ಮಳೆಕೊಯ್ಲು ಅಳವಡಿಸಿ ಮಾದರಿಯಾದ ಮರ್ಣೆ ಗ್ರಾ.ಪಂ.

Team Udayavani, Aug 23, 2019, 5:49 AM IST

ಅಜೆಕಾರು: ಬೇಸಗೆಯಲ್ಲಿ ಕಾಡುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಳೆಕೊಯ್ಲು ಕಾರ್ಯಕ್ರಮಕ್ಕೆ ಮರ್ಣೆ ಪಂಚಾಯತ್‌ ಆಡಳಿತವು ಹೆಚ್ಚಿನ ಒತ್ತು ನೀಡಿದೆ.

ಉದಯವಾಣಿಯ ಮಳೆಕೊಯ್ಲು ಕಾರ್ಯಕ್ರಮದಿಂದ ಪ್ರೇರಣೆಗೊಂಡ ಪಂಚಾಯತ್‌ ಆಡಳಿತ ಪಂಚಾಯತ್‌ ಕಚೇರಿ ಸಮೀಪದ ತೆರೆದ ಬಾವಿ ಬಳಿ ಮಳೆಕೊಯ್ಲು ನಡೆಸಿದೆ. ಪಂಚಾಯತ್‌ ವ್ಯಾಪ್ತಿಯಲ್ಲಿ ಮಳೆ ಕೊಯ್ಲು ಜಾಗೃತಿ ಮೂಡಿ ಸುವ ನಿಟ್ಟಿನಲ್ಲಿ ಅಧಿಕಾರಿ ಗಳು ಹಾಗೂ ಜನಪ್ರತಿನಿಧಿ ಗಳು ಪಂಚಾಯತ್‌ನಲ್ಲಿಯೇ ಮಳೆ ಕೊಯ್ಲು ಮಾಡಿ ಮಾದರಿಯಾ ಗಿದ್ದಾರೆ. ಪಂಚಾಯತ್‌ ಕಚೇರಿ 2 ಕಟ್ಟಡ ಗಳನ್ನು ಹೊಂದಿದ್ದು ಈ ಎರಡೂ ಕಟ್ಟಡಗಳ ನೀರನ್ನು ಗುಂಡಿಗೆ ಹಾಯಿಸಿ ಅಲ್ಲಿಂದ ಶುದ್ಧೀಕರಣಕ್ಕೆ ಒಳಪಡಿಸಿ ನೇರವಾಗಿ ಪೈಪ್‌ ಮೂಲಕ ಬಾವಿಗೆ ಹರಿಯಬಿಡ ಲಾಗುತ್ತಿದೆ. ಅಲ್ಲದೆ ಪಂಚಾಯತ್‌ ವ್ಯಾಪ್ತಿಯ ಪ್ರತಿ ಯೋರ್ವರೂ ಮಳೆ ಕೊಯ್ಲು ಮಾಡುವಂತೆ ಮನವರಿಕೆ ಮಾಡುವ ಕೆಲಸವನ್ನು ಪಂಚಾಯತ್‌ ಮಾಡುತ್ತಿದೆ. ಈಗಾಗಲೇ ಹೊಸ ಕಟ್ಟಡ ನಿರ್ಮಾಣ ಮಾಡುವವರಿಗೆ ಕಡ್ಡಾಯವಾಗಿ ಮಳೆಕೊಯ್ಲು ಮಾಡಲು ಸೂಚಿಸಲಾಗುತ್ತಿದೆ.

ಜಲಕ್ಷಾಮ ತಡೆಯುವ ಉದ್ದೇಶ
ಪಂಚಾಯತ್‌ ಕಚೇರಿ ಬಳಿ ಪಂಚಾಯತ್‌ ಕಟ್ಟಡದ ಹಾಗೂ ವಾಣಿಜ್ಯ ಕಟ್ಟಡದ ಸಂಪೂರ್ಣ ಮಳೆನೀರನ್ನು ಮಳೆಕೊಯ್ಲು ಮಾಡುವ ಸಲುವಾಗಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪಂಚಾಯತ್‌ ಪಕ್ಕದ ಬಾವಿಗೆ ಜಲಮರುಪೂರಣ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಜಲಕ್ಷಾಮ ತಡೆಯುವ ಉದ್ದೇಶದಿಂದ ಕಾಮಗಾರಿ ಕೈಗೊಳ್ಳಲಾಗಿದೆ. -ದಿನೇಶ್‌ ಕುಮಾರ್‌, ಅಧ್ಯಕ್ಷರು, ಗ್ರಾ.ಪಂ. ಮರ್ಣೆ

ಹೆಚ್ಚಿನ ಒತ್ತು

ಪಂಚಾಯತ್‌ ಆಡಳಿತವು ಮಳೆಕೊಯ್ಲು ಮಾಡಿರುವುದರಿಂದ ಜನಸಾಮಾನ್ಯರೂ ಸಹ ಹೆಚ್ಚಿನ ಮುತುವರ್ಜಿಯೊಂದಿಗೆ ಜಲಮರುಪೂರಣಕ್ಕೆ ಮುಂದಾಗಲಿದ್ದಾರೆ. ಈ ನಿಟ್ಟಿನಲ್ಲಿ ಮಳೆಕೊಯ್ಲಿಗೆ ಹೆಚ್ಚಿನ ಒತ್ತು ನೀಡಲಾಗಿದೆ. -ತಿಲಕ್‌ರಾಜ್‌, ಪಿಡಿಒ ಮರ್ಣೆ ಗ್ರಾ.ಪಂ.
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