ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ
Team Udayavani, Apr 25, 2017, 11:36 AM IST
ಉಡುಪಿ: ರಂಗಭೂಮಿ ಕೊಡುಗೆಗಾಗಿ ರಾಜ್ಯೋತ್ಸವ ಪ್ರಶಸ್ತಿ ದೊರಕಬೇಕು ಎಂದು ಹಿರಿಯ ರಂಗಕರ್ಮಿ ಪಿ. ವಾಸುದೇವ ರಾವ್ ಆಗ್ರಹಿಸಿದ್ದಾರೆ.
ಅವರು ಸೋಮವಾರ ಎಂಜಿಎಂ ಕಾಲೇಜಿನ ಆವರಣದಲ್ಲಿ ರಂಗಭೂಮಿ ಆಯೋಜಿಸಿದ “ಆನಂದೋತ್ಸವ’ದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ರಂಗತಾಲೀಮು ನಡೆಸಲು ಅಗತ್ಯ ವೇದಿಕೆ ನಿರ್ಮಿಸಲು 30×20 ಅಡಿ ಸ್ಥಳವನ್ನು ರಂಗಭೂಮಿಗೆ ನೀಡಿದ ಸ್ಥಳದ ಪಕ್ಕದಲ್ಲಿ ನೀಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.
ರಂಗಮಂದಿರಕ್ಕೆ ಅನುದಾನ
ಅಧ್ಯಕ್ಷತೆ ವಹಿಸಿದ್ದ ನಾಟಕ ಅಕಾಡೆಮಿ ಸದಸ್ಯ ಉಮೇಶ ಸಾಲ್ಯಾನ್, ರಂಗ ಮಂದಿರ ನಿರ್ಮಾಣಕ್ಕೆ ಮಂಗಳೂರಿಗೆ 1 ಕೋ. ರೂ., ಉಡುಪಿಗೆ 50 ಲ. ರೂ. ಮಂಜೂರಾಗಿದೆ. ಆದರೆ ಉಡುಪಿಯಲ್ಲಿ ಸ್ಥಳದ ಕೊರತೆ ಇದೆ. ರಂಗತಾಲೀಮು ಕೇಂದ್ರವೂ ಇಲ್ಲ ಎಂದರು.
ಸ್ಥಳ ಗುರುತಿಸುವ ಕೆಲಸ
ತಹಶೀಲ್ದಾರ್ ಮಹೇಶ್ಚಂದ್ರ ರಂಗ ಮಂದಿರ ನಿರ್ಮಾಣಕ್ಕೆ ಸ್ಥಳ ಗುರುತಿಸುವ ಕೆಲಸ ನಡೆಯುತ್ತಿದೆ. ಇದು ಚರ್ಚೆಯಲ್ಲಿದೆ. ಸದ್ಯವೇ ಸ್ಥಳ ಗುರುತಿಸುತ್ತೇವೆ ಎಂದರು. ರಂಗಭೂಮಿ ನಡೆಸುತ್ತಿರುವ ರಂಗ ಚಟುವಟಿಕೆಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮೆಚ್ಚುಗೆ ಸೂಚಿಸಿದರು. ರಂಗಭೂಮಿ ಗೌರವಾಧ್ಯಕ್ಷ ಡಾ| ಎಚ್. ಶಾಂತಾರಾಮ್ ಪ್ರಸ್ತಾವನೆಗೈದರು. ಜತೆ ಕಾರ್ಯದರ್ಶಿ ಎಚ್.ಪಿ. ರವಿರಾಜ್ ಸ್ವಾಗತಿಸಿ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಳೆ ಸಿದ್ಧತೆ, ಟೆಂಡರ್ ರದ್ದತಿ, ಕಾಮಗಾರಿ ವಿಳಂಬ
ಎಸೆಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಸಾಧನೆ : ಸಾಧಕರಿಗೆ ಉದಯವಾಣಿ ಅಭಿನಂದನೆ
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಪ್ರಿಯಾಂಕಾ ಆಚಾರ್ಯ ಅವರ ಸ್ಟ್ರಿಂಗ್ ಆರ್ಟ್ ಸೇರ್ಪಡೆ
ಎಲ್ಲೂರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೊರಕೆ ಭೇಟಿ : ಸ್ಥಳೀಯರ ಮಧ್ಯೆ ಮಾತಿನ ಚಕಮಕಿ
ಹೆಬ್ರಿ-ಮಲ್ಪೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಮತ್ತೆ ಸಂಕಷ್ಟ