ಸಂಕಷ್ಟದಲ್ಲಿ ರೈತರ ಕೈ ಹಿಡಿದ ಹೆಸರು

ಗ್ರಾಮೀಣ ಪ್ರದೇಶ ಜನರಲ್ಲಿ ಸಂಭ್ರಮದ ವಾತಾವರಣ ಸೃಷ್ಟಿ

Team Udayavani, Jul 16, 2020, 12:51 PM IST

ಸಂಕಷ್ಟದಲ್ಲಿ ರೈತರ ಕೈ ಹಿಡಿದ ಹೆಸರು

ಸಾಂದರ್ಭಿಕ ಚಿತ್ರ

ಹುಳಿಯಾರು: ಕೋವಿಡ್ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು ಕೃಷಿ ಕಾರ್ಮಿಕರ ಉದ್ಯೋಗ ಕಿತ್ತುಕೊಂಡು ಸಂಕಷ್ಟಕ್ಕೆ ದೂಡಿದ
ಸಮಯದಲ್ಲಿ ಹೆಸರು, ಅಲಸಂದೆ ಕಾಳು ತಾಲೂಕಿನ ರೈತರ ಕೈ ಹಿಡಿದಿದೆ. ಮಳೆಯಾಶ್ರಿತ ಪ್ರದೇಶವಾದ ಚಿಕ್ಕನಾಯನಕನಹಳ್ಳಿ ತಾಲೂಕಿನಲ್ಲಿ ಮುಂಗಾರಿನಲ್ಲಿ ಹೆಸರು, ಅಲಸಂದೆ, ಹಿಂಗಾರಿನಲ್ಲಿ ರಾಗಿ, ಹುರುಳಿ, ತೊಗರಿ ವಾಣಿಜ್ಯ ಬೆಳೆಯಾಗಿವೆ. ಆದರೆ ಕಳೆದ ಏಳೆಂಟು ವರ್ಷಗಳಿಂದ ಉತ್ತಮ ಮಳೆಯಾಗದೆ ಯಾವ ಬೆಳೆಯೂ ರೈತನ ಕೈ ಹಿಡಿಯಲಿಲ್ಲ. ಪರಿಣಾಮ ಹೈನುಗಾರಿಗೆ, ಕುರಿಕೋಳಿ ಸಾಕಾಣಿಗೆ, ಚಿಲ್ಲರೆ ವ್ಯಾಪಾರ, ದಿನಕೂಲಿ ಸೇರಿದಂತೆ ಇತರೆ ಕಸುಬಿನತ್ತ ರೈತರು  ಮುಖ ಮಾಡಿದ್ದರು. ಆದರೆ ಕೊರೊನಾದಿಂದಾಗಿ ಈ ಕಸುಬುಗಳ ಆದಾಯಕ್ಕೂ ಸಂಚಕಾರ ಬಂದೊದಗಿತ್ತು. ಇಂತಹ ಸಂಕಷ್ಟದ ಕಾಲದಲ್ಲಿ ಹೆಸರು ಮತ್ತು ಅಲಸಂದೆ ಬಂಪರ್‌ ಬೆಳೆ ಬಂದಿದೆ.

ತಾಲೂಕಿನ ಹಂದನಕೆರೆ ಹೋಬಳಿಯಿಂದ ನಿತ್ಯ ರೈತರು ಮಾರುಕಟ್ಟೆಗೆ ಹೆಸರು, ಅಲಸಂದೆ ಜೊತೆ ಲಗ್ಗೆ ಇಡುತ್ತಿದ್ದು ಕೊರೊನಾದಿಂದ ಕಳೆಗುಂದಿದ್ದ ಮಾರು
ಕಟ್ಟೆಗೆ ಈಗ ಜೀವಕಳೆ ಬಂದಿದೆ. ಮಾರುಕಟ್ಟೆಯಲ್ಲಿ ಎತ್ತ ಕಣ್ಣು ಹಾಯಿಸಿದರೂ ಹೆಸರು, ಅಲಸಂದೆ ರಾಶಿ ಹಾಗೂ ಚೀಲಗಳೇ ಕಾಣಸಿಗುತ್ತಿದ್ದು ನಿತ್ಯ ಲಕ್ಷಾಂತರ
ರೂ. ವಹಿವಾಟು ನಡೆಯುತ್ತಿದೆ. ಈ ಮೂಲಕ ರೈತರಿಗೂ ಹಣ ಸಿಗುವ ಜೊತೆಗೆ ಮಾರುಕಟ್ಟೆ ವ್ಯವಹಾರ ನಂಬಿದ್ದ ವರ್ತಕರು, ಹಮಾಲರು, ವಾಹನದವರಿಗೂ ಶುಕ್ರದೆಸೆ ಆರಂಭವಾಗಿದೆ. ಪಟ್ಟಣದ ಮಾರುಕಟ್ಟೆಯಲ್ಲಿ ಖರೀದಿಯಾಗುವ ಹೆಸರುಕಾಳು ರಾಜ್ಯ ಸೇರಿದಂತೆ ನೆರೆ ರಾಜ್ಯಗಳಿಗೂ ರವಾನೆಯಾಗುತ್ತಿದೆ. ಪ್ರತಿನಿತ್ಯ ಮೂರ್ನಾಲ್ಕು ಲಾರಿ ಲೋಡ್‌ ರವಾನೆಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿ ಸಿದರೆ ಬೆಲೆಯೂ ಸಹ ಉತ್ತಮವಾಗಿದೆ. ಕ್ವಿಂಟಲ್‌ ಹೆಸರಿಗೆ 5,800 ರೂ., ಮಿಂಚುಕಾಳು 7,500 ರೂ., ಅಲಸಂದೆ 4,300 ರೂ. ದರವಿದೆ. ಒಟ್ಟಾರೆ ಕೊರೊನಾ ಸಂಕಷ್ಟದಲ್ಲೂ ಗ್ರಾಮೀಣ ಪ್ರದೇಶ ಜನರಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.

