ಸ್ಪರ್ಧಾತ್ಮಕ ಚಿಂತನೆ ಭವಿಷ್ಯಕ್ಕೆ ಬುನಾದಿ: ಭಾಸ್ಕರ ಹಂದೆ

"ಚಿಗುರು ಚಿತ್ರ' ಮಕ್ಕಳ ಫೋಟೋ ಸ್ಪರ್ಧೆ ಬಹುಮಾನ ವಿತರಣೆ

Team Udayavani, Dec 2, 2019, 5:15 AM IST

DSC_3726

ಉಡುಪಿ: ಎಳೆಯ ವಯಸ್ಸಿನಿಂದಲೇ ಸ್ಪರ್ಧಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳುವುದು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುತ್ತದೆ.

ಉದಯವಾಣಿಯ “ಮಕ್ಕಳ ಫೋಟೋ ಸ್ಪರ್ಧೆ’ ಯಂತಹವು ಈ ನಿಟ್ಟಿನಲ್ಲಿ ಸಹಕಾರಿ ಎಂದು ಸಿಂಡಿಕೇಟ್‌ ಬ್ಯಾಂಕ್‌ ವಲಯ ಪ್ರಬಂಧಕ ಭಾಸ್ಕರ ಹಂದೆ ಅವರು ಬಣ್ಣಿಸಿದರು.

“ಉದಯವಾಣಿ’ ವತಿಯಿಂದ ಮಕ್ಕಳ ದಿನಾಚರಣೆ ಸಂಬಂಧ ಏರ್ಪಡಿಸಿದ ಮಕ್ಕಳ ಫೋಟೋ ಸ್ಪರ್ಧೆ “ಚಿಗುರು ಚಿತ್ರ’ ಮತ್ತು ಉದಯವಾಣಿ.ಕಾಮ್‌ ಆಯೋ ಜಿಸಿದ ಮಕ್ಕಳ ಫೋಟೋ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರವಿವಾರ ಮಣಿಪಾಲದ ಮಧುವನ ಸೆರಾಯ್‌ ಹೊಟೇಲ್‌ ಸಭಾಂಗಣದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಸಿಂಡಿಕೇಟ್‌ ಬ್ಯಾಂಕ್‌ ಸ್ಥಾಪಕರಲ್ಲೊಬ್ಬರಾದ ಉಪೇಂದ್ರ ಪೈ ಅವರ ಪುತ್ರ ಸತೀಶ್‌ ಪೈಯವರು “ಉದಯವಾಣಿ’ ಪತ್ರಿಕೆಯನ್ನು ಆರಂಭಿಸಿದ ಕಾರಣ ಎರಡೂ ಸಂಸ್ಥೆಗಳು ಅನ್ಯೋನ್ಯ ಸಂಬಂಧ ಹೊಂದಿವೆ ಮತ್ತು ಈ ಸಂಸ್ಥೆಗಳು ಒಂದೇ ಮರದ ಎರಡು ಚಿಗುರುಗಳು. ಸಿಂಡಿಕೇಟ್‌ ಬ್ಯಾಂಕ್‌ ದೇಶಾದ್ಯಂತ ಶಾಖೆಗಳನ್ನು ಹೊಂದಿ
ದರೆ “ಉದಯವಾಣಿ’ ಕರಾವಳಿ ಮಾತ್ರವಲ್ಲದೆ ರಾಜ್ಯದ ವಿವಿಧೆಡೆ, ವಿದೇಶಗಳಲ್ಲೂ ಓದು ಗರನ್ನು ಹೊಂದಿದೆ ಎಂದರು.

