ಅವ್ಯವಹಾರ ತನಿಖೆಗೆ ಒತ್ತಾಯ


Team Udayavani, Oct 4, 2019, 6:39 PM IST

tk-tdy-1

ಕುಣಿಗಲ್‌: ತಾಲೂಕಿನ ಹುಲಿಯೂರು ದುರ್ಗ ಹೋಬಳಿ ಉಜ್ಜಿನಿ ಮತ್ತು ನಿಡಸಾಲೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರ ತನಿಖೆ ನಡೆಸುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕು ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದರು.

ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಶಿವಕುಮಾರ್‌ ಎಂಬ ವ್ಯಕ್ತಿ ಎಸ್‌. ಕೆ.ಟ್ರೇಡರ್ ಹೆಸರಿನಲ್ಲಿ ನಖಲಿ ಬಿಲ್‌ ಸೃಷ್ಟಿಸಿ, ಟಿನ್‌ ನಂಬರ್‌ ತೆಗೆದುಕೊಂಡು ಗ್ರಾಪಂ ಮತ್ತು ತಾಪಂ ವ್ಯಾಪ್ತಿಯಲ್ಲಿ ಸಿ.ಸಿ.ರಸ್ತೆ, ಚರಂಡಿ ಹಾಗೂ ಚೆಕ್‌ ಡ್ಯಾಂ ಕಾಮಗಾರಿಗಳಿಗೆ ಶೇ.15 ಕಮಿಷನ್‌ ಪಡೆದು ನಕಲಿ ಬಿಲ್‌ ಕೊಡುತ್ತಿದ್ದಾರೆ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಗ್ರಾಮದ ಮುಖಂಡ ಎಸ್‌. ರಾಮಲಿಂಗಯ್ಯ ಆಗ್ರಹಿಸಿದರು. ಒಂದೇ ಕಾಮಗಾರಿಗೆ ಎರಡೆರಡು ಬಿಲ್‌ ಮಾಡಿ ಶೇ.15ರಷ್ಟು ಕಮಿಷನ್‌ ಆಸೆಗೆ ಕಲಿ ಟ್ರೇಡರ್‌ಗಳ ಹೆಸರಿನಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳ ವಿಶೇಷ ಅನುದಾನ ಎಸ್ಸಿ, ಎಸ್ಟಿ ಸ್ಕೀಂನಲ್ಲಿ ಇಲಿಗರ ಪಾಳ್ಯ ಹಾಗೂ ರಾಜಪ್ಪನದೊಡ್ಡಿ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣದಲ್ಲಿ ಬಿಲ್‌ ಆಗಿದೆ. ಆದರೆ ಇದೇ ಕಾಮಗಾರಿಗೆ 2018-19ರಲ್ಲಿ ನಿಡಸಾಲೆ ಪಂಚಾಯಿತಿಯಿಂದ ಎನ್‌ಆರ್‌ಐಜಿ ಯೋಜನೆಯಡಿ 60.40 ಅನುಪಾತದಲ್ಲಿ ಕಾಮಗಾರಿ ಮಾಡಬೇಕು. ಆದರೆ 90.10 ಅನುಪಾತದಲ್ಲಿ ಕಾಮಗಾರಿ ಮಾಡಿ ಬಿಲ್‌ ಡ್ರಾ ಮಾಡಲಾಗಿದೆ ಎಂದು ದೂರಿದರು. ಎಂ.ಜಿ.ಎನ್‌.ಆರ್‌ .ಇ.ಜಿ.ಎ ಯೋಜ ನಡಿಯಲ್ಲಿ ಶೆಡ್‌ ನಿರ್ಮಾಣಕ್ಕೆ ಅನು ಮೋದನೆ ನೀಡು ವಂತಿಲ್ಲ. ಆದರೆ ಇದನ್ನು ಉಲ್ಲಂಘಿಸಿದ ಅಧಿಕಾರಿಗಳು ಗುಣಮಟ್ಟದ ಶೆಡ್‌ ನಿರ್ಮಿಸದೆ ಬೇಕಾ ಬಿಟ್ಟಿ ಬಿಲ್‌ ಮಾಡಿದ್ದಾರೆ. ಈ ಸಂಬಂಧ ನಿಡಸಾಲೆ ಗ್ರಾಪಂ ಪ್ರಭಾರ ಪಿಡಿಒ ಅವರನ್ನು ಅಮಾನತಿ ನಲ್ಲಿಟ್ಟು ಸಮಗ್ರ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ನಕಲಿ ಬಿಲ್‌ ಸೃಷ್ಟಿಸಲು ಅಂಗಡಿ ಸ್ಥಾಪಿಸಲಾಗಿದೆ. ಈ ಅಂಗಡಿಯಲ್ಲಿ ಸಾರ್ವಜನಿಕರು ಯಾರು ವ್ಯವಹಾರ ಮಾಡುತ್ತಿಲ್ಲ. ಎಸ್‌.ಕೆ. ಟ್ರೇಡರ್ಸ್‌ ಬ್ಯಾಂಕ್‌ ಖಾತೆಗೆ ಕೋಟಿಗೂ ಅಧಿಕ ಹಣ ಜಮೆಯಾಗಿದೆ. ಇದಕ್ಕೆ ಜಿಎಸ್‌ಟಿ ಪಾವತಿ ಮಾಡಿಲ್ಲ ಎಂದು ಆರೋಪಿಸಿದರು.

