Udayavni Special

ಹೂಳು ತೆರವಿಗೆ ರಾಜ್ಯದಲ್ಲಿಲ್ಲ ಡ್ರೆಜ್ಜಿಂಗ್‌ ಯಂತ್ರ

ಮೀನುಗಾರಿಕೆ ಬಂದರುಗಳಲ್ಲಿ ತುಂಬಿದೆ ಹೂಳು ರಾಶಿ

Team Udayavani, Feb 25, 2020, 6:30 AM IST

drejjing

ಕುಂದಾಪುರ: ಸರಿಸುಮಾರು 320 ಕಿ.ಮೀ. ಕರಾವಳಿ ತೀರ, 21,891 ಮೀನುಗಾರಿಕೆ ದೋಣಿಗಳು, ಎಂಟು ಮೀನು ಗಾರಿಕೆ ಬಂದರು ಮತ್ತು 26 ಮೀನು ಗಾರಿಕೆ ಇಳಿದಾಣಗಳನ್ನು ಹೊಂದಿರುವ ಕರ್ನಾಟಕದಲ್ಲಿ ಒಂದೂ ಡ್ರೆಜಿಂಗ್‌ ಯಂತ್ರವಿಲ್ಲ ಎಂಬುದು ವಿಚಿತ್ರವಾದರೂ ನಿಜ. ಬಂದರು ಮತ್ತು ಮೀನುಗಾರಿಕೆ ಇಲಾಖೆಯು ಈವರೆಗೆ ಯಂತ್ರ ಖರೀದಿಗೆ ಮುಂದಾಗಿಯೇ ಇಲ್ಲ!

ಮೀನುಗಾರಿಕೆ ಬಂದರುಗಳಲ್ಲಿ ವರ್ಷದಿಂದ ವರ್ಷಕ್ಕೆ ಹೂಳು ಹೆಚ್ಚುತ್ತಲೇ ಇದೆ. ಪ್ರತಿ ವರ್ಷ ಅದನ್ನು ಮೇಲೆತ್ತಬೇಕು. ಆದರೆ ಇದನ್ನು ಮುಂಬಯಿ, ಕೇರಳದ ಖಾಸಗಿಯವರಿಗೆ ಟೆಂಡರ್‌ಗೆ ಕೊಡಬೇಕಾದ ಸ್ಥಿತಿ ನಮ್ಮದು. ಉಡುಪಿ, ದಕ್ಷಿಣ ಕನ್ನಡ ಮತ್ತು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮಲ್ಪೆ, ಮಂಗಳೂರು, ಕಾರವಾರ ಮೀನುಗಾರಿಕೆಯ ಬೃಹತ್‌ ನೆಲೆಗಳು. ಇಲ್ಲೆಲ್ಲ ಸಮರ್ಪಕ ಡ್ರೆಜ್ಜಿಂಗ್‌ ನಡೆಯದೇ ಹಲವು ವರ್ಷಗಳು ಕಳೆದಿವೆ.

ಅಲ್ಪ ಸ್ವಲ್ಪ ತೆರವು
ಇಲಾಖೆ ಪ್ರತಿ ವರ್ಷ ನೆಪ ಮಾತ್ರಕ್ಕೆ ಖಾಸಗಿಯವರ ಮೂಲಕ ಅಲ್ಪಸ್ವಲ್ಪ ಹೂಳೆತ್ತುತ್ತದೆ. ಅದು ಸರಿಯಾಗಿ ಆಗದ ಕಾರಣ ಹೂಳು ತೆರವಾದ ಬಂದರು ಒಂದೂ ಇಲ್ಲ. ಸಾಮಾನ್ಯವಾಗಿ ಬೋಟಿನ ಕೆಳಭಾಗವು ನೀರಿನ ಮಟ್ಟಕ್ಕಿಂತ 3 ಮೀ.ನಷ್ಟು ಕೆಳಗಿರುತ್ತದೆ. ಅದಕ್ಕಿಂತಲೂ ಎರಡೂವರೆ ಮೀ.ನಷ್ಟು ಆಳವಾಗಿ ಹೂಳೆತ್ತಿದರೆ ಮಾತ್ರ ಸುಗಮ ಸಂಚಾರ ಸಾಧ್ಯ ಎನ್ನುತ್ತಾರೆ ಮೀನುಗಾರರು.

ಕೋಡಿ- ಗಂಗೊಳ್ಳಿಯಲ್ಲಿ ದಿಬ್ಬ
ಕೋಡಿ- ಗಂಗೊಳ್ಳಿಯಲ್ಲಿ ಬ್ರೇಕ್‌ವಾಟರ್‌ಗಳಿಂದಾಗಿ ಇವರೆಡರ ಮಧ್ಯದ ಅಳಿವೆಯಲ್ಲಿ ಹೂಳು ತುಂಬಿ ಮರಳು ದಿಬ್ಬಗಳಾಗಿವೆ. ಇದನ್ನು ತೆರವುಗೊಳಿಸಲಾಗುವುದು ಎಂದು ಸಚಿವರು, ಶಾಸಕರು, ಅಧಿಕಾರಿಗಳು ನೀಡಿದ ಭರವಸೆಯೂ ಹಳೆಯದಾಗಿದೆ.

ಕೇರಳ ಮಾತ್ರ
ಕರ್ನಾಟಕದಲ್ಲೆಲ್ಲೂ ಸರಕಾರಿ ಅಥವಾ ಖಾಸಗಿ ಡ್ರೆಜ್ಜಿಂಗ್‌ ಯಂತ್ರ ಇಲ್ಲ. ಕೇರಳದ ಸರಕಾರ ಸ್ವಂತ ಯಂತ್ರ ಹೊಂದಿದೆ. ಮಹಾ ರಾಷ್ಟ್ರ, ಗೋವಾ ಮತ್ತಿತರ ಕಡೆ ಖಾಸಗಿಯವರು ಹೂಳೆತ್ತುವುದನ್ನು ನಿರ್ವಹಿಸುತ್ತಿದ್ದಾರೆ.

ಮೀನುಗಾರಿಕೆಗೆ ಅಡ್ಡಿ
ಬಂದರು ಪ್ರದೇಶಗಳಲ್ಲಿ ಹೂಳು ತುಂಬಿರುವುದರಿಂದ ಇಳಿತದ ಸಂದರ್ಭದಲ್ಲಿ ಬೋಟುಗಳ ಸಂಚಾರ ಮತ್ತು ಲಂಗರಿಗೆ ತೊಂದರೆಯಾಗುತ್ತಿದೆ. ಬೋಟ್‌, ದೋಣಿಗಳ ತಳಕ್ಕೆ ಹೂಳು ತಾಗಿ ಹಾನಿಯಾಗುತ್ತದೆ. ಮತ್ಸéಕ್ಷಾಮ, ಪ್ರತಿಕೂಲ ಹವಾಮಾನ ಮಾತ್ರ ವಲ್ಲದೆ ಹೂಳು ಕೂಡ ಮೀನುಗಾರಿಕೆಗೆ ತೊಡಕಾಗಿದೆ. ಹೂಳು ಬೋಟ್‌ ಅವಘಡಗಳಿಗೂ ಕಾರಣವಾಗಿದ್ದು, ಹಲವೆಡೆ ಇಂತಹ ಘಟನೆ ಗಳು ಈಗಾಗಲೇ ಸಂಭವಿಸಿವೆ.

ಕೋಡಿ – ಗಂಗೊಳ್ಳಿ ಸೇರಿದಂತೆ ಜಿಲ್ಲೆಯ ಎಲ್ಲ ಪ್ರಮುಖ ಮೀನುಗಾರಿಕೆ ಬಂದರುಗಳಲ್ಲಿ ಹೂಳೆತ್ತುವ ಸಂಬಂಧ ಸರ್ವೇ ನಡೆಸಲಾಗಿದೆ. ಅದರ ಆಧಾರದ ಮೇಲೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು.
– ಗಣೇಶ್‌ ಕೆ., ಉಪ ನಿರ್ದೇಶಕರು, ಬಂದರು ಮತ್ತು ಮೀನುಗಾರಿಕಾ ಇಲಾಖೆ ಉಡುಪಿ

ಡ್ರೆಜ್ಜಿಂಗ್‌ ಯಂತ್ರ ಖರೀದಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇರಳದಲ್ಲಿ ಯಂತ್ರವಿದ್ದು, ಅಲ್ಲಿನ ಇಲಾಖೆಗೆ ಅದರ ನಿರ್ವಹಣೆ ಸಮಸ್ಯೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದರ ಸಾಧಕ- ಬಾಧಕಗಳನ್ನು ಪರಿಶೀಲಿಸಲಾಗುವುದು. ಹೊರಗುತ್ತಿಗೆ ಆಧಾರದಲ್ಲಿ ಡ್ರೆಜ್ಜಿಂಗ್‌ ಯಂತ್ರ ಬಳಸುವ ಸಂಬಂಧ ಪ್ರಯತ್ನಿಸಲಾಗುವುದು. ಹೂಳು ತೆರವಿಗೆ ಈ ಬಾರಿಯ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ.
– ಕೋಟ ಶ್ರೀನಿವಾಸ ಪೂಜಾರಿ, ಬಂದರು ಮತ್ತು ಮೀನುಗಾರಿಕೆ ಸಚಿವರು

– ಪ್ರಶಾಂತ್ ಪಾದೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಲ್ಲಂಗಡಿ ಹಣ್ಣು ಮಾರಲಾಗದೆ ರೈತನ ಆತ್ಮಹತ್ಯೆ: ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವರು

ಕಲ್ಲಂಗಡಿ ಹಣ್ಣು ಮಾರಲಾಗದೆ ರೈತನ ಆತ್ಮಹತ್ಯೆ: ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವರು

ಫ್ಲಾಷ್‌ಮಾಬ್‌ ಆಫ್‌ “ಲೈಟ್ಸ್‌’ ಆರಂಭವಾಗಿದ್ದು ಇಟಲಿಯಲ್ಲಿ

ಫ್ಲಾಷ್‌ಮಾಬ್‌ ಆಫ್‌ “ಲೈಟ್ಸ್‌’ ಆರಂಭವಾಗಿದ್ದು ಇಟಲಿಯಲ್ಲಿ

ಯಾದಗಿರಿ ತೀವ್ರ ಜ್ವರ, ಕೆಮ್ಮಿನಿಂದ ಬಾಲಕಿ ಸಾವು: ಕೋವಿಡ್-19 ಶಂಕೆ

ಯಾದಗಿರಿಯ ತೀವ್ರ ಜ್ವರ, ಕೆಮ್ಮಿನಿಂದ ಬಾಲಕಿ ಸಾವು: ಕೋವಿಡ್-19 ಶಂಕೆ

ಮುಳುವಾದ ಆದೇಶಗಳ ಅಸಮರ್ಪಕ ಅನುಷ್ಠಾನ

ಮುಳುವಾದ ಆದೇಶಗಳ ಅಸಮರ್ಪಕ ಅನುಷ್ಠಾನ

ಲಾಕ್ ಡೌನ್ ನಡುವೆ ಟ್ಯಾಕ್ಟರ್ ನಲ್ಲಿ ಗದ್ದೆ ಉಳುಮೆ ಮಾಡಿದ ಸಚಿವ ಸಿ ಟಿ ರವಿ

ಲಾಕ್ ಡೌನ್ ನಡುವೆ ಟ್ಯಾಕ್ಟರ್ ನಲ್ಲಿ ಗದ್ದೆ ಉಳುಮೆ ಮಾಡಿದ ಸಚಿವ ಸಿ ಟಿ ರವಿ

ವನ್ಯಜೀವಿ ಮಾರುಕಟ್ಟೆಗಳ ಮೇಲೆ ಜಾಗತಿಕ ನಿಷೇಧ!

ವನ್ಯಜೀವಿ ಮಾರುಕಟ್ಟೆಗಳ ಮೇಲೆ ಜಾಗತಿಕ ನಿಷೇಧ!

ಕೋವಿಡ್-19: ಕಣ್ಣಿಗೆ ಬೀಳದ ರಾಷ್ಟ್ರಗಳು

ಕೋವಿಡ್-19: ಕಣ್ಣಿಗೆ ಬೀಳದ ರಾಷ್ಟ್ರಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain

ಉಡುಪಿ ವಿವಿಧೆಡೆಗಳಲ್ಲಿ ಉತ್ತಮ ಮಳೆ

ಕಾವಡಿ: ಕೋಳಿ ಅಂಕಕ್ಕೆ ದಾಳಿ; ಎಳು ಮಂದಿಯ ಬಂಧನ

ಕಾವಡಿ: ಕೋಳಿ ಅಂಕಕ್ಕೆ ದಾಳಿ; ಎಳು ಮಂದಿಯ ಬಂಧನ

ಇಂದು, ನಾಳೆ ಸೂಪರ್‌ ಮೂನ್‌

ಇಂದು, ನಾಳೆ ಸೂಪರ್‌ ಮೂನ್‌

ಉಡುಪಿ: ವಿದೇಶದಿಂದ ಬಂದವರ ಹೋಂ ಕ್ವಾರಂಟೈನ್‌ ಅವಧಿ ಮುಕ್ತಾಯ

ಉಡುಪಿ: ವಿದೇಶದಿಂದ ಬಂದವರ ಹೋಂ ಕ್ವಾರಂಟೈನ್‌ ಅವಧಿ ಮುಕ್ತಾಯ

ಉಡುಪಿ: ನಾಲ್ವರು ಐಸೊಲೇಶನ್‌ ವಾರ್ಡ್‌ಗೆ ದಾಖಲು

ಉಡುಪಿ: ನಾಲ್ವರು ಐಸೊಲೇಶನ್‌ ವಾರ್ಡ್‌ಗೆ ದಾಖಲು

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

07-April-36

ಭಗವಾನ್‌ ಮಹಾವೀರ-ಡಾ|ಜಗಜೀವನರಾಮ್‌ ಜಯಂತಿ

ವರ್ಕ್‌ ಫ್ರಂ ಹೋಮ್‌ ಕತೆಗಳು : ಆಫೀಸೇ ಚೆನ್ನಾಗಿತ್ತು…

ವರ್ಕ್‌ ಫ್ರಂ ಹೋಮ್‌ ಕತೆಗಳು : ಆಫೀಸೇ ಚೆನ್ನಾಗಿತ್ತು…

ಕಲ್ಲಂಗಡಿ ಹಣ್ಣು ಮಾರಲಾಗದೆ ರೈತನ ಆತ್ಮಹತ್ಯೆ: ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವರು

ಕಲ್ಲಂಗಡಿ ಹಣ್ಣು ಮಾರಲಾಗದೆ ರೈತನ ಆತ್ಮಹತ್ಯೆ: ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವರು

ಫ್ಲಾಷ್‌ಮಾಬ್‌ ಆಫ್‌ “ಲೈಟ್ಸ್‌’ ಆರಂಭವಾಗಿದ್ದು ಇಟಲಿಯಲ್ಲಿ

ಫ್ಲಾಷ್‌ಮಾಬ್‌ ಆಫ್‌ “ಲೈಟ್ಸ್‌’ ಆರಂಭವಾಗಿದ್ದು ಇಟಲಿಯಲ್ಲಿ

07-April-35

ಆರೋಗ್ಯ ಇಲಾಖೆಯೊಂದಿಗೆ ಅನುಚಿತ ವರ್ತನೆ ತೋರದಿರಿ