ಜನತಾ ದರ್ಶನದಲ್ಲಿ ಚುನಾವಣಾ ಗಿಮಿಕ್‌ ಇಲ್ಲ


Team Udayavani, Mar 17, 2021, 2:24 PM IST

ಜನತಾ ದರ್ಶನದಲ್ಲಿ ಚುನಾವಣಾ ಗಿಮಿಕ್‌ ಇಲ್ಲ

ತುಮಕೂರು: ರೈತರಿಗೆ, ಸಾರ್ವಜನಿಕರಿಗೆ ನೇರವಾಗಿ ಶಾಸಕರು ಸಿಗಬೇಕು ಎಂಬ ಸದುದ್ದೇಶದಿಂದ ಜನತಾ ದರ್ಶನ ಹಮ್ಮಿಕೊಂಡಿದ್ದು, ಇದರಲ್ಲಿ ಯಾವುದೇಚುನಾವಣೆ ಗಿಮಿಕ್‌ ಇಲ್ಲ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಹೇಳಿದರು.

ತಾಲೂಕಿನ ಊರ್ಡಿಗೆರೆ ಹೋಬಳಿಯಲ್ಲಿ ಹಮ್ಮಿಕೊಂಡಿದ್ದ ಜನತಾದರ್ಶನದಲ್ಲಿ ಮಾತನಾಡಿದ ಅವರು, ಹೇಮಾವತಿ ನೀರಿನಿಂದ ವಂಚಿತವಾಗಿದ್ದ ಊರ್ಡಿಗೆರೆ ಹೋಬಳಿಯ ಮೈದಾಳ ಕೆರೆಗೆ 27 ಕೋಟಿವೆಚ್ಚದಲ್ಲಿ ಹೇಮಾವತಿ ನೀರನ್ನು ಈ ವರ್ಷವೇ ಹರಿಸಲಾಗುವುದು, ಇದರಿಂದ ಮೂರು ಸಾವಿರ ಎಕರೆಗೆನೀರಾವರಿ ದೊರಕಿದಂತೆ ಆಗುತ್ತದೆ ಎಂದರು.

ಸಾಕಷ್ಟು ಅಭಿವೃದ್ಧಿ ಕಾಮಗಾರಿ: ಬಿಜೆಪಿ ಸರ್ಕಾರ ಬಂದಮೇಲೆ ಪ್ರವಾಹ, ಕೊರೊನಾದಿಂದ ಅನುದಾನದಕೊರತೆ ಆಯಿತು, ಈ ಸಂದರ್ಭದಲ್ಲಿ ಬಿಜೆಪಿ ಸಚಿವರಕ್ಷೇತ್ರದಲ್ಲೇ ಅಭಿವೃದ್ಧಿಯಾಗಿಲ್ಲ, ಇದರಿಂದಾಗಿ ಒಂದುವರ್ಷ ಅಭಿವೃದ್ಧಿ ಕುಂಠಿತವಾಗಿತ್ತು, ಈ ವರ್ಷಅನುದಾನದ ಕೊರತೆ ಆಗದೇ ಇರುವುದರಿಂದ ಸಾಕಷ್ಟುಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಡಿಜಿಎಂ ಕಚೇರಿಗೆ ಬೀಗ: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಬಗ್ಗೆ ವಿಧಾನಸೌಧ ಸಚಿವರೇಉತ್ತರ ನೀಡಿದ್ದಾರೆ, ನಂದಿಹಳ್ಳಿಯ ಸರ್ವೆ ನಂ 42ರಲ್ಲಿ10 ಎಕರೆ ಕಂದಾಯ ಭೂಮಿ ಒತ್ತುವರಿಯಾಗಿರುವಬಗ್ಗೆ ಅಧಿಕಾರಿಗಳ ವರದಿ ಸಲ್ಲಿಸಿದ್ದಾರೆ. ಆದರೆ ಇನ್ನುಕ್ರಮ ಕೈಗೊಂಡಿಲ್ಲ, ಇನ್ನೊಂದು ವಾರದಲ್ಲಿ ಗಣಿಗಾರಿಕೆ ಇಲಾಖೆ ಅಕ್ರಮ ಗಣಿಗಾರಿಕೆಯನ್ನು ತಡೆಯಲುಮುಂದಾಗದೇ ಇದ್ದರೆ ಇನ್ನೊಂದು ವಾರದಲ್ಲಿ ಜಿಲ್ಲಾಗಣಿಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿಕೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಕ್ರಮ ಕೈಗೊಳ್ಳದ ಡಿಎಫ್ಒ: ಜಿಲ್ಲೆಯಲ್ಲಿ ನೂರಾರು ಎಕರೆ ಡೀಮ್ಡ್ ಅರಣ್ಯ ಭೂಮಿ ಒತ್ತುವರಿ ಆಗಿರುವ ಬಗ್ಗೆಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು ವರದಿ ನೀಡಿದ್ದಾರೆ.ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಎಫ್ಒಅವರಿಗೆ ಸೂಚಿಸಿದ್ದರು ಸಹ ಕ್ರಮ ಕೈಗೊಂಡಿಲ್ಲ, ಇದು ಹೀಗೆಯೇ ಮುಂದುವರಿದರೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತಿದೆ ಎಂದು ಎಚ್ಚರಿಸಿದರು.

ಮೂರು ಕೋಟಿ ನೀಡಲಿ: ಬೇಸಿಗೆ ಹೆಚ್ಚುತ್ತಿರುವಹಿನ್ನೆಲೆಯಲ್ಲಿ ಕುಡಿಯವ ನೀರಿನ ಬವಣೆ ನೀಗಿಸಲು ಸರ್ಕಾರ ಮೂರು ಕೋಟಿ ಅನುದಾನವನ್ನುಮೀಸಲಿಡಬೇಕು, ಕೊಳವೆಬಾವಿ ಸಮಸ್ಯೆ ಹಾಗೂಅಂತರ್ಜಲ ಇಲ್ಲದ ಗ್ರಾಮಗಳಲ್ಲಿ ನೀರು ಪೂರೈಸಲು ಸಹಕಾರಿಯಾಗಲಿದ್ದು, ಅನುದಾನವನ್ನು ಟಾಸ್ಕ್ಫೋರ್ಸ್ ಗೆ ಮೀಸಲಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುವುದಾಗಿ ಹೇಳಿದರು.

ಅನುದಾನ ಮೀಸಲಿಡಿ: ಗ್ರಾಮಾಂತರ ಕ್ಷೇತ್ರಯಲ್ಲಾಪುರ, ಸ್ವಾಂದೇನಹಳ್ಳಿ ಗ್ರಾಮಗಳಲ್ಲಿ ನೀರಿನಸಮಸ್ಯೆ ಉಂಟಾಗಿರುವ ಬಗ್ಗೆ ಮಾಹಿತಿ ಇದ್ದು,ಯಲ್ಲಾಪುರದಲ್ಲಿ ಅಂತರ್ಜಲ ಇಲ್ಲ, ಈಗಾಗಲೇ ಬೇಸಿಗೆ ಆರಂಭ ಗೊಳ್ಳುತ್ತಿದ್ದು ಕುಡಿಯುವ ನೀರಿನಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅನುದಾನ ಮೀಸಲಿಡುವುದು ಅಗತ್ಯವಾಗಿದೆ ಎಂದು ಹೇಳಿದರು

ಜನತಾ ದರ್ಶನದಲ್ಲಿ 600ಕ್ಕೂ  ಹೆಚ್ಚು  ಅರ್ಜಿ ಇತ್ಯರ್ಥ :  ತಾಲೂಕು ಕಚೇರಿಯಲ್ಲಿ ನಡೆಸಿದ ಜನತಾದರ್ಶನದಲ್ಲಿ 1400ಕ್ಕೂ ಹೆಚ್ಚು ಅರ್ಜಿಗಳುಸಲ್ಲಿಕೆಯಾಗಿದ್ದು, ಅದರಲ್ಲಿ 600ಕ್ಕೂ ಹೆಚ್ಚು ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ, ಉಳಿದ ಅರ್ಜಿಗಳನ್ನು 15 ದಿನದಲ್ಲಿ ಇತ್ಯರ್ಥಪಡಿಸಲಾಗುವುದು, ಹೆಬ್ಬೂರು ಹೋಬಳಿಯಲ್ಲಿಸಲ್ಲಿಕೆಯಾದ 1500 ಅರ್ಜಿಗಳಲ್ಲಿ 800 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ,

ಊರ್ಡಿಗೆರೆ ಹೋಬಳಿ ಜನತಾದರ್ಶನದಲ್ಲಿ 2000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು,ಪಿಂಚಣಿಗೆ ಅರ್ಜಿ ಸಲ್ಲಿಸಿದವರಿಗೆ ಸ್ಥಳದಲ್ಲಿಯೇಆದೇಶ ಪ್ರತಿ ನೀಡಲಾಗುತ್ತಿದೆ ಶಾಸಕ ಗೌರಿಶಂಕರ್‌ಹೇಳಿದರು. ಜನತಾ ದರ್ಶನದಲ್ಲಿ ಸಲ್ಲಿಕೆಯಾದಅರ್ಜಿಗಳು ಕಾನೂನಾತ್ಮಕವಾಗಿದ್ದ 45 ದಿನದೊಳಗೆಬಗೆಹರಿಸಲು ಕ್ರಮವಹಿಸಲಾಗುವುದು, ತಾಲೂಕು ಅಧಿಕಾರಿಗಳ ಸಹಕಾರದಿಂದ ಖಾತೆ ಬದಲಾವಣೆ,ಪಹಣಿ ತಿದ್ದುಪಡಿಯಂತಹ ರೈತರ ಸಮಸ್ಯೆಗಳನ್ನು ಅತಿಶೀಘ್ರವಾಗಿ ಬಗೆಹರಿಸಲು ಜನತಾದರ್ಶನಸಹಕಾರಿಯಾಗಿದ್ದು, ಡಿಸೆಂಬರ್‌ ಅಂತ್ಯದೊಳಗೆಸಮಸ್ಯೆಗಳಿಂದ ತಾಲೂಕು ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನತಾದರ್ಶನದಲ್ಲಿತಹಶೀಲ್ದಾರ್‌ ಮೋಹನ್‌ಕುಮಾರ್‌, ಕಂದಾಯಅಧಿಕಾರಿ ಮಹೇಶ್‌, ಬಿಇಒ ಹನುಮಾನಾಯ್ಕ,ತಾಲೂಕು ಜೆಡಿಎಸ್‌ ಅಧ್ಯಕ್ಷ ರಾಮಚಂದ್ರಪ್ಪ, ಯುವ ಜೆಡಿಎಸ್‌ ಅಧ್ಯಕ್ಷ ವಿಷ್ಣುವರ್ಧನ, ಯುವಜೆಡಿಎಸ್‌ ಕಾರ್ಯಾಧ್ಯಕ್ಷ ಸುವರ್ಣಗಿರಿ ಕುಮಾರ್‌,ಬೆಳಗುಂಬ ವೆಂಕಟೇಶ್‌,ಹರಳೂರು ಸುರೇಶ್‌,ರವಿ, ನಂದೀಶ್‌ ಇದ್ದರು.

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

20

Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.