Udayavni Special

ಪದೇ ಪದೆ ರಸ್ತೆ ಅಗೆಯವುದಕ್ಕೆ ಬೀಳಲಿದೆ ಬ್ರೇಕ್‌

ಟೆಂಡರ್‌ ಶ್ಯೂರ್‌ ಯೋಜನೆ ವಿನ್ಯಾಸಗೊಳಿಸಿದ ಸ್ಮಾರ್ಟ್‌ಸಿಟಿ ಲಿಮಿಟೆಡ್‌ • ಸ್ಮಾರ್ಟ್‌ ಆಗಲಿವೆ ರಸ್ತೆ

Team Udayavani, Aug 30, 2019, 1:05 PM IST

tk-tdy-1

ತುಮಕೂರು ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್‌ ರಸ್ತೆಗಳಿಗೆ ಟೆಂಡರ್‌ ಶ್ಯೂರ್‌ ಟಚ್ ನೀಡುವ ಹೊಸ ಯೋಜನೆ ವಿನ್ಯಾಸ.

ತುಮಕೂರು: ಶೈಕ್ಷಣಿಕ ನಗರ ತುಮಕೂರು ಈಗ ಸ್ಮಾರ್ಟ್‌ಸಿಟಿಯಾಗಿ ಬದಲಾಗುತ್ತಿದ್ದು, ಪದೇ ಪದೆ ವಿವಿಧ ಕಾಮಗಾರಿಗಳಿಗೆ ರಸ್ತೆ ಅಗೆಯದಂತೆ ಟೆಂಡರ್‌ ಶ್ಯೂರ್‌ (ಸ್ಮಾರ್ಟ್‌ ರೋಡ್‌) ಮಾಡುವ ಯೋಜನೆ ಯನ್ನು ಸ್ಮಾರ್ಟ್‌ಸಿಟಿ ಲಿಮಿಟೆಡ್‌ ವಿನ್ಯಾಸಗೊಳಿಸಿದೆ.

ಒಟ್ಟು 14.75 ಕಿ.ಮೀ. ಉದ್ದವಿದ್ದು, 150.69 ಕೋಟಿ ರೂ. ವೆಚ್ಚದ 5 ಪ್ಯಾಕೇಜ್‌ಗಳಲ್ಲಿ ಕಾಮ ಗಾರಿಗಳಿಗೆ ಚಾಲನೆ ದೊರೆತಿದೆ. ಕೇಬಲ್, ನೀರಿನ ಪೈಪ್‌, ಗ್ಯಾಸ್‌ ಸಂಪರ್ಕ, ಮತ್ತಿತರ ತಾಂತ್ರಿಕ ಕಾರಣ ದಿಂದ ಹಲವು ಬಾರಿ ರಸ್ತೆ ಅಗೆಯುವುದು, ತೇಪೆ ಹಾಕಲಾಗುತ್ತಿದೆ. ಹೀಗಾಗಿ ಕಾಮಗಾರಿ ನಡೆಯು ವಾಗಲೇ ಭವಿಷ್ಯದ ಬಗ್ಗೆ ಯೋಚಿಸಿ ಪೂರಕ ವ್ಯವಸ್ಥೆ ಒದಗಿಸಬೇಕು.

ರಸ್ತೆ ಪದೇಪದೆ ಅಗೆಯಲು ಅವಕಾಶ ಇಲ್ಲದಂತೆ ಅಂತಾರಾಷ್ಟ್ರೀಯ ಗುಣ ಮಟ್ಟದಲ್ಲಿ ವಿನ್ಯಾಸ ಗೊಳಿಸುವ ಯೋಜನೆಯೇ ಟೆಂಡರ್‌ ಶ್ಯೂರ್‌. ಜಗತ್ತಿನ ಬಹುತೇಕ ಪ್ರಮುಖ ನಗರಗಳ ರಸ್ತೆಗಳು ಇದನ್ನು ಅಳವಡಿಸಿಕೊಂಡಿದೆ. ಸ್ಮಾರ್ಟ್‌ಸಿಟಿ ಲಿಮಿ ಟೆಡ್‌ನಿಂದ ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ನಗರದ ವಿವಿಧೆಡೆ ಕೈಗೆತ್ತಿ ಕೊಂಡಿರುವ 17 ಸ್ಮಾರ್ಟ್‌ ರಸ್ತೆಗಳನ್ನು ಈ ವಿನ್ಯಾಸದಲ್ಲಿ ನಿರ್ಮಿಸ ಲಾಗುವುದು. ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಅಧ್ಯಕ್ಷೆ ಡಾ. ಶಾಲಿನಿ ರಜನೀಶ್‌ ಮಾರ್ಗದರ್ಶನದಲ್ಲಿ ಐಪಿಇ ಗ್ಲೋಬಲ್ ಲಿಮಿಟೆಡ್‌ನ‌ ತಜ್ಞರು ಯೋಜನೆ ಸಿದ್ಧಪಡಿಸಿದ್ದಾರೆ.

ಮಹಾನಗರ ಪಾಲಿಕೆ, ಬೆಸ್ಕಾಂ, ಜಲಮಂಡಳಿ, ಪೊಲೀಸ್‌ ಇಲಾಖೆಗಳು ಸೇರಿ ಎಲ್ಲ ನಾಗರಿಕ ಸೇವಾ ಸಂಸ್ಥೆಗಳ ಸಮನ್ವಯತೆ ಹಾಗೂ ಸೂಕ್ತ ಮಾರ್ಗ ದರ್ಶನವಿಲ್ಲದೆ ಅಗೆಯುವುದನ್ನು ತಡೆಗಟ್ಟಿ ಪರಿಕಲ್ಪಿತ ರೂಪದಲ್ಲಿ ಸುಂದರವಾಗಿ ನಿರ್ಮಿಸುವುದು ಉದ್ದೇಶವಾಗಿದೆ.

ಏನೇನಿರಲಿದೆ?: ಪಾದಚಾರಿಗಳಿಗೆ ಸಮರ್ಪಕ ಫ‌ುಟ್ಪಾತ್‌ ಸೌಲಭ್ಯ, ಸೈಕಲ್ಗಳಿಗೆ ಪ್ರತ್ಯೇಕ ಮಾರ್ಗ, ದೊಡ್ಡ ವಾಹನ, ಮಧ್ಯಮ ಗಾತ್ರದ ವಾಹನ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಲೇನ್‌, ಮಾರ್ಗಮಧ್ಯ ವಾಹನಗಳು ರಸ್ತೆಗೆ ನುಗ್ಗದಂತೆ ತಡೆ ನಿರ್ಮಾಣ, ಇ-ಶೌಚಗೃಹ, ಸ್ಮಾರ್ಟ್‌ ಬಳಸುವ ಸೈಕಲ್ ಮತ್ತು ಇ-ಆಟೋ ನಿಲುಗಡೆ, ಕುಡಿಯುವ ನೀರಿನ ಘಟಕ, ಎಟಿಎಂ, ಸೆನ್ಸಾರ್‌ ಆಧಾರಿತ ಡಸ್ಟ್‌ಬಿನ್‌ ಮೊದಲಾದ ವಿಶೇಷತೆ ಇರಲಿದೆ.

ಯುಟಿಲಿಟಿ ಡಕ್ಟ್: ಎಲ್ಲ ಸೇವಾ ಸಂಸ್ಥೆ ಗಳನ್ನೊಳಗೊಂಡ ಏಕಗವಾಕ್ಷಿ ವ್ಯವಸ್ಥೆಯಡಿ ನಾಗರಿಕ ಸೌಲಭ್ಯ ಒದಗಿಸಲು ಕುಡಿಯುವ ನೀರಿನ ಕೊಳವೆ, ಒಳಚರಂಡಿ ಮಾರ್ಗ, ಬೆಸ್ಕಾಂ ಸಂಪರ್ಕ ಜಾಲ, ಆಪ್ಟಿಕಲ್ ಫೈಬರ್‌ ಕೇಬಲ್, ಬೀದಿ ದೀಪ, ಸಿಗ್ನಲ್ ದೀಪ, ಸಿಸಿ ಟಿ.ವಿ. ಕೇಬಲ್, ಗ್ಯಾಸ್‌ ಸಂಪರ್ಕ ಜಾಲ ಈ ಎಲ್ಲ ಸೌಲಭ್ಯಗಳಿಗೂ ರಸ್ತೆ ಬದಿಯಲ್ಲಿ ಯುಟಿಲಿಟಿ ಡಕ್ಟ್ (ಸೇವಾ ಸಂಪರ್ಕ ಜಾಲದ ನೆಲದಡಿ ಮಾರ್ಗ)ವ್ಯವಸ್ಥೆ ಕಲ್ಪಿಸುವ ಮಹತ್ವದ ಯೋಜನೆ ಇದಾಗಿದೆ. ಇದರಿಂದ ದುರಸ್ತಿ ಇದ್ದರೂ ರಸ್ತೆ ಅಗೆಯುವ ಪ್ರಮೇಯವೇ ಬರುವುದಿಲ್ಲ. ಸಮಸ್ಯೆ ಇದ್ದಲ್ಲಿ ಡಕ್ಟ್ ತೆರೆದು ದುರಸ್ತಿ ಕೈಗೊಳ್ಳಬಹುದು. ಈ ಸಂಪರ್ಕ ಜಾಲಗಳಿಗೆ ಒಂದರಿಂದ ಮತ್ತೂಂದಕ್ಕೆ ತೊಂದರೆ ಯಾಗದಂತೆ ಸಂಪರ್ಕ ಕಲ್ಪಿಸಲಾಗುತ್ತದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

IPL

IPL 2020 : ಪಂಜಾಬ್ VS ಕೋಲ್ಕತಾ; ರಾಹುಲ್ ಪಡೆಗೆ 150 ರನ್ ಗೆಲುವಿನ ಗುರಿ

PTI23-04-2020_000083B

ದಾವಣಗೆರೆ: 124 ಜನರಲ್ಲಿ ಕೋವಿಡ್ ದೃಢ, ಸೋಂಕಿನಿಂದ ಒಬ್ಬರು ಸಾವು

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ

ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ

ಮಕ್ಕಳ ಕೈಗೆ ಮೊಬೈಲ್‌: ಚಟವಾಗದಿರಲು ಏನು ಮಾಡಬೇಕು?

ಮಕ್ಕಳ ಕೈಗೆ ಮೊಬೈಲ್‌: ಚಟವಾಗದಿರಲು ಏನು ಮಾಡಬೇಕು?

ಸಾವರ್ಕರ್‌ಗೆ ಏಕೆ ಇದುವರೆಗೆ ಭಾರತ ರತ್ನ ನೀಡಿಲ್ಲ? ಬಿಜೆಪಿಗೆ ಶಿವಸೇನೆ ಪ್ರಶ್ನೆ

ಸಾವರ್ಕರ್‌ಗೆ ಏಕೆ ಇದುವರೆಗೆ ಭಾರತ ರತ್ನ ನೀಡಿಲ್ಲ? ಬಿಜೆಪಿಗೆ ಶಿವಸೇನೆ ಪ್ರಶ್ನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

t-ktdy-1

ಶಿರಾದಲ್ಲಿ ರಂಗೇರಿದ ಜೆಡಿಎಸ್‌ ಪ್ರಚಾರ

tk-tdy-2

ಕೊಟ್ಟ ಭರವಸೆ ಈಡೇರಿಸಿದ ಸರ್ಕಾರ ನಮ್ಮದು

TK-TDY-1

ಕಾರ್ಯಕರ್ತರ ಉತ್ಸಾಹದಿಂದಲೇ ಗೆಲುವು

tk-tdy-2

ಕೇಂದ್ರದ ತಪು ನಿರ್ಧಾರದಿಂದ ಆರ್ಥಿಕ ಪರಿಸ್ಥಿತಿ ಕುಸಿತ

tk-tdy-1

ಅನುಮತಿ ಇಲ್ಲದೆ ಕೊಳವೆಬಾವಿ ಕೊರೆದರೆ ಶಿಕ್ಷೆ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

IPL

IPL 2020 : ಪಂಜಾಬ್ VS ಕೋಲ್ಕತಾ; ರಾಹುಲ್ ಪಡೆಗೆ 150 ರನ್ ಗೆಲುವಿನ ಗುರಿ

PTI23-04-2020_000083B

ದಾವಣಗೆರೆ: 124 ಜನರಲ್ಲಿ ಕೋವಿಡ್ ದೃಢ, ಸೋಂಕಿನಿಂದ ಒಬ್ಬರು ಸಾವು

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ

ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.