ಬಾಲಕಿ ಕಾಲಿನ ಮೇಲೆ ಹರಿದ ಬಸ್‌

ಸ್ಥಳೀಯರಿಂದ ಪ್ರತಿಭಟನೆ | ಕಲ್ಲು ತೂರಾಟ

Team Udayavani, Jun 17, 2019, 4:21 PM IST

ತುಮಕೂರಿನ ಬೆಳಗುಂಬ ಬಳಿ ನಡೆದ ಅಪಘಾತಕ್ಕೆ ಬಸ್‌ ಚಾಲಕನ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ನಾಗರಿಕರು ಬಸ್‌ ಗಾಜು ಒಡೆದು ಪ್ರತಿಭಟಿಸಿದರು.

ತುಮಕೂರು: ಬೆಳಗುಂಬದಲ್ಲಿ ಖಾಸಗಿ ಬಸ್‌ ಚಾಲಕನ ಅಜಾಗರೂಕತೆ ಚಾಲನೆಯಿಂದ ಬಾಲಕಿ ಎರಡು ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು, ಇದರಿಂದ ಆಕ್ರೋಶ ಗೊಂಡ ಸ್ಥಳೀಯರು ಬಸ್‌ನ ಗಾಜು ಪುಡಿ ಮಾಡಿದ್ದಾರೆ.

5 ವರ್ಷದ ಬಾಲಕಿ ನೇತ್ರಾವತಿ ರಸ್ತೆ ದಾಟುವಾಗ ಊರ್ಡಿಗೆರೆ ಕಡೆಯಿಂದ ತುಮಕೂರಿನ ಕಡೆಗೆ ವೇಗವಾಗಿ ಬಂದ ಶ್ರೀ ವಿನಾಯಕ ಹೆಸರಿನ ಬಸ್‌ ಆಕೆಯ ಎರಡೂ ಕಾಲಿನ ಮೇಲೆ ಬಸ್‌ ಹರಿದಿದೆ. ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಗುವಿನ ಕಾಲುಗಳಿಗೆ ತೀವ್ರ ಸ್ವರೂಪದ ಗಾಯ ಗಳಾಗಿದ್ದು, ಬಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.ಬಾಲಕಿಯ ತಂದೆ ಅರುಣ್‌ ಗಾರೆ ಕೆಲಸ ಮಾಡುತ್ತಿದ್ದು, ತಾಯಿ ಭಾಗ್ಯಮ್ಮ ಮನೆ ಕೆಲಸ ನಿರ್ವಹಿಸುತ್ತಾರೆ.

ಬಸ್ಸಿಗೆ ಕಲ್ಲು: ಬಾಲಕಿಯ ಎರಡು ಕಾಲುಗಳ ಮೇಲೆ ವಿನಾಯಕ ಬಸ್‌ ಹರಿದಿರುವುದರಿಂದ ಈ ದುರಂತಕ್ಕೆ ಬಸ್‌ ಚಾಲಕನ ಅಜಾಗರೂಕತೆ ಹಾಗೂ ಅತೀ ವೇಗವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಉದ್ರಿಕ್ತರ ಗುಂಪು ಬಸ್‌ಗೆ ಕಲ್ಲು ಹೊಡೆದಿದ್ದು, ಗಾಜುಗಳು ಪುಡಿಪುಡಿಯಾಗಿದೆ. ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಉದ್ರಿಕ್ತ ಗುಂಪನ್ನು ಚದುರಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹುಳಿಯಾರು: ಹೋಬಳಿ ಪೋಚಕಟ್ಟೆ ಗ್ರಾಮದ ಪೋಚಕಟ್ಟೆ ಗೇಟ್‌ನಿಂದ ಉತ್ತರಕ್ಕೆ ಪೋಚಕಟ್ಟೆ ಗ್ರಾಮ, ಹುಳಿಯಾರು ಅಮಾನಿಕೆರೆ ಮತ್ತು ಕಸಬಾ ಗ್ರಾಮಗಳ ಆಯ್ದ ಸರ್ವೆ ನಂಬರ್‌ನ...

  • ಚಿಕ್ಕನಾಯಕನಹಳ್ಳಿ: ಸ್ವಾತಂತ್ರ್ಯ ಭಾರತಕ್ಕೆ ಸದೃಢ ಸಂವಿಧಾನ ರಚಿಸಿದ ಡಾ.ಬಿ.ಆರ್‌. ಅಂಬೇಡ್ಕರ್‌ಗೆ ಗೌರವ ಸಲ್ಲಿಸುವ ಸುದಿನ ಗಣರಾಜ್ಯೋತ್ಸವವಾಗಿದೆ ಎಂದು ತಹಶೀಲ್ದಾರ್‌...

  • ತುಮಕೂರು: ಮತದಾನದ ಹಕ್ಕು ನಮ್ಮೆಲ್ಲರ ಹಕ್ಕು. ಮತದಾನದ ಮೂಲಕ ಭಾರತವನ್ನು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ...

  • ತುಮಕೂರು: ಯುವಜನತೆ ಅನಗತ್ಯ ವಿಷಯಗಳತ್ತ ಹೆಚ್ಚು ಮಾರು ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್‌...

  • ಕುಣಿಗಲ್‌: ನಾಡುಪ್ರಭು ಕೆಂಪೇಗೌಡ ಆಳ್ವಿಕೆಯ ಕಾಲದ ಹುಲಿಯೂರುದುರ್ಗ ಪುರಾತನ ಸಿಂಗಾರಿ ಕೆರೆ 2 ಗ್ರಾಮ ಪಂಚಾಯಿತಿಗಳ ತಿಕ್ಕಾಟ, ಆಡಳಿತದ ವೈಫಲ್ಯದಿಂದ ಸಂಪೂರ್ಣ...

ಹೊಸ ಸೇರ್ಪಡೆ