ಎತ್ತಿನಹೊಳೆ: ಹೋರಾಟ ತೀವ್ರಗೊಳಿಸಲು ಸಂಘಟನೆಗಳ ನಿರ್ಧಾರ

ಕೊನೆಹಳ್ಳಿಯಿಂದ ಕೆ.ಬಿ.ಕ್ರಾಸ್‌ವರೆಗೆ ಕಾಲ್ನಡಿಗೆ ಜಾಥಾ, ಬೃಹತ್‌ ಸಮಾವೇಶ ನಡೆಸಲು ತೀರ್ಮಾನ

Team Udayavani, Jun 26, 2019, 1:23 PM IST

tk-tdy-2..

ತಿಪಟೂರು ತಾಲೂಕಿಗೆ ಎತ್ತಿನಹೊಳೆ ಯೋಜನೆಯಲ್ಲಿ ನ್ಯಾಯ ಕೋರಿ ಹೋರಾಟ ಸಂಘ ಟಿಸಲು ವಿವಿಧ ಸಂಘಟನೆಗಳ ಹಾಗೂ ಮುಖಂಡರ ಸಭೆ ನಡೆಯಿತು.

ತಿಪಟೂರು:ಎತ್ತಿನಹೊಳೆ ಯೋಜನೆಯಲ್ಲಿ ತಾಲೂಕಿಗೆ ನೀರು ಮೀಸಲಿಡಲು ಆಗ್ರಹಿಸಿ ಹಾಗೂ ಭೂ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಹೋರಾಟ ತೀವ್ರಗೊಳಿಸಲು ರೈತ ಮತ್ತು ಜನಪರ ಸಂಘಟನೆಗಳು ನಿರ್ಧರಿಸಿವೆ.

ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರೈತ-ಕೃಷಿ ಕಾರ್ಮಿಕರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಎಪಿಎಂಸಿಯ ರೈತ ಭವನದಲ್ಲಿ ನಡೆದ ಸಭೆಯಲ್ಲಿ ಹೋರಾಟದ ನಿರ್ಣಯ ಕೈಗೊಳ್ಳಲಾಯಿತು.

ನೀರಿನ ಸೌಲಭ್ಯ ಸಿಗುತ್ತಿಲ್ಲ: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ತುಮಕೂರು ಜಿಲ್ಲೆಯಲ್ಲಿ ಕಾಮಗಾರಿ ಆರಂಭಕ್ಕೆ ಪ್ರಾಥಮಿಕ ಹಂತದಲ್ಲಿ ನೋಟಿಸ್‌ ಜಾರಿ ಹಾಗೂ ಸರ್ವೆ ಕಾರ್ಯ ನಡೆ ಯುತ್ತಿದೆ. ಆದರೆ ಭೂಮಿ ಕಳೆದುಕೊಳ್ಳುವ ರೈತರ ಅಹವಾಲನ್ನು ಸರ್ಕಾರ ನಿರ್ಲಕ್ಷಿಸಿದೆ. ಎತ್ತಿನಹೊಳೆ ಮುಖ್ಯ ಕಾಲುವೆ ಹಾದು ಹೋಗುತ್ತಿದ್ದರೂ ತೀವ್ರ ಬರ ಪ್ರದೇಶದ ತಿಪಟೂರಿಗೆ ಯೋಜನೆಯಲ್ಲಿ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂದು ಮುಖಂಡರು ಆರೋಪಿಸಿದರು.

ಸೂಕ್ತವಾಗಿ ಸ್ಪಂದಿಸದ ಜಿಲ್ಲಾಡಳಿತ: ಎತ್ತಿನ ಹೊಳೆ ಯೋಜನೆಯಲ್ಲಿ ತಾಲೂಕಿಗೆ ಅಗತ್ಯ ಹಂಚಿಕೆ ಆಗಬೇಕು. ಇಲ್ಲಿನ ಕರೆಗಳನ್ನು ತುಂಬಿಸಬೇಕು. ಯೋಜನೆಯ ಸಂತ್ರಸ್ತ ರೈತರ ಭೂಮಿ, ಮನೆ, ನಿವೇಶನಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಈ ಹಿಂದೆ ಬೃಹತ್‌ ಪ್ರತಿಭಟನೆ ನಡೆಸಿದ್ದರೂ ಜಿಲ್ಲಾ ಡಳಿತ ಸ್ಪಂದಿಸಿಲ್ಲವೆಂದು ದೂರಿದರು.

