ನೌಕರರ ಸಂಘದ ಚುನಾವಣೆಗೆ ಸಿದ್ಧತೆ

Team Udayavani, Jun 12, 2019, 3:09 PM IST

ಸಿರುಗುಪ್ಪ: ಮತದಾನ ನಡೆಯಲಿರುವ ಎನ್‌ಜಿಒ ಭವನ.

ಸಿರುಗುಪ್ಪ: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಕೆಲವು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದ್ದು, ಆರೋಗ್ಯ ಇಲಾಖೆ, ಪ್ರೌಢ ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳಿಗೆ ಜೂ.13ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಪಂಪಾಪತಿಗೌಡ ತಿಳಿಸಿದ್ದಾರೆ.

ಚುನಾವಣೆಯ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು: ಪ್ರೌಢ ಶಿಕ್ಷಣ ಇಲಾಖೆಯಿಂದ ಡಾ.ಎಸ್‌.ಚಂದ್ರಮೌಳಿ, ಎಸ್‌.ಶಿವಣ್ಣ, ಆರೋಗ್ಯ ಇಲಾಖೆಯಿಂದ ಸಿ.ಸಿ.ಅಮೃತ, ಕರೀಂ, ನರೇಶ್‌ಕುಮಾರ್‌, ಎ.ಯಲ್ಲಪ್ಪ, ಯಲ್ಲಪ್ಪ ಇನಾಂದಾರ, ಕೆ.ಯೇಸಣ್ಣ, ಎಂ.ರವಿಕುಮಾರ್‌, ಕೆ.ಲಕ್ಷ್ಮಿ, ಲಿಂಗರಾಜು, ವಿನೋದ ಮುದುಕಪ್ಪ ದೊಡ್ಡಮನಿ, ಹಿಂದುಳಿದ ವರ್ಗಗಳ ಇಲಾಖೆಯಿಂದ ಕೆ.ವೆಂಕಟೇಶ, ಶಾಮಪ್ಪ ಸ್ಪರ್ಧಿಸಿದ್ದಾರೆ.

ಜೂ.13ರಂದು ಸರ್ಕಾರಿ ನೌಕರರ ಭವನದಲ್ಲಿ ಪ್ರತ್ಯೇಕವಾಗಿ ಮೂರು ಮತಗಟ್ಟೆ ಸ್ಥಾಪಿಸಲಾಗಿದೆ. ಆರೋಗ್ಯ ಇಲಾಖೆಯಲ್ಲಿ 194, ಬಿಸಿಎಂ ಇಲಾಖೆಯಲ್ಲಿ 12, ಪ್ರೌಢಶಿಕ್ಷಣ ಇಲಾಖೆಯಲ್ಲಿ 152 ಮತದಾರರಿದ್ದು, ಬೆಳಿಗ್ಗೆ 11-00 ರಿಂದ ಸಂಜೆ 4-00ಗಂಟೆಯ ವರೆಗೆ ಮತದಾನ ನಡೆಯಲಿದೆ. ಸಂಜೆ 5ಗಂಟೆಗೆ ಮತ ಎಣಿಕೆ ಕಾರ್ಯನಡೆಸಿ ಫಲಿತಾಂಶ ಘೋಷಿಸಲಾಗುವುದು ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