ತಿಪಟೂರಿನಲ್ಲಿ ಕರಡಿ ಪ್ರತ್ಯಕ್ಷ
Team Udayavani, Feb 5, 2021, 5:42 PM IST
ತಿಪಟೂರು: ನಗರದ ಗೊರಗೊಂಡನಹಳ್ಳಿ ಪೆಟ್ರೋಲ್ ಬಂಕ್ ಪಕ್ಕದ ವೈ.ಟಿ.ರಸ್ತೆಯಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿ ಜನರಲ್ಲಿ ತೀವ್ರ ಆತಂಕ ಮೂಡಿಸಿತ್ತು.
ನಗರದ ವೈ.ಟಿ.ರಸ್ತೆಯ ಸರ್ವೋದಯ ಶಾಲೆಯ ಹಿಂಭಾಗದ ತೋಟದಲ್ಲಿ 8 ವರ್ಷದ ಕರಡಿ ಜೋಳದ ಬೆಳೆಯೊಳಗೆ ಅವಿತು ಕುಳಿತಿತ್ತು. ತೋಟದವರು ನೋಡಿದ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬಂದು ಕರಡಿಯನ್ನು ಹಿಮ್ಮೆಟ್ಟಿಸಿದರು.
ಇದನ್ನೂ ಓದಿ : ಗಲ್ಲು ಆಗುವ ವರೆಗೆ ವಿರಮಿಸುವುದಿಲ್ಲ: ಬೊಮ್ಮಾಯಿ
ತಾಲೂಕಿನ ಕೆರೆಗೋಡಿ, ರಂಗಾಪುರ, ಅನಗೊಂಡನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಎಚ್ಚರಿಕೆಯಿಂದ ಓಡಾಡಬೇಕೆಂದು ಅರಣ್ಯ ಇಲಾಖೆಯ ಆರ್‌ಎಫ್ಒ ರಾಕೇಶ್ ಮನವಿ ಮಾಡಿದ್ದಾರೆ. ಡಿವೈಎಸ್‌ಪಿ ಚಂದನ್ ಕುಮಾರ್, ಎಸಿಎಫ್ ರವಿ, ಮುರಳಿ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಡುಪಿ ಜಿಲ್ಲೆ: 1.51 ಲಕ್ಷ ಲಸಿಕೆಯ ಗುರಿ, ಉತ್ತಮ ಸಾಧನೆ
ಯಲ್ಲಾಪುರ : ಕೆಲಸ ಮಾಡುತ್ತಿದ್ದ ವೇಳೆ ಮಣ್ಣು ಕುಸಿದು ನಾಲ್ವರ ಸಾವು
ಬಂಗಾರದಿಂದ ಸಿಂಗಾರಗೊಂಡ ಬಜರಂಗ್: ಚಿನ್ನ ಉಳಿಸಿಕೊಂಡು ನಂ.1 ಸ್ಥಾನಕ್ಕೆ ಮರಳಿದ ಸಾಧನೆ
ಆರ್ಥಿಕ ಚೇತರಿಕೆ ಜತೆ ಅಭಿವೃದ್ಧಿ ಮೂಲಮಂತ್ರ: ಸಾಲದ ಮೂಲಕ ಆರ್ಥಿಕ ಸಂಕಷ್ಟ ನಿರ್ವಹಣೆ ಪ್ರಯತ್ನ
ಕರಾವಳಿ: ಅಂದುಕೊಂಡದ್ದು ಹೆಚ್ಚು; ಸಿಕ್ಕಿದ್ದು ಸ್ವಲ್ಪ