‘ಕಟಪಾಡಿ ಕಟ್ಟಪ್ಪ’ 50ನೇ ದಿನಕ್ಕೆ

Team Udayavani, May 18, 2019, 6:00 AM IST

ಮಂಗಳೂರು: ತುಳು ಚಿತ್ರರಂಗದಲ್ಲಿ ವಿನೂತನ ಶೈಲಿಯಲ್ಲಿಮೂಡಿಬಂದ ರಾಜೇಶ್‌ ಬ್ರಹ್ಮಾವರ ನಿರ್ಮಾಣ ಹಾಗೂ ಜೆ.ಪಿ. ತೂಮಿನಾಡ್‌ ನಿರ್ದೇಶನದ ‘ಕಟಪಾಡಿ ಕಟ್ಟಪ್ಪ’ ಚಿತ್ರ ಮೇ 17ರಂದು 50ನೇ ದಿನದ ಸಂಭ್ರಮ ಆಚರಿಸಿತು.

ನಗರದ ಭಾರತ್‌ಮಾಲ್, ಸಿನೆಪೊಲಿಸ್‌, ಪಿವಿಆರ್‌ನಲ್ಲಿ ‘ಕಟ್ಟಪ್ಪ’ ಸಿನೆಮಾ ಸದ್ಯ ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ.

ಉದಯ್‌ ಪೂಜಾರಿ ಬಲ್ಲಾಳ್‌ಬಾಗ್‌, ಚರೀಶ್ಮಾ ಅಮೀನ್‌, ಯಜ್ಞೇಶ್ವರ ಬರ್ಕೆ, ವಿಜಯ್‌ ಕುಮಾರ್‌ ಕೊಡಿಯಾಲ್ಬೈಲು, ಪಮ್ಮಿ ಕೊಡಿಯಾಲ್ಬೈಲು, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ದೀಪಕ್‌ ರೈ ಪಾಣಾಜೆ, ಸೂರಜ್‌ ಪಾಂಡೇಶ್ವರ, ಧೀರಜ್‌ ನೀರುಮಾರ್ಗ, ಪ್ರಶಾಂತ್‌ ಅಂಚನ್‌ ಸಹಿತ ಹಲವು ಕಲಾವಿದರು ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.

ದೇಶ-ವಿದೇಶಗಳ ನೂರಾರು ಥಿಯೇಟರ್‌ಗಳಲ್ಲಿ ಬಿಡುಗಡೆ ಆದ ಈ ಸಿನೆಮಾ ಕೋಸ್ಟಲ್ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಕಾಮಿಡಿ ಹಾಗೂ ಕಥೆಯಾ ಧಾರಿತವಾಗಿ ಮೂಡಿಬಂದ ಸಿನೆಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಕೂಡ ವ್ಯಕ್ತವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