ನೀರಾವರಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ

ಮಾಜಿ ಪ್ರಧಾನಿಯಿಂದ ನಮ್ಮ ಜಿಲ್ಲೆಗೆ ಅನ್ಯಾಯ • ಮತದಾರರ ಋಣ ಎಂದೂ ಮರೆಯಲ್ಲ: ಜಿ.ಎಸ್‌.ಬಸವರಾಜ್‌

Team Udayavani, May 26, 2019, 3:23 PM IST

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಐದನೇ ಬಾರಿ ಸಂಸತ್‌ಗೆ ಪ್ರವೇಶ ಮಾಡುತ್ತಿರುವ ಸಂಸದ ಜಿ.ಎಸ್‌.ಬಸವರಾಜ್‌ ಉದಯವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ನಾನು ಈ ಹಿಂದಿ ನಿಂದಲೂ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಜನ ನರೇಂದ್ರ ಮೋದಿಯವರ ಆಡಳಿತ ಮೆಚ್ಚಿ ನನನ್ನು 17ನೇ ಲೋಕಸಭೆಗೆ ಆಯ್ಕೆ ಮಾಡಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ಬಗ್ಗೆ ನನಗೆ ತುಂಬಾ ಅಭಿಮಾನ ಮತ್ತು ಗೌರವವಿದೆ. ಅವರು ಹಿರಿಯರು ಅವರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಚುನಾವಣೆ ಅಂದರೆ, ಸೋಲು- ಗೆಲುವು ಇರುತ್ತದೆ. ಆದರೆ, ನನ್ನ ಗೆಲುವಿಗೆ ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು ಜೊತೆಗೆ ಕೆಲವು ಮುಖಂಡರು ಇತರೆ ಮತದಾರರು ಪಕ್ಷಾತೀತವಾಗಿ ಮತಚಲಾಯಿಸಿದ್ದಾರೆ. ಅವರ ಈ ಸೇವೆಯನ್ನು ನಾನು ಎಂದೂ ಮರೆಯುವುದಿಲ್ಲ.

ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಲು ಮೋದಿ ಅಲೆಯೇ ಕಾರಣವೇ?:

ನರೇಂದ್ರ ಮೋದಿ ಅಲೆ ಎಲ್ಲಾ ಕಡೆ ಇದೆ. ಅದರಂತೆ ಇಲ್ಲಿಯೂ ಇತ್ತು. ಎಲ್ಲರೂ ಪಕ್ಷಾತೀತವಾಗಿ ನನಗೆ ಮತ ನೀಡಿದ್ದಾರೆ. ಅದರಿಂದ ಗೆಲುವಿಗೆ ಹೆಚ್ಚು ನನಗೆ ಸಹಕಾರಿಯಾಗಿತು.

•ದೇವೇಗೌಡರ ಸೋಲಿಗೆ ಕಾರಣವೇನು? ಅವರ ಸೋಲಿಗೆ ನೀವು ಏನು ಹೇಳುತ್ತೀರಾ?:

ನಾನು ದೇವೇಗೌಡರ ಬಗ್ಗೆ ಏನೂ ಮಾತನಾಡುವುದಿಲ್ಲ. ಅವರು ಹಿರಿಯರಿದ್ದಾರೆ. ಅವರ ಬಗ್ಗೆ ನನಗೆ ಗೌರವ ವಿದೆ. ಅವರು ಮಣ್ಣಿನ ಮಗ, ಅವರು ಹಾಸನಕ್ಕೆ ಒಳ್ಳೆ ಕೆಲಸ ಮಾಡಿದ್ದಾರೆ. ಆದರೆ, ಅವರು ನಮ್ಮ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ. ನಮಗೆ ಹೇಮಾವತಿ ನೀರು ಕೊಡಲಿಲ್ಲ. ಇದನ್ನು ಜಿಲ್ಲೆಯ ಜನ ಮರೆತ್ತಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ.

•ಜನ ನಿಮ್ಮನ್ನು ಗೆಲ್ಲಿಸಿದ್ದಾರೆ. ನೀವು ಜಿಲ್ಲೆಯ ಅಭಿವೃದ್ಧಿಗೆ ಮೊದಲ ಆದ್ಯತೆ ಏನು?:

ನನ್ನ ಮೊದಲ ಆದ್ಯತೆ ಜಿಲ್ಲೆಗೆ ಕುಡಿಯಲು ನೀರು ಬೇಕು. ನೀರಾವರಿ ಯೋಜನೆ ಅನುಷ್ಠಾನ ಮಾಡು ವುದು ಜೊತೆಗೆ ಮೋದಿಯವರ ಕಾರ್ಯಕ್ರಮಗಳನ್ನು ಜಿಲ್ಲೆಯ ಜನರಿಗೆ ಹೆಚ್ಚು ತಲುಪಿಸುವುದು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವುದು.

•ನಿಮ್ಮ ಗೆಲುವಿಗೆ ಜೆಡಿಎಸ್‌ ಶಾಸಕರು ಇರುವ ಕ್ಷೇತ್ರಗಳಲ್ಲಿ ಹೆಚ್ಚು ಮತಗಳು ಬಂದಿವೆ. ಇದಕ್ಕೆ ಏನಂತ್ತೀರಾ?:

ಜಿಲ್ಲೆಯು ಸದಾ ಬರಗಾಲದಲ್ಲಿ ಇದೆ. ಮಳೆ ಸರಿಯಾಗಿ ಬರುತ್ತಿಲ್ಲ. ನೀರಿನ ಸಮಸ್ಯೆ ಇದೆ. ನಾನು ಮೊದಲಿನಿಂದಲೂ ನೀರಿಗಾಗಿ ಹೋರಾಟ ಮಾಡು ತ್ತಿದ್ದೇನೆ. ಜೊತೆಗೆ ಮಧುಗಿರಿಯಲ್ಲಿ ನೀರಿನ ಸಮಸ್ಯ ಇದೆ. ಇದನ್ನೆಲ್ಲಾ ನೋಡಿ, ಮತದಾರರು ಪಕ್ಷಾತೀತ ವಾಗಿ ನನಗೆ ಮತ ನೀಡಿದ್ದಾರೆ. ಜೊತೆಗೆ ನರೇಂದ್ರ ಮೋದಿಯವರ ಜನಪರ ಯೋಜನೆಗಳನ್ನು ನೋಡಿದ್ದಾರೆ, ನಮ್ಮ ಪಕ್ಷದ ಕಾರ್ಯಕರ್ತರು ಬಹಳ ನಿಷ್ಠೆಯಿಂದ ಒಗ್ಗಾಟ್ಟಾಗಿ ಕೆಲಸ ಮಾಡಿದ್ದು, ನನ್ನ ಗೆಲುವಿಗೆ ಪ್ರಮುಖ ಕಾರಣ.

•ನಿಮ್ಮ ಶಾಸಕರು ಇರುವ ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೆರೆ ಕ್ಷೇತ್ರದಲ್ಲಿ ಲೀಡ್‌ ಬರದ ಬಗ್ಗೆ ಏನು ಹೇಳುತ್ತೀರಾ?:

ನಮ್ಮ ಶಾಸಕರು ಇರುವ ಕ್ಷೇತ್ರಗಳಲ್ಲಿ ಈ ಹಿಂದಿಗಿಂತ ಉತ್ತಮ ಮತಗಳು ಬಂದಿವೆ.

ಅಲ್ಲಿ ಎರಡೂ ಪಕ್ಷಗಳ ಮತಗಳು ಒಂದಾದವು ಹಾಗೇ ನೋಡಿದರೆ, ನಮ್ಮ ಮತ ಅಲ್ಲಿ ಇನ್ನೂ ಕಡಿಮೆ ಯಾಗಬೇಕಾಗಿತ್ತು. ಆದರೆ, ನಮ್ಮ ಮತಗಳು ಹೆಚ್ಚಿವೆ. ಅಲ್ಲಿಯೂ ನಮ್ಮ ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ. ಆದ್ದರಿಂದ ಗೆಲುವಿಗೆ ಕಾರಣವಾಗಿದೆ.

•ಮತದಾರರು, ಜನರಿಗೆ ನೀವು ಏನು ಹೇಳುತ್ತೀರಾ?:

ಕ್ಷೇತ್ರದ ಮತದಾರರು ನನಗೆ ಮತನೀಡಿ, ಗೆಲುವಿಗೆ ಕಾರಣರಾಗಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ. ನಮ್ಮ ಪಕ್ಷದ ಎಲ್ಲಾ ಮುಖಂಡರಿಗೆ ಕಾರ್ಯಕರ್ತರಿಗೆ ಮತ್ತು ನನಗೆ ಪ್ರತ್ಯೇಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೆ ಅಭಿನಂದಿಸುತ್ತೇನೆ.

● ಚಿ.ನಿ.ಪುರುಷೋತ್ತಮ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ತಿಪಟೂರು: ಸರ್ಕಾರ ಪೊಲೀಸರಿಗೆ ಉತ್ತಮ ಸೌಲಭ್ಯ ನೀಡಲು ತಿಪಟೂರು ನಗರದ ಪೊಲೀಸ್‌ ಕ್ವಾಟ್ರಸ್‌ ಬಳಿ ಸುಮಾರು 3.60 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಹಾಗೂ ಹೇಮಾವತಿ ವಸತಿ...

  • ತುಮಕೂರು: ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದಲ್ಲಿ ತೊಂದರೆ ಉಂಟಾಗುತ್ತಿದೆ ಎಂದು ಜಾಗೃತಿ ಮೂಡಿಸುತ್ತಿದ್ದರೂ ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿದಂತಿಲ್ಲ....

  • ಬರಗೂರು: ಅವೈಜ್ಞಾನಿಕವಾಗಿ ಕೋಡಿ ನಿರ್ಮಾಣ ಮಾಡಿದ ಪರಿಣಾಮ ಕೆರೆ ಏರಿಯಲ್ಲಿ 2 ಕಡೆ ಬಿರುಕು ಬಿದ್ದು ನೀರು ವ್ಯರ್ಥವಾಗುತ್ತಿದ್ದು, ಸಣ್ಣ ನೀರಾವರಿ ಇಲಾಖೆ ಬೇಜವಾಬ್ದಾರಿ...

  • ಶಿರಾ: ಬಯಲು ಮುಕ್ತ ಶೌಚಾಲಯ, ಸ್ವಚ್ಚತೆ ಹಾಗೂ ಪಾರದರ್ಶಕ ಆಡಳಿತ ನೀಡಿದ ಹಿನ್ನೆಲೆ ಯಲ್ಲಿ ಮಾಗೋಡು ಗ್ರಾಪಂಗೆ 2019ನೇ ಸಾಲಿನ ಗಾಂಧಿ ಗ್ರಾಮ ಪ್ರಶಸ್ತಿ ಲಭಿಸಿದೆ. 9...

  • ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಅಕ್ರಮವಾಗಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದವರಿಗೆ ಸ್ವಯಂ ಪ್ರೇರಿತವಾಗಿ ಆಹಾರ ಇಲಾಖೆಗೆ ಹಿಂದಿರುಗಿಸಲು ಸೆ. 30 ಕೊನೆಯ ದಿನ...

ಹೊಸ ಸೇರ್ಪಡೆ