ಮೀನು ಸಾಗಾಟದ ವಾಹನ ಪಲ್ಟಿ: ಚಾಲಕನಿಗೆ ಗಾಯ
Team Udayavani, Mar 14, 2017, 12:01 PM IST
ಪಡುಬಿದ್ರಿ: ಎರ್ಮಾಳು ಬಳಿ ಸೋಮವಾರ ಬೆಳಗ್ಗೆ ಮೀನು ಸಾಗಾಟದ ವಾಹನವೊಂದು ಪಲ್ಟಿಯಾಗಿ ಚಾಲಕ ಜಾವೇದ್ (25) ಬಲಗೈ ಮೂಳೆ ಮುರಿತಕ್ಕೊಳಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಲ್ಪೆಯಿಂದ ಮೀನನ್ನು ಹೇರಿಕೊಂಡು ಕೇರಳದತ್ತ ಹೋಗುತ್ತಿದ್ದ ಈ ವಾಹನ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿತ್ತು.
ವಾಹನವು ಡಿವೈಡರನ್ನು ಏರಿ ರಸ್ತೆಯ ಮತ್ತೂಂದು ಮಗ್ಗುಲಿನ ಆಚೆಯ ಸುಮಾರು 10 ಅಡಿಗಳ ಕಂದಕಕ್ಕೆ ಉರುಳಿದೆ. ಪವಾಡಸದೃಶವಾಗಿ ಚಾಲಕ ಬದುಕುಳಿದಿದ್ದು ವಾಹನವು ಸಂಪೂರ್ಣ ಜಖಂಗೊಂಡಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