ಅಪಹರಣ, ಕೊಲೆ ಬೆದರಿಕೆ: ಪ್ರತಿಭಟನೆ ವಿಚಾರ ತಿಳಿದು ಗ್ರಾಪಂ ಪಿಡಿಒ ನಾಗರಾಜು ಹಾಗೂ ಎಸ್‌.ಕೆ. ಟ್ರೇಡರ್ ಮಾಲೀಕ ಶಿವಕುಮಾರ್‌ ಹಣದ ಆಮಿಷ ಒಡ್ಡಿದರು. ಒಪ್ಪದಿದ್ದಾಗ ಕೊಲೆ ಬೆದರಿಕೆ ಹಾಕಿದ್ದಾರೆ. ತಾಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆ ರಕ್ಷಣೆ ನೀಡಬೇಕು ಎಂದು ರಾಮ ಲಿಂಗಯ್ಯ ಆಗ್ರಹಿಸಿದರು.

ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿಸ್ಥ ಪಿಡಿಒ ಅವರನ್ನು ಸೇವೆಯಿಂದ ಅಮಾನತು ಪಡಿಸುವುದರ ಜತೆಗೆ ನಕಲಿ ಬಿಲ್‌ ಸೃಷ್ಟಿಸಿ ಭ್ರಷ್ಟಾಚಾರ ಎಸಗಲು ಕಾರಣರಾದ ಎಸ್‌.ಕೆ. ಟ್ರೇಡರ್ ಮಾಲೀಕ ಶಿವಕುಮಾರ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು. ಸತ್ಯಾಗ್ರಹದಲ್ಲಿ ಯು.ಎ.ಜಗದೀಶ್‌, ಕೃಷ್ಣಪ್ಪ, ಕರಿಗೌಡ ಮತ್ತಿತರರಿದ್ದರು.

ಟಾಪ್ ನ್ಯೂಸ್

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಮಣಿಪಾಲ: ಮಂಚಿಯ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೆಡಿಕಲ್‌ ಕಾಲೇಜುಗಳಲ್ಲಿ ಶೇ.75 ಹಾಸಿಗೆ ಮೀಸಲಿಡಿ: ಡೀಸಿ

ಮೆಡಿಕಲ್‌ ಕಾಲೇಜುಗಳಲ್ಲಿ ಶೇ.75 ಹಾಸಿಗೆ ಮೀಸಲಿಡಿ: ಡೀಸಿ

ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಕೊರೊನಾ ಸ್ಫೋಟ!

ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಕೊರೊನಾ ಸ್ಫೋಟ!

ರತಯುಇಯತಗ್ದಸ

ಕೋವಿಡ್‌: ಶಬರಿಮಲೆ ಯಾತ್ರಿಕರ ಸಂಖ್ಯೆ ಇಳಿಮುಖ

1-narega

ನರೇಗಾ ಕೋಟ್ಯಂತರ ರೂ ಭ್ರಷ್ಟಾಚಾರ ಆರೋಪ : ಅರಕೆರೆ ಗ್ರಾಮಸ್ಥರ ಪ್ರತಿಭಟನೆ

1-frewrwr

ಪಿಂಚಣಿ ಅದಾಲತ್: ಗ್ರಾಮೀಣ ಜನರ ನೋವಿಗೆ ಸ್ಪಂದಿಸಿದ ಕೊರಟಗೆರೆ ತಹಸೀಲ್ದಾರ್ ನಹಿದಾ

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

ಪರ್ಯಾಯೋತ್ಸವಕ್ಕೆ ಸ್ವಚ್ಛತೆಯ ಸ್ಪರ್ಶ: ಮೊಬೈಲ್‌ ಶೌಚಾಲಯ ಬಳಕೆಗೆ ಸಿದ್ಧ

ಪರ್ಯಾಯೋತ್ಸವಕ್ಕೆ ಸ್ವಚ್ಛತೆಯ ಸ್ಪರ್ಶ: ಮೊಬೈಲ್‌ ಶೌಚಾಲಯ ಬಳಕೆಗೆ ಸಿದ್ಧ

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.