ಎಚ್1ಎನ್1ಬ್ಯಾಂಕ್ ಅಧಿಕಾರಿ ಸಾವು
Team Udayavani, Feb 12, 2017, 3:45 AM IST
ಪಡುಬಿದ್ರಿ: ಭಾರತ್ ಬ್ಯಾಂಕ್‌ನ ಮೂಲ್ಕಿ ಶಾಖಾ ಪ್ರಬಂಧಕ ಲಕ್ಷ್ಮೀನಾರಾಯಣ ಸಿ. ಸಾಲ್ಯಾನ್ (43) ಎಚ್1 ಎನ್1 ಜ್ವರಬಾಧೆ ಯಿಂದಾಗಿ ಶನಿವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾದರು. ಮೃತರು ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.
10 ದಿನಗಳಿಂದ ಜ್ವರ ಬಾಧೆಗೊಳಗಾಗಿದ್ದ ಅವರನ್ನು ಚಿಕಿತ್ಸೆಗಾಗಿ ಉಡುಪಿ ಬಳಿಧಿಕ ಮಂಗಳೂರಿನ ಆಸ್ಪತ್ರೆಗಳಿಗೆ ಒಯ್ಯಲಾಗಿತ್ತು. ಅಲ್ಲಿ ಜ್ವರ ಉಲ್ಬಣಿಸಿ ಸಾವಿಗೀಡಾದರು.
ಹೆಜಮಾಡಿಯ ಪ್ರಸಿದ್ಧ ಜಾರಂದಾಯ ದೈವಪಾತ್ರಿ ದಿ| ಚೆನ್ನಪ್ಪ ಪೂಜಾರಿಯವರ ಪುತ್ರ ಲಕ್ಷ್ಮೀನಾರಾಯಣ ಸಾಲ್ಯಾನ್ ಅವರು ಭಾರತ್ ಬ್ಯಾಂಕ್‌ನಲ್ಲಿ ಸುಮಾರು 16 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಮುಂಬಯಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಮಂಗಳೂರು, ಉಡುಪಿ ಶಾಖೆಗಳ ಬಳಿಕ ಮೂಲ್ಕಿಯಲ್ಲಿ ಸೇವಾ ನಿರತರಾಗಿದ್ದರು.
ಅಲ್ಪಾವಧಿಯಲ್ಲಿಯೇ ಮೂಲ್ಕಿಯಲ್ಲಿ ಭಾರತ್ ಬ್ಯಾಂಕ್‌ನ ವ್ಯವಹಾರವನ್ನು ಗುರಿ ಮೀರಿದ ಸಾಧನೆಗಳೊಂದಿಗೆ ಉತ್ತುಂಗಕ್ಕೇರಿಸಿದ್ದರು. ಹೆಜಮಾಡಿ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷರಾಗಿದ್ದ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೂ. 1ರಿಂದ ಜು. 31ರ ತನಕ ಯಾಂತ್ರಿಕ ಮೀನುಗಾರಿಕೆ ನಿಷೇಧ
ಕರಾವಳಿಯಲ್ಲಿ ಬಿರುಸಿನ ಮಳೆ ; ಮೇ 20 ಕ್ಕೆ ಆರೆಂಜ್ ಅಲರ್ಟ್: ಹವಾಮಾನ ಇಲಾಖೆಯ ಮುನ್ಸೂಚನೆ
ಭಾರಿ ಮಳೆ ಹಿನ್ನೆಲೆ ಉಡುಪಿ, ಶಿವಮೊಗ್ಗ ಶಾಲೆಗಳಿಗೆ ನಾಳೆ ರಜೆ ಘೋಷಣೆ
ಕಾಪು : ವಿದೇಶದಿಂದ ಬಂದಿದ್ದ ವ್ಯಕ್ತಿ ಬಾವಿಯ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣು
ಉಡುಪಿ: ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗೆ 625 ಅಂಕ