ಹಡಿಲು ಭೂಮಿಗೆ ಮುಕ್ತಿ ನೀಡುವ ಪುನಶ್ಚೇತನ ಯೋಜನೆ


Team Udayavani, Aug 15, 2021, 3:10 AM IST

ಹಡಿಲು ಭೂಮಿಗೆ ಮುಕ್ತಿ ನೀಡುವ ಪುನಶ್ಚೇತನ ಯೋಜನೆ

ಉಡುಪಿ:  ಕೋವಿಡ್‌ ಸಹಿತ ಬದಲಾದ ಜನರ ಜೀವನಕ್ರಮದಿಂದ ನಗರಗಳಿಂದ ಹಳ್ಳಿಗೆ ಬರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅದೆಷ್ಟೋ ವರ್ಷಗಳಿಂದ ನಿರ್ವಹಿಸಿಕೊಂಡು ಬರುತ್ತಿದ್ದ ಕೃಷಿ ಭೂಮಿಗಳನ್ನು ಹಡಿಲು ಬಿಟ್ಟು ಹೋದವರು ಈಗ ಮತ್ತೆ ಕೃಷಿಯತ್ತ ಆಸಕ್ತರಾಗುತ್ತಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕೇದಾರೋತ್ಥಾನ ಟ್ರಸ್ಟ್‌ನಡಿ ಈ ಕೆಲಸಕಾರ್ಯ ನಡೆದರೆ ಧರ್ಮಸ್ಥ ಳ ಗ್ರಾ.ಯೋಜನೆಯು ಕಳೆದ ಒಂದು ವರ್ಷ ಗಳಿಂದಲೂ ಹಡಿಲು ಭೂಮಿ ಕೃಷಿಗೆ ಅಗತ್ಯ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ.

ಆಧುನಿಕತೆಯ ಪ್ರಭಾವ, ಉದ್ಯೋಗ ಅರಸಿ ಪಟ್ಟಣ ದತ್ತ ವಲಸೆ, ಕೃಷಿ ಕಾರ್ಮಿಕರ ಕೊರತೆ, ಅತಿಯಾದ ಬೇಸಾಯದ ಖರ್ಚು, ತೋಟಗಾರಿಕೆಯಂತಹ ವಾಣಿಜ್ಯ ಬೆಳೆಗಳ ಪ್ರಭಾವ, ಕೀಟ ರೋಗ ಬಾಧೆ,  ಬೆಳೆ ನಷ್ಟ, ಕಾಡು ಪ್ರಾಣಿಗಳ ಹಾವಳಿಯಿಂದ  ಕರಾವಳಿ ಜಿಲ್ಲೆಗಳಲ್ಲಿ ಭತ್ತ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿತ್ತು. ಇಂತಹ ಸಂದ ರ್ಭ  ಕೇದಾರೋತ್ಥಾನ ಟ್ರಸ್ಟ್‌, ಧ.ಗ್ರಾ. ಯೋಜ ನೆ ನೀಡಿದ ಪ್ರೋತ್ಸಾಹ ಜನರಲ್ಲಿ ಹೊಸ ಆಶಾವಾದ ಹುಟ್ಟುಹಾಕಿದೆ.

ಕೃಷಿ ಕೂಲಿಯಾಳುಗಳ ಸಮಸ್ಯೆ :

ಬಹುತೇಕ ಕೃಷಿಕರ ಮಕ್ಕಳು ಉದ್ಯೋಗ ಅರಸಿ ನಗರ ಪ್ರದೇಶಕ್ಕೆ ವಲಸೆ ಬರುತ್ತಿರುವುದು, ಬೆಳೆದ ಉತ್ಪನ್ನಗಳಿಗೆ ಸೂಕ್ತ ದರ ಮತ್ತು ಮಾರುಕಟ್ಟೆ ಕೊರತೆ, ಸಕಾಲದಲ್ಲಿ ಯಂತ್ರೋಪಕರಣಗಳ ಅಲಭ್ಯತೆ, ಕೃಷಿ ಲಾಭದಾಯಕವಲ್ಲ ಎಂಬ ಭ್ರಮೆಯಿಂದಾಗಿ ಹೆಚ್ಚಿನ ಮಂದಿ ಕೃಷಿಯಲ್ಲಿ ತೊಡಗಲು ಹಿಂದೇಟು ಹಾಕುತ್ತಿದ್ದಾರೆ.

ವಿನೂತನ ಕ್ರಮ :

ಭತ್ತದ ಗದ್ದೆಗಳು ಈ ರೀತಿ ನಿರ್ಲಕ್ಷ್ಯಕ್ಕೊಳಗಾದ ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯು ಬೇಸಾಯದ ಖರ್ಚು ಕಡಿಮೆಗೊಳಿಸಿ ಅಧಿಕ ಇಳುವರಿ ಪಡೆಯಲು ಬೇಸಾಯ ಪದ್ಧತಿಯಲ್ಲಿ ಕೆಲವೊಂದು ಮಾರ್ಪಾಡು ಮಾಡಿಕೊಂಡು ಶ್ರೀ ಅಭಿಯಾನ, ಯಂತ್ರಶ್ರೀ, ಸಮಗ್ರ ಕೃಷಿ ಪದ್ಧತಿ, ಪರಿಸರ ಸ್ನೇಹಿ ಕೃಷಿ ಇತ್ಯಾದಿ ಕಾರ್ಯಕ್ರಮಗಳ ಮೂಲಕ ರೈತರಿಗೆ ಸಹಕಾರ ನೀಡಿ ನಿರಂತರ ಆದಾಯ ಪಡೆಯಲು ಮಾರ್ಗದರ್ಶನ ನೀಡಲಾಗುತ್ತಿದೆ.

 ಹಡಿಲು ಅಭಿವೃದ್ಧಿಗೆ ಕೈಗೊಂಡ ಕ್ರಮಗಳು :

ಹಡಿಲು ಭೂಮಿ ರೈತರ ಗುರುತಿಸುವಿಕೆ ಮತ್ತು ದಾಖಲೀಕರಣ ಮಾಡಿ ಕೃಷಿಕರ ಪ್ರಗತಿಬಂಧು ಸಂಘಗಳನ್ನು ರಚಿಸಲಾಗಿದೆ. ಹಾಳುಬಿದ್ದ ಜಮೀನನ್ನು ಭೂಮಾಲಕರಿಂದ ಗೇಣಿ ಅಥವಾ ಉಚಿತವಾಗಿ ಒಪ್ಪಂದದ ಮೇಲೆ ಪಡೆದು ಕೃಷಿ ಮಾಡಲಾಗುತ್ತಿದೆ.

ರೈತರಿಗೆ ತರಬೇತಿ/ಪ್ರಾತ್ಯಕ್ಷಿಕೆ :

ಹಡಿಲು ಭೂಮಿ ಅಭಿವೃದ್ಧಿ ಕ್ಷೇತ್ರ ಉತ್ಸವ, ಕೃಷಿ ಯಂತ್ರೋಪಕಣ ಒದಗಣೆ, ರೈತರಿಗೆ ತಾಂತ್ರಿಕ ಮತ್ತು ಆರ್ಥಿಕ ಸಹಕಾರಗಳನ್ನೂ ನೀಡಲಾಗುತ್ತಿದೆ.

ಗೇಣಿದಾರರೊಂದಿಗೆ ಒಪ್ಪಂದ :

ಪ್ರಗತಿಬಂಧು ತಂಡದ ಸದಸ್ಯರು ತಮ್ಮ  ವ್ಯಾಪ್ತಿಯ ಲ್ಲಿರುವ ಹಡಿಲು ಭೂಮಿಯನ್ನು ಗುರುತಿಸಿ ಅದರ ಮಾಲಕ ರೊಂದಿಗೆ  ಒಪ್ಪಂದ ಮಾಡಿಕೊಂಡು ಹಡಿಲು ಭೂಮಿ ಪಡೆದು 2ರಿಂದ 5 ವರ್ಷಗಳವರೆಗೆ ಭೂಮಾಲಕರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಕೃಷಿ ಅಭಿ ವೃದ್ಧಿ ಪಡಿಸಲು ಅಗತ್ಯ ತಯಾರಿ ಮಾಡಿಕೊಳ್ಳುತ್ತಾರೆ. ಭೂ ಮಾಲಕರು, ಗೇಣಿದಾರರ ನಡುವೆ ಆದ ಒಳ ಒಪ್ಪಂದ ದಂತೆ ಅಲ್ಪಾವಧಿ ಕೃಷಿ (ಭತ್ತ, ತರಕಾರಿ, ಬಾಳೆ…ಇತ್ಯಾದಿ) ಮೂಲಕ ಹಡಿಲು ಭೂಮಿ ಅಭಿವೃದ್ಧಿ ಮಾಡಲಾಗಿದೆ.

 ಜಿಲ್ಲೆಯಲ್ಲಿ ಹಡಿಲು ಭೂಮಿ ಕೃಷಿ

ತಾಲೂಕು         ಪ್ರಸ್ತುತ ವರ್ಷ

(ಎಕ್ರೆ)   ಇದುವರೆಗೆ

(ಎಕ್ರೆ)

ಕಾರ್ಕಳ           50        201

ಉಡುಪಿ           62        285

ಬ್ರಹ್ಮಾವರ       44        174

ಕುಂದಾಪುರ     50        265

ಬೈಂದೂರು      50        154

ದ.ಕ., ಉಡುಪಿ ಜಿಲ್ಲೆಗಳ ಹಿರಿಯ ಅಧಿಕಾರಿಗಳು ಮತ್ತು ಕಾರ್ಯಕರ್ತರ ಸಹಕಾರದಲ್ಲಿ ಇದುವರೆಗೆ ಒಟ್ಟು 1,391 ಎಕ್ರೆ ಹಡಿಲು ಭೂಮಿಯನ್ನು ಹಸುರು ಭೂಮಿಯನ್ನಾಗಿ ಪರಿವರ್ತನೆ ಮಾಡಿ 473 ಕುಟುಂಬಗಳಿಗೆ ಪ್ರಯೋಜನ ದೊರಕಿಸಲಾಗಿದೆ. ಈ ಬಗ್ಗೆ ಎಲ್ಲ ಗ್ರಾಮಗಳಿಗೂ ತೆರಳಿ ಒಕ್ಕೂಟದ ಸದಸ್ಯರು ಮಾಹಿತಿ ನೀಡುವ ಕೆಲಸವನ್ನೂ ಮಾಡುತ್ತಿದ್ದಾರೆ. -ದಿನೇಶ್‌, ನಿರ್ದೇಶಕರು, ಧ.ಗ್ರಾ. ಯೋಜನೆ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.