ಪಾಕ್‌ ದಾಖಲೆ ಮುರಿಯಲು ಮುಂದಾದ ಕಾರ್ಕಳದ ಯುವಕ


Team Udayavani, Apr 6, 2019, 6:15 AM IST

Surendra-Acharya

ಕಾರ್ಕಳ: ಪೆನ್ಸಿಲ್‌ ಮೊನೆ, ಸೋಪು, ಸುಣ್ಣದ ಕಡ್ಡಿಯಲ್ಲಿ ವಿವಿಧ ಬಗೆಯ ಕಲಾಕೃತಿಗಳನ್ನು ರಚಿಸುವ ಮೂಲಕ ಕಾರ್ಕಳದ ಯುವಕನೋರ್ವ ಗಿನ್ನೆಸ್‌ ದಾಖಲೆ ಬರೆಯಲು ಮುಂದಾಗಿದ್ದಾನೆ.

ಈದು ಗ್ರಾಮದ ನೂರಾಳ್‌ಬೆಟ್ಟು ನಿವಾಸಿ, ಕಾರ್ಕಳ ಮೆಸ್ಕಾಂನ ಅರೆಕಾಲಿಕ ನೌಕರ ಸುರೇಂದ್ರ ಆಚಾರ್ಯ ಅವರೇ ದಾಖಲೆ ನಿರ್ಮಿಸಲು ಮುಂದಾಗಿರುವ ಯುವಕ.

ಡಿಪ್ಲೋಮ ಪದವಿ ಪಡೆದಿರುವ ಸುರೇಂದ್ರ ಅವರು ಪೆನ್ಸಿಲ್‌ ಆರ್ಟ್‌ನಲ್ಲಿ ಮದರ್‌ ಥೆರೆಸಾ, ವಿಶ್ವಕಪ್‌ ಟ್ರೋಫಿ, ಬಾಹುಬಲಿ, ವೀಣೆ, ಏಸುಕ್ರಿಸ್ತ, ಕುದುರೆಯ ಪ್ರತಿಮೆ, ಭರತನಾಟ್ಯದ ಭಂಗಿಗಳು, ಗಿಟಾರ್‌, ಮಾನವ ಅಸ್ಥಿಪಂಜರ, ಚೆಂಡೆ, ಧ್ವಜಾಕಟ್ಟೆಗಳು, ಜಲವರ್ಣದಲ್ಲಿ ನೀರೆಯರ ಕ್ರೀಡಾ ದೃಶ್ಯ, ಸಾಕೊಪೋನ್‌, ಜಿಂಕೆ, ಕಾಳಿಂಗನ ಹೆಡೆ ಮೆಟ್ಟಿ ಕುಣಿಯುವ ಕೃಷ್ಣ, ಅಕ್ಕಮಹಾದೇವಿ, ಸತ್ಯ ಸಾಯಿ ಬಾಬಾ, ಬಂದೂಕು, ಕೃಷ್ಣ , ಗಿಳಿಯ ಪಂಜರ, ದೇಶದ ಪ್ರಧಾನಿಯ ಚಿತ್ರಗಳು ಸುರೇಂದ್ರ ಆಚಾರ್ಯ ನಿರ್ಮಿಸಿದ ಕಲಾಕೃತಿಗಳಲ್ಲಿ ಪ್ರಮುಖವಾದವು.

ಸುರೇಂದ್ರದ ಸಾಧನೆಯನ್ನು ಮೆಚ್ಚಿ ಸಾಕಷ್ಟು ಪ್ರಶಸ್ತಿಗಳು ದೊರೆತಿದ್ದು, ಕಲಾಕೃತಿಗಾಗಿ ಗಿನ್ನೆಸ್‌ ದಾಖಲೆ ಬರೆಯುವ ಬಯಕೆ ಅವರದ್ದು. ಈ ಮೂಲಕ ಪಾಕಿಸ್ಥಾನದ ಹೆಸರಲ್ಲಿರುವ ದಾಖಲೆಯನ್ನು ಅಳಿಸಿ, ಭಾರತದ ಹೆಸರಿಗೆ ಬರೆಸುವ ನಿಟ್ಟಿನಲ್ಲಿ ಕಾಯೊìನ್ಮುಖರಾಗಿದ್ದಾರೆ.

ದಾಖಲೆ ಸೇರುವ ಗುರಿ
ಪಾಕಿಸ್ಥಾನದವರು ಪೆನ್ಸಿಲ್‌ ಮೊನೆಯಿಂದ ಸರಪಳಿ ನಿರ್ಮಿಸಿ ಮಾಡಿರುವ ಗಿನ್ನೆಸ್‌ ದಾಖಲೆ ಮುರಿಯಬೇಕೆನ್ನುವ ನಿಟ್ಟಿನಲ್ಲಿ ಕಳೆದ 2 ವರ್ಷಗಳಿಂದ ತಯಾರಿ ನಡೆಸಿರುತ್ತೇನೆ. ಎ. 7ರಂದು ಕಾರ್ಕಳ ಅನಂತಶಯನದ ರೋಟರಿ ಬಾಲಭವನದಲ್ಲಿ ಪೆನ್ಸಿಲ್‌ ಲೆಡ್‌ ನಿಂದ ನಿರಂತರವಾಗಿ ಸರಪಳಿ ರಚಿಸಿ, ದಾಖಲೆ ನಿರ್ಮಾಣ ಮಾಡಬೇಕೆಂದಿದ್ದೇನೆ.
-ಸುರೇಂದ್ರ ಆಚಾರ್ಯ,
ನೂರಾಳ್‌ಬೆಟ್ಟು

