ಬಂಟಕಲ್ಲು: ಹೈ-ಮಾಸ್ಟ್ ದೀಪ ಉದ್ಘಾಟನೆ
Team Udayavani, May 29, 2022, 10:54 AM IST
ಶಿರ್ವ: ಬಂಟಕಲ್ಲು ಪೇಟೆಯಲ್ಲಿ ದಿ|ಡೇನಿಸ್ ಸಿಪ್ರಿಯಾನ್ ಮೆಂಡೋನ್ಸಾ ಸ್ಮರಣಾರ್ಥ ಅವರ ಪುತ್ರ ದಾನಿ ಕೋಡುಗುಡ್ಡೆ ರೊನಾಲ್ಡ್ ಬಲ್ತ್‌ಜಾರ್ ಮೆಂಡೋನ್ಸಾ ನಿರ್ಮಿಸಿ ಶಿರ್ವ ಗ್ರಾ.ಪಂ.ಗೆ ಕೊಡುಗೆಯಾಗಿ ನೀಡಿದ ಹೈಮಾಸ್ಟ್ ದೀಪದ ಉದ್ಘಾಟನೆ ಶನಿವಾರ ನೆರವೇರಿತು.
ಶಿರ್ವ ಗ್ರಾ,ಪಂ.ಅಧ್ಯಕ್ಷ ಕೆ.ಆರ್ ಪಾಟ್ಕರ್ ಉದ್ಘಾಟನೆ ನೆರವೇರಿಸಿ ಮಾತನಾಡಿ ದಾನಿಗಳ ನೆರವಿನಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿದೆ. 8ನೆಯ ಹೈಮಾಸ್ಟ್ ದೀಪವು ಬಂಟಕಲ್ಲಿನಲ್ಲಿ ಉದ್ಘಾಟನೆಗೊಂಡಿದ್ದು, ಗ್ರಾಮವು ಅಭಿವೃದ್ಧಿಪಥದತ್ತ ಮುನ್ನಡೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ವಲೇರಿಯನ್ ನೊರೋನ್ಹಾ, ಬಂಟಕಲ್ಲು ನಾಗರಿಕ ಸಮಿತಿ ಕಾರ್ಯದರ್ಶಿ ದಿನೇಶ್ ದೇವಾಡಿಗ, ಕೋಶಾಧಿಕಾರಿ ಜಗದೀಶ ಆಚಾರ್ಯ, ಹಿರಿಯರಾದ ಇಗ್ನೇಶಿಯಸ್ ಡಿಸೋಜ, ಜಾಕೋಬ್ ಮಾರ್ಟಿಸ್, ಜಾನ್ ಮಾರ್ಟಿಸ್, ರಾಘವೇಂದ್ರ ನಾಯಕ್ ಪಾಲಮೆ, ವೀರೇಂದ್ರ ಪಾಟ್ಕರ್, ವಿನ್ಸೆಂಟ್ ಪಲ್ಕೆ, ಶಿವಸ್ವಾಮಿ, ಅರುಂಧತಿ ಪ್ರಭು, ವಸಂತಿ ಆಚಾರ್ಯ, ರೋಹಿಣಿ ನಾಯಕ್, ಅನಿತಾ ಕ್ಯಾಸ್ತಲಿನೊ, ಬಂಟಕಲ್ಲು ರಿಕ್ಷಾ/ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು, ನಾಗರಿಕ ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯೆ ವೈಲೆಟ್‌ಕ್ಯಾಸ್ತಲಿನೊ ವಂದಿಸಿದರು.