ಎಚ್‌.ಬಿ.ಕಿರಣ್‌ ಕುಮಾರ್‌

ಟಾಪ್ ನ್ಯೂಸ್

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

ನವೆಂಬರ್‌ನಲ್ಲಿ ಬ್ಯಾಂಕುಗಳಿಗೆ 10 ದಿನ ರಜೆ!

ನವೆಂಬರ್‌ನಲ್ಲಿ ಬ್ಯಾಂಕುಗಳಿಗೆ 10 ದಿನ ರಜೆ!

ರಸಗೊಬ್ಬರ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್‌

ರಸಗೊಬ್ಬರ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್‌

ವಿಂಡೀಸ್‌ ಮತ್ತೆ ಪಲ್ಟಿ; ಖಾತೆ ತೆರೆದ ದ. ಆಫ್ರಿಕಾ

ವಿಂಡೀಸ್‌ ಮತ್ತೆ ಪಲ್ಟಿ; ಖಾತೆ ತೆರೆದ ದ. ಆಫ್ರಿಕಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿಗ್ಗಾವಿ ಗ್ರಾಮದಲ್ಲಿ ಹಣ-ಆಸ್ತಿಗಾಗಿ ತಂದೆಯಿಂದಲೇ ಮಗನಿಗೆ ಹಿಂಸೆ

ಚಿಗ್ಗಾವಿ ಗ್ರಾಮದಲ್ಲಿ ಹಣ-ಆಸ್ತಿಗಾಗಿ ತಂದೆಯಿಂದಲೇ ಮಗನಿಗೆ ಹಿಂಸೆ

1-yrrt

ಕಳವಾಗಿ 2 ಸಂತೆಗೆ ಹೋದರೂ ಮಾಲೀಕರ ಸೇರಿದ 7 ಕುರಿಗಳು

ಪಾಲಿಕೆಗೆ ಬರಬೇಕಿದೆ 18.81 ಕೋಟಿ ನೀರಿನ ಕರ „ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡರೆ ಎಲ್ಲರ ಮನೆಗೂ ನೀರು

ತುಮಕೂರಲ್ಲಿ 15 ಸಾವಿರಕ್ಕೂ ಹೆಚ್ಚು ಅಕ್ರಮ ನಲ್ಲಿ

ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂಬ ಹೇಳಿಕೆ ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಾಗಿದೆ: ಸುರೇಶ್‌ಗೌಡ ವಾಗ್ದಾಳಿ

ನೀರಾವರಿ ಯೋಜನೆಗೆ ಗೌರಿಶಂಕರ್‌ ಅಡ್ಡಗಾಲು

Apply for Taluk Rajyotsava Award

ತಾಲೂಕು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸಿ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

ನ್ಯಾಯಾಧೀಶರಿಂದ ಪರಿಶೀಲನೆ, ಅಧಿಕಾರಿಗಳಿಗೆ ತರಾಟೆ

ನ್ಯಾಯಾಧೀಶರಿಂದ ಪರಿಶೀಲನೆ, ಅಧಿಕಾರಿಗಳಿಗೆ ತರಾಟೆ

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಲಾಡ್ಜ್ ಗೆ ಕರೆದೊಯ್ದು ಆತ್ಯಾಚಾರ: ಬಂಧನ

ಲಾಡ್ಜ್ ಗೆ ಕರೆದೊಯ್ದು ಆತ್ಯಾಚಾರ: ಆರೋಪಿಸಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.