ಬುಗಡನಹಳ್ಳಿ ಕೆರೆಗೆ ಹರಿಯಲಿದೆ ಹೇಮೆ

ಒಂದು ತಿಂಗಳು ತಡವಾಗಿ ಪ್ರವೇಶಿಸುತ್ತಿರುವ ನೀರು • ಕಾರ್ಮಿಕರಿಂದ ನಾಲಾ ಸ್ವಚ್ಛತೆ ಪೂರ್ಣ

Team Udayavani, Aug 11, 2019, 2:47 PM IST

ತುಮಕೂರು: ರಾಜ್ಯದ ವಿವಿಧೆಡೆ ಜಲಪ್ರಳಯವೇ ಸೃಷ್ಟಿಯಾಗಿದೆ. ಆದರೆ ಕಲ್ಪತರುನಾಡಿನಲ್ಲಿ ಕುಡಿಯುವ ನೀರಿನ ಹಾಹಾಕಾರ ನಿಂತಿಲ್ಲ. ಕಳೆದ ಒಂದು ತಿಂಗಳಿನಿಂದ ಹೇಮೆಗಾಗಿ ಕಾಯುತ್ತಿದ್ದ ನಾಗರಿಕರ ದಾಹ ತೀರಿಸಲು ಹೇಮಾವತಿ ನೀರು ಬುಗಡನಹಳ್ಳಿ ಕೆರೆಗೆ ಪ್ರವೇಶವಾಗಲಿದೆ.

5 ಲಕ್ಷ ಜನಸಂಖ್ಯೆ ಇರುವ ನಗರದ ಜನರ ದಾಹ ನೀಗಿಸುವ ಹೇಮಾವತಿ ಬುಗಡನಹಳ್ಳಿ ಕೆರೆಯಲ್ಲಿ ಖಾಲಿಯಾಗಿ ಒಂದು ತಿಂಗಳು ಕಳೆದಿತ್ತು. ನಗರದ ಜನರು ನೀರಿಗಾಗಿ ಪರಿತಪಿಸುತ್ತಿದ್ದರು. ಜಲಾಶಯಕ್ಕೆ ಹೆಚ್ಚು ನೀರು ಬಂದಿಲ್ಲ ಎನ್ನುವ ಕಾರಣದಿಂದ ಜುಲೈನಲ್ಲಿ ಬಿಡಬೇಕಾಗಿದ್ದ ನೀರು ಒಂದು ತಿಂಗಳು ತಡವಾಗಿ ಪ್ರವೇಶಿಸುತ್ತಿದೆ.

ಕರಾವಳಿ, ಮೈಸೂರು, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಭಾಗಗಳಲ್ಲಿ ಭಾರಿ ಮಳೆಯಿಂದ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಜಲಾಶಯಗಳು ಭರ್ತಿಯಾಗುತ್ತಿವೆ. ತುಮಕೂರಿಗೆ ನೀರು ಒದಗಿಸುವ ಹೇಮಾವತಿ ಜಲಾಶಯಕ್ಕೂ ಹೆಚ್ಚು ನೀರು ಹರಿದು ಬರುತ್ತಿದ್ದು, ಒಳಹರಿವು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಬಿಡಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಜಲಾಶಯದಿಂದ ನೀರು ಬಿಟ್ಟಿದ್ದು, ಶುಕ್ರವಾರ ವರಮಹಾಲಕ್ಷಿ ್ಮೕ ಹಬ್ಬದಂದು ಕಲ್ಪತರುನಾಡು ತಿಪಟೂರಿಗೆ ಪ್ರವೇಶಿಸಿದ್ದು, ಶನಿವಾರ ಗುಬ್ಬಿ ತಾಲೂಕಿಗೆ ಬಂದಿದ್ದು, ಭಾನುವಾರ ಪ್ರವೇಶಿಸಲಿದೆ. ಹೇಮೆ ಸ್ವಾಗತಕ್ಕೆ ಕೆರೆ ನಾಲೆ ಸ್ವಚ್ಛತೆ ಬುಗಡನಹಳ್ಳಿ ಕೆರೆಯಲ್ಲಿ ಭರದಿಂದ ನಡೆದಿದೆ.

