ಕೃಷಿ ಸಚಿವರಿಂದ ಬಿಡುಗಡೆಕಾರ್ಲಕಜೆ ಅಕ್ಕಿ
Team Udayavani, Jan 18, 2021, 12:20 PM IST
ಕಾರ್ಕಳ: ಕರ್ನಾಟಕ ಸರಕಾರ, ಜಿ.ಪಂ ಉಡುಪಿ, ಕೃಷಿ ಇಲಾಖೆ ಕಾರ್ಕಳ ಹಾಗೂ ಕ್ರಷಿ ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಆತ್ಮ ಯೋಜನೆಯಡಿ ನಡೆದ ಒಂದು ತಾಲೂಕು ಒಂದು ಉತ್ಪನ್ನ ಕಾರ್ಲಕಜೆ ಕುಚ್ಚಲು ಅಕ್ಕಿ ಬ್ರ್ಯಾಂಡ್ ನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಬಿಡುಗಡೆಗೊಳಿಸಿದರು.
ಕ್ರಷಿ ಸಚಿವ ಬಿ.ಸಿ ಪಾಟೀಲ್ ಕಾರ್ಲಕಜೆ ಅಕ್ಕಿ ಹಾಗೂ ಬಿಳಿ ಬೆಂಡೆ ಅನಾವರಣಗೊಳಿಸಿದರು. ಬಿಡುಗಡೆ ಮತ್ತು ಮಾರಾಟ ಮೇಳಗಳ ರೈತರ ಮೇಳದಲ್ಲಿ ಪ್ರಗತಿಪರ ರೈತರು ಬೆಳೆದಿದ್ದ ಆಹಾರ ಬೆಳೆಗಳ ಪ್ರದರ್ಶನ ನಡೆಯಿತು.
ಇದನ್ನೂ ಓದಿ:ಬೆಳಗಾವಿ ನಮ್ಮದು, ನೀವೊಬ್ಬರು ಮುಖ್ಯಮಂತ್ರಿ ಎಂದು ಮರೆಯಬೇಡಿ; ಮಹಾ ಸಿಎಂ ಗೆ ಸಿದ್ದರಾಮಯ್ಯ
ಶಾಸಕ ವಿ.ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು. ಇದೇ ವೇಳೆ ವಸ್ತು ಪ್ರದರ್ಶನ ನಡೆಯಿತು.