ಯುವಕರು, ಗೃಹಿಣಿಯರು, ಮಕ್ಕಳು ಹೀಗೆ ವಿವಿಧ ವರ್ಗಗಳ ಓದುಗರನ್ನು ಹೆಚ್ಚಿಸಲು ಹಲವು ಉಪಕ್ರಮಗಳನ್ನು “ಉದಯವಾಣಿ’ ಕೈಗೆತ್ತಿಕೊಳ್ಳುತ್ತಿದೆ. ಹಲವು ಸ್ಪರ್ಧೆಗಳನ್ನು ಉದಯವಾಣಿ ನಡೆಸುತ್ತಿದ್ದರೂ ಮಕ್ಕಳ ಫೋಟೋ ಸ್ಪರ್ಧೆಗೆ ಅಗ್ರ ಸ್ಥಾನವಿದೆ. ಇದು 40 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ನಮಗೆ ವಿಜೇತರನ್ನು ಆಯ್ಕೆ ಮಾಡಲು ಆಗದಷ್ಟು ಸಂಖ್ಯೆಯಲ್ಲಿ ಈ ಬಾರಿ ಚಿತ್ರಗಳು ಬಂದಿದ್ದವು ಎಂದು ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಸಿಇಒ ವಿನೋದ ಕುಮಾರ್‌ ಹೇಳಿದರು.

ಈಗ ಬಹುಮಾನ ಪಡೆದ ಮಗು ಮುಂದೆ ಜೀವನದಲ್ಲಿ ಹಲವು ಸ್ಪರ್ಧೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಆ ಮಗುವಿನ ಜೀವನದಲ್ಲಿ “ಉದಯವಾಣಿ’ ಸ್ಪರ್ಧೆಯೇ ಮೊತ್ತ ಮೊದಲಿನದ್ದಾಗಿರುತ್ತದೆ. ಮಗುವಿನ ಜೀವನದಲ್ಲಿ ಉದಯವಾಣಿ ಪ್ರಧಾನ ಪಾತ್ರ ವಹಿಸುತ್ತದೆ. ಸಾಮಾಜಿಕ ಬದ್ಧತೆಗೆ ಅನುಗುಣವಾಗಿ ಉದಯವಾಣಿ ಅನೇಕ ಕಾರ್ಯಕ್ರಮಗಳನ್ನು ನಡೆಸು ತ್ತಿದೆ ಎಂದು ವಿನೋದಕುಮಾರ್‌ ತಿಳಿಸಿದರು.

ನಮ್ಮ ಈ ಸ್ಪರ್ಧೆಗೆ 40 ವರ್ಷಗಳ ಇತಿಹಾಸವಿದೆ. ಈಗಿನ ಸ್ಪರ್ಧಾತ್ಮಕ ಜೀವನದಲ್ಲಿ ಮುನ್ನುಗ್ಗಲು ಮಕ್ಕಳ ಫೋಟೋ ಸ್ಪರ್ಧೆ ಮೂಲಕ ಉದಯವಾಣಿ ಬುನಾದಿ ಹಾಕುತ್ತದೆ ಎಂದು ಸಂಪಾದಕ ಅರವಿಂದ ನಾವಡ ಹೇಳಿದರು.

ಮ್ಯಾಗಜಿನ್‌ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಆನಂದ್‌ ಕೆ. ಸ್ವಾಗತಿಸಿ ಪ್ರಸರಣ ವಿಭಾಗದ ಡಿಜಿಎಂ ಸತೀಶ್‌ ಶೆಣೈ ವಂದಿಸಿದರು. ಸಂಪಾದಕೀಯ
ವಿಭಾಗದ ಪ್ರೀತಿ ಭಟ್‌ ನಿರ್ವಹಿಸಿ ಪೂರ್ಣಿಮಾ ವಿಜೇತರ ಪಟ್ಟಿ ವಾಚಿಸಿದರು. ರಾಧಿಕಾ ಸಹಕರಿಸಿದರು.

ವಿಜೇತರ ಸಂಭ್ರಮ
ಚಿಗುರು ಚಿತ್ರ 2019ರ ಬಹುಮಾನಿತ ಪುಟಾಣಿಗಳು ಹೆತ್ತವರೊಂದಿಗೆ ಸಮಾರಂಭದಲ್ಲಿ ಹಾಜರಿದ್ದು, ಇತರ ಎಳೆಯರ ಜತೆಗೆ ಆಡಿ ಕುಣಿದು ಸಂಭ್ರಮಪಟ್ಟರು. ಪ್ರಥಮ ಸ್ಥಾನ ಪಡೆದ ಕಡಿರುದ್ಯಾವರದ ಶುಭನ್ಯು, ದ್ವಿತೀಯ ಸ್ಥಾನ ಪಡೆದ ಕುಕ್ಕುಂದೂರಿನ ಮೌಲಿಶಾ, ತೃತೀಯ ಸ್ಥಾನಿಗಳಾದ ಸುರತ್ಕಲ್‌ನ ಧ್ವನಿ, ಕುಂದಾಪುರದ ಋತ್ವಿಕಾ, ಬಾಳ್ತಿಲದ ವರುಷ್ಕಾ, ಮಂಗಳೂರಿನ ಶಾರ್ವಿ, ಬಡಗ ಕಡೆಕಾರಿನ ಅಭಿಷೇಕ್‌, ಹೆರ್ಗದ ಸಿದ್ಧಾಂತ್‌ ಸಹಿತ ಸಮಾಧಾನಕರ ಬಹುಮಾನ ಪಡೆದ ಮಕ್ಕಳು ತಮ್ಮ ಹೆತ್ತವರೊಂದಿಗೆ ಸಮಾರಂಭದಲ್ಲಿ ಪಾಲ್ಗೊಂಡು ಸ್ಮರಣೀಯಗೊಳಿಸಿದರು.

ಇದರ ಜತೆಗೆ ಉದಯವಾಣಿಯ ಆನ್‌ಲೈನ್‌ ವಿಭಾಗವೂ ಏರ್ಪಡಿಸಿದ್ದ ಪಬ್ಲಿಕ್‌ ಚಾಯ್ಸ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀಜಾ ಆರ್‌. ಹೆಗ್ಡೆ, ಫ್ಯಾಬ್ರಿಯಾನ ರೈಸಾ ಡಿ’ಸೋಜಾ ಮತ್ತು ಹನ್ವಿಕಾ ಜೆ. ರೈ ಅವರಿಗೂ ಬಹುಮಾನ ವಿತರಿಸಲಾಯಿತು.

ಲಂಡನ್‌ನಲ್ಲೂ ಉದಯವಾಣಿ ಓದುತ್ತಿದ್ದೆ
ನಾನು ಲಂಡನ್‌ನಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಹಿಂದಿನ ದಿನದ ಉದಯವಾಣಿ ಇ – ಪತ್ರಿಕೆಯನ್ನು ಓದುತ್ತಿದ್ದೆ. ಅನಂತರ ಮುಂಬಯಿ ಮೊದಲಾದೆಡೆ ಸೇವೆ ಸಲ್ಲಿಸುವಾಗಲೂ ಉದಯವಾಣಿಯನ್ನು ಓದುತ್ತಿದ್ದೆ. ಬೆಳಗ್ಗಿನ ಚಹಾದೊಂದಿಗೆ ಉದಯವಾಣಿ ಓದು ಕೂಡ ಅಗತ್ಯ ಎಂಬಷ್ಟರ ಮಟ್ಟಿಗೆ ಬೆಳೆದಿದೆ. 40 ವರ್ಷಗಳ ಹಿಂದೆ ಫೋಟೋ ಸ್ಪರ್ಧೆಗೆ 300 ಸ್ಪರ್ಧಾಳುಗಳಿದ್ದರೆ ಈಗ ಸ್ಪರ್ಧಾಳುಗಳ ಸಂಖ್ಯೆ 15,000ಕ್ಕೆ ಏರಿರುವುದು ಶ್ಲಾಘನೀಯ. ಮಾದರಿ ಪತ್ರಿಕೆಯಾಗಿ ಉದಯವಾಣಿ ಮುಂದುವರಿಯಲಿ.
– ಭಾಸ್ಕರ ಹಂದೆ

ನಾವು ಗ್ರಾಮೀಣ ಭಾಗದವರು. ಹೀಗಾಗಿ ನನಗೆ ಬಹುಮಾನ ಬರುತ್ತದೆಂಬ ವಿಶ್ವಾಸವೂ ಇರಲಿಲ್ಲ. ಮೊದಲು ಆಸಕ್ತಿ ಇಲ್ಲದಿದ್ದರೂ ಬೇರೆಯವರ ಒತ್ತಾಸೆ ಮೇರೆಗೆ ಚಿತ್ರವನ್ನು ಕಳುಹಿಸಿದೆ. ವಿಜೇತರ ಚಿತ್ರ ಬಂದ ದಿನ ಬೆಳಗ್ಗೆ ಅನೇಕ ದೂರವಾಣಿ ಕರೆಗಳು ಬಂದವು. ಇದರಲ್ಲಿ ಛಾಯಾಚಿತ್ರಗ್ರಾಹಕನ ಪಾತ್ರ ಮಹತ್ವದ್ದು.
-ಮಚ್ಛೇಂದ್ರ, ಕಡಿರುದ್ಯಾವರ, ಬೆಳ್ತಂಗಡಿ (ಪ್ರಥಮ ಬಹುಮಾನ ವಿಜೇತ ಮಗು ಶುಭನ್ಯು ತಂದೆ)

ನಾನು ಚಿಕ್ಕ ಪ್ರಾಯ ದಿಂದಲೂ ಮಕ್ಕಳ ಫೋಟೋ ಸ್ಪರ್ಧೆಯಲ್ಲಿ ವಿಜೇತ ರಾದವರ ಎಡಿಶನ್‌ಗಳನ್ನು ಸಂಗ್ರಹಿಸಿ ಟ್ಟು  ಕೊಂಡು ಬರುತ್ತಿದ್ದೇನೆ. ಈ ಬಾರಿ ನನ್ನ ಮಗುವೇ ಬಹುಮಾನ ಪಡೆಯುವಂತಾಯಿತು. ನಾವು ಹಿಂದಿನಿಂದಲೂ “ಉದಯವಾಣಿ’ ಓದುಗರು ಎನ್ನಲು ಹೆಮ್ಮೆ ಅನಿಸುತ್ತದೆ.
– ಮೈತ್ರಿ, ಕುಂದಾಪುರ
(ತೃತೀಯ ಬಹುಮಾನ ವಿಜೇತ ಮಗು ಋತ್ವಿಕಾ ತಾಯಿ)

ಮನಗೆದ್ದ ಮುಗ್ಧರು
ವಿಜೇತ ಮಕ್ಕಳಿಗೆ ನಗದು ಸಹಿತ ಬಹುಮಾನ ವಿತರಿಸಲಾಯಿತು. ಸಮಾರಂಭದ ಉದ್ದಕ್ಕೂ ಪುಟಾಣಿಗಳು ಇತರ ಮಕ್ಕಳ ಜತೆ ನಾನಾ ರೀತಿಯ ತುಂಟಾಟಗಳನ್ನು ಪ್ರದರ್ಶಿ ಸುತ್ತ ತಮ್ಮ ಹೆತ್ತವ ರೊಂದಿಗೆ ಸಭಾಂಗಣವಿಡೀ ಆನಂದದ ಕ್ಷಣಗಳನ್ನು ಸೃಷ್ಟಿಸಿದರು. ಬಹುಮಾನ ಸ್ವೀಕರಿಸುತ್ತ ಫೋಟೋಗಳಿಗೆ ಪೋಸ್‌ ಕೊಟ್ಟರು.

ಟಾಪ್ ನ್ಯೂಸ್

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.