ಭಾನುವಾರ ಮಧ್ಯಾಹ್ನ 12ರ ವೇಳೆಗೆ ತುಮಕೂರಿನ ಬುಗಡನಹಳ್ಳಿ ಕೆರೆಗೆ ನೀರು ಬರುವ ಸಾಧ್ಯತೆಯಿದ್ದು, ಬಂದ ನೀರು ತಕ್ಷಣ ಕೆರೆಗೆ ಹರಿಸುವುದಿಲ್ಲ, ಒಂದು ಗಂಟೆ ಮುಂದಕ್ಕೆ ನಾಲೆಯಲ್ಲಿ ಹರಿಸಿ ನಂತರ ಮುಂದಿನ ಗೇಟ್ ಹಾಕಿ ಬುಗಡನಹಳ್ಳಿ ಕೆರೆಗೆ ನೀರು ಸಂಗ್ರಹಿಸಲಾಗುವುದು. ಒಂದು ಗಂಟೆ ನೀರನ್ನು ಮುಂದಕ್ಕೆ ಹರಿಸುವುದರಿಂದ ನೀರಿನೊಂದಿಗೆ ಬರುವ ಕಸ, ಕಡ್ಡಿ ಕೆರೆಯೊಳಗೆ ಹೋಗುವುದಿಲ್ಲ, ಶುದ್ಧವಾಗಿ ಬರುವ ನೀರು ಕೆರೆಗೆ ಸಂಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಶನಿವಾರ ಪಾಲಿಕೆ ಅಧಿಕಾರಿಗಳು ಸೇರಿ ವಿವಿಧ ಅಧಿಕಾರಿಗಳು ಭೇಟಿ ನೀಡಿ ಕೆರೆಗೆ ನೀರು ಬರುವ ನಾಲೆಯ ಸ್ವಚ್ಛತೆ ಚುರುಕುಗೊಳಿಸಿ ಕಾಮಗಾರಿ ಮುಗಿಸಲು ಜೆಸಿಬಿಗಳ ಮೂಲಕ ಭರದಿಂದ ಕೆಲಸ ನಡೆಸಲಾಗಿದೆ. ತಿಪಟೂರು, ಗುಬ್ಬಿ ಮೂಲಕ ತುಮಕೂರಿನತ್ತ ಹೇಮಾವತಿ ನಾಲೆಯಲ್ಲಿ ಹರಿದು ಬರುತ್ತಿರುವುದನ್ನು ಕಂಡು ನಾಲೆಯ ಅಕ್ಕಪಕ್ಕದ ಹಳ್ಳಿಗಳ ರೈತರು ಖುಷಿಪಟ್ಟರು. ನಾಲೆಯ ಬಳಿ ಜನರು ಬರದಂತೆ ಪೊಲೀಸ್‌ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ಬಂದೋಬಸ್ತ್ ಏರ್ಪಡಿಸಿ ದ್ದಾರೆ. ನೀರು ಎಲ್ಲಿಯೂ ಪೋಲಾಗದಂತೆ ನಾಲೆ ಯಲ್ಲಿ ಹರಿದು ಬರಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಮೊದಲು ಕುಡಿಯುವ ನೀರು ಒದಗಿಸುವ ಕೆರೆ ತುಂಬಿಸಿ ನಂತರ ಉಳಿದ ಕೆರೆಗಳಿಗೆ ನೀರು ಹರಿಸಲು ಸೂಚನೆ ನೀಡಲಾಗಿದೆ.

ನೀರು ಶುದ್ಧೀಕರಿಸಿ ಕೊಡಲು ಸಿದ್ಧತೆ: ಸ್ಮಾರ್ಟ್‌ಸಿಟಿ ತುಮಕೂರಿನಲ್ಲಿ ಹೇಮಾವತಿ ನೀರು ಬುಗಡನಹಳ್ಳಿ ಕೆರೆಯಲ್ಲಿ ಖಾಲಿಯಾಗಿದ್ದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿ ಯುವ ನೀರಿಗೆ ಸಮಸ್ಯೆ ಉಂಟಾಗಿತ್ತು. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈಗ ಹೇಮಾವತಿ ಬುಗಡನ ಹಳ್ಳಿ ಕೆರೆಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಅ. 15ರೊಳಗೆ ಬರುವ ನೀರು ಶುದ್ಧೀಕರಿಸಿ ಜನರಿಗೆ ಕೊಡಲು ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸಿದ್ಧತೆಯಲ್ಲಿದ್ದಾರೆ.

 

● ಚಿ.ನಿ. ಪುರುಷೋತ್ತಮ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