ಕಾಲ್ನಡಿಗೆ ಜಾಥಾ: ಹಾಗಾಗಿ ಹೋರಾಟ ತೀರ್ವ ಗೊಳಿಸಲು ಸಭೆ ಒಮ್ಮತದ ತೀರ್ಮಾನ ಕೈಗೊಂಡಿತು. ಹೋರಾಟದ ಭಾಗವಾಗಿ ಪ್ರತಿ ಗ್ರಾಮಗಳಲ್ಲೂ ಹೋರಾಟ ಸಮಿತಿಗಳ ರಚನೆ, ಪಂಚಾಯಿತಿವಾರು ಗ್ರಾಮಸಭೆ ನಡೆಸಿ ಜನರನ್ನು ಜಾಗೃತಗೊಳಿಸುವುದು. ಕೊನೆಹಳ್ಳಿಯಿಂದ ಕೆ.ಬಿ. ಕ್ರಾಸ್‌ವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಬೃಹತ್‌ ಸಮಾವೇಶ ನಡೆಸಲು ನಿರ್ಧರಿಸಲಾಯಿತು.

ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ದೇವರಾಜ್‌, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಹಸಿರು ಸೇನೆ ತಾಲೂಕು ಅಧ್ಯಕ್ಷ ತಿಮ್ಲಾಪುರ ದೇವ ರಾಜ್‌, ರೈತ ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಆನಂದ, ಸಂಚಾಲಕ ಭೈರನಾಯಕನ ಹಳ್ಳಿ ಲೋಕೇಶ್‌, ಯೋಜನಾ ಸಂತ್ರಸ್ತರ ಸಮಿತಿ ಮನೋಹರ್‌ ಪಾಟೀಲ್, ಸೌಹಾರ್ದ ವೇದಿಕೆಯ ಅಲ್ಲಾ ಬಕಾಶ್‌, ಜನ ಸ್ಪಂದನಾ ಟ್ರಸ್ಟ್‌ ಅಧ್ಯಕ್ಷ ಸಿಬಿ ಶಶಿಧರ್‌, ಹೋರಾಟಗಾರರಾದ ವಿಜಯ ಕುಮಾರ್‌, ಸಿದ್ದು, ಕೋದಂಡರಾಮಯ್ಯ, ಚಿಕ್ಕ ಬಿದರೆ ರಾಜಶೇಖರಪ್ಪ, ತಿಮ್ಲಾಪುರ ಭೈರೇಶ್‌, ಬೊಮ್ಲಾಪುರ ದಕ್ಷಿಣಮೂರ್ತಿ, ಉಜ್ಜಜ್ಜಿ ರಾಜಣ್ಣ, ನೀಲಕಂಠ ಸ್ವಾಮಿ ಸೇರಿದಂತೆ ನಾಗತಿಹಳ್ಳಿ, ಮಾದಿಹಳ್ಳಿ, ಕಲ್ಲೇಗೌಡನ ಪಾಳ್ಯ, ಭೈರನಾಯಕನ ಹಳ್ಳಿ, ಹಳೇಪಾಳ್ಯ, ಕಂಚೇಘಟ್ಟ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ವಾರಾಂತ್ಯ: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ಟ್ರಾಫಿಕ್‌ ಜಾಮ್‌

