ಹುಟ್ಟೂರಿಗೆ ನಾಲ್ಕು ಬಾರಿ ಮಾತ್ರ ಭೇಟಿ

Team Udayavani, Jan 22, 2019, 12:55 AM IST

ಮಾಗಡಿ: ಸಿದ್ಧಗಂಗೆಯ ಸಿದ್ಧಿಪುರುಷ ದೀಕ್ಷೆ ಪಡೆದ ನಂತರ ಕೇವಲ ನಾಲ್ಕು ಬಾರಿ ಮಾತ್ರ ತಮ್ಮ ಹುಟ್ಟೂರಿಗೆ ಭೇಟಿ ನೀಡಿದ್ದರು. ಅದರಲ್ಲೂ ಒಮ್ಮೆ ವಿ.ಸೋಮಣ್ಣ ಸಚಿವರಾಗಿದ್ದಾಗ ವೀರಾಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಿದ್ದರು.

ಆ ವೇಳೆ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು. ಭೇಟಿ ನೀಡುವ ವೇಳೆ ಅವರ ಸಹೋದರರು ಮನೆ ಮುಂದೆ ಚಪ್ಪರ ಹಾಕಿ ಶ್ರೀಗಳ ಪಾದಪೂಜೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಗ್ರಾಮಕ್ಕೆ ಭೇಟಿ ನೀಡಿದ ಶ್ರೀಗಳು ಮನೆಯೊಳಗೆ ಕರೆದರೂ ಒಳಗಡೆ ಹೋಗಲಿಲ್ಲ. ಮನೆಯ ಹೊರಗಡೆಯೇ ಕುಳಿತು ಪಾದಪೂಜೆ ಸ್ವೀಕರಿಸಿ ವೇದಿಕೆಗೆ ತೆರಳಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವೇದಿಕೆಯಲ್ಲಿ ಧ್ಯಾನ ಮಂದಿರ, ಗ್ರಂಥಾಲಯ, ಅಧ್ಯಯನ ಕೇಂದ್ರ ಸ್ಥಾಪಿಸುವ ಮೂಲಕ ವೀರಾಪುರವನ್ನು ವಿಶ್ವಕ್ಕೆ ಪರಿಚಯಿಸುತ್ತೇವೆ ಎಂದ ಗಣ್ಯರು ತಮ್ಮಭರವಸೆಯನ್ನು ಮರೆತಿದ್ದಾರೆ ಎಂದು ಗ್ರಾಮಸ್ಥರು ನೋವನ್ನು ತೋಡಿಕೊಂಡರು.

ವೀರಾಪುರದಲ್ಲಿ ಆವರಿಸಿದೆ ಮೌನ : ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ಮಾಗಡಿಯ ವೀರಾಪುರದ ಜನರಲ್ಲಿ ಮೌನ ಆವರಿಸಿದೆ. ಗ್ರಾಮದ ಭಕ್ತರು ಸಾರ್ವಜನಿಕ ಸ್ಥಳಗಳು ಮತ್ತು ಮನೆಗಳಲ್ಲಿಯೇ ಶ್ರೀಗಳ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು.

ಸಿದ್ಧಗಂಗೆಯ ದಿವ್ಯಬೆಳಕು ನಂದಿತು ಎಂಬ ಸುದ್ದಿ ತಿಳಿಯುತ್ತಿದ್ದಂತೆ ಶೋಕ ಸಾಗರದಲ್ಲಿ ಜನರು ಶ್ರೀಗಳ ಅಂತಿಮ ದರ್ಶನಕ್ಕಾಗಿ ಸಿದ್ಧಗಂಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶ್ರೀಗಳು ಮನುಕುಲಕ್ಕೆ ನಡೆದಾಡುವ ದೇವರಾಗಿದ್ದರು.

ಅವರ ಶಿವೈಕ್ಯ ಎಲ್ಲರಲ್ಲೂ ನೋವನ್ನುಂಟು ಮಾಡಿದೆ. ಶ್ರೀ ಶಿವಕುಮಾರ ಸ್ವಾಮೀಜಿ ಮತ್ತೆ ವೀರಾಪುರದಲ್ಲೇ ಹುಟ್ಟಿ ಬರಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