ಜಾನುವಾರುಗಳಿಗೆ ಮೇವಿಲ್ಲದೇ ಸಂಕಷ್ಟ

Team Udayavani, Sep 20, 2018, 5:25 PM IST

tmk-1.jpg

ತುಮಕೂರು: ಮಳೆ ಹೋಗಿ ಮುಗಿಲು ಸೇರೈತೆ, ಕುಡಿಯಲು ದನ ಕರುಗಳನ್ನು ಮೇಯಿಸಲು ಮೇವೂ ಇಲ್ಲ, ಭಾದ್ರಪದ ಮಾಸ ಕಳೆದು ದಸರಾ ಹಬ್ಬ ಬರುತ್ತಿದ್ದರೂ ಎಲ್ಲಿಯೂ ಹಸಿರು ಹುಲ್ಲು ಕಾಣುತ್ತಿಲ್ಲ. ಬಿತ್ತಿದ ಬೆಳೆ ಮಳೆಯಿಲ್ಲದೆ ಒಣಗುತ್ತಿದೆ. ಸಮರ್ಪಕ ಮಳೆ ಬಾರದೆ ಬಹುತೇಕ ಕಡೆಗಳಲ್ಲಿ ಮಾಡಲಾಗದೆ ಎಲ್ಲೆಡೆಯೂ ಬಂಜರು ಭೂಮಿ ಇದೆ, ಮುಂದೆ ನಮ್ಮ ಜಾನುವಾರುಗಳನ್ನು ಸಾಕೋದಾದ್ರೂ ಹೇಗೆ ಎನ್ನುವುದು ರೈತರ ಪ್ರಶ್ನೆಯಾಗಿದೆ.

ಒಣಗುತ್ತಿರುವ ಬೆಳೆ: ಜಿಲ್ಲೆಯಾದ್ಯಂತ ಆಗಸ್ಟ್‌ ತಿಂಗಳು ಕಳೆದು ಸೆಪ್ಟೆಂಬರ್‌ ತಿಂಗಳು ಕೊನೆಯಾಗುತ್ತಾ ಅಕ್ಟೋಬರ್‌ ತಿಂಗಳು ಬರುತ್ತಿದೆ ಆದರೆ ಆದ ಮಳೆ ಬೀಜ ಬಿತ್ತುವ, ಬೆಳೆ ಬೆಳೆಯುವ ಸಮಯದಲ್ಲಿ ಕೈ ಕೊಟ್ಟಿದೆಈಗಾಗಲೇ ಬರಗಾಲ
ಆರಂಭವಾಗಿದೆ ಬೆಳೆ ಒಣಗುತ್ತಿದೆ. 

 ಜಿಲ್ಲೆಯ ವಿವಿಧ ಕಡೆಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣವಾಗುತ್ತದೆ ಆದರೆ ಮಳೆ ಬೀಳುತ್ತಿಲ್ಲ ಅಲ್ಪ ಸ್ವಲ್ಪ ಮಳೆಯಾದರೆ ದನ ಕರುಗಳಿಗೆ ಮೇವಾಗುತ್ತದೆ ಎಂದು ರೈತ ಮುಗಿಲು ಕಡೆ ನೋಡುತ್ತಾ ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರೂ ಮಳೆ ಹನಿ ಮಾತ್ರ ಬೀಳುತ್ತಿಲ್ಲ.

ದಿನದಿಂದ ದಿನಕ್ಕೆ ಬಿಸಿಲಿನ ಝಳ ತೀವ್ರವಾಗಿ ಉಷ್ಣಾಂಶ ಏರಿಕೆಯಾಗುತ್ತಿರುವಂತೆಯೇ ಜಿಲ್ಲೆಯ ಕೆರೆ ಕಟ್ಟೆಗಳ ಗುಂಡಿಗಳಲ್ಲಿ ನಿಂತಿದ್ದ ನೀರೂ ಬತ್ತಿಹೋಗಿ ಅಂತರ್ಜಲ ಕುಸಿತ ಉಂಟಾಗಿದೆ. ಈ ನಡುವೆ ಜಿಲ್ಲೆಯಲ್ಲಿರುವ ಜಾನುವಾರುಗಳಿಗೆ ಮೇವೂ ಇಲ್ಲದೆ, ಕಡೆಗಳಲ್ಲಿ ಜಾನುವಾರುಗಳನ್ನು ಸಾಕಲಾರದೆ, ಸಂತೆಗಳಲ್ಲಿ ಕಟುಕರಿಗೆ ಮಾರುವುದು ಸಾಮಾನ್ಯವಾಗಿದೆ.
 
