ಪ್ರಾಣಿ-ಪಕ್ಷಿಗಳಿಗೆ ನೀರು, ಆಹಾರದ ಕೊರತೆ


Team Udayavani, Apr 20, 2021, 8:32 PM IST

ಪ್ರಾಣಿ-ಪಕ್ಷಿಗಳಿಗೆ ನೀರು, ಆಹಾರದ ಕೊರತೆ

ತುಮಕೂರು: ಬೆಳಗಾರದರೆ ಚಿಲಿ..ಪಿಲಿ ಸದ್ದುಮಾಡುತ್ತಿದ್ದ ಪಕ್ಷಿಗಳು, ಬೆಟ್ಟ, ಗುಡ್ಡಗಳಿಗೆ ಹೋದರೆ ಅಲ್ಲಿ ಕಣ್ಣಿಗೆ ಕಾಣುತ್ತಿದ್ದ ಸಣ್ಣಪುಟ್ಟ ಪ್ರಾಣಿಗಳು, ಎಲ್ಲೆಂದರಲ್ಲಿ ಮರಕ್ಕೆ ನೇತು ಹಾಕಿಕೊಂಡು ಸದ್ದು ಮಾಡುತ್ತಿದ್ದ ಬಾವಲಿಗಳ ಸಂತತಿ ಕಾಣದಾಗುತ್ತಿದ್ದು, ಅಲ್ಲಿ ಇಲ್ಲಿ ಉಳಿದಿರುವ ಪ್ರಾಣಿ-ಪಕ್ಷಿಗಳು ರೈತರು ತಾವು ಬೆಳೆದಿರುವ ಹಣ್ಣಗಳನ್ನು ರಕ್ಷಣೆ ಮಾಡಿಕೊಳ್ಳಲು ಅಳವಡಿಸಿರುವ ಬಲೆಗೆ ಬಿದ್ದು ಸಾವಿರಾರು ಪಕ್ಷಿಗಳು ಬಲಿಯಾಗಿವೆ.

ಪ್ರಕೃತಿಯಲ್ಲಿ ಎಲ್ಲ ಪ್ರಾಣಿ-ಪಕ್ಷಿಗಳು, ಗಿಡ-ಮರಗಳು ಇರಬೇಕು. ಆಹಾರ ಸರಪಳಿಯಲ್ಲಿ ಒಂದಕ್ಕೆ ಒಂದು ಸಂಬಂಧದಂತೆ ಇದ್ದು, ಪ್ರಕೃತಿಯಲ್ಲಿ ಅಸಮತೋಲನ ಉಂಟಾಂಗದಂತೆ ಎಲ್ಲವೂ ಇದ್ದಾಗ ಅದು ಉತ್ತಮ ಪರಿಸರ ಆಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿಪರಿಸರದಲ್ಲಿ ಉಂಟಾಗುತ್ತಿರುವ ಏರುಪೇರಿನಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ.

ಕಾಣದಾಗುತ್ತಿದೆ ಪಕ್ಷಿಗಳ ಸಂತತಿ: ಪ್ರತಿದಿನ ಬೆಳಗಿನವೇಳೆಯಲ್ಲಿ ಮನೆ ಅಂಗಳದಲ್ಲಿ ಚಿಲಿಪಿಲಿ ಗುಟ್ಟುತ್ತಿದ್ದ ಗುಬ್ಬಚ್ಚಿಗಳು ಈಗ ನಮ್ಮಿಂದ ಕಾಣದಾಗುತ್ತಿವೆ. ಮನೆಯ ಮುಂದೆ ಕುಳಿತು ಕಾ..ಕಾ ಎಂದು ತನ್ನ ಇಂಡನ್ನು ಕರೆಯುತ್ತಿದ್ದ ಕಾಗೆಗಳ ಸಂತತಿಯೂ ಹಂತ- ಹಂತವಾಗಿ ಕಡಿಮೆ ಆಗುತ್ತಿದೆ. ಗಿಳಿ, ಕೋಗಿಲೆ, ಬುಲ್‌ಬುಲ್‌, ಮಿಂಚುಳ್ಳಿ, ಮರಕುಟಿಗ, ಬೆಳ್ಳಕ್ಕಿ, ಗೂಬೆ ಹೀಗೆ ಹಲವು ಬಗೆಯ ಪಕ್ಷಿಗಳ ಸಂಕುಲಹಂತ-ಹಂತವಾಗಿ ಕಡಿಮೆಯಾಗುತ್ತಿವೆ. ಇದಕ್ಕೆಕಾರಣ ಪಕ್ಷಿಗಳಿಗೆ ಆಹಾರದ ಕೊರತೆ ಜೊತೆಗೆ ನೀರಿನ ಕೊರತೆ ಪ್ರಮುಖ ವಾಗಿದೆ. ಅಲ್ಲದೆ ಮನುಷ್ಯನದುರಾಸೆಯಿಂದ ಇಂತಹ ಅಮೂಲ್ಯ ಪಕ್ಷಿ ಸಂಕುಲ ಕಡಿಮೆ ಆಗುತ್ತಿದೆ.

