ರಾಜಕೀಯ ಚಟುವಟಿಕೆ ಬಿರುಸು: ಪಕ್ಷಾಂತರಕ್ಕೆ ತಯಾರಿ!


Team Udayavani, Sep 26, 2022, 5:01 PM IST

tdy-17

ತುಮಕೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಆರೇಳು ತಿಂಗಳು ಇರುವಾಗಲೇ ಮೂರು ಪಕ್ಷಗಳಲ್ಲಿನ ಮುಖಂಡರು ಪಕ್ಷಾಂತರ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಮುಖಂಡರು, ಕಾರ್ಯಕರ್ತರು ಸಮಯ ನೋಡಿ ಪಕ್ಷ ಬದಲಿಸುವ ಆಲೋಚನೆಯಲ್ಲಿದ್ದು, ಕಲ್ಪತರು ನಾಡಿನಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ರಣರಂಗಕ್ಕೆ ಸಿದ್ಧವಾಗುತ್ತಿದೆ. ವಲಸೆ ಪರ್ವ: ಜಿಲ್ಲೆಯಲ್ಲಿಯೂ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಜೆಡಿಎಸ್‌ನ ಇಬ್ಬರು ಪ್ರಭಾವಿ ಮುಖಂಡರು ಜೆಡಿಎಸ್‌ ಪಕ್ಷ ತೊರೆದಿದ್ದಾರೆ, ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸಬರು ರಾಜಕೀಯ ಪ್ರವೇಶಿಸಲು ರಂಗ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆಡಳಿತಾರೂಢ ಬಿಜೆಪಿ, ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಗೆ ವಲಸೆ ಹೋಗಲಾರಂಭಿಸಿದ್ದಾರೆ.

ಕ್ಷೇತ್ರವಾರು ಪ್ರವಾಸ: ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಚುನಾವಣೆ ಎದುರಿಸಲು ಈಗಾಗಲೇ ಸಿದ್ಧತೆ ಆರಂಭಿಸಿರು ವಂತೆಯೇ ಜಿಲ್ಲೆಯಲ್ಲಿ ಇರುವ ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಈಗ ಹಾಲಿ ಇರುವ ಶಾಸಕರು ಮತ್ತೆ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ತಮ್ಮ ಕ್ಷೇತ್ರವಾರು ಪ್ರವಾಸ ಆರಂಭಿಸಿದ್ದಾರೆ. ಅದೇ ರೀತಿ ಕಳೆದ ಚುನಾವಣೆಯಲ್ಲಿ ಪರಾಭವ ಗೊಂಡವರು ಈ ಬಾರಿಯೂ ಅದೃಷ್ಟ ಪರೀಕ್ಷೆ ಮಾಡಿ ಕೊಳ್ಳಲು ಸಂಘಟನೆಯಲ್ಲಿ ತೊಡಗಿದ್ದಾರೆ. ತುಮ ಕೂರು ನಗರ ಕ್ಷೇತ್ರದ ಬಿಜೆಪಿ ಶಾಸಕ ಜಿ.ಬಿ. ಜ್ಯೋತಿಗಣೇಶ್‌, ಗ್ರಾಮಾಂತರದ ಜೆಡಿಎಸ್‌ ಶಾಸಕ ಡಿ.ಸಿ.ಗೌರಿ ಶಂಕರ್‌, ಪಾವಗಡ ಕಾಂಗ್ರೆಸ್‌ ಶಾಸಕ ವೆಂಕಟರಮಣಪ್ಪ, ಮಧುಗಿರಿ ಜೆಡಿಎಸ್‌ ಶಾಸಕ ಎಂ.ವೀರಭದ್ರಯ್ಯ, ಕೊರಟಗೆರೆ ಕಾಂಗ್ರೆಸ್‌ ಶಾಸಕ ಡಾ.ಜಿ.ಪರಮೇಶ್ವರ್‌, ಶಿರಾ ಬಿಜೆಪಿ ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ, ಚಿಕ್ಕನಾಯಕನಹಳ್ಳಿ ಬಿಜೆಪಿ ಶಾಸಕ ಸಚಿವ ಜೆ.ಸಿ.ಮಾಧುಸ್ವಾಮಿ, ತಿಪಟೂರು ಬಿಜೆಪಿ ಶಾಸಕ ಸಚಿವ ಬಿ.ಸಿ.ನಾಗೇಶ್‌, ತುರುವೇಕೆರೆ ಬಿಜೆಪಿ ಶಾಸಕ ಮಸಾಲಾ ಜಯರಾಮ್‌, ಕುಣಿಗಲ್‌ ಕಾಂಗ್ರೆಸ್‌ ಶಾಸಕ ಡಾ.ರಂಗನಾಥ್‌, ಗುಬ್ಬಿ ಕ್ಷೇತ್ರದ ಜೆಡಿಎಸ್‌ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಮತ್ತೆ ತಮ್ಮ ಕ್ಷೇತ್ರವನ್ನು ಭದ್ರ ಮಾಡಿಕೊಳ್ಳಲು ಈಗಾಗಲೇ ಕಾರ್ಯತಂತ್ರ ಆರಂಭಿಸಿದ್ದಾರೆ.