ಜಾನುವಾರುಗಳಿಗೆ ಮಾರಕ: ರೈತರ ಬೆನ್ನೆಲು ಬಾಗಿರುವ ದನ ಕರುಗಳನ್ನು ಸಂರಕ್ಷಿಸಬೇಕು ಆದರೆ ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಜಿಲ್ಲೆಯಲ್ಲೂ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಜಾನುವಾರುಗಳ ಕಡಿಮೆಯಾಗುತ್ತಿದೆ. ಮುಂದೆ ಈ ಬರಗಾಲ ಪರಿಸ್ಥಿತಿ ಮುಂದುವರಿದರೆ ಇರುವ ಜಾನುವಾರುಗಳ ಸಂಖ್ಯೆಯೂ ಇನ್ನು ಕಡಿಮೆಯಾಗಲಿದೆ ಎನ್ನುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. 

ಈ ಹಿಂದೆ ನಡೆದಿದ್ದ ಜಾನುವಾರು ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 8,31,187 ಇದ್ದವು ಆದರೆ ಈಗಿನ ಅಂಕಿ ಅಂಶಗಳನ್ನು ಗಮನಿಸಿದರೆ 7,08,375 ಜಾನುವಾರುಗಳು ಮಾತ್ರ ಇವೆ 1,22,812 ಜಾನುವಾರುಗಳು ಕಡಿಮೆಯಾಗಿರುವುದು
ಗೋಚರವಾಗುತ್ತದೆ. ಉಳಿದಂತೆ ಜಿಲ್ಲೆಯಲ್ಲಿ ಕುರಿಗಳು-10,67,719, ಮೇಕೆಗಳು-5,17,761 ಇವೆ ರಾಜ್ಯದಲ್ಲಿ ಕುರಿ ಮೇಕೆ ಸಾಕಾಣಿಕೆಯಲ್ಲಿ ಜಿಲ್ಲೆ ಸ್ಥಾನದಲ್ಲಿದೆ.

ರಾಸುಗಳಿಗೆ ನೀರೊದೆಗಿಸುವುದೇ ಸವಾಲು: ಈ ಜಾನುವಾರುಗಳಿಗೆ ಮೇವು, ನೀರು ಒದಗಿಸುವುದೇ ರೈತರಿಗೆ ಸವಾಲಾಗಿದೆ. ಈ ವರ್ಷ ಸಮರ್ಪಕವಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ, ಜಿವನ ನಡೆಸುವುದೇ ಕಷ್ಟವಾಗಿರುವ ಈ ಸಂದರ್ಭದಲ್ಲಿ ತಾವು ಸಾಕಿರುವ ಜಾನುವಾರುಗಳ ಮಾಡುವುದು ಇನ್ನೂ ಕಷ್ಟವಾಗುತ್ತಿದ್ದು, ಹಲವು ರೈತರು ಚಿ.ನಾ.ಹಳ್ಳಿ ತಾಲೂಕಿನ ಬೋರನಕಣಿವೆ ಸಮೀಪದ ಕಾರೇಹಳ್ಳಿ ಸಂತೆ, ತಿಪಟೂರು ತಾಲೂಕಿನ ಕರಡಾಳುಗಳಲ್ಲಿ ನಡೆಯುವ ಜಾನುವಾರು ಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಸಾಮಾನ್ಯವಾಗುತ್ತಿದೆ.

ಜನರು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಆಹಾರವನ್ನು ತಂದು ಹಸಿವು ನೀಗಿಸಿಕೊಳ್ಳಬಹುದು, ಆದರೆ ಜಾನುವಾರುಗಳಿಗೆ ಇಂದು ಮೇವು, ನೀರು ದೊರಕುವುದು ಕಷ್ಟವಾಗಿದೆ, ಸೆಪ್ಟೆಂಬರ್‌ ತಿಂಗಳು ಕೊನೆಯಾಗತ್ತಿದ್ದರೂ ಮಳೆ ಬಂದಿಲ್ಲ ಹಸಿರಾಗಿದ್ದ ಹುಲ್ಲೆಲ್ಲಾ ಒಣಗುತ್ತಿದೆ ಮಳೆ ಬರದಿದ್ದರೆ ರೈತರ ಆತಂಕವಿದೆ.