ಬೆಳಗಿನ ಜಾವ ಹಕ್ಕಿಗಳು, ಚಿಟ್ಟೆಗಳು, ಮೊಲ, ಜಿಂಕೆ, ಕಡವೆ, ಮುಂಗಸಿ ಮುಂತಾದ ಪ್ರಾಣಿಗಳು ಆಹಾರಾನ್ವೇಷಣೆಯಲ್ಲಿ ತೊಡಗಿರುತ್ತವೆ. ಮುಸ್ಸಂಜೆ, ರಾತ್ರಿ ಆರಂಭವಾದ ತಕ್ಷಣ ಚಿರತೆ, ಕರಡಿ, ಕಾಡುಹಂದಿ, ಕಾಡು ಪಾಪ, ಪತಂಗಗಳು, ಹಾವು, ಕಪ್ಪೆಗಳು ಆಹಾರ ಹುಡುಕಲು ಪ್ರಾರಂಭಿಸುತ್ತವೆ. ಇಂತಹ ವೇಳೆಯಲ್ಲಿ ಕಾಡಿನುದ್ದಕ್ಕೂ ಇರುವ ರಸ್ತೆಗಳಲ್ಲಿ ಬೆಳಗಿನಿಂದ ರಾತ್ರಿವರೆಗೂ ಮಾನವರ ಓಡಾಟ ನಿರಂತರವಾಗಿರುವುದರಿಂದ ಪ್ರಾಣಿ, ಪಕ್ಷಿಗಳ ಖಾಸಗಿಜೀವನಕ್ಕೆ ತೊಂದರೆ ಉಂಟಾಗುತ್ತಿದೆ. ಇದರಿಂದ ಪಕ್ಷಿಗಳು ಪ್ರಾಣಿಗಳು ತಮ್ಮ ಜೀವ ಕಳೆದುಕೊಳ್ಳುತ್ತಿವೆ.

ಬಲೆಗಳಿಗೆ ಪಕ್ಷಿಗಳು ಬಲಿ: ರೈತರು ಬೆಳೆದ ಬೆಳೆ‌ಗಳನ್ನುಪ್ರಾಣಿ-ಪಕ್ಷಿಗಳು ತಿಂದು ಬಿಡುತ್ತವೆ ಎಂದು ರೈತರು ಅಳವಡಿಸುವ ಬಲೆಗಳಿಗೆ ಪ್ರಾಣಿ ಪಕ್ಷಿಗಳು ಬಿದ್ದು ಮೃತಪಡುತ್ತಿವೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ, ಗುಬ್ಬಿ ತಾಲೂಕುಗಳಲ್ಲಿ ಆರ್ಥಿಕಬೆಳೆಯಾದ ದಾಳಿಂಬೆ ಬೆಳೆಯನ್ನು ವ್ಯಾಪಕವಾಗಿ ಬೆಳೆಯುತ್ತಾರೆ. ಬೆಳೆದಂತಹ ಹಣ್ಣುಗಳನ್ನು ತಿನ್ನಲು ಬರುವ ಪಕ್ಷಿಗಳನ್ನು ಹಿಮ್ಮೆಟಿಸಲು ಇಡೀ ದಾಳಿಂಬೆತೋಟದ ಸುತ್ತ ಮತ್ತು ಮೇಲ್ಭಾಗದಲ್ಲಿ ಬಲೆಯನ್ನುಹರಡಿ ಪಕ್ಷಿಗಳು ಬಲೆಯಲ್ಲಿ ಸಿಕ್ಕಿ ಬೀಳುವಂತೆ ಮಾಡಿಸಾವಿರಾರು ಪಕ್ಷಿಗಳ ಸಾವಿಗೆ ಕಾರಣರಾಗುತ್ತಿದ್ದಾರೆ.