ಪಕ್ಷಾಂತರ ಪರ್ವ ಆರಂಭ: ಪ್ರತಿ ವಿಧಾನಸಭಾ ಚುನಾವಣೆ ವೇಳೆಯಲ್ಲಿ ವಿವಿಧ ಪಕ್ಷಗಳಿಂದ ಪಕ್ಷದ ಮುಖಂಡರು ಪಕ್ಷಾಂತರ ಮಾಡುವುದು ಸಾಮಾನ್ಯ. ಅದರಂತೆ ಇನ್ನು ಚುನಾವಣೆಗೆ ಆರೇಳು ತಿಂಗಳು ಇರುವಾಗಲೇ ಜಿಲ್ಲೆಯಲ್ಲಿ ಒಂದು ಪಕ್ಷದಿಂದ ಮತ್ತೂಂದು ಪಕ್ಷಕ್ಕೆ ಹೋಗುತ್ತಿದ್ದಾರೆ. ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳಿಂದ ಬಿಜೆಪಿಗೆ ಮತ್ತು ಬಿಜೆಪಿಯಿಂದ ಜೆಡಿಎಸ್‌, ಕಾಂಗ್ರೆಸ್‌ಗೆ ಜಿಗಿಯುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಕಾಂತರಾಜ್‌ ಕಣಕ್ಕೆ?: ಜೆಡಿಎಸ್‌ನಿಂದ ಸ್ಪರ್ಧಿಸಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಬೆಮೆಲ್‌ ಕಾಂತ ರಾಜು ಜೆಡಿಎಸ್‌ ತೊರೆದು ಕೈ ಹಿಡಿದು, ತುರುವೇಕೆರೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ.

ಶ್ರೀನಿವಾಸ್‌ ಯಾವ ಪಕ್ಷಕ್ಕೆ?: ಗುಬ್ಬಿ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ಈಗಾಗಲೇ ಜೆಡಿಎಸ್‌ನಿಂದ ದೂರ ಸರಿದಿರುವ ಹಿನ್ನೆಲೆ ಜೆಡಿಎಸ್‌ ಮುಖಂಡರು, ಕಾರ್ಯಕರ್ತರೂ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಮುಂದೆ ತಮ್ಮ ನಾಯಕ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೋ ಆ ಪಕ್ಷಕ್ಕೆ ಹೋಗಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಕಾರ್ಯಕರ್ತರನ್ನು ಕರೆಸಿ ಸಭೆ ಮಾಡಿರುವ ಶಾಸಕ ಶ್ರೀನಿವಾಸ್‌ ಯಾವ ಪಕ್ಷಕ್ಕೆ ಹೋಗುತ್ತೇನೆ ಎನ್ನುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಬೇಕಾಗಿರುವುದು ಮಾತ್ರ ಬಾಕಿ ಇದೆ.

ಜಿಲ್ಲೆಯ ಹಲವು ಮುಖಂಡರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿಯಲು ತಯಾರಿಯಲ್ಲಿ ತೊಡಗಿದ್ದಾರೆ. ಈ ಬಾರಿ ಹಲವು ಹೊಸ ಮುಖಗಳು ರಾಜಕೀಯ ಪ್ರವೇಶಿಸುವುದು ನಿಶ್ಚಿತ ಎನ್ನಲಾಗುತ್ತಿದೆ. ತುಮಕೂರು ನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಇದ್ದರೂ ಆಡಳಿತರೂಢ ಬಿಜೆಪಿಯಲ್ಲಿ ಒಂದು ಗುಂಪಿನಿಂದ ಆಂತರಿಕ ಬೇಗುದಿ ಎದ್ದಿದೆ. ಮಾಜಿ ಸಚಿವ ಸೊಗಡು ಎಸ್‌.ಶಿವಣ್ಣ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.

