಾರ್

ಇಂದಿನಿಂದ ಇಡೀ ರಾಜ್ಯಕ್ಕೆ ಒಂದೇ ದೂರವಾಣಿ ಸಂಖ್ಯೆಯಿಂದ ಬಿಜೆಪಿ ಸಹಾಯವಾಣಿ: ನಳಿನ್ ಕುಮಾರ್

130 ವರ್ಷಗಳಲ್ಲೇ ಇದೇ ಮೊದಲು, ನಾವು ಬದುಕೋದು ಹೇಗೆ? ಮುಂಬೈ ಡಬ್ಬಾವಾಲಾಗಳ ಅಳಲು

130 ವರ್ಷಗಳಲ್ಲೇ ಇದೇ ಮೊದಲು, ನಾವು ಬದುಕೋದು ಹೇಗೆ? ಮುಂಬೈ ಡಬ್ಬಾವಾಲಾಗಳ ಅಳಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

09-April-40

ಹಣ್ಣು -ತರಕಾರಿ ತಿಪ್ಪೆ ಪಾಲು!

tk-tdy-2

ಕೋಟಿ ರೂ. ದೇಣಿಗೆ

TK-TDY-1

ಒಂದು ಸಮುದಾಯವನ್ನು ದ್ವೇಷಿಸಬಾರದು

09-April-38

ಟೆಲಿಫೋನ್‌ ಬೂತ್‌ ಮಾದರಿ ಕೋವಿಡ್‌ ಪರೀಕ್ಷೆ ಲ್ಯಾಬ್‌ ನೀಡಿಕೆ

rn-tdy-2

ಮಾಗಡಿ ಕೋವಿಡ್ 19 ಶಂಕಿತರ ರಕ್ತ ಪರೀಕ್ಷೆ : ವರದಿ ನೆಗೆಟೀವ್‌

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ಕೋವಿಡ್ 19 ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