ವಾರಾಂತ್ಯ: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ಟ್ರಾಫಿಕ್‌ ಜಾಮ್‌

ಮಲ್ಪೆ: ಬೋಟಿನಿಂದ ಕಾಲುಜಾರಿ ನೀರಿಗೆ ಬಿದ್ದು ಮೀನುಗಾರ ಸಾವು

ಮಲ್ಪೆ: ಬೋಟಿನಿಂದ ಕಾಲುಜಾರಿ ನೀರಿಗೆ ಬಿದ್ದು ಮೀನುಗಾರ ಸಾವು

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಸ್ಫರ್ಧೆ ಖಚಿತ: ಶಿವರಾಮೇ ಗೌಡ

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಸ್ಫರ್ಧೆ ಖಚಿತ: ಶಿವರಾಮೇ ಗೌಡ

ಪ್ರೊ ಕಬಡ್ಡಿ ಸೀಸನ್‌-9 ಆರಂಭ; ಬೆಂಗಳೂರು ಬುಲ್ಸ್‌ , ದಬಾಂಗ್‌ ಡೆಲ್ಲಿ ಗೆಲುವಿನ ಆರಂಭ

ಪ್ರೊ ಕಬಡ್ಡಿ ಸೀಸನ್‌-9 ಆರಂಭ; ಬೆಂಗಳೂರು ಬುಲ್ಸ್‌ , ದಬಾಂಗ್‌ ಡೆಲ್ಲಿ ಗೆಲುವಿನ ಆರಂಭ

ಡೇವಿಡ್‌ ವಾರ್ನರ್‌ ಆರ್ಭಟ; ಆಸ್ಟ್ರೇಲಿಯ ಟಿ20 ಸರಣಿ ವಿಜಯ

ಡೇವಿಡ್‌ ವಾರ್ನರ್‌ ಆರ್ಭಟ; ಆಸ್ಟ್ರೇಲಿಯ ಟಿ20 ಸರಣಿ ವಿಜಯ

ಶಶಿ ತರೂರ್‌ ಸಭೆ: ಕೇವಲ 12 ಸದಸ್ಯರು ಹಾಜರು

ಶಶಿ ತರೂರ್‌ ಸಭೆ: ಕೇವಲ 12 ಸದಸ್ಯರು ಹಾಜರು

ಸಿದ್ದರಾಮಯ್ಯ ಅವಧಿಯಲ್ಲಿ ಪಿಎಫ್ಐ ಕೇಸ್‌ ಹಿಂಪಡೆದಿಲ್ಲ: ರಾಮಲಿಂಗಾರೆಡ್ಡಿ

ಸಿದ್ದರಾಮಯ್ಯ ಅವಧಿಯಲ್ಲಿ ಪಿಎಫ್ಐ ಕೇಸ್‌ ಹಿಂಪಡೆದಿಲ್ಲ: ರಾಮಲಿಂಗಾರೆಡ್ಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sd-dada

ಕೊರಟಗೆರೆ : ರಸ್ತೆ ಇಲ್ಲದೆ ಅನಾರೋಗ್ಯ ಪೀಡಿತ ವೃದ್ಧೆಯನ್ನು ಹೊತ್ತೊಯ್ದರು

16

ಮಧುಗಿರಿ: ಜಯಮಂಗಲಿ ನದಿಯಲ್ಲಿ ಮುಳುಗಿ ಬಾಲಕ ಮೃತ್ಯು

26

ಅವಹೇಳನಕಾರಿ ಪೋಸ್ಟ್‌ : ದೂರು

24

ಕುಣಿಗಲ್: ಹಾಳಾದ ರೈಲ್ವೆ ಮೇಲ್ಸೇತುವೆ: ಜೀವ ಭಯದಲ್ಲಿ ಸಂಚಾರ

accident

ಕೊರಟಗೆರೆ : ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವು

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

ವಾರಾಂತ್ಯ: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ಟ್ರಾಫಿಕ್‌ ಜಾಮ್‌

ವಾರಾಂತ್ಯ: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ಟ್ರಾಫಿಕ್‌ ಜಾಮ್‌

ಮಲ್ಪೆ: ಬೋಟಿನಿಂದ ಕಾಲುಜಾರಿ ನೀರಿಗೆ ಬಿದ್ದು ಮೀನುಗಾರ ಸಾವು

ಮಲ್ಪೆ: ಬೋಟಿನಿಂದ ಕಾಲುಜಾರಿ ನೀರಿಗೆ ಬಿದ್ದು ಮೀನುಗಾರ ಸಾವು

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಸ್ಫರ್ಧೆ ಖಚಿತ: ಶಿವರಾಮೇ ಗೌಡ

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಸ್ಫರ್ಧೆ ಖಚಿತ: ಶಿವರಾಮೇ ಗೌಡ

ಪ್ರೊ ಕಬಡ್ಡಿ ಸೀಸನ್‌-9 ಆರಂಭ; ಬೆಂಗಳೂರು ಬುಲ್ಸ್‌ , ದಬಾಂಗ್‌ ಡೆಲ್ಲಿ ಗೆಲುವಿನ ಆರಂಭ

ಪ್ರೊ ಕಬಡ್ಡಿ ಸೀಸನ್‌-9 ಆರಂಭ; ಬೆಂಗಳೂರು ಬುಲ್ಸ್‌ , ದಬಾಂಗ್‌ ಡೆಲ್ಲಿ ಗೆಲುವಿನ ಆರಂಭ

ಡೇವಿಡ್‌ ವಾರ್ನರ್‌ ಆರ್ಭಟ; ಆಸ್ಟ್ರೇಲಿಯ ಟಿ20 ಸರಣಿ ವಿಜಯ

ಡೇವಿಡ್‌ ವಾರ್ನರ್‌ ಆರ್ಭಟ; ಆಸ್ಟ್ರೇಲಿಯ ಟಿ20 ಸರಣಿ ವಿಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.