ಸ್ಪರ್ಧೆಗೆ ಹಲವರು ತಯಾರಿ ಕುಣಿಗಲ್‌ ಹಾಲಿ ಕಾಂಗ್ರೆಸ್‌ ಶಾಸಕ ಡಾ.ರಂಗನಾಥ್‌ ಇದ್ದರೂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಶಿರಾದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರೂ ಸಾಸಲು ಸತೀಶ್‌ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಚಿಕ್ಕನಾಯಕನ ಹಳ್ಳಿಯಲ್ಲಿ ಹಾಲಿ ಸಚಿವ ಜೆ.ಸಿ.ಮಾಧುಸ್ವಾಮಿ ಇದ್ದರೂ ಮಾಜಿ ಶಾಸಕ ಕೆ.ಎಸ್‌.ಕಿರಣ್‌ ಕುಮಾರ್‌ ಬಿಜೆಪಿ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ರೀತಿ ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರದಲ್ಲಿಯೂ ರಾಜಕೀಯ ಚದುರಂಗದಾಟಗಳು ಆರಂಭಗೊಂಡಿವೆ.

ಅಸಮಾಧಾನಿತರು ಪಕ್ಷದಿಂದಪಕ್ಷಕ್ಕೆ ಜಿಗಿತ: ಸಾಧ್ಯತೆ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮೇಲೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರು ಪಕ್ಷಗಳು ಕಣ್ಣಿಟ್ಟಿವೆ. 2023ರ ಚುನಾವಣೆಯಲ್ಲಿ ಮೂರು ಪಕ್ಷಗಳು ಅಧಿಕ ಸ್ಥಾನ ಪಡೆಯಲೇ ಬೇಕು ಎಂದು ರಣತಂತ್ರ ರೂಪಿಸುತ್ತಿವೆ. ಅದಕ್ಕಾಗಿ ಇತರೆ ಪಕ್ಷಗಳಲ್ಲಿ ಅಸಮಾಧಾನ ಹೊಂದಿರುವ ಮುಖಂಡರು ಮತ್ತು ಕಾರ್ಯಕರ್ತರನ್ನು ತಮ್ಮ ಪಕ್ಷದತ್ತ ಸೆಳೆಯಲು ಈಗಿನಿಂದಲೇ ಕಾರ್ಯತಂತ್ರ ಆರಂಭಿಸಿದ್ದಾರೆ.

ಮೂರು ಪಕ್ಷಗಳಲ್ಲಿಯೂ ಅಸಮಾಧಾನಗೊಂಡಿರುವ ಮುಖಂಡರು ಪಕ್ಷದಿಂದ ಪಕ್ಷಕ್ಕೆ ಜಿಗಿಯಲು ಸಜ್ಜಾಗಿದ್ದಾರೆ. ಚುನಾವಣೆ ವೇಳೆಯಲ್ಲಿ ಮತದಾರನನ್ನು ತಲುಪಲು ಸಾಧ್ಯವಿಲ್ಲ ಎಂದು ಈಗಾಗಲೇ ಕೆಲವು ಮುಖಂಡರು ಕ್ಷೇತ್ರ ಪ್ರವಾಸ ಆರಂಭ ಮಾಡಿ ಜನರಿಗೆ ಹತ್ತಿರವಾಗಲು ನಾಯಕರು ತೆರಳುತ್ತಿದ್ದಾರೆ.

 

– ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

ಸಿರಿಧಾನ್ಯ ಯಾವಾಗ, ಎಷ್ಟು ಬೆಳೆಯಬೇಕು?

ಸಿರಿಧಾನ್ಯ ಯಾವಾಗ, ಎಷ್ಟು ಬೆಳೆಯಬೇಕು?

ಛತ್ತೀಸ್‌ಗಢದಲ್ಲೊಬ್ಬ ರಾಬಿನ್‌ಹುಡ್‌ ಕಳ್ಳ.!

ಛತ್ತೀಸ್‌ಗಢದಲ್ಲೊಬ್ಬ ರಾಬಿನ್‌ಹುಡ್‌ ಕಳ್ಳ.!

ಡಿಪಿಡಿಪಿ ನಿಬಂಧನೆಗಳಿಂದ ಸ್ಟಾರ್ಟ್‌ಅಪ್‌ಗಳಿಗೆ ವಿನಾಯಿತಿ?

ಡಿಪಿಡಿಪಿ ನಿಬಂಧನೆಗಳಿಂದ ಸ್ಟಾರ್ಟ್‌ಅಪ್‌ಗಳಿಗೆ ವಿನಾಯಿತಿ?

ಸಿಗದ ಚಿರತೆ; ತಪ್ಪದ ಆತಂಕ

ಸಿಗದ ಚಿರತೆ; ತಪ್ಪದ ಆತಂಕ

1

ಸೋಮವಾರದ ರಾಶಿ ಫಲ; ವಿದ್ಯಾರ್ಥಿಗಳಿಗೆ, ಉದ್ಯೋಗಸ್ತರಿಗೆ ಉತ್ತಮ ಫ‌ಲಿತಾಂಶ ಸಿಗುವ ಸಮಯ

Kharge

ಕೆಲಸ ಮಾಡಿ; ಇಲ್ಲವೇ ಹುದ್ದೆ ತೊರೆಯಿರಿ: ಮುಖಂಡರಿಗೆ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಸ್ಪಷ್ಟ ಮಾತು

ಎಂಟು ವರ್ಷಗಳಲ್ಲಿ ದೇಗುಲಕ್ಕೆ 400 ಮೆಟ್ಟಿಲು ನಿರ್ಮಿಸಿದ ಸಾಹಸಿ.!

ಎಂಟು ವರ್ಷಗಳಲ್ಲಿ ದೇಗುಲಕ್ಕೆ 400 ಮೆಟ್ಟಿಲು ನಿರ್ಮಿಸಿದ ಸಾಹಸಿ.!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adasdasd

ರೌಡಿಶೀಟರ್ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ

1-asdadadad

ಪರಮೇಶ್ವರ್ ರನ್ನು ಅಧ್ಯಕ್ಷರಾಗಿದ್ದಾಗಲೇ ಸಿಎಂ ಮಾಡಲಿಲ್ಲ ಈಗ ಮಾಡುತ್ತಾರಾ?: ಹೆಚ್ ಡಿಕೆ

1-adadad

ಕೊರಟಗೆರೆಯಲ್ಲಿ ಸಿಎಂ ಬೊಮ್ಮಾಯಿ, ಬಿಎಸ್ ವೈ ನೇತೃತ್ವದಲ್ಲಿ ಬೃಹತ್ ಸಮಾವೇಶ

ರಾಜ್ಯದಲ್ಲಿ ಜೆಡಿಎಸ್‌ ಪರ ಅಲೆ, ಬಹುಮತದೊಂದಿಗೆ ಅಧಿಕಾರಕ್ಕೆ:ಎಚ್‌.ಡಿ. ಕುಮಾರಸ್ವಾಮಿ

ರಾಜ್ಯದಲ್ಲಿ ಜೆಡಿಎಸ್‌ ಪರ ಅಲೆ, ಬಹುಮತದೊಂದಿಗೆ ಅಧಿಕಾರಕ್ಕೆ:ಎಚ್‌.ಡಿ. ಕುಮಾರಸ್ವಾಮಿ

ಕೊರಟಗೆರೆ: ಪ್ರೀತಿಗೆ ಅಡ್ಡಿಯಾದ ಗಂಡನನ್ನೇ ಮುಗಿಸಲು 20 ಸಾವಿರ ರೂ. ಸುಪಾರಿ ನೀಡಿದ ಪತ್ನಿ…

ಕೊರಟಗೆರೆ: ಪ್ರೀತಿಗೆ ಅಡ್ಡಿಯಾದ ಗಂಡನನ್ನೇ ಮುಗಿಸಲು 20 ಸಾವಿರ ರೂ. ಸುಪಾರಿ ನೀಡಿದ ಪತ್ನಿ…

MUST WATCH

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

ಹೊಸ ಸೇರ್ಪಡೆ

ಸಿರಿಧಾನ್ಯ ಯಾವಾಗ, ಎಷ್ಟು ಬೆಳೆಯಬೇಕು?

ಸಿರಿಧಾನ್ಯ ಯಾವಾಗ, ಎಷ್ಟು ಬೆಳೆಯಬೇಕು?

ಛತ್ತೀಸ್‌ಗಢದಲ್ಲೊಬ್ಬ ರಾಬಿನ್‌ಹುಡ್‌ ಕಳ್ಳ.!

ಛತ್ತೀಸ್‌ಗಢದಲ್ಲೊಬ್ಬ ರಾಬಿನ್‌ಹುಡ್‌ ಕಳ್ಳ.!

ಡಿಪಿಡಿಪಿ ನಿಬಂಧನೆಗಳಿಂದ ಸ್ಟಾರ್ಟ್‌ಅಪ್‌ಗಳಿಗೆ ವಿನಾಯಿತಿ?

ಡಿಪಿಡಿಪಿ ನಿಬಂಧನೆಗಳಿಂದ ಸ್ಟಾರ್ಟ್‌ಅಪ್‌ಗಳಿಗೆ ವಿನಾಯಿತಿ?

ಸಿಗದ ಚಿರತೆ; ತಪ್ಪದ ಆತಂಕ

ಸಿಗದ ಚಿರತೆ; ತಪ್ಪದ ಆತಂಕ

1

ಸೋಮವಾರದ ರಾಶಿ ಫಲ; ವಿದ್ಯಾರ್ಥಿಗಳಿಗೆ, ಉದ್ಯೋಗಸ್ತರಿಗೆ ಉತ್ತಮ ಫ‌ಲಿತಾಂಶ ಸಿಗುವ ಸಮಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.