ಟಾಪ್ ನ್ಯೂಸ್

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 632 ಅಂಕ ಜಿಗಿತ, ಲಾಭ ಗಳಿಸಿದ ಷೇರು ಯಾವುದು…

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 632 ಅಂಕ ಜಿಗಿತ, ಮೇ.27ರಂದು ಲಾಭ ಗಳಿಸಿದ ಷೇರು ಯಾವುದು…

ಲಡಾಖ್ ದುರಂತ: ಸೇನಾ ವಾಹನ ನದಿಗೆ ಉರುಳಿ ಬಿದ್ದು ಏಳು ಮಂದಿ ಯೋಧರು ಹುತಾತ್ಮ

ಲಡಾಖ್ ದುರಂತ: ಸೇನಾ ವಾಹನ ನದಿಗೆ ಉರುಳಿ ಬಿದ್ದು ಏಳು ಮಂದಿ ಯೋಧರು ಹುತಾತ್ಮ

ಮೊದಲ ಹಿಂದಿ ಲೇಖಕಿ: ಗೀತಾಂಜಲಿ ಶ್ರೀಯ “ಟೂಮ್ ಆಫ್ ಸ್ಯಾಂಡ್” ಕಾದಂಬರಿಗೆ ಬೂಕರ್ ಪ್ರಶಸ್ತಿ

ಮೊದಲ ಹಿಂದಿ ಲೇಖಕಿ: ಗೀತಾಂಜಲಿ ಶ್ರೀಯ “ಟೂಮ್ ಆಫ್ ಸ್ಯಾಂಡ್” ಕಾದಂಬರಿಗೆ ಬೂಕರ್ ಪ್ರಶಸ್ತಿ

ಮೊಮ್ಮಗಳಿಗೆ ಲೈಂಗಿಕ ಕಿರುಕುಳ; ಸೊಸೆ ಆರೋಪ- ಗುಂಡು ಹೊಡೆದುಕೊಂಡು ಮಾಜಿ ಸಚಿವ ಆತ್ಮಹತ್ಯೆ

ಮೊಮ್ಮಗಳಿಗೆ ಲೈಂಗಿಕ ಕಿರುಕುಳ; ಸೊಸೆ ಆರೋಪ- ಗುಂಡು ಹೊಡೆದುಕೊಂಡು ಮಾಜಿ ಸಚಿವ ಆತ್ಮಹತ್ಯೆ

ವಿಧಾನ ಪರಿಷತ್ ಚುನಾವಣೆ: ಏಳೂ ಅಭ್ಯರ್ಥಿಗಳು ಅವಿರೋಧ ಆಯ್ಕೆ

ವಿಧಾನ ಪರಿಷತ್ ಚುನಾವಣೆ: ಏಳೂ ಅಭ್ಯರ್ಥಿಗಳು ಅವಿರೋಧ ಆಯ್ಕೆ

19car

ನದಿಯಲ್ಲಿ ಬಿಎಂಡಬ್ಲ್ಯೂ ಕಾರು ಮುಳುಗಿಸಿದ ಮಾಲೀಕ: ವಿಚಾರಣೆಯಲ್ಲಿ ಅಚ್ಚರಿ ಮಾಹಿತಿ ಬಯಲು

RR-RCB

ರಾಯಲ್ ಕದನ: ಇಲ್ಲಿದೆ ಬೆಂಗಳೂರು-ರಾಜಸ್ಥಾನ ನಡುವಿನ ಸ್ವಾರಸ್ಯಕರ ಅಂಶಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tat news

ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಉಜ್ವಲ ಭವಿಷ್ಯಕ್ಕಾಗಿ T.A.T

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

Untitled-1

ಪಡುಬಿದ್ರಿ: ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

12kaup

ಆನೆಗುಂದಿ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವದ 12 ನೇ ವರ್ಧಂತಿ ಉತ್ಸವ

dredge

ಮಲ್ಪೆ ಬಂದರಿನಲ್ಲಿ ಹೂಳು: ಡ್ರಜ್ಜಿಂಗ್‌ ಬೇಡಿಕೆಗೆ ಇನ್ನೂ ಸಿಗಲಿಲ್ಲ ಮನ್ನಣೆ

MUST WATCH

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

ಹೊಸ ಸೇರ್ಪಡೆ

25

ಸಂಚಾರ ನಿಯಮ ಉಲ್ಲಂಘನೆ-ದಂಡ ವಸೂಲಿ

25

ಅಪನಂಬಿಕೆ-ಅತಿ ಕಾಳಜಿಯಿಂದ ಸ್ಕಿಜೋಫ್ರೇನಿಯಾ

pdo

ಬಡ್ತಿಗೆ ಒತ್ತಾಯಿಸಿ ಪಿಡಿಒಗಳಿಂದ ಮನವಿ ಸಲ್ಲಿಕೆ

24

ದೌರ್ಜನ್ಯ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 632 ಅಂಕ ಜಿಗಿತ, ಲಾಭ ಗಳಿಸಿದ ಷೇರು ಯಾವುದು…

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 632 ಅಂಕ ಜಿಗಿತ, ಮೇ.27ರಂದು ಲಾಭ ಗಳಿಸಿದ ಷೇರು ಯಾವುದು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.