ಡಿಸಿ,ಎಸಿ ಹತ್ಯೆ ಯತ್ನ: ಮರಳು ಮಾಫಿಯಾದ ಇನ್ನೂ ಐವರ ಬಂಧನ
Team Udayavani, Apr 6, 2017, 2:32 PM IST
ಉಡುಪಿ/ಕುಂದಾಪುರ: ಕಂಡ್ಲೂರಿನ ಅಕ್ರಮ ಮರಳುಗಾರಿಕೆಯ ಕೇಂದ್ರಕ್ಕೆ ದಾಳಿ ನಡೆಸಿದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್, ಅಂಪಾರು ಗ್ರಾಮ ಕರಣಿಕ ಕಾಂತರಾಜು ಹಾಗೂ ಇತರ ಅಧಿಕಾರಿಗಳ ಮೇಲೆ ಹಲ್ಲೆಗೈದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸ್‌ಪಿ ಕೆ.ಟಿ.ಬಾಲಕೃಷ್ಣ ಅವರು ಸುದ್ದಿಗೋಷ್ಠಿ ನಡೆಸಿ ಬಂಧಿತರ ಕುರಿತು ವಿವರ ನೀಡಿದ್ದಾರೆ. ಬಂಧಿತರು ಉತ್ತರಪ್ರದೇಶ ಮೂಲದ ಕಾರ್ಮಿಕರಾದ ಗೋರಕ್‌ನಾಥ್(40),ಭೂತಾನ್(54),ಅನಿಲ್ (35),ಸರವನ್ ಕುಮಾರ್ (23)ಮತ್ತು ಧಾರವಾಡದ ರವಿ(27) ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 13 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಂತಾಗಿದೆ.