ಸಮ್ಮೇಳನಾಧ್ಯಕ್ಷರಾಗಿ ಮೌರೀಸ್ ತಾವ್ರೋ ಆಯ್ಕೆ
Team Udayavani, Jan 15, 2021, 11:03 PM IST
ಅಜೆಕಾರು: ಆದಿಗ್ರಾಮೋತ್ಸವ ಸಮಿತಿಯು ಅಖೀಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ, ಲಯನ್ಸ್ ಕ್ಲಬ್ ಮುನಿಯಾಲು ಮತ್ತು ಶ್ರೀ ದುರ್ಗಾಪರಮೇಶ್ವರೀ ಭಜನ ಮಂಡಳಿ ಸಿರಿಬೈಲು ಇದರ ಸಹಕಾರದೊಂದಿಗೆ ಜ. 24ರಂದು ಸಿರಿಬೈಲಿನಲ್ಲಿ ಮೂರನೇ ಆದಿಗ್ರಾಮೋತ್ಸವ ಗ್ರಾಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತ್ರಿಭಾಷಾ ಕವಿ, ವಿಶ್ರಾಂತ ಮುಖ್ಯೋಪಾಧ್ಯಾಯ ಮೌರೀಸ್ ತಾವ್ರೋ ಅಜೆಕಾರು ಆಯ್ಕೆಯಾಗಿದ್ದಾರೆ.
ಅವರು 6 ದಶಕಗಳಿಂದ ಕನ್ನಡ, ತುಳು, ಕೊಂಕಣಿ ಮೂರು ಭಾಷೆಗಳಲ್ಲಿ ಬರೆಯುತ್ತಾ ಬಂದಿದ್ದು ಅವರ ಕವಿತಾ ಕಿರಣ ಕವನ ಸಂಕಲನ ಈ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಅವರ ಎರಡು ಕಾದಂಬರಿಗಳು ಮತ್ತು ಒಂದು ಲೇಖನ ಸಂಗ್ರಹ ನಾಲ್ಕು ದಶಕಗಳ ಹಿಂದೆಯೇ ಪ್ರಕಟವಾಗಿದೆ. ಮೌರೀಸ್ ತಾವ್ರೋ ಗ್ರಾಮೀಣ ಭಾಗದ ಹಿರಿಯ ಸಾಹಿತಿ ಎಂದು ಸಂಘಟಕ ಡಾ| ಶೇಖರ ಅಜೆಕಾರು ತಿಳಿಸಿದ್ದಾರೆ.
ಆದಿಗ್ರಾಮೋತ್ಸವ 2021ಕ್ಕೆ ಧಾರ್ಮಿಕ ಕೇಂದ್ರಗಳ ಶಿಲ್ಪಿ ಮೊಹಮ್ಮದ್ ಗೌಸ್ ಮತ್ತು ಗ್ರಾಮ ಗೌರವಕ್ಕೆ ದ.ಕ. ಕನ್ನಡ ಕಣ್ಣಿನ ವೈದ್ಯರ ಸಂಘದ ಅಧ್ಯಕ್ಷ ಡಾ| ಸುಧೀರ್ ಹೆಗ್ಡೆ ಆಯ್ಕೆಯಾಗಿದ್ದಾರೆ.
ಗ್ರಾಮೋತ್ಸವ ಸಂಘ ಸಿರಿ ಗೌರವ :
ಸಾಧಕ ಸಂಘ ಸಂಸ್ಥೆಗಳಿಗೆ ನೀಡಲಾಗುವ ಗ್ರಾಮೋತ್ಸವ ಸಂಘ ಸಿರಿ ಗೌರವವನ್ನು ಶಾಂತಿ ನಿಕೇತನ ಸೌಹಾರ್ದ ಸಹಕಾರಿ ಕುಡಿಬೈಲು ಕುಚ್ಚಾರು, ಶ್ರೀ ಮಹಮ್ಮಾಯಿ ಮಹಿಳಾ ಭಜನ ಮಂಡಳಿ ಮಾರಿಗುಡಿ ಅಜೆಕಾರು, ಶ್ರೀ ರಾಮ ಮಂದಿರ ದೊಂಡೇರಂಗಡಿ ಮತ್ತು ಶ್ರೀ ದುರ್ಗಾಪರಮೇಶ್ವರೀ ಭಜನ ಮಂಡಳಿ ಸಿರಿಬೈಲು ಕಡ್ತಲ ಸಂಘಟನೆಗಳಿಗೆ ನೀಡಲಾಗುತ್ತಿದೆ.
ಆದಿಗ್ರಾಮೋತ್ಸವ ಯುವ ಸಿರಿ ಗೌರವ :
22 ನೇ ವರ್ಷದ ಆದಿಗ್ರಾಮೋತ್ಸವದ ಪ್ರಯುಕ್ತ ಬಳ್ಳಾರಿ, ಹಾಸನ, ದ.ಕ. ಉಡುಪಿ ಜಿಲ್ಲೆಗಳ ಯುವ ಸಾಧಕರಿಗೆ ಈ ವರ್ಷದ ಯುವ ಸಿರಿ ಗೌರವ ನೀಡಲಾಗುತ್ತಿದೆ. ಶ್ಯಾಮ್ ಪ್ರಸಾದ್ ಹೆಗ್ಡೆ, ಡಾ| ಸುದರ್ಶನ್ ಹೆಬ್ಟಾರ್ ಮುನಿಯಾಲು, ಕೃಷ್ಣಪ್ಪ ಲಿಂಗನಾಯಕನಹಳ್ಳಿ,ಉಪೇಂದ್ರ ನಾಯಕ್ ಶಿವಪುರ, ರಶ್ಮಿ ಸತೀಶ ಆಚಾರ್ಯ ಬಳ್ಳುಂಜೆ, ಅಣ್ಣಪ್ಪ ಪೂಜಾರಿ ದೆಂದೂರ್, ವಂದನಾ ರೈ ನಲ್ಲೂರು, ಪ್ರಮೋದ ಶೆಟ್ಟಿಗಾರ ಮುದ್ರಾಡಿ, ರೇಶ್ಮಾ ಶೆಟ್ಟಿ ಗೊರೂರು ಹಾಸನ, ಗಣೇಶ ಕಾಮತ್ ಮೂಡುಬಿದಿರೆ, ದೀಪಕ್ ದುರ್ಗಾ ಹೆಬ್ರಿ, ಜಾನ್ ಟೆಲ್ಲಿಸ್ ಅಜೆಕಾರು, ಕೃಷ್ಣಮೂರ್ತಿ ಕಾಡುಹೊಳೆ, ಅಬ್ದುಲ್ ಗಪೂರ್- ದೆಪ್ಪುತ್ತೆ, ಜ್ಯೋತಿ ಪದ್ಮನಾಭ ಭಂಡಿ ಕುಕ್ಕುಂದೂರು, ಅಚ್ಯುತ ಮಾರ್ನಾಡ್, ಪ್ರವೀಣ ಕುಮಾರ್ ಹೆಗ್ಡೆ ಕಡ್ತಲ, ಪ್ರಣಮ್ಯಾ ಅಗಲಿ ಪುತ್ತೂರು, ರೇಶ್ಮಾ ಆಚಾರ್ಯ ಮುಳಾಡು, ಶೀಲಾ ಪಡೀಲ್, ವಸಂತಿ, ಪುನೀತ್ ಮೂಡುಬಿದಿರೆ, ಕೆ.ಎಂ.ಖಲೀಲ್, ಸುರೇಂದ್ರ ಮೋಹನ್ ಮುದ್ರಾಡಿ, ಶಬರೀಶ ಆಚಾರ್ಯ ಮುನಿಯಾಲು, ಅನಿಲ್ ಜ್ಯೋತಿನಗರ ಅಜೆಕಾರು ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ.