ಐಎನ್‌ಎಸ್‌ ಕೊಚ್ಚಿ ಢಿಕ್ಕಿಯಾದದ್ದು ಹೌದೆ?

Team Udayavani, May 5, 2019, 6:00 AM IST

INS

ಸಾಂದರ್ಭಿಕ ಚಿತ್ರ.

ಉಡುಪಿ: ಸುವರ್ಣ ತ್ರಿಭುಜ ಅವಘಡಕ್ಕೆ ‘ಐಎನ್‌ಎಸ್‌ ಕೊಚ್ಚಿ’ ಹಡಗು ಕಾರಣವಾಗಿರಬಹುದೆಂಬ ಸಂದೇಹಗಳಿಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ಬಗ್ಗೆ ನೌಕಾಪಡೆ ಮಾಹಿತಿ ನೀಡಿಲ್ಲ. ಮೀನುಗಾರ ಮುಖಂಡರು, ವಿವಿಧ ರಾಜಕೀಯ ಮುಖಂಡರು ಏಕ ರೂಪದ ಗುಮಾನಿ ವ್ಯಕ್ತಪಡಿಸಿದ್ದಾರೆ.

ನೌಕಾಪಡೆ ಕೆಲವು ದಿನಗಳ ಹಿಂದೆ ಉಡುಪಿ ಎಸ್‌ಪಿ ಕಚೇರಿಗೆ ನೀಡಿರುವ ಲಿಖೀತ ಉತ್ತರದಲ್ಲಿ ಐಎನ್‌ಎಸ್‌ ಕೊಚ್ಚಿಗೆ ಹಾನಿಯಾಗಿರುವುದನ್ನು ಸ್ಪಷ್ಟ ಪಡಿಸಿತ್ತು. ಆದರೆ ಅದಕ್ಕೆ ಹಾನಿಯಾಗಿ ರುವುದು ತಳಭಾಗದಲ್ಲಿ. ಅದು ಸುವರ್ಣ ತ್ರಿಭುಜಕ್ಕೆ ಢಿಕ್ಕಿ ಹೊಡೆದಿದ್ದರೆ ಅದರ ಬೇರೆ ಭಾಗಗಳಿಗೆ ಅಂದರೆ ಎದುರು ಅಥವಾ ಯಾವುದಾದರೊಂದು ಬದಿಗೆ ಹಾನಿಯಾಗಿರಬೇಕಿತ್ತು ಎಂಬ ವಾದ ಒಂದು ಕಡೆ. ಬೇರೆ ಯಾವುದೋ ಹಡಗು ಢಿಕ್ಕಿ ಹೊಡೆದು, ಅನಂತರ ಇದೇ ಮಾರ್ಗದಲ್ಲಿ ಸಾಗಿದ ಐಎನ್‌ಎಸ್‌ ಕೊಚ್ಚಿಯ ತಳಕ್ಕೆ ಅದರ ಅವಶೇಷ ತಾಗಿರಬಹುದು ಎಂಬ ವಾದಗಳೂ ಇವೆ. ಆದರೆ ಬೋಟ್ ನಲ್ಲಿದ್ದವರು ಸಂಪರ್ಕ ಕಳೆದುಕೊಂಡಿ ರುವುದು, ಸುವರ್ಣ ತ್ರಿಭುಜ ಸಾಗಿ ರುವುದು, ಐಎನ್‌ಎಸ್‌ ಕೊಚ್ಚಿ ಹಾನಿ, ಅದು ಸಾಗಿರುವ ಹಾದಿ ಮತ್ತು ದಿನ, ಸಮಯ ಇವೆಲ್ಲವೂ ಸಾಮ್ಯತೆ ಹೊಂದಿ ರುವುದು ಐಎನ್‌ಎಸ್‌ ಕೊಚ್ಚಿ ಮೇಲಿನ ಸಂಶಯ ಬಲಗೊಳ್ಳಲು ಕಾರಣ.

ರಾಡಾರ್‌ ಕೆಲಸ ಮಾಡಿಲ್ಲವೆ?
ಒಂದು ವೇಳೆ ಎದುರಿನಲ್ಲಿ ಬೋಟ್ ಇದ್ದಿದ್ದರೆ ಅತ್ಯಾಧುನಿಕ, ರಾಡಾರ್‌ ವ್ಯವಸ್ಥೆ ಹೊಂದಿರುವ ಐಎನ್‌ಎಸ್‌ ಕೊಚ್ಚಿಗೆ ಸ್ಪಷ್ಟ ಸಂದೇಶ ದೊರೆಯುತ್ತಿತ್ತು. ಹಾಗಾಗಿಲ್ಲವೇಕೆ ಎಂಬ ಪ್ರಶ್ನೆಗಳು ಎದ್ದಿವೆ. ಮಲ್ಪೆಯಿಂದ ಹೊರಟ ಬೋಟ್ ಈ ರೀತಿಯಾಗಿ ಅವಘಡಕ್ಕೆ ತುತ್ತಾಗಿರುವುದು ಇದೇ ಮೊದಲು ಎನ್ನುತ್ತಾರೆ ಮೀನುಗಾರ ಮುಖಂಡರು. ಈ ಹಿಂದೆ ಕೂಡ ಇದೇ ಮಾರ್ಗದಲ್ಲಿ ಬೋಟ್‌ಗಳು ಸಂಚರಿಸಿದ್ದವು. ನೌಕಾಪಡೆ ಹಡಗುಗಳು ಕೂಡ ಸಂಚರಿಸುತ್ತಿದ್ದವು. ಇಂಥ ಘಟನೆ, ನಿಗೂಢತೆ ಸೃಷ್ಟಿಯಾಗಿರ ಲಿಲ್ಲ. ನೌಕಾಪಡೆ ಅಧಿಕೃತವಾಗಿ ತಿಳಿಸಿದರೆ ಮಾತ್ರವೇ ಸ್ಪಷ್ಟ ಚಿತ್ರಣ ದೊರೆಯ ಬಹುದು ಎನ್ನುವುದು ಮೀನುಗಾರ ಮುಖಂಡರ ಅಭಿಪ್ರಾಯ.

ಐಎನ್‌ಎಸ್‌ ಬೆನ್ನುಬಿದ್ದ ಮೀನುಗಾರರು
ಐಎನ್‌ಎಸ್‌ ಕೊಚ್ಚಿಗೆ ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾದ ಕೂಡಲೇ ಮೀನುಗಾರರು ಆ ಹಡಗಿನ ಬಗ್ಗೆಯೇ ಸಂದೇಹ ವ್ಯಕ್ತಪಡಿಸಿದ್ದರು. ಆ ಸಂದೇಹ ಇದುವರೆಗೂ ಮುಂದುವರಿದಿದೆ.

ನೌಕಾಪಡೆಗೆ ಎಸ್‌ಪಿ ಪತ್ರ
ಬೋಟ್ ಅವಶೇಷಗಳು ಪತ್ತೆಯಾಗಿ ರುವ ಬಗ್ಗೆ ಶಾಸಕ ಭಟ್ ನೀಡಿರುವ ಹೇಳಿಕೆ, ನೌಕಾದಳ ತನ್ನ ಟ್ವಿಟರ್‌ನಲ್ಲಿ ನೀಡಿರುವ ಮಾಹಿತಿ ಕುರಿತು ವರದಿ ನೀಡುವಂತೆ ಕಾರವಾರ ನೌಕಾನೆಲೆಯ ನೌಕಾಪಡೆಗೆ ಪತ್ರ ಬರೆಯಲಾಗಿದೆ ಎಂದು ಎಸ್‌ಪಿ ನಿಶಾ ತಿಳಿಸಿದ್ದಾರೆ.

ಸರಕು ನೌಕೆ ಮೇಲೂ ಸಂದೇಹ
ಸುವರ್ಣ ತ್ರಿಭುಜ ಸಂಪರ್ಕ ಕಡಿದು ಕೊಂಡ ದಿನ ಸರಕು ಸಾಗಾಟ ನೌಕೆ ಸೀ ಹಾರ್ವೆಸ್ಟ್‌ ಕೂಡ ಸಂಚರಿಸಿದೆ ಎಂದು ನೌಕಾಪಡೆ ತಿಳಿಸಿತ್ತು. ಆ ನೌಕೆಗೂ ಹಾನಿಯಾಗಿತ್ತೆ? ಅದು ಢಿಕ್ಕಿಯಾಗಿರ ಬಹುದೆ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆದರೆ ಇನ್ನೊಂದು ಆಯಾಮವೂ ದೊರೆಯಬಹುದು.

ಟಾಪ್ ನ್ಯೂಸ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.