21 ವಾರಕ್ಕೆ ಆಗುವಷ್ಟು ಮಾತ್ರ ಮೇವು: ಜಿಲ್ಲೆಯಲ್ಲಿ ಮಳೆ ಬರದೆ ಬೆಳೆ ಒಣಗುತ್ತಿದೆ ಒಂದು ದಿನಕ್ಕೆ ಸರ್ಕಾರದ ನಿಯಮದ ಪ್ರಕಾರ ಎತ್ತು ಅಥವಾ ಎಮ್ಮೆಗೆ ಕನಿಷ್ಠ 5 ಕೇಜಿ ಮೇವು ನೀಡಬೇಕು ಈಗಿರುವ ಒಂದು ದಿನಕ್ಕೆ 3,542 ಮೆಟ್ರಿಕ್‌ ಟನ್‌ ಮೇವು ಬೇಕು. ಜಿಲ್ಲೆಯಲ್ಲಿ 5,24,748 ಮೆಟ್ರಿಕ್‌ಟನ್‌ ಮೇವು ರೈತರ ಬಳಿ ಸಂಗ್ರಹಣೆಯಲ್ಲಿದೆ ಇದು 21 ವಾರಗಳ ಕಾಲ ಮಾತ್ರ ಬರಲಿದೆ. ಆ ನಂತರ ಮೇವಿನ ಸಮಸ್ಯೆ ಉಂಟಾಗಲಿದೆ ಎನ್ನುತ್ತಾರೆ ಪಶು ಇಲಾಖೆ ಉಪನಿರ್ದೇಶಕ ಡಾ. ಪ್ರಕಾಶ್‌. ಜಿಲ್ಲೆಯಲ್ಲಿ ಇರುವ ಜಾನುವಾರುಗಳಿಗೆ ಮೇವಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಬರದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೇವಿನ ಬೀಜಗಳನ್ನು ರೈತರಿಗೆ ನೀಡಿ ಮೇವು ಬೆಳೆಯಲು ಪ್ರರೇಪಿಸಬೇಕು. ಬರ ಪರಿಸ್ಥಿತಿಯಲ್ಲಿ ಜಾನುವಾರುಗಳ ಮೇವು ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ.
 ಅನೀಸ್‌ ಕಣ್ಮಣಿ ಜಾಯ್‌ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ.
 
ಜಿಲ್ಲೆಯಲ್ಲಿ ಕಳೆದ ಬಾರಿಯೂ ಸಮರ್ಪಕ ರೀತಿಯಲ್ಲಿ ಮಳೆ ಬಂದಿಲ್ಲ. ಬಂದ ಮಳೆಯೂ ಬೆಳೆಯಾಗುವ ಸಮಯದಲ್ಲಿ
ಕೈಕೊಟ್ಟಿತ್ತು. ದನಕರು ಕಟ್ಟಿರುವ ರೈತರು ಮೇವಿಗಾಗಿ ಪರಿತಪಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ 21 ವಾರ ಮೇವು ಬರುತ್ತದೆ ಎಂದು ಹೇಳುತ್ತಾರೆ. ಎಲ್ಲಿದೆ ಮೇವು ಸರ್ಕಾರ ಈ ಕೂಡಲೇ ಜಿಲ್ಲೆಯ ಕಡೆ ಗಮನಹರಿಸಬೇಕು ಜಾನುವಾರು ಜನರ ರಕ್ಷಣೆಗೆ ನಿಲ್ಲಬೇಕು. ಈಗ ಮಳೆ ಬಂದರೆ ಮೇವು ಬಿಟ್ಟರೆ ಬೇರೆನೂ ಬೆಳೆಯಲು ಸಾಧ್ಯವಿಲ್ಲ. ಮೇವಿನ ಬೀಜ ನೀಡಿ ರೈತರಿಗೆ ಪ್ರೋತ್ಸಾಹಕವಾಗಿ ಹಣ ನೀಡಿ ಮೇವು ಬೆಳೆಸಲು ಉತ್ತೇಜನ ನೀಡಲಿ. 
 ಬಿ.ಎನ್‌. ಲೋಕೇಶ್‌ ಅಧ್ಯಕ್ಷರು ಜಿಲ್ಲಾ ಕೃಷಿಕ ಸಮಾಜ. 

 ಚಿ.ನಿ. ಪುರುಷೋತ್ತಮ್‌

ಟಾಪ್ ನ್ಯೂಸ್

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.