ಪಕ್ಷಿಗಳಿಗೆ ತೊಂದರೆ ಇರುವುದಿಲ್ಲ: ಈ ಹಿಂದೆ ಜಮೀನಿಗೆ ಬರುವ ಪಕ್ಷಿಗಳನ್ನು ಹಿಮ್ಮೆಟಿಸಲು ಯಾಂತ್ರಿಕ ವಿಧಾನಗಳಾದ ಬೆದರುಗೊಂಬೆಗಳನ್ನು ಅಳವಡಿಸುವುದು, ಡಬ್ಬಗಳಿಂದ ಶಬ್ದ ಮಾಡುವುದು,ಇತ್ತೀಚಿನ ದಿನಗಳಲ್ಲಿ ಮನುಷ್ಯ ಕೂಗುವ ರೀತಿಯಲ್ಲಿ ಸಂಗೀತದ ಹಾರ್ನ್ಗಳನ್ನು ಅಳವಡಿಸಿ ಪಕ್ಷಿಗಳನ್ನು ಹಿಮ್ಮೆಟಿಸುತ್ತಿದ್ದಾರೆ. ಇದರಿಂದ ಪಕ್ಷಿಗಳಿಗೆ ತೊಂದರೆಇರುವುದಿಲ್ಲ. ಆದರೆ, ಹೆಚ್ಚಿನ ರೈತರು ಇಡೀ ತೋಟಕ್ಕೆ ಬಲೆಯನ್ನು ಹರಡಿ ಅಪರೂಪದ ಪಕ್ಷಿಗಳು, ನಿಶಾಚರಿಬಾವಲಿಗಳ ಸಾವಿಗೆ ಕಾರಣರಾಗಿದ್ದಾರೆ.ಅಮೂಲ್ಯ ಪ್ರಾಣಿ-ಪಕ್ಷಿಗಳನ್ನು ಸಂರಕ್ಷಿಸುವಜವಾಬ್ದಾರಿ ಎಲ್ಲರ ಮೇಲಿದೆ.

ಪ್ರಾಣಿ ಪಕ್ಷಿಗಳ ಸಾವಿಗೆಕಾರಣವಾಗುವವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳುವ ಅವಕಾಶ ವಿದೆ. ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಪಕ್ಷಗಳು ಜಮೀನಿಗೆ ಬರದಂತೆ ಬಲೆ ಹಾಕಿ ಪಕ್ಷಿಗಳ ಸಾವಿಗೆ ಯಾರು ಕಾರಣ ರಾಗಿದ್ದಾರೆ ಅವರನ್ನು ಪತ್ತೆ ಹಚ್ಚಿ ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಪರಿಸರದ ನಾಶ ಹಾಗೂ ಸಾವಿರಾರು ಪಕ್ಷಿಗಳ ಸಾವಿಗೆ ಕಾರಣವಾದ ರೈತರಕ್ರಮಕ್ಕೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಒತ್ತಾಯಿಸಿದ್ದಾರೆ.

ಪ್ರಾಣಿ-ಪಕ್ಷಿ ಸಂಕುಲ ಉಳಿಸಿ :

ತುಮಕೂರು ಜಿಲ್ಲೆಯ ಹಣ್ಣಿನ ತೋಟಗಳಲ್ಲಿ ಅಳವಡಿಸಿರುವ ಬಲೆಯಲ್ಲಿ ಸಿಲುಕಿ ಮೃತಪಟ್ಟಿರುವ ಪಕ್ಷಿಗಳ ಸಂಕುಲವನ್ನು ನೋಡಿದರೆ ಮನಃ ಕಲಕುತ್ತದೆ. ಈ ರೀತಿ ಪಕ್ಷಿಗಳ ಅವನತಿಗೆ ಕಾರಣ ರಾಗಿರುವವರು ಯಾರೇ ಆಗಿರಲಿ ಅಂತಹವರಮೇಲೆ ಜಿಲ್ಲಾಧಿಕಾರಿ ಮತ್ತು ಅರಣ್ಯ ಅಧಿಕಾರಿಗಳು ಅಗತ್ಯ ಕಾನೂನು ರೀತಿ ಕ್ರಮಕೈಗೊಂಡುಅಮೂಲ್ಯ ವಾಗಿರುವ ಪ್ರಾಣಿ, ಪಕ್ಷಿಗಳ ಸಂಕುಲವನ್ನು ಉಳಿಸಬೇಕು ಎನ್ನುವುದು ಉದಯವಾಣಿ ಪತ್ರಿಕೆ ಕಾಳಜಿಯಾಗಿದೆ.

ರೈತರು ಪಕ್ಷಿಗಳು ತಮ್ಮ ಜಮೀನಿಗೆ ಬರದಂತೆ ಬಲೆ ಹಾಕುವುದನ್ನುಸಂಪೂರ್ಣ ನಿಷೇಧಿಸಲು ಜಿಲ್ಲಾಧಿಕಾರಿಗಳು ಕಠಿಣಕ್ರಮ ತೆಗೆದುಕೊಳ್ಳಲುಕೃಷಿ ಸಹಾಯಕರಿಗೆಆದೇಶಿಸಬೇಕು. ಅರಣ್ಯಇಲಾಖೆ ಅಂತಹವರ ವಿರುದ್ಧ ವನ್ಯಜೀವಿ ಕಾಯ್ದೆ 1972ರ ಅಡಿಯಲ್ಲಿಕಾನೂನು ಕ್ರಮ ತೆಗೆದುಕೊಂಡು ವಿನಾಶದ ಅಂಚಿನಲ್ಲಿರುವ ಪಕ್ಷಿಗಳನ್ನು ಸಂರಕ್ಷಿಸಬೇಕು. – ಬಿ.ವಿ.ಗುಂಡಪ್ಪ, ಅಧ್ಯಕ್ಷ, ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ

ಯಾವುದೇ ಪ್ರಾಣಿ-ಪಕ್ಷಿಗಳ ಜೀವಕ್ಕೆಹಾನಿಯಾಗುವಂತಿಲ್ಲ. ಆ ರೀತಿ ಬಲೆಗಳನ್ನು ಅಳವಡಿಸಿಪ್ರಾಣಿ-ಪಕ್ಷಗಳ ಸಾವಿಗೆಕಾರಣರಾದವರ ಮೇಲೆ ಮುಲಾಜಿಲ್ಲದೇಪ್ರಕರಣ ದಾಖಲಿಸುತ್ತೇವೆ. ಈ ರೀತಿ ಬಲೆಅಳವಡಿಸಿದ್ದ ಮಧುಗಿರಿಯ ಫಾರ್ಮ್ನಲ್ಲಿಪಕ್ಷಿಗಳು ಸಾವನ್ನಪ್ಪಿದ್ದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ.ಅಂತಹ ಯಾವುದೇ ಪ್ರಕರಣ ಇದ್ದರೂ ಅಂತಹವರ ಮೇಲೆ ಕಾನೂನುರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. – ಎಚ್‌.ಸಿ.ಗಿರೀಶ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ, ತುಮಕೂರು

 

– ಚಿ.ನಿ.ಪುರುಷೋತ್ತಮ್‌.

ಟಾಪ್ ನ್ಯೂಸ್

ಅಡುಗೆ ಅನಿಲ ಸಿಲಿಂಡರ್‌ ದರ 50 ರೂ. ಏರಿಕೆ: 1,055 ರೂ.ಗೆ ತಲುಪಿದ ಎಲ್‌ಪಿಜಿ ದರ!

ಅಡುಗೆ ಅನಿಲ ಸಿಲಿಂಡರ್‌ ದರ 50 ರೂ. ಏರಿಕೆ: 1,055 ರೂ.ಗೆ ತಲುಪಿದ ಎಲ್‌ಪಿಜಿ ದರ!

ಉತ್ತರದಲ್ಲಿ ಮೇಘ ಸ್ಫೋಟ: ಐವರು ಸಾವು

ಉತ್ತರದಲ್ಲಿ ಮೇಘ ಸ್ಫೋಟ: ಐವರು ಸಾವು

ದ.ಕ., ಉಡುಪಿಯಲ್ಲಿ ಇಂದು ರೆಡ್‌ ಅಲರ್ಟ್‌: ಜಿಲ್ಲಾಡಳಿತಗಳಿಂದ ಮುನ್ನೆಚ್ಚರಿಕೆ ಕ್ರಮ

ದ.ಕ., ಉಡುಪಿಯಲ್ಲಿ ಇಂದು ರೆಡ್‌ ಅಲರ್ಟ್‌: ಜಿಲ್ಲಾಡಳಿತಗಳಿಂದ ಮುನ್ನೆಚ್ಚರಿಕೆ ಕ್ರಮ

ಉಪ್ಪಿನಂಗಡಿಯಲ್ಲಿ ನೆರೆ ಭೀತಿ: ಕುಕ್ಕೆ: ಸ್ನಾನಘಟ್ಟ ಮುಳುಗಿ 4 ದಿನ!

ಉಪ್ಪಿನಂಗಡಿಯಲ್ಲಿ ನೆರೆ ಭೀತಿ: ಕುಕ್ಕೆ: ಸ್ನಾನಘಟ್ಟ ಮುಳುಗಿ 4 ದಿನ!

ಕೊಡಗು: ಮುಂದುವರಿದ ಭಾರೀ ಮಳೆ: ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಆರ್‌. ಅಶೋಕ್‌ 

ಕೊಡಗು: ಮುಂದುವರಿದ ಭಾರೀ ಮಳೆ: ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಆರ್‌. ಅಶೋಕ್‌ 

ಉಡುಪಿ ಜಿಲ್ಲೆ : ಮಳೆ ಎದುರಿಸಲು ಸರ್ವ ಸಿದ್ಧತೆ

ಉಡುಪಿ ಜಿಲ್ಲೆ: ಮಳೆ ಎದುರಿಸಲು ಸರ್ವ ಸಿದ್ಧತೆ

ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಕಾಮಗಾರಿ: ಅನುದಾನಕ್ಕೆ ಮನವಿ

ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಕಾಮಗಾರಿ: ಅನುದಾನಕ್ಕೆ ಮನವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳಾ ಸಬಲೀಕರಣವೇ ನಮ್ಮ ಉದ್ದೇಶ : ಡಾ| ವೀರೇಂದ್ರ ಹೆಗ್ಗಡೆ

ಮಹಿಳಾ ಸಬಲೀಕರಣವೇ ನಮ್ಮ ಉದ್ದೇಶ : ಡಾ| ವೀರೇಂದ್ರ ಹೆಗ್ಗಡೆ

ಪಾವಗಡ : ಆಟೋ ರಿಕ್ಷಾ – ಬೊಲೆರೋ ನಡುವೆ ಅಪಘಾತ : ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು

ಪಾವಗಡ : ಆಟೋ ರಿಕ್ಷಾ – ಬೊಲೆರೋ ನಡುವೆ ಅಪಘಾತ : ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು

1-sadd

ಕೊರಟಗೆರೆ: ಬೆಳೆಗಾರರಿಗೆ ಖುಷಿ ನೀಡದ ಹಲಸಿನ ದಿನ

7bike

ಬೈಪಾಸ್ ರಸ್ತೆಯಲ್ಲಿ ಬೈಕ್ ವೀಲಿಂಗ್: ಯುವಕನಿಗೆ 7 ಸಾವಿರ ರೂ. ದಂಡ

tdy-20

ಆರ್ಥಿಕ ಪ್ರಗತಿಗಾಗಿ ಹಲವು ಸೌಲಭ್ಯ

MUST WATCH

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

ಹೊಸ ಸೇರ್ಪಡೆ

ಅಡುಗೆ ಅನಿಲ ಸಿಲಿಂಡರ್‌ ದರ 50 ರೂ. ಏರಿಕೆ: 1,055 ರೂ.ಗೆ ತಲುಪಿದ ಎಲ್‌ಪಿಜಿ ದರ!

ಅಡುಗೆ ಅನಿಲ ಸಿಲಿಂಡರ್‌ ದರ 50 ರೂ. ಏರಿಕೆ: 1,055 ರೂ.ಗೆ ತಲುಪಿದ ಎಲ್‌ಪಿಜಿ ದರ!

ಉತ್ತರದಲ್ಲಿ ಮೇಘ ಸ್ಫೋಟ: ಐವರು ಸಾವು

ಉತ್ತರದಲ್ಲಿ ಮೇಘ ಸ್ಫೋಟ: ಐವರು ಸಾವು

ದ.ಕ., ಉಡುಪಿಯಲ್ಲಿ ಇಂದು ರೆಡ್‌ ಅಲರ್ಟ್‌: ಜಿಲ್ಲಾಡಳಿತಗಳಿಂದ ಮುನ್ನೆಚ್ಚರಿಕೆ ಕ್ರಮ

ದ.ಕ., ಉಡುಪಿಯಲ್ಲಿ ಇಂದು ರೆಡ್‌ ಅಲರ್ಟ್‌: ಜಿಲ್ಲಾಡಳಿತಗಳಿಂದ ಮುನ್ನೆಚ್ಚರಿಕೆ ಕ್ರಮ

ಉಪ್ಪಿನಂಗಡಿಯಲ್ಲಿ ನೆರೆ ಭೀತಿ: ಕುಕ್ಕೆ: ಸ್ನಾನಘಟ್ಟ ಮುಳುಗಿ 4 ದಿನ!

ಉಪ್ಪಿನಂಗಡಿಯಲ್ಲಿ ನೆರೆ ಭೀತಿ: ಕುಕ್ಕೆ: ಸ್ನಾನಘಟ್ಟ ಮುಳುಗಿ 4 ದಿನ!

ಕೊಡಗು: ಮುಂದುವರಿದ ಭಾರೀ ಮಳೆ: ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಆರ್‌. ಅಶೋಕ್‌ 

ಕೊಡಗು: ಮುಂದುವರಿದ ಭಾರೀ ಮಳೆ: ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಆರ್‌. ಅಶೋಕ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.