ನಗರಸಭೆ ನಿರ್ಲಕ್ಷ್ಯ: ಅಪಘಾತಗಳಿಗೆ ಆಹ್ವಾನ  

ಫ‌ುತ್‌ಪಾತ್‌ನಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ: ಮೌನ ವಹಿಸಿರುವ ಪೊಲೀಸ್‌ ಇಲಾಖೆ ! ಸಮಸ್ಯೆ ಬಗೆಹರಿಸಲು ಒತ್ತಾಯ

Team Udayavani, Feb 12, 2021, 5:49 PM IST

Tipaturu footpath problem

ತಿಪಟೂರು: ನಗರದಲ್ಲಿ ಹಾದು ಹೋಗುವ ಎನ್‌.ಎಚ್‌. 206ರ ಹಾಸನ ಸರ್ಕಲ್‌, ಐ.ಬಿ. ಸರ್ಕಲ್‌, ಕೋಡಿಸರ್ಕಲ್‌, ಈಡೇನಹಳ್ಳಿ ಸರ್ಕಲ್‌ವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಇರುವ ಪಾದಚಾರಿ ಸ್ಥಳಗಳಲ್ಲಿ ಫ‌ುಟ್‌ಪಾತ್‌ ವ್ಯಾಪಾರಿಗಳು, ವಾಹನಗಳ ಬೇಕಾಬಿಟ್ಟಿ ನಿಲುಗಡೆಯಿಂದ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದ್ದರೂ, ಪೊಲೀಸ್‌ ಇಲಾಖೆ ಹಾಗೂ ನಗರಸಭಾಡಳಿತ ನಿರ್ಲಕ್ಷ  ವಹಿಸಿರುವುದ ರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.

ತಿಪಟೂರು ಪ್ರಸಿದ್ಧ ಕೊಬ್ಬರಿ ಮಾರುಕಟ್ಟೆ ಹೊಂದಿರುವುದರ ಜೊತೆಗೆ ದೊಡ್ಡ ಶೈಕ್ಷಣಿಕ ನಗರಿಯಾಗಿದ್ದು ಹತ್ತಾರು ಶಾಲಾ ಕಾಲೇಜುಗಳಿದ್ದು ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅಲ್ಲದೆ ಕೊಬ್ಬರಿ ಮಾರುಕಟ್ಟೆಗೂ ನಿತ್ಯ ಸಾವಿರಾರು ರೈತರು ಬರುತ್ತಿದ್ದು ನಗರದಲ್ಲಿ ಹಾಯು ಹೋಗುವ ಎನ್‌. ಎಚ್‌. 206 ರಸ್ತೆಯಲ್ಲಿ ವಿಪರೀತ ವಾಹನಗಳು ಓಡಾಡುತ್ತಿದ್ದು ಪಾದಚಾರಿಗಳಿಗೆ ನಿಗದಿತ ರಸ್ತೆಗಳಿಲ್ಲ. ಬಿ.ಎಚ್‌. ರಸ್ತೆ ಹಾಗೂ ಪ್ರಮುಖ ರಸ್ತೆ ಹಾಗೂ ಸರ್ಕಲ್‌ಗ‌ಳಲ್ಲಂತೂ ವ್ಯಾಪಾರಿಗಳ, ಆಟೋಗಳ ಪಾಲಾಗಿವೆ.

ಅಪಘಾತಗಳಿಗೆ ಆಹ್ವಾನ: ಬಟ್ಟೆ, ಹಣ್ಣು, ತರಕಾರಿ, ಈರುಳ್ಳಿ, ಟೀ-ಕಾಫಿ ಹೋಟೆಲ್‌ಗ‌ಳು, ಪಾನಿಪೂರಿ, ಗೋಬಿ ಸ್ಟಾಲ್‌ಗ‌ಳವರು ಸೇರಿದಂತೆ ಲಗೇಜ್‌ ಆಟೋ, ಮಿನಿ ಟೆಂಪೋದಂತಹ ವಾಹನಗಳನ್ನು ರಸ್ತೆ  ಅಂಚು ಗಳಿಗೆ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ಜನರ ಗುಂಪು ಸಹ ವಿಪರೀತವಾಗಿ ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆ. ತಮ್ಮ ದಿನಿತ್ಯದ ಕೆಲಸ ಕಾರ್ಯಗಳು, ಖರೀದಿಗಳಿಗೆ ಬರುವ ಜನರಂತೂ ತಮ್ಮ ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳವಿಲ್ಲದೆ ಅವರೂ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಭಯದಲ್ಲೇ ಪಾದಚಾರಿಗಳ ಸಂಚಾರ: ಹಾಸನ ಸರ್ಕಲ್‌, ಐಬಿ ಸರ್ಕಲ್‌, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಗುರುದರ್ಶನ್‌ ಸರ್ಕಲ್‌, ಸರ್ಕಾರಿ ಬಾಲಕಿಯರ ಕಾಲೇಜು, ನಗರದ ಮಧ್ಯ ಭಾಗದಲ್ಲಿರುವ ಮೋರ್‌, ಎಸ್‌ಬಿಐ ಬ್ಯಾಂಕ್‌, ಎಚ್‌. ಡಿಎಫ್ಸಿ, ಗುರುಕುಲ ಸೂಪರ್‌ ಮಾರ್ಕೆಟ್‌, ಜಯದೇವ ಕಾಂಪ್ಲೆಕ್ಸ್‌, ಕೆನರಾ ಬ್ಯಾಂಕ್‌, ನಗರಸಭಾ ಸರ್ಕಲ್‌, ರೈಲ್ವೆ ಸ್ಟೇಷನ್‌ ರಸ್ತೆ, ಅರಳೀಕಟ್ಟೆ ಸರ್ಕಲ್‌ ಸೇರಿದಂತೆ ದೊಡ್ಡಪೇಟೆ ರಸ್ತೆ, ಕೋಡಿಸರ್ಕಲ್‌ಗ‌ಳಲ್ಲಿ ವಿಪರೀತ ಜನರು ಓಡಾಡಬೇಕಿದ್ದು ಜೀವ ಕೈಲಿಡಿದು ಓಡಾಡಬೇಕಾದ ಭಯದ ಅನುಭವ. ಪೊಲೀಸರ ಭಯವಿಲ್ಲದೆ ನಗರದ ದ್ವಿಪಥ ರಸ್ತೆಗಳಲ್ಲಿ ಯಮವೇಗದಲ್ಲಿ ಚಲಿಸುವ  ವಾಹನಗಳು ಪಾದ ಚಾರಿಗಳ ಎದೆಯ ಮೇಲೆ ಹೋಗಿಬಿಡುವಂತಾಗು ವುದರಿಂದ ಅಪಘಾತಗಳ ಭಯದಲ್ಲೇ ಓಡಾಡ ಬೇಕಾಗಿದೆ.

ಈ ಎಲ್ಲಾ ಅವ್ಯಸ್ಥೆಗಳ ಬಗ್ಗೆ ಸಾರ್ವಜನಿಕರು, ಸಂಘ – ಸಂಸ್ಥೆಗಳವರು ನಗರಸಭೆ, ಪೊಲೀಸ್‌ ಹಾಗೂ ಎ.ಆರ್‌.ಟಿ.ಓ ಅಧಿಕಾರಿಗಳಿಗೆ ತಿಳಿಸಿದರೂ, ಸ್ವತಃ ಈ ಎಲ್ಲಾ ಇಲಾಖಾಧಿಕಾರಿಗಳಿಗೆ ನಿತ್ಯವೂ ಈ ಸಮಸ್ಯೆಗಳ ಬಗ್ಗೆ ಅರಿವಿದ್ದರೂ ಅಪಘಾತಗಳ ತಡೆಯುವಲ್ಲಿ ಹಾಗೂ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲು ಯಾವುದೇ ಕ್ರಮ ಜರುಗಿಸಿ ಪಾದಚಾರಿಗಳಿಗೆ, ಸಾರ್ವಜನಿಕರಿಗೆ ನೆರವಾಗುತ್ತಿಲ್ಲ.

